Connect with us

    LATEST NEWS

    ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುವುದ ತಡೆಯಲು ಸಿಂಪಲ್ ಟ್ರಿಕ್ಸ್ ಇಲ್ಲಿದೆ..!

    Published

    on

    ಇಂದಿನ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಹಾಗೂ ಆತಂಕದಂತಹ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಶೈಕ್ಷಣಿಕ ಒತ್ತಡಗಳು ಮತ್ತು ಡಿಜಿಟಲ್ ಪರದೆಯ ಮೇಲೆ ಹೆಚ್ಚು ಸಮಯ ಕಳೆಯುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ ದೀರ್ಘಕಾಲದಾಗಿದ್ದು, ಮಕ್ಕಳ ಬೆಳವಣಿಗೆಯನ್ನೇ ಕುಂಠಿತಗೊಳಿಸಬಲ್ಲದು.

     

    ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯು ಕಳೆದ ಐದು ವರ್ಷಗಳಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲಿ 15% ಹೆಚ್ಚಳವಾಗಿದೆ ಎಂದು ವರದಿ ಮಾಡಿದ್ದಾರೆ. ಮಕ್ಕಳ ಮಾನಸಿಕ ಆರೋಗ್ಯದ ಕಾಪಾಡಲು ಶಿಕ್ಷಕ ವೃಂದ ಹಾಗೂ ಪೋಷಕರು ಮಕ್ಕಳ ಸಮಸ್ಯೆಗಳನ್ನು ಅರಿತು ಅದಕ್ಕೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಇದೀಗ ಕೊಂಡಾಪುರದ ರಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಕಿರಣ್ಮಯಿ ಅಲ್ಲು ಅವರು ವಿದ್ಯಾರ್ಥಿಗಳಲ್ಲಿ ಉತ್ತಮ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ.

