FILM
“ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್
Published
9 hours agoon
19 ವರ್ಷದ ರಶಾ ಥಡಾನಿ ಈಗ ಬಾಲಿವುಡ್‌ನಲ್ಲಿ ಸದ್ದು ಮಾಡಲು ಸಿದ್ಧರಾಗಿದ್ದಾರೆ. ಜನವರಿ 17 ರಂದು ಬಿಡುಗಡೆಯಾದ ಆಜಾದ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರ ಬಿಡುಗಡೆಯಾದಾಗಿನಿಂದ ರಾಶಾಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಈ ಚಿತ್ರದಲ್ಲಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ರಾಶಾ ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ‘ ಮಿಸ್ ಮಾಲಿನಿ’ಗೆ ನೀಡಿದ ಸಂದರ್ಶನದಲ್ಲಿ ಅವರು ತನಗೆ ಸಂಬಂಧಿಸಿದ ಹಲವು ವಿಷಯಗಳನ್ನು ಹೇಳಿದ್ದಾರೆ.
ಸದ್ಯ ಆಕೆಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಟಿಯ ಕ್ರಷ್ ಬಾಲಿವುಡ್‌ನಲ್ಲಿ ಈ ಸುಂದರ ಹಂಕ್ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. 40 ವರ್ಷದ ಆ ನಟ 2023 ರಲ್ಲಿ ವಿವಾಹವಾದರು. ರಾಶಾ ಅವರ ಕ್ರಷ್ ನಟ ಎಂದರೇ ಅದು ಬೇರಾರೂ ಅಲ್ಲ. ಸಿದ್ಧಾರ್ಥ್ ಮಲ್ಹೋತ್ರಾ. “ನಾನು ಮಾತ್ರವಲ್ಲ, ಆಲ್‌ಮೋಸ್ಟ್ ಎಲ್ಲ ಹುಡಗಿಯರಿಗೂ ಈ ನಟನೆಂದರೇ ತುಂಬಾ ಇಷ್ಟ. ಸ್ಟೂಡೆಂಟ್ಆಫ್ ದ ಇಯರ್‌ನಿಂದ ಸಿದ್ಧಾರ್ಥ್ ಮತ್ತು ಆಲಿಯಾ ಅವರನ್ನು ಇಷ್ಟಪಡುತ್ತಿದ್ದೇನೆ. ಸಿದ್ದಾರ್ಥ ನನ್ನ ಕ್ರಷ್” ಎಂದು ರಾಶಾ ಹೇಳಿದ್ದಾರಳೆ. ಸದ್ಯ ಅವರ ಉತ್ತರ ಸೋಷಿಯಲ್ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇನ್ನು ನಟ ಸಿದ್ಧಾರ್ಥ್ ಮಲ್ಹೋತ್ರಾ ಕರಣ್ ಜೋಹರ್ ಅವರ ‘ ಸ್ಟೂಡೆಂಟ್ ಆಫ್ ದಿ ಇಯರ್ ‘ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಹಲವು ವರ್ಷಗಳಿಂದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. 2023 ರಲ್ಲಿ ನಟಿ ಕಿಯಾರಾ ಅಡ್ವಾಣಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಅವರ ಮದುವೆಯ ಸುದ್ದಿ ಅನೇಕ ಯುವತಿಯರ ಹೃದಯವನ್ನು ಒಡೆಯಿತು.
FILM
ಪತಿಗೆ ಕಿರು*ಕುಳ, ಮಾನಸಿಕ ಹಿಂ*ಸೆ ನೀಡಿದ ಆರೋಪ; ಖ್ಯಾತ ಕಿರುತೆರೆ ನಟಿ ವಿರುದ್ಧ ಎಫ್‌ಐಆರ್
Published
7 hours agoon
27/01/2025By
NEWS DESK4ಮಂಗಳೂರು/ಬೆಂಗಳೂರು : ಪತಿಗೆ ಬ್ಲ್ಯಾಕ್‌ಮೇಲ್, ಮಾನಸಿಕ ಕಿರು*ಕುಳ ನೀಡಿದ ಆರೋಪದ ಮೇಲೆ ಕಿರುತೆರೆ ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪತಿ ಹಾಗೂ ನಿರ್ದೇಶಕ ನೀಡಿರುವ ದೂರಿನ ಮೇರೆಗೆ ಶಶಿಕಲಾ ಹಾಗೂ ಯೂಟ್ಯೂಬರ್ ಅರುಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಿವಿಂಗ್ ರಿಲೇಷನ್‌ಶಿಪ್…ಬಲವಂತದ ಮದುವೆ!
