LATEST NEWS
ಪತ್ರಕರ್ತರ ಸಂಘದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನೈಜ ಪತ್ರಕರ್ತರಾಗಿರಬೇಕು: ಹೈಕೋರ್ಟ್
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನೈಜ ಪತ್ರಕರ್ತರಷ್ಟೇ ಆಗಿರುವಂತೆ ನೋಡಿಕೊಳ್ಳಬೇಕು.
ಜೊತೆಗೆ ಕರ್ನಾಟಕ ಟ್ರೇಡ್ ಯೂನಿಯನ್ ಮಾದರಿ ನಿಯಮಗಳು–1953ರ ಪ್ರಕಾರವೇ ಚುನಾವಣೆ ನಡೆಸಬೇಕು ಎಂದು ಕಾರ್ಮಿಕ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.
ಸಂಘಕ್ಕೆ ನಿಯಮಾನುಸಾರ ಚುನಾವಣೆ ನಡೆಸಲು ನಿರ್ದೇಶನ ಕೋರಿ ಶಿವಮೊಗ್ಗದ
‘ಕ್ರಾಂತಿದೀಪ’ ದಿನಪತ್ರಿಕೆ ಸಂಪಾದಕ ಎನ್.ಮಂಜುನಾಥ್, ರಾಯಚೂರಿನ ‘ಈಶಾನ್ಯ ಟೈಮ್ಸ್’ ಸಂಪಾದಕ ಎನ್. ನಾಗರಾಜ್ ಹಾಗೂ ರಾಯಚೂರಿನ ‘ಸುದ್ದಿ ಮೂಲ’ ದಿನಪತ್ರಿಕೆ ಮುಖ್ಯ ವರದಿಗಾರ ಬಿ. ವೆಂಕಟ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಒಂದು ವೇಳೆ ಕೋರ್ಟ್ ನಿರ್ದೇಶನದಂತೆ ನಿಯಮಾನುಸಾರ ಚುನಾವಣೆ ನಡೆಸದಿದ್ದರೆ ಅಥವಾ ಯಾವುದಾದರೂ ತಕರಾರು ಉದ್ಭವಿಸಿದರೆ ಅರ್ಜಿದಾರರು ಮತ್ತೆ ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರ ಆರೋಪವೇನು?
ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪತ್ರಕರ್ತರ ಸಂಘದಲ್ಲೇ ಹಲವು ನ್ಯೂನ್ಯತೆಗಳು ಇವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಮಿಕ ಸಂಘಗಳ ಕಾಯ್ದೆ ಅಡಿ ನೋಂದಾವಣೆ ಆಗಿದೆ. ಹೀಗಾಗಿ ಕಾಯ್ದೆಯ ನಿಮಯಗಳ ಪ್ರಕಾರ ಸಂಘದಲ್ಲಿ 2 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದರೆ ಇಲಾಖೆಯ ಆಯುಕ್ತರೇ ಚುನಾವಣೆ ನಡೆಸಬೇಕು.
ಸದಸ್ಯರೆಲ್ಲರಿಗೂ ಈ ಕುರಿತು ಪೂರ್ವಭಾವಿ ಮಾಹಿತಿ ತಲುಪಿಸಬೇಕು. ಆದರೆ, ಪತ್ರಕರ್ತರ ಸಂಘ ತಮ್ಮಲ್ಲೇ ಒಬ್ಬರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸಿಕೊಂಡು ಚುನಾವಣೆ ನಡೆಸಿದೆ.
ಯಾವುದೇ ಸದಸ್ಯರಿಗೆ ನೋಟಿಸ್ ತಲುಪಿಸಿಲ್ಲ. ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯನ್ನೂ ಸರಿಯಾಗಿ ಮಾಡಿಲ್ಲ.
ಕಾರ್ಮಿಕ ಸಂಘಗಳ ಕಾಯ್ದೆ ಪ್ರಕಾರ ಮಾಲೀಕರು ಸಂಘದಲ್ಲಿ ಸದಸ್ಯತ್ವ ಹೊಂದಿವಂತಿಲ್ಲ. ಆದರೂ, ಮಾಲಿಕರು ಸಂಘದ ಸದಸ್ಯರಾಗಿದ್ದಾರೆ. ಸಂಘದಲ್ಲಿ 7,800 ಸದಸ್ಯರಿದ್ದರೂ, ನೈಜ ಪತ್ರಕರ್ತರ ಸಂಖ್ಯೆ ತುಂಬಾ ಕಡಿಮೆ ಇದೆ.
