ಬೆಂಗಳೂರು : ಚಾಲೆಂಜಿಂಗ್ ದರ್ಶನ್ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪ್ರತೀ ಅಪ್ಡೇಟ್ ಗಾಗಿ ತುದಿಗಾಲಲ್ಲಿ ನಿಂತಿರುತ್ತಾರೆ. ಹೊಸ ಚಿತ್ರ ಅನೌನ್ಸ್ ಆದಾಗಿನಿಂದ ಪ್ರತಿ ಸುದ್ದಿಗಾಗಿಯೂ ಅಭಿಮಾನಿಗಳು ಕುತೂಹಲದಿಂದ ನಿರೀಕ್ಷೆಯಲ್ಲಿರುತ್ತಾರೆ.
‘ಕಾಟೇರ’ ಚಿತ್ರದ ಯಶಸ್ಸಿನ ನಂತರ ದರ್ಶನ್ ‘ಡೆವಿಲ್’ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಈಗಾಗಲೇ ಪೋಸ್ಟರ್, ಮೇಕಿಂಗ್ ವೀಡಿಯೋಗಳು ಸದ್ದು ಮಾಡುತ್ತಿವೆ. ಡಿ ಬಾಸ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕರಾವಳಿ ಬೆಡಗಿ ನಾಯಕಿ :
ದರ್ಶನ್ ಜೊತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ, ಕರಾವಳಿಯ ಬೆಡಗಿ ದರ್ಶನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೌದು, ಕರಾವಳಿ ಮೂಲದ ರಜನಾ ರೈ ‘ಡೆವಿಲ್’ ಚಿತ್ರದ ನಾಯಕಿ. ಈ ಹಿಂದೆಯೂ ರಚನಾ ಡೆವಿಲ್ ಗೆ ನಾಯಕಿ ಆಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಅದು ದೃಢವಾಗಿದೆ. ಪೋಸ್ಟರ್ ಕೂಡ ಬಿಡುಗಡೆಯಾಗಿದೆ.
ಸಿನಿಮಾದ ನಿರ್ಮಾಣ ಸಂಸ್ಥೆಯಾದ ಜೈ ಮಾತಾ ಕಂಬೈನ್ಸ್ ತನ್ನ ಸೋಶಿಯಲ್ ಮೀಡಿಯಾ ಪುಟದಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ‘ವೆಲ್‌ಕಮ್ ಆನ್ ಬೋರ್ಡ್, ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ. ರಚನಾ ರೈ ಸ್ವಾಗತ’ ಎಂದುಬರೆದುಕೊಂಡಿದೆ. ಪೋಸ್ಟರ್ ನಲ್ಲಿ ನೆಲದ ಪ್ರತಿಭೆಗೆ ಮನ್ನಣೆ ಎಂದು ಬರೆಯಲಾಗಿದೆ.
ಪುತ್ತೂರು ಮೂಲದ ರಚನಾ ಈಗಾಗಲೇ ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ತುಳು ಚಿತ್ರ ‘ಸರ್ಕಸ್’ನಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡದಲ್ಲಿ ಧನ್ವೀರ್ ಗೌಡ ಜೊತೆ ‘ವಾಮನ’ದಲ್ಲೂ ನಟಿಸಿದ್ದಾರೆ. ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ರಚನಾ ಮಾಡೆಲ್ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಡ್ಯಾನ್ಸರ್ ಕೂಡಾ ಹೌದು. ‘ಓ ಮೈ ಡಾಗ್’ ಎಂಬ ಪುಸ್ತಕವನ್ನೂ ಅವರು ಬರೆದಿದ್ದಾರೆ.
‘ತಾರಕ್’ ಬಳಿಕ ‘ಡೆವಿಲ್’ ಚಿತ್ರದ ಮೂಲಕ ಮತ್ತೆ ಪ್ರಕಾಶ್ ವೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ದರ್ಶನ್ ಕೈಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಸದ್ಯ ದರ್ಶನ್ ಗುಣಮುಖರಾಗಿದ್ದು, ಸದ್ಯದಲ್ಲೇ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಸುಮಾರು 29 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಘೋಷಣೆ ಮಾಡಿದ್ದು ಬಹಳ ಅಚ್ಚರಿ ಮೂಡಿಸಿತ್ತು. ಈ ವಿಚ್ಚೇದನದ ಸುದ್ದಿಯಿಂದಾಗಿ ಎ.ಆರ್ ರೆಹಮಾನ್ ಅವರ ವೈಯಕ್ತಿನ ಬದುಕಿನ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ.