ಸಿನಿಮಾ ನಿರ್ದೇಶಕನ ಜೊತೆಗೆ ಕ್ಯಾಬ್ ಚಾಲಕನಾಗಿಯೂ ಹರ್ಷವರ್ಧನ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರಿಗೆ 2021ರಲ್ಲಿ ಸಿನಿಮಾ ಚಿತ್ರೀಕರಣದ ಸಂದರ್ಭ ನಟಿ ಶಶಿಕಲಾ ಪರಿಚಯವಾಗಿದೆ. ತನ್ನೊಂದಿಗೆ ಸಂಬಂಧವಿಟ್ಟುಕೊಂಡಲ್ಲಿ ಸಿನಿಮಾಕ್ಕೆ ಬಂಡವಾಳ ಹೂಡುವುದಾಗಿ ನಂಬಿಸಿದ್ದರಂತೆ. ಸಿನಿಮಾ ನಿರ್ಮಾಣದ ಆಸೆಯಿಂದ ಹರ್ಷವರ್ಧನ್ ಶಶಿಕಲಾ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ಗೆ ಒಪ್ಪಿಕೊಂಡಿದ್ದಾರೆ. ಈ ವೇಳೆ ಹರ್ಷವರ್ಧನ್ ಮದುವೆಯಾಗಲು ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಶಶಿಕಲಾ ಸಮ್ಮತಿಸಿದ್ದರು ಎನ್ನಲಾಗಿದೆ.
ಕೆಲವು ದಿನಗಳ ಬಳಿಕ ಮದುವೆ ಆಗುವಂತೆ ಬಲವಂತ ಮಾಡಿದ್ದು, ಮೊಬೈಲ್ ಕರೆಗಳ ಸಂಭಾಷಣೆ ರೆಕಾರ್ಡಿಂಗ್ ಇಟ್ಟುಕೊಂಡು ಹರ್ಷವರ್ಧನ್‌ಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದರಂತೆ. ಆದರೂ ಹರ್ಷವರ್ಧನ್ ಒಪ್ಪದೇ ಇದ್ದಾಗ, ನಾಗರಬಾವಿ ಕಚೇರಿಗೆ ಬಂದು ಖಾರದ ಪುಡಿ ಎರಚಿ ಹ*ಲ್ಲೆ ಮಾಡಿದ್ದರಂತೆ. ಈ ಬಗ್ಗೆ ಹರ್ಷವರ್ಧನ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ. ಈ ವೇಳೆ ಇಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದಾರಂತೆ.
2022ರಲ್ಲಿ ಶಶಿಕಲಾ ಅನ್ನಪೂರ್ಣೇಶ್ವರಿ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಹರ್ಷವರ್ಧನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಹರ್ಷವರ್ಧನ್‌ಗೆ ಸಿನಿಮಾ ನಿರ್ದೇಶನ ಮಾಡಲು ಬಿಡುವುದಿಲ್ಲವೆಂದು ಶಶಿಕಲಾ ಬೆದರಿಸಿದ್ದಾರೆ.
ವೃತ್ತಿ ಜೀವನ ಹಾಳಾಗಬಾರದೆಂಬ ನಿಟ್ಟಿನಲ್ಲಿ ನಿರ್ಮಾಪಕರೊಬ್ಬರ ಸಲಹೆಯ ಮೇರೆಗೆ 2022ರ ಮಾರ್ಚ್‌ನಲ್ಲಿ ಶಶಿಕಲಾ ಅವರನ್ನು ಹರ್ಷವರ್ಧನ್ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೆಲ ದಿನಗಳ ಬಳಿಕ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರಂತೆ. ಅದನ್ನು ಹರ್ಷವರ್ಧನ್ ಪ್ರಶ್ನಿಸಿದ್ದಕ್ಕೆ ಮನೆಯಿಂದ ಹೊರಹಾಕುತ್ತಿದ್ದುದು ಮಾತ್ರವಲ್ಲದೆ, ಒಂದೆರಡು ಗಂಟೆಗಳ ಬಳಿಕ ಮನೆಯೊಳಗೆ ಸೇರಿಸುತ್ತಿದ್ದರು ಎಂದು ಹರ್ಷವರ್ಧನ್ ದೂರಿದ್ದಾರೆ.