ಇನ್ನು 2018ರ ಆಗಸ್ಟ್ 21ರಂದು ಹೈಕೋರ್ಟ್ ಸಂಘಕ್ಕೆ ಕರ್ನಾಟಕ ವೃತ್ತಿಪರ ಸಂಘಗಳ ಚುನಾವಣಾ (ಮಾದರಿ) ನಿಯಮಗಳ ಪ್ರಕಾರ ಚುನಾವಣೆ ನಡೆಸುವಂತೆ ನೀಡಿದ್ದ ನಿರ್ದೇಶವನ್ನೂ ಪಾಲಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.
ಅಲ್ಲದೇ, ಸಂಘಕ್ಕೆ 2018-2021ರ ಸಾಲಿಗೆ ನಿಯಮಾನುಸಾರ ಮರು ಚುನಾವಣೆ ನಡೆಸಲು ನಿರ್ದೇಶನ ನೀಡಬೇಕು’ ಎಂದು ಕೋರಿದ್ದರು.
DAKSHINA KANNADA
ಮತದಾರರ ಚೀಟಿಯಲ್ಲಿ ಕ್ಯೂಆರ್ ಕೋಡ್! ಮಂಗಳೂರು ದಕ್ಷಿಣ ಉತ್ತರದಲ್ಲಿ ಅನುಷ್ಠಾನ
ಮಂಗಳೂರು: ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಕೊನೇ ಹಂತದ ಕಸರತ್ತು ಮುಂದುವರಿಸಿದೆ. ನಗರದ ಜನತೆಗೆ ಮತಗಟ್ಟೆಗಳ ಮಾಹಿತಿ ನೀಡಲು ಚುನಾವಣೆ ಸ್ಲಿಪ್ಗಳಲ್ಲಿ ಕ್ಯೂಆರ್ ಓಡ್ ನೀಡಲಾಗಿದ್ದು, ಆ ಮೂಲಕ ಮತದಾನ ಕೇಂದ್ರದ ಮಾಹಿತಿ ನೀಡಲು ಮುಂದಾಗಿದೆ.
ಕರ್ನಾಟಕದಲ್ಲಿ ಇದು ಮೊದಲ ಪ್ರಯೋಗವಾಗಿದ್ದು, ದ.ಕ. ಜಿಲ್ಲೆಯ ನಗರಕ್ಕೆ ಹೊಂದಿಕೊಂಡಿರುವ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಇದರಂತೆ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರದಲ್ಲಿ ಸ್ಲಿಪ್ ಮೂಲಕ ಮತದಾರರಿಗೆ ಮತಗಟ್ಟೆಯ ವಿವರ ಒದಗಿಸಲಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಮತದಾರರ ಸ್ಲಿಪ್ನಲ್ಲಿ ಮತಗಟ್ಟೆಯ ವಿವರ ನಗರದಲ್ಲಿನ ಅನೇಕರಿಗೆ ಮತಗಟ್ಟೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಮತದಾನಕ್ಕಾಗಿ ಮತಗಟ್ಟೆಗಳನ್ನು ಅರಸಿಕೊಂಡು ಹೋಗಬೇಕಾಗುತ್ತದೆ. ಇದನ್ನು ನೀಗಿಸಲು ಕ್ಯೂಆರ್ ಕೋಡ್ ನೀಡಲಾಗಿದ್ದು, ಸ್ಕ್ಯಾನ್ ಮಾಡಿದ ವೇಳೆ ಮಯಗಟ್ಟೆಯ ಲೊಕೇಷನ್ ಪಡೆಯಬಹುದು. ಈ ಮೂಲಕ ಮತಗಟ್ಟೆ ಹುಡುಕಿ ತೆರಳುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.
DAKSHINA KANNADA
ಬಡಗುತಿಟ್ಟು ಯಕ್ಷಗಾನದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ..