    1. ಡಿಜಿಟಲ್ ಪರದೆಯ ಸಮಯವನ್ನು ಕಡಿಮೆ ಮಾಡುವುದು : ಇಂದಿನ ತಂತ್ರಜ್ಞಾನ ಯುಗದಲ್ಲಿ, ಪರದೆಯ ಸಮಯವನ್ನು ಕಡಿಮೆ ಮಾಡುವುದು ಮಾನಸಿಕ ಯೋಗಕ್ಷೇಮಕ್ಕೆ ಅತ್ಯಗತ್ಯವಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಅಧ್ಯಯನದಲ್ಲಿ, ಪ್ರತಿದಿನ 7 ಗಂಟೆಗಳಿಗಿಂತ ಹೆಚ್ಚು ಕಾಲ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಡಿಜಿಟಲ್ ಸಾಧನಗಳನ್ನು ಬಳಸುವ ಯುವಕರು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಬಹಿರಂಗಪಡಿಸಿದೆ. ಹೀಗಾಗಿ ಡಿಜಿಟಲ್ ಸಾಧನಗಳ ಬಳಕೆಯನ್ನು ಮಿತಿಯಲ್ಲಿಡಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಊಟದ ಸಮಯ ಹಾಗೂ ಮಲಗುವ ಮುನ್ನ ಡಿಜಿಟಲ್ ಸಾಧನಗಳ ಬಳಕೆಯನ್ನು ಕಡಿಮೆ ಮಾಡುವಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸಬೇಕು. ಇದು ಮಕ್ಕಳಲ್ಲಿ ಉಂಟಾಗುವ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    2. ದೈಹಿಕ ಚಟುವಟಿಕೆಗೆ ಹೆಚ್ಚು ಒತ್ತು ನೀಡುವುದು: ದೈಹಿಕ ಚಟುವಟಿಕೆಯು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಯಮಿತ ವ್ಯಾಯಾಮವು ಎಂಡಾರ್ಫಿನ್ ಗಳನ್ನು ಬಿಡುಗಡೆ ಮಾಡುತ್ತದೆ. ದೇಹದಿಂದ ಬಿಡುಗಡೆಯಾಗುವ ಈ ನೈಸರ್ಗಿಕ ಮೂಡ್ ಎಲಿವೇಟರ್‌ಗಳು ಆತಂಕ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಹೀಗಾಗಿ ದೈಹಿಕ ಚಟುವಟಿಕೆಗಳಾದ ಯೋಗ, ನಡಿಗೆಯಂತಹ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಕ್ರೀಡೆ, ನೃತ್ಯ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಾಧ್ಯ.
    3. ನಿದ್ರೆಯ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವುದು : ಮಾನಸಿಕ ಆರೋಗ್ಯ ಕಾಪಾಡುವಲ್ಲಿ ನಿದ್ರೆಯೂ ಅತ್ಯಗತ್ಯ. ಮಾನಸಿಕವಾಗಿ ಆರೋಗ್ಯವಂತರಾಗಿರಲು ಹದಿಹರೆಯದವರಿಗೆ 8 ರಿಂದ 10 ಗಂಟೆಗಳ ನಿದ್ದೆ ಬೇಕು. ಡಿಜಿಟಲ್ ಸಾಧನಗಳ ಬಳಕೆ, ಶೈಕ್ಷಣಿಕ ಒತ್ತಡವು ನಿದ್ದೆಯ ಗುಣಮಟ್ಟವನ್ನು ಕಡಿಮೆಗೊಳಿಸುತ್ತಿದೆ. ಹೀಗಾಗಿ ಶಿಕ್ಷಣತಜ್ಞರು ಕಟ್ಟುನಿಟ್ಟಾದ ನಿದ್ರೆಯ ವೇಳಾಪಟ್ಟಿಯನ್ನು ರಚಿಸಬೇಕು. ನಿದ್ರೆಯ ಪ್ರಯೋಜನಗಳನ್ನು ಒತ್ತಿಹೇಳಿ ಆರೋಗ್ಯಕರ ನಿದ್ದೆಯನ್ನು ಹೆಚ್ಚು ಉತ್ತೇಜಿಸುವುದು ಅಗತ್ಯ.
    4. ಸಾಮಾಜಿಕ ಸಂಬಂಧಗಳನ್ನು ಸುಧಾರಿಸುವುದು : ತನ್ನ ಸುತ್ತಮುತ್ತಲಿನ ಸಂಬಂಧಗಳು ಮಕ್ಕಳ ಮನಸ್ಥಿತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಬಲವಾದ ಬೆಂಬಲವಿರುವ ವಿದ್ಯಾರ್ಥಿಗಳು 50% ಹೆಚ್ಚಿನ ಭಾವನಾತ್ಮಕ ನಿಯಂತ್ರಣವನ್ನು ಹೊಂದಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶಾಲಾ ವಾತಾವರಣವು ಸಕಾರಾತ್ಮಕ ಸಂಬಂಧಗಳನ್ನು ಉತ್ತೇಜಿಸುವಂತಿರಬೇಕು..ಗೆಳೆಯರ ಮಾರ್ಗದರ್ಶನ, ಗುಂಪು ಯೋಜನೆಗಳು, ಸಾಮಾಜಿಕ ಕ್ಲಬ್‌ಗಳಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಅದಲ್ಲದೇ ಶಿಕ್ಷಕರು ಸ್ನೇಹಿತರು, ಶಿಕ್ಷಕರು ಮತ್ತು ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
    5. ಒತ್ತಡ ನಿರ್ವಹಣೆ ತಂತ್ರಗಳನ್ನು ಅಳವಡಿಸಿಕೊಳ್ಳುವುದು : ಈಗಿನ ಆಧುನಿಕ ಶಿಕ್ಷಣ ಪದ್ಧತಿಯಿಂದ ಮಕ್ಕಳು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡಗಳನ್ನು ನಿರ್ವಹಿಸುವುದು ಅತ್ಯಗತ್ಯ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸಂಶೋಧನೆಯ ಪ್ರಕಾರ, ಪ್ರಾಣಾಯಾಮ, ಧ್ಯಾನವು ಶೇ 35 ರಷ್ಟು ಆತಂಕವನ್ನು ಕಡಿಮೆ ಮಾಡುತ್ತದೆ.ಶಿಕ್ಷಕರು ಪಠ್ಯಕ್ರಮದಲ್ಲಿ ಒತ್ತಡ ನಿರ್ವಹಣೆ ಮಾಡುವುದು ಮುಖ್ಯ. ಹೆಚ್ಚು ಒತ್ತಡ ಹಾಗೂ ಆತಂಕ ಉಂಟು ಮಾಡುವ ಚಟುವಟಿಕೆಯನ್ನು ನೀಡುವ ಬದಲು, ಸರಿಯಾದ ವೇಳಾಪಟ್ಟಿ ರಚಿಸಿ ಶೈಕ್ಷಣಿಕ ಚಟುವಟಿಕೆಯನ್ನು ಹಂಚಿಕೆ ಮಾಡುವುದು ಅತ್ಯಗತ್ಯ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಕೇವಲ ವೈಯುಕ್ತಿಕ ಯೋಗಕ್ಷೇಮವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಮಕ್ಕಳ ಸುಸ್ಥಿರ, ಆರೋಗ್ಯಕರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