ಇದನ್ನೂ ಓದಿ : “ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್
ಯೂಟ್ಯೂಬ್ ಮೂಲಕ ಅಪಪ್ರಚಾರ :
ಈ ನಡುವೆ ಗಂಗೊಂಡನಹಳ್ಳಿಯಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು. ಹರ್ಷವರ್ಧನ್ ಪ್ರಶ್ನಿಸಿದಾಗ, ಕಪ್ಪು ಹಣವನ್ನು ಬದಲಾಯಿಸಲು ಅವಕಾಶ ಸಿಗುತ್ತದೆ ಎಂದಿದ್ದರಂತೆ. 2024ರ ಆಗಸ್ಟ್‌ನಲ್ಲಿ ಮನೆಯಿಂದ ಹರ್ಷವರ್ಧನ್‌ರನ್ನು ಶಶಿಕಲಾ ಹೊರಹಾಕಿದ್ದಾರಂತೆ. ಅಲ್ಲದೇ, ಯೂಟ್ಯೂಬ್ ಚಾನೆಲ್ ಒಂದರ ಮಾಲಕನ ಜೊತೆ ಸೇರಿ ಹರ್ಷವರ್ಧನ್ ವಿರುದ್ಧ ಅಪಪ್ರಚಾರ ಮಾಡಲು ಆರಂಭಿಸಿದ್ದಾರೆ. ಅಪಪ್ರಚಾರ ಮಾಡುವುದನ್ನು ನಿಲ್ಲಿಸಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹರ್ಷವರ್ಧನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಶಿಕಲಾ ಕನ್ನಡದ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ಪ್ರಜಾರಾಜ್ಯ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
FILM
ವಶಿಷ್ಠ ದಂಪತಿ ಮನೆಗೆ ಹೊಸ ಅಥಿತಿ ಆಗಮನ; ಮುದ್ದಾದ ಮಗುವಿಗೆ ಜನ್ಮ ನೀಡಿದ ನಟಿ
Published
9 hours agoon
27/01/2025ಮಂಗಳೂರು/ಬೆಂಗಳೂರು : ಸ್ಯಾಂಡಲ್‌ವುಡ್ ಕ್ಯೂಟ್ ಸ್ಟಾರ್ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ನಿನ್ನೆ (ಜ 26) ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಮದುವೆಯ ವಾರ್ಷಿಕೋತ್ಸವದ ದಿನವೇ ಸಿಹಿ ಸುದ್ದಿ ನೀಡಿದ್ದಾರೆ.
ಬೆಂಗಳೂರಿನ ಅಕ್ಷಯ್ ಆಸ್ಪತ್ರೆಯಲ್ಲಿ ನಟಿ ಹರಿಪ್ರಿಯಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಜೋಡಿ 2023ರ ಜನವರಿ 26ರಂದು ಅಂದರೆ 2 ವರ್ಷದ ಹಿಂದೆ ಮದುವೆ ಆಗಿದ್ದು. 2025ರ ಜನವರಿ 26ರಂದು ಪುತ್ರ ಜನಿಸಿದ್ದಾನೆ.
ಇದನ್ನೂ ಓದಿ : ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾದವ್ ಸಂಸಾರದಲ್ಲಿ ಬಿರುಕು?
ನಿನ್ನೆ ಸಂಜೆ ವೇಳೆಗೆ ಹರಿಪ್ರಿಯಾ ಅವರು ತಾಯಿಯಾದ ಸುದ್ದಿ ಸಿಕ್ಕಿದೆ. ಮೊದಲ ಮಗುವಿನ ಆಗಮನದಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಕುಟುಂಬದಲ್ಲಿ ಸಂತಸ ಮೂಡಿದೆ. ನಟಿ ಹರಿಪ್ರಿಯಾ ತಾಯಿಯಾದ ವಿಚಾರವನ್ನು ವಸಿಷ್ಠ ಸಿಂಹ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ರಿವೀಲ್ ಮಾಡಿದ್ದಾರೆ. ತಮ್ಮ ಆನಿವರ್ಸರಿ ದಿನವೇ ಮಗ ಬಂದಿದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ನೆಟ್ಟಿಗರು, ಅಭಿಮಾನಿಗಳು, ಸಿನಿರಂಗದವರು ಅಭಿನಂದನೆ ತಿಳಿಸುತ್ತಿದ್ದಾರೆ.
ಮಂಗಳೂರು/ಬೆಂಗಳೂರು: ಹಲವಾರು ಸಮಯಗಳಿಂದ ಚಿತ್ರರಂಗದಿಂದ ದೂರವಿರುವ ಮೋಹಕತಾರೆ ರಮ್ಯಾ ಇದೀಗ ಖ್ಯಾತ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ಧಿ ಫುಲ್ ವೈರಲ್ ಆಗುತ್ತಿದೆ.42 ವರ್ಷವಾದ್ರೂ ಸಿಂಗಲ್ ಆಗಿರುವ ರಮ್ಯಾ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಹರಿದಾಡುತ್ತಿದೆ.