ಉಡುಪಿ: ಬಡಗುತಿಟ್ಟು ಯಕ್ಷಗಾನ ಲೋಕದ ಶ್ರೇಷ್ಠ ಭಾಗವತ, ಸ್ವರ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ (67ವ) ಇಹಲೋಕ ತ್ಯಜಿಸಿದ್ದಾರೆ. ಅಲ್ಪಕಾಲದಿಂದ ಅಸೌಖ್ಯದಿಂದಿದ್ದ ಇವರು ಬೆಂಗಳೂರಿನಲ್ಲಿರುವ ಪುತ್ರನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನ ಮನೆಯಲ್ಲಿ ಇಂದು(ಎ.25) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಕಾಳಿಂಗ ನಾವುಡರ ಬಳಿಕ ಮಧುರ ಕಂಠದಿಂದ ಹೆಚ್ಚು ಜನಪ್ರಿಯತೆಗಳಿಸಿದ್ದ ಕೀರ್ತಿ ಅವರದ್ದಾಗಿತ್ತು.
ಭಾಗವತಿಕೆಯಲ್ಲಿ ಗಾನ ಕೋಗಿಲೆ ಎನಿಸಿಕೊಂಡ ಧಾರೇಶ್ವರ:
ಇವರು ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿ ಪೇರ್ಡೂರು ಮೇಳದಲ್ಲಿ ನಿವೃತ್ತಿ ಹೊಂದಿದ್ದರು. ಆರಂಭದಲ್ಲಿ ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಇವರು ಭಾಗವತರಾಗಿ ಪ್ರಖ್ಯಾತಿಗೊಂಡಿದ್ದರು. ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಇವರು ಪ್ರಯೋಗಶೀಲ ಭಾಗವತರೆಂದೇ ಹೆಸರುವಾಸಿಯಾಗಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ 28 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ನಂತರ ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಮೇಳ ಬಿಟ್ಟು 10 ವರ್ಷದ ಬಳಿಕವೂ ಅನಿವಾರ್ಯ ಸಂದರ್ಭದಲ್ಲಿ ಭಾಗವತರಾಗಿ ಕಲಾ ಸೇವೆ ಮಾಡಿ ಕಲಾವಿದರ ಮನ ಗೆದ್ದಿದ್ದರು.
ಮುಂದೆ ಓದಿ..; ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ಕೊಂಡುಯ್ಯುತ್ತೀರಾ? ಹಾಗಿದ್ರೆ ಇದನ್ನು ಗಮನಿಸಿ
ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಸಜ್ಜನ, ಸದ್ಗುಣಿ, ಮಿತಭಾಷಿಯಾಗಿದ್ದ ಧಾರೇಶ್ವರರು ಯಕ್ಷಗಾನಕ್ಕೆ ಕಾಳಿಂಗ ನಾವಡರ ಅನಂತರ ಭಾಗವತಿಕೆ ತಾರಾ ಮೌಲ್ಯ ತಂದಿದ್ದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳದ ತಿರುಗಾಟ ನಿಲ್ಲಿಸಿದ್ದರು. ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗ, ಯಕ್ಷ ಅಭಿಮಾನಿಗಳನ್ನು ಅಗಲಿದ್ದಾರೆ. ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ.
DAKSHINA KANNADA
ಹಿಂಜಾವೇ ಮುಖಂಡ ಅಕ್ಷಯ್ ರಜಪೂತ್ಗೆ ಗಡಿಪಾರು..!
ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಮುಖಂಡ ಅಕ್ಷಯ್ ರಜಪೂತ್ ರವರನ್ನು (ನಿನ್ನೆ) ಎ.25ರಂದು ರಾತ್ರಿ ಗಡಿಪಾರು ಮಾಡಲಾಗಿದೆ. ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿಯ ಸದಸ್ಯ ಅಕ್ಷಯ್ ರಜಪೂತ್ ರವರನ್ನು ತಡರಾತ್ರಿ ವೇಳೆ ಅವರ ಮನೆಯಲ್ಲಿ ಬಂಧಿಸಿ ಇದೀಗ ಅವರನ್ನು ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಮುಂದೆ ಓದಿ..; ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!
ಅಕ್ಷಯ್ ಗಡಿಪಾರನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು ಕಾಂಗ್ರೆಸ್ಸಿನ ಹಿಂದೂ ವಿರೋಧೀ ನೀತಿ ಎಂದು ಹೇಳಿದ್ದಾರೆ.
- DAKSHINA KANNADA7 days ago
“ಸೆಕ್ಸ್” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್..!
- DAKSHINA KANNADA7 days ago
ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?
- LATEST NEWS6 days ago
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
- FILM3 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