‘ರೆಹಮಾನ್’ ಎಂಬ ಹೆಸರಿನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದ ದಿಲೀಪ್ ಕುಮರ್ 1980ರಲ್ಲಿ ತಂದೆಯ ಮರಣದ ನಂತರ ಕುಟುಂಬದೊಂದಿಗೆ ಇಸ್ಲಾಂಗೆ ಮತಾಂತರಗೊಂಡ ನಂತರ, ಬಹುಕಾಲದ ಆಸೆಯಾಗಿದ್ದ ರೆಹಮಾನ್’ ಎಂಬ ಹೆಸರನ್ನು ಬಳಸಲು ನಿರ್ಧರಿಸಿದರು.
ತಂಗಿಯ ಮದುವೆಗೆ ಜ್ಯೋತಿಷ್ಯ ನೋಡುವಾಗ, ಒಬ್ಬ ಹಿಂದೂ ಜ್ಯೋತಿಷಿ ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಹೀಮ್ ಎಂಬ ಹೆಸರುಗಳನ್ನು ಸೂಚಿಸಿದ್ದಾಗಿ ರೆಹಮಾನ್ ಆಗಾಗ ನನಪಿಸುಕೊಳ್ಳುತ್ತಿರುತ್ತಾರೆ. ‘ರೆಹಮಾನ್’ ಹೆಸರು ಇಷ್ಟವಾಗಿದ್ದ ಕಾರಣ ಅದನ್ನೇ ಆಯ್ಕೆ ಮಾಡಿಕೊಂಡರು. ತಾಯಿಯ ಮನದಿಚ್ಚೆಯಂತೆ, ‘ಅಲ್ಲಾ ರಕ್ಕಾ’ ಎಂಬುದನ್ನು ಸೇರಿಸಿ ಎ.ಆರ್. ರೆಹಮಾನ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು.
‘ದೇವರಿಂದ ರಕ್ಷಿಸಲ್ಪಟ್ಟವರು’ ಎಂಬ ಅರ್ಥವನ್ನು ಹೊಂದಿರುವ ಎ.ಆರ್. ರೆಹಮಾನ್ ಎಂಬ ಹೆಸರು ಇಂದು ಸಂಗೀತ ಲೋಕದಲ್ಲಿ ಅನುಪಮ ಸ್ಥಾನ ಪಡೆದಿದೆ. ಈ ಹೆಸರು ಬದಲಾವಣೆ ರೆಹಮಾನ್ ಅವರ ಆಧ್ಯಾತ್ಮಿಕ ಪಯಣವನ್ನು ಸೂಚಿಸುವುದು ಮಾತ್ರವಲ್ಲದೆ, ಜಾಗತಿಕ ಖ್ಯಾತಿಗೆ ಅವರ ಏಳಿಗೆಯ ಆರಂಭವನ್ನೂ ಸೂಚಿಸುತ್ತದೆ, ರೆಹಮಾನ್ ಎಂಬ ಹೆಸರು ವಿಶ್ವದ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.
29 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ರೆಹಮಾನ್ ಸಾಯಿರಾ ದಂಪತಿ ವಕೀಲರಾದ ವಂದನಾ ಶಾ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಮೂಲಕ ಪ್ರತ್ಯೇಕಗೊಂಡಿರುವ ವಿಚಾರ ತಿಳಿಸಿದರು. ತಮ್ಮ ತಂದೆಯನ್ನು ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ್ದ ಸೂಫಿ ಸಂತರೊಬ್ಬರ ಪ್ರಭಾವಕ್ಕೆ ಒಳಗಾಗಿ ಮುಸ್ಲಿಂ ಧರ್ಮಕ್ಕೆ ರೆಹಮಾನ್ ಮತಾಂತರಗೊಂಡರು ಎನ್ನಲಾಗಿದೆ. ‘ಈ ನಂಬಿಕೆಯ ಬದಲಾವಣೆ ಮನಸ್ಸಿಗೆ ಶಾಂತಿ ನೀಡಿದ್ದು, ತಾವು ತಮ್ಮ ನಂಬಿಕೆಯನ್ನು ಬೇರೆಯವರ ಮೇಲೆ ಹೇರಲು ಇಷ್ಟಪಡುವುದಿಲ್ಲ’ ಎಂದು ಸ್ವತಃ ರೆಹಮಾನ್ ಹೇಳಿಕೊಂಡಿದ್ದಾರೆ.