2024 ರ ನವೆಂಬರ್‌ನಲ್ಲಿ ರಮ್ಯಾ ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ರಮ್ಯಾ ಉದ್ಯಮಿ ಸಂಜೀವ್‌ಗೆ ಬರ್ತ್‌ಡೇ ವಿಶ್ ಮಾಡಿದ್ದರು.”ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ, ಲವ್ ಯೂ ಫಾರೆವರ್, ನಿನ್ನೊಂದಿಗೆ ಹೋಗುವ ಪ್ರವಾಸಗಳು ಎಂದಿಗೂ ಅದ್ಭುತ” ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದರು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದರೂ ಈ ಹಿಂದೆ ರಮ್ಯಾ – ಸಂಜೀವ್ ಜತೆಯಾಗಿ ಪ್ರವಾಸ ಹಾಗೂ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಣೆ ಮಾಡಲು ಹೋಗಿದ್ದರು. ಇದರ ನಡುವೆಯೇ ಸಂಜೀವ್ ರಮ್ಯಾ ಅವರ ಬಾಯ್ ಫ್ರೆಂಡ್ ಎನ್ನುವ ರೂಮರ್ಸ್ ಕೂಡ ಹರಿದಾಡಿತ್ತು.
“ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಅವರ ಬಾಯ್ ಫ್ರೆಂಡ್ ಸಂಜೀವ್ ಮೋಹನ!! ಇವರು ರಮ್ಯಾ ಅವರನ್ನು ಪ್ರೀತಿಯಿಂದ divs ಅಂತ ಕರೀತಾರೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ.ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣಪ್ಪ” ಎಂದು ರಮ್ಯಾ – ಸಂಜೀವ್ ಅವರ ಫೋಟೋ ಎಡಿಟ್ ಮಾಡಿ ಟ್ರೋಲ್ ಪೇಜ್‌ವೊಂದು ಹಾಕಿಕೊಂಡಿದೆ. ರಮ್ಯಾ ಈ ಫೋಟೋವನ್ನು ಇನ್ಸಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡು ‘ಫೇಕ್’ ಎಂದು ಬರೆದುಕೊಂಡಿದ್ದು, ಆ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇನ್ನು ಸಿನಿಮಾದ ವಿಚಾರಕ್ಕೆ ಬಂದರೆ ‘2016’ ನಾಗರಾಹಾವು’ ಚಿತ್ರದ ಬಳಿಕ ರಮ್ಯಾ ಅವರು ಯಾವ ಸಿನಿಮಾದಲ್ಲೂ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿದಿದ್ದರು.
LATEST NEWS
ದೈವದ ಮುನಿಸೇ ಈ ಗ್ರಾಮದಲ್ಲಿ ಜನರ ಸರಣಿ ಸಾವಿಗೆ ಕಾರಣವಾಯಿತಾ ?
ಕೋಟೆಕಾರು ಬ್ಯಾಂಕ್ ದರೋಡೆ ಕೇಸ್; ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಕಮಿಷನರ್
ಉಡುಪಿ : ಪ್ರತಿಷ್ಠಿತ ವಸತಿ ಶಾಲೆಗೆ ಬಾಂ*ಬ್ ಬೆ*ದರಿಕೆ ಇಮೇಲ್
ತಾಯಿಗೆ ತಕ್ಕ ಮಗ ; ಜೊತೆಯಾಗಿ ರಾಷ್ಟ್ರಪತಿ ಪುರಸ್ಕಾರ ಪಡೆದ ಸಾಧನಾ, ತರುಣ್
ಗುಯಿಲಿನ್ ಬಾರ್ ಸಿಂಡ್ರೋಮ್ಗೆ ಮಹಾರಾಷ್ಟ್ರದಲ್ಲಿ ಮೊದಲ ಬ*ಲಿ; ಏನಿದು ಜಿಬಿಎಸ್?
ಪ್ರೀತಿಗೆ ವಯಸ್ಸು ಮುಖ್ಯನಾ ? ವೃದ್ಧಾಶ್ರಮದಲ್ಲಿ ಅಜ್ಜ – ಅಜ್ಜಿ ಅದ್ದೂರಿ ಪ್ರೇಮವಿವಾಹ
Trending
- BIG BOSS5 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS5 days ago
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
- BIG BOSS2 days ago
ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್
Pingback: ಪತಿಗೆ ಕಿರು*ಕುಳ, ಮಾನಸಿಕ ಹಿಂ*ಸೆ ನೀಡಿದ ಆರೋಪ; ಖ್ಯಾತ ಕಿರುತೆರೆ ನಟಿ ವಿರುದ್ಧ ಎಫ್‌ಐಆರ್ - NAMMAKUDLA NEWS - ನಮ್ಮಕುಡ್ಲ ನ
Pingback: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ - NAMMAKUDLA NEWS - ನಮ್ಮಕುಡ್ಲ ನ