Sunday, November 27, 2022

ಮಂಗಳೂರು ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ರೈಡ್ : ಪಕ್ಕದ RTO ಆಫಿಸ್ ಫುಲ್ ಖಾಲಿ..!  

ಮಂಗಳೂರು : ಮಂಗಳೂರಿನಲ್ಲಿ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿಯ ಸಹಾಯಕನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.   ಇತ್ತ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ರೈಡ್ ಆಗಿ ಸಹಾಯಕ ಶಿವಾನಂದ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ರೆ ಅತ್ತ ಪಕ್ಕದ ಆರ್‌ ಟಿ ಓ ಕಚೇರಿ ಗಿರಾಕಿ- ದಲ್ಲಾಳಿಗಳು ಇಲ್ಲದೆ ಫುಲ್ ಖಾಲಿ ಹೊಡೆಯುತ್ತಿತ್ತು.

ಯಾವಾಗಲೂ ಬ್ರೋಕರುಗಳಿಂದ ತುಳುಕುತ್ತಿದ್ದ ಕಚೇರಿ ವಠಾರ ಫುಲ್ ಖಾಲಿ ಹೊಡೆಯುತ್ತಿದ್ದು ಈ ಬಗ್ಗೆ ಪರಿಚಯದ ಬ್ರೋಕರುಗಳನ್ನು ಮಾತನಾಡಿಸಿದಾಗ ” ನಂಕ್ ಕೋಡೆನೇ ಗೊತ್ತಾತುಂಡು. ಅಂಚಾದ್ ನಮ ಇನಿ ಅಂಚಿ ಪೋತುಜಾ ಇಲ್ಲಲೇ ಉಲ್ಲಾ ”  ಅಂತ  ಮಾಹಿತಿ ಕೊಟ್ರು.

ಇದೆಲ್ಲ ಗಮನಿಸಿದಾಗ ಇಂದು ಲೋಕಾಯುಕ್ತ ಪೊಲೀಸರು ರೈಡ್ ಮಾಡುವ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬದು ಸ್ಪಷ್ಟವಾಗಿದೆ.

ತೀರ ಗೌಪ್ಯವಾಗಿರುವ ಈ ಮಾಹಿತಿ ಲೋಕಾಯುಕ್ತ ಕಚೇರಿಯಿಂದ  ಹೊರಕ್ಕೆ ಲೀಕ್ ಆದದ್ದು ಹೇಗೆ  ಮತ್ತು ಯಾರು ಇದನ್ನು ಮಾಡಿದ್ದು ಎಂಬ ಅನುಮಾನಗಳು ಮೂಡುತ್ತಿದೆ.

ಜೊತೆಗೆ ಸಹಜವಾಗಿ ಲೋಕಾಯುಕ್ತ ಅಧಿಕಾರಿಗಳ ವಿಶ್ವಾರ್ಹತೆಯ ಮೇಲೂ ಸಂದೇಹಗಳು ಮೂಡಿವೆ.

ಮಂಗಳೂರು ಮಹಾನಗರ ಪಾಲಿಕೆ, ಎಸಿ ಕಚೇರಿ, ಆರ್‌ಟಿಓ ಕಚೇರಿ ಹೀಗೆ ಸಾರ್ವಜನಿಕರು ನಿತ್ಯ ಕೆಲಸ ಕಾರ್ಯಗಳಿಗೆ ಅವಲಂಬಿತವಾಗಿರುವ ಈ ಸರ್ಕಾರಿ ಕಚೇರಿಗಳಲ್ಲಿ ನೋಟು ಕೊಡದೇ ಕೆಲಸ ನಡೆಯಲ್ಲ, ಫೈಲ್ ಗಳೆ ಮೂವ್ ಆಗಲ್ಲ ಎಂಬುವುದು ಕಟು ಸತ್ಯ.

ಆದ್ರೂ ಲೋಕಯುಕ್ತ ಪೊಲೀಸರು ಮಿನಿ ವಿಧಾನ ಸೌಧದಲ್ಲಿ ತಹಶೀಲ್ದಾರ್ ಸಹಾಯಕ ಶಿವಾನಂದನನ್ನು ಹಿಡಿದಿರುವುದು ಗುಡ್ಡೆ ಅಗೆದು ಇಲಿ ಹಿಡಿದಂತಾಗಿದೆ.

ಆದ್ದರಿಂದ ಜನ ಸಾಮಾನ್ಯರಲ್ಲಿ ಲೋಕಾಯುಕ್ತದ ಬಗ್ಗೆ ಈ ಹಿಂದಿನ ನಂಬಿಕೆ ಉಳಿಯಬೇಕಿದ್ರೆ ನಿಷ್ಟವಂತ ಅಧಿಕಾರಿ- ಸಿಬಂದಿಗಳನ್ನು ನೇಮಕ ಮಾಡಿ ಇಲಿಗಳನ್ನು ಹಿಡಿಯುವ ಬದಲು ದೊಡ್ಡ ದೊಡ್ಡ ಹೆಗ್ಗಣಗಳನ್ನು  ಬಲೆಗೆ ಕೆಡವಿ ಜನ ಸಾಮಾನ್ಯರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಹಿರಿಯ ಅಧಿಕಾರಿಗಳಿಂದ ಆಗಬೇಕಿದೆ.

LEAVE A REPLY

Please enter your comment!
Please enter your name here

Hot Topics

ಸುಳ್ಯದಲ್ಲಿ ಪತ್ನಿಯನ್ನು ಕೊಂದು ಮೃತದೇಹವನ್ನು ಗೋಣಿಚೀಲದಲ್ಲಿಟ್ಟಿದ್ದ ಪಾಪಿ ಪತಿ ಪ.ಬಂಗಾಳದಲ್ಲಿ ಅರೆಸ್ಟ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೀರಮಂಗಲ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಗೋಣಿಚೀಲದೊಳಗೆ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಲದಲ್ಲಿ ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ಇಬ್ರಾನ್ ಶೇಖ್...

ಉಡುಪಿ: ಹೊಟೇಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ….

ಉಡುಪಿ: ಹೊಟೇಲ್‌ವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮಿಪದಲ್ಲಿರುವ ಟಾಪ್ ಟೌನ್...

ಬಾಂಬ್ ಸ್ಫೋಟ ಆರೋಪಿ ಶಾರೀಕ್‌ಗೆ ಆಸ್ಪತ್ರೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌-ಸ್ಪೋಟದ ಬೆನ್ನಲ್ಲೇ ಟ್ವೀಟ್‌ ಮಾಡಿದ ಝಾಕೀರ್‌…

ಮಂಗಳೂರು: ಮಂಗಳೂರಿನಲ್ಲಿ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇದೀಗ ಶಾರೀಕ್‌ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರು ಬಿಗು...