ಮಂಗಳೂರು/ಬೆಂಗಳೂರು : ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕನಾಗಿ ಮಿಂಚಿ ಸಕತ್ ಫೇಮಸ್ ಆಗಿದ್ದ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸರಳವಾಗಿ ಅವರ ನಿಶ್ಚಿತಾರ್ಥ ಕಾರ್ಯ ನೆರವೇರಿದೆ.
ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು, ರಾಣಾ ಎಂಗೇಜ್ಮೆಂಟ್ ಆಗಿರುವ ಹುಡುಗಿ ಯಾರು? ಎಲ್ಲಿಯವರು? ಎಂಬ ಮಾಹಿತಿ ಬಹಿರಂಗವಾಗಿಲ್ಲ. ನಿಶ್ಚಿತಾರ್ಥದ ಫೋಟೋ ನೋಡಿದ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಪ್ರೇಮ್ ಮಿಸ್ ಯಾಕೆ?
ರಾಣಾ ಎಂಗೇಜ್ಮೆಂಟ್ ಸಮಾರಂಭದಲ್ಲಿ ನಟಿ ರಕ್ಷಿತಾ ಪ್ರೇಮ್ ಕುಟುಂಬ ಇದೆ. ಆದ್ರೆ ನಿರ್ದೇಶಕ ಪ್ರೇಮ್ ಇಲ್ಲ. ಅವರು ಏನು ಭಾಗಿಯಾಗಿಲ್ಲ ಎಂಬ ಅನುಮಾನ ಹುಟ್ಟಿರೋದು ಸಹಜ. ಪ್ರೇಮ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರೋದರಿಂದ ನಿಶ್ಚಿತಾರ್ಥದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಅವರು ಚಿಕ್ಕಮಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಣಾ, ಪ್ರೇಮ್ ಅಸಿಸ್ಟೆಂಟ್ ಡೈರೆಕ್ಟರ್ ವಿಜಯ್ ಈಶ್ವರ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಾನ್ವಿ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅನೇಕ ಕಲಾವಿದರು ಹೀರೋ/ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ, ಕೆಲವರು ಬೇರೆಯದೇ ಆಲೋಚನೆ ಇಟ್ಟುಕೊಂಡು ನಂತರ ಚಿತ್ರರಂಗಕ್ಕೆ ಬಂದು ಗೆಲುವು ಕಾಣುತ್ತಾರೆ. ಈ ಸಾಲಿಗೆ ಆದಿತ್ಯ ರಾಯ್ ಕಪೂರ್ ಸಹ ಸೇರುತ್ತಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಆದಿತ್ಯ ನಂತರ ಬಾಲಿವುಡ್ನ ಸ್ಟಾರ್ ಆಗಿರೋ ಕಥೆಯೇ ರೋಚಕ.
ಆದಿತ್ಯ ರಾಯ್ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದು 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಮೂಲಕ. ಆ ಬಳಿಕ ‘ಆಶಿಕಿ 2’, ‘ಯೇ ಜವಾನಿ ಹೇ ದಿವಾನಿ’ ‘ಕಳಂಕ್’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು. ಅವರು ನಟಿಸಿದ ‘ದಿ ನೈಟ್ ಮ್ಯಾನೇಜರ್’ ಸೀರಿಸ್ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಸರಣಿಯಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಈ ಸರಣಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದಕ್ಕೆ ಸೀಕ್ವೆಲ್ ಕೂಡ ಬರಬೇಕಿದೆ. ಇಷ್ಟೆಲ್ಲ ಹೆಸರು ಮಾಡಿದ ಆದಿತ್ಯ ಅವರ ಮೂಲ ಕನಸು ಮಾತ್ರ ಬೇರೆಯದೇ ಇತ್ತು.
‘ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಅದು ಹೊಂದಾಣಿಕೆ ಆಗಿಲ್ಲ. ನಂತರ ನಟನೆಗೆ ಬಂದೆ. ನಾನು ವಿಡಿಯೋ ಜಾಕಿ ಕೂಡ ಆಗಿದ್ದೆ’ ಎಂದಿದ್ದರು ಆದಿತ್ಯ ರಾಯ್ ಕಪೂರ್. ಹಾಗಂತ ಆದಿತ್ಯ ರಾಯ್ ಕಪೂರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದುಕೊಳ್ಳಬೇಡಿ. ಅವರು ದೊಡ್ಡ ಕುಟುಂಬದ ಹಿನ್ನೆಲೆಯಿಂದಲೇ ಬಂದವರು.