ಮಂಗಳೂರು: ಚಳಿಗಾಲದಲ್ಲಿ ಕಂಬಳಿ ಹೊದ್ದು ಮಲಗುವುದು ಎಂದರೇ ಭಾರೀ ಖುಷಿ. ಅದರಲ್ಲೂ ಹೆಚ್ಚಿನವರು ಬೆಳಗ್ಗೆ ಬೇಗ ಯಾರು ಎದ್ದೇಳ್ತಾರೆ ಎನ್ನುತ್ತಲೇ ತಮ್ಮ ದಿನವನ್ನು ಗಾಢ ನಿದ್ದೆಯಿಂದಲೇ ಆರಂಭಿಸುತ್ತಾರೆ. ಆದರೂ ನಾನು ಬೇಗ ಎದ್ದೇಳಬೇಕು ಎನ್ನುವವರಿಗೆ ಇಲ್ಲಿದೆ ಕೆಲವೊಂದು ಸಲಹೆಗಳು.
ಈಗ ಚುಮುಚುಮು ಚಳಿಯೂ ಆವರಿಸಿದ್ದು, ಶೀತ ವಾತವರಣ ಇರುವುದರಿಂದ ಬೆಳಗ್ಗೆ ಎದ್ದೇಳಲು ಮನಸೇ ಬರುವುದಿಲ್ಲ. ಕೆಲವರು ಹೇಳೋದು ಇದೆ, ನಾಳೆ ಬೇಗ ಎಳ್ತೀನಿ, ಓದೋಕೆ ಇದೆ ಅಂತ. ಆದರೆ ಎಲ್ಲರಿಗಿಂತ ಲೇಟಾಗಿ ಎದ್ದೆಳೋದು ಅವರೇ.
ಆದರೆ, ಬೆಳಗ್ಗೆ ಲೇಟಾಗಿ ಎದ್ದೇಳುವುದರಿಂದ ನಮ್ಮ ಶರೀರ ದಿನ ಪೂರ್ತಿ ಆಲಸ್ಯದಿಂದ ಕೂಡಿರುತ್ತದೆ. ಇದನ್ನು ದೂರ ಮಾಡಲು ಕೆಲವೊಂದು ವಿಧಾನಗಳನ್ನು ಅನುಸರಿಸಿ.
ಈಗಿನ ವಾತವರಣ ಚಳಿಯಿಂದ ಕೂಡಿರುವುದರಿಂದ ಮುಂಜಾನೆ ಎದ್ದೇಳುವುದಕ್ಕೆ ತುಂಬಾನೇ ಕಷ್ಟ ಆಗುತ್ತೇ. ಮುಂಜಾನೆ ಎಚ್ಚರವಾದ ತಕ್ಷಣವೇ ಎದ್ದು ಬಿಡಬೇಕು. ಐದು ನಿಮಿಷ ಬಿಟ್ಟು ಎದ್ದೇಳ್ತಿನಿ ಅಂದುಕೊಂಡು ಮಲಗಿದರೆ, ಮತ್ತೆ ಹೆಚ್ಚು ಸಮಯ ಮಲಗಿ ಬಿಡುತ್ತೇವೆ. ಹೀಗಾಗಿ ಎಚ್ಚರವಾದ ತಕ್ಷಣವೇ ಎದ್ದು ಯೋಗ, ವಾಕಿಂಗ್, ರನ್ನಿಂಗ್, ವ್ಯಾಯಾಮದಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆಲಸ್ಯವು ದೂರವಾಗಿ ದಿನ ಪೂರ್ತಿ ಉಲ್ಲಾಸದಿಂದ ಕೂಡಿರುತ್ತದೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ಕಂಬಳಿ, ಸ್ವೆಟರ್ ಗಳು ಕಪಾಟಿನಿಂದ ಹೊರಗೆ ಬರುತ್ತವೆ. ಕೆಲವರು ಚಳಿಗಾಲದಲ್ಲಿ ಸ್ವೆಟರ್ ಧರಿಸಿ ಮಲಗುತ್ತಾರೆ. ಅದರಿಂದಲೂ ಚಳಿಯಾಗುತ್ತೇ ಅಂತ ಅದರ ಮೇಲೆ ಕಂಬಳಿ ಹೊದ್ದು ಮಲಗುತ್ತಾರೆ. ಇದರಿಂದ ಬೆಳಗ್ಗಿನ ಹೊತ್ತು ಇನ್ನೂ ಸ್ವಲ್ಪ ಮಲಗುವ ಎಂದೆನಿಸುತ್ತದೆ. ಆಲಸ್ಯವನ್ನು ಜಾಸ್ತಿ ಮಾಡುವ ಕಾರಣ ಆದಷ್ಟು ಕಂಬಳಿ ಹಾಗೂ ಸ್ವೆಟರ್ ನಿಂದ ದೂರ ಇದ್ದು, ಆದಷ್ಟು ತೆಲುವಾದ ಕಂಬಳಿ ಹೊದ್ದು ಮಲಗಬೇಕು.
ಚಳಿಗಾಲದಲ್ಲಿ ಬೆಳಗ್ಗೆ ಬೇಗನೇ ಎದ್ದೇಳುವುದಕ್ಕಿಂತ ಕಷ್ಟದ ಕೆಲಸ ಮತ್ತೊಂದಿಲ್ಲ. ಬೆಳಗ್ಗೆ ಬೇಗ ಎಳಲು ಅಲಾರಂ ಸೇಟ್ ಮಾಡಿಕೊಳ್ಳಬೇಕು. ಕೆಲವರು ಅಲಾರಂ ಆದ ತಕ್ಷಣ ಆಫ್ ಮಾಡಿ ಮತ್ತೆ ಮಲಗುತ್ತಾರೆ. ಆದರೆ ಅಲಾರಂ ಆಫ್ ಮಾಡಿ ಮಲಗಿದರೆ ಮತ್ತೆ ಎಚ್ಚರ ಆಗುವುದಿಲ್ಲ. ಈಗಾಗೀ ಅಲಾರಂ ಆದ ತಕ್ಷಣವೇ ಎದ್ದೇಳುವ ಅಭ್ಯಾಸ ಮಾಡಬೇಕು.
ಸಮಯದ ಹಿಂದೆ ನಾವು ಓಡಬೇಕೆ ಹೊರತು, ನಮ್ಮ ಹಿಂದೆ ಸಮಯ ಬರುವುದಿಲ್ಲ. ಹೀಗಾಗಿ ನಿಮ್ಮ ದಿನಚರಿಯನ್ನು ಬೆಳಗ್ಗೆ ಬೇಗ ಎದ್ದೇಳುವುದರ ಮೂಲಕ ಪ್ರಾರಂಭಿಸಿ.