ದುಬೈ: ಚಾರ್ಟೆಡ್ ವಿಮಾನಯಾನದ ಮೂಲಕ ಬರುವ ಯುಎಇಗೆ ಬರುವ ಪ್ರಯಾಣಿಕರಿಗೆ ಇನ್ನೂ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಯುಎಇಯ ನಾಗರಿಕ ವಿಮಾನಯಾನ ಪ್ರಾಧಿಕರಾರವು (ಜಿಸಿಎ) ಹೊಸ ಸುತ್ತೋಲೆ ಪ್ರಕಟಿಸಿದೆ.
ಈ ಬಗ್ಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಮಾಹಿತಿ ನೀಡಲಾಗುವುದು ಎಂದು ಪ್ರಾಧಿಕಾರವು ತಿಳಿಸಿದೆ. ಅಬುಧಾಬಿ, ಶಾರ್ಜ, ರಾಸ್ ಆಲ್ ಕೈಮಾ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಾಗುವುದು. ಅದೇ ರೀತಿ ಯುಎಇಗೆ ಆಮಿಸುವ ಪ್ರಯಾಣಿಕರಿಗೆ ಇಲೆಕ್ಟ್ರಿಕಲ್ ಟ್ರಾಕಿಂಗ್ ಡಿವೈಸ್ ನೀಡಲಾಗುವುದು. ಸದ್ಯ ಭಾರತ, ನೇಪಾಳ, ಪಾಕಿಸ್ತಾನ, ನೈಜೀರಿಯಾ, ಉಗಾಂಡ ಸೇರಿದಂತೆ 11 ದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸದ್ಯ ಈ ದೇಶಗಳಿಂದ ಗೋಲ್ಡನ್ ವೀಸಾ ಸೇರಿದಂತೆ ಕೆಲವೇ ಕೆಲವು ವಿಸಾ ಹೊಂದಿರುವವರಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಸದ್ಯದಲ್ಲಿಯೇ ದುಬೈ ಎಕ್ಸ್‌ಪೋ 2020 ನಡೆಯಲಿದೆ. ಆದುದರಿಂದ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿರವುದಿಂದ ಪ್ರಯಾಣಕ್ಕೆ ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ.
ಏನಿದು ಟ್ರಾಕಿಂಗ್ ಡಿವೈಸ್
ಈ ಸಾಧನವು ವಾಚ್ ರೂಪದಲ್ಲಿದ್ದು ಕೈಗೆ ಅಳವಡಿಸಲಾಗುವುದು. ಸದ್ಯದ ನಿಯಮದ ಪ್ರಕಾರ ನಿರಂತರ 10 ದಿನಗಳು ಇದನ್ನು ಧರಿಸಬೇಕು. ಯಾವ ವ್ಯಕ್ತಿಗೆ ಧರಿಸಿದ್ದಾರೋ ಅವರು ನಿಗದಿಪಡಿಸಿದ ಪ್ರದೇಶದಲ್ಲಿ ಇರಬೇಕು. ಇದರ ನಿಯಂತ್ರಣ ಸಂಬಂಧಪಟ್ಟ ಎಮಿರೇಟ್ಸ್‌ನ ಪೊಲೀಸರು ನಿರ್ವಹಿಸುತ್ತಾರೆ.