    Click to comment

    Leave a Reply

    Your email address will not be published. Required fields are marked *

    FILM

    ಯಾರೇ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ; ಗರಂ ಆದ ಸಾಯಿಪಲ್ಲವಿ!

    Published

    on

    ಮಂಗಳೂರು/ಚೆನ್ನೈ : ಸಾಯಿ ಪಲ್ಲವಿ ತನ್ನ ಸಹಜ ಸೌಂದರ್ಯ, ಅಭಿನಯದ ಮೂಲಕ ಗಮನ ಸೆಳೆಯುತ್ತಿರುವ ನಟಿ. ವಿವಾದಗಳಿಂದ ತುಸು ದೂರ. ವಿವಾದಗಳೆದ್ದರೂ ತಲೆ ಕೆಡಿಸಿಕೊಳ್ಳದ ಕಲಾವಿದೆ. ಆದರೆ, ಈ ಬಾರಿ ಮಾತ್ರ ಸ್ವಲ್ಪ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಹಬ್ಬಿರುವ ವಿವಾದದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

    ಏನು ವಿವಾದ?

    ರಾಮಾಯಣ ಚಿತ್ರದಲ್ಲಿ ಸಾಯಿಪಲ್ಲವಿ ಸೀತೆ ಪಾತ್ರದಲ್ಲಿ ಮಿಂಚುತ್ತಿರೋದು ನಿಮಗೆಲ್ಲ ಗೊತ್ತಿರೋ ವಿಚಾರ. ಇತ್ತೀಚೆಗೆ ಅವರ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ ಸಸ್ಯಾಹಾರವನ್ನು ಸೇವಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಈ ವಿಚಾರದ ಬಗ್ಗೆ ಸಾಯಿಪಲ್ಲವಿ ಕಿಡಿಕಾರಿದ್ದಾರೆ.

    ಸಾಯಿಪಲ್ಲವಿ ಈ ಹಿಂದೆ ಸಂದರ್ಶನವೊಂದರಲ್ಲಿ, ನಾನೆಂದಿಗೂ ಸಸ್ಯಾಹಾರಿಯೇ, ಯಾವ ಪ್ರಾಣಿಗಳನ್ನು ಹತ್ಯೆ ಮಾಡಲು ಇಚ್ಛಿಸಲ್ಲ ಎಂದಿದ್ದರು. ಈ ವಿಚಾರ ಆಗ ದೊಡ್ಡ ಸುದ್ದಿಯಾಗಿತ್ತು. ಹೀಗಿರುವಾಗ ಸುದ್ದಿ ಸಂಸ್ಥೆಯೊಂದು ಸಾಯಿಪಲ್ಲವಿ ರಾಮಾಯಣ ಸಿನಿಮಾಕ್ಕಾಗಿ ಮಾಂಸಾಹಾರ ತ್ಯಜಿಸಿ, ಸಸ್ಯಾಹಾರ ಸೇವಿಸುತ್ತಿದ್ದಾರೆ ಎಂದು ವರದಿ ಮಾಡಿತ್ತು. ಈ ಬಗ್ಗೆ ಸಾಯಿ ಪಲ್ಲವಿ ಸಿಟ್ಟಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

    ಕ್ರಮ ಕೈಗೊಳ್ಳುವ ಎಚ್ಚರಿಕೆ!

    ಬಹಳಷ್ಟು ಬಾರಿ ನನ್ನ ವಿರುದ್ಧ ಹಬ್ಬಿರುವ ವದಂತಿಗಳಿಗೆ ನಾನು ಪ್ರತಿಕ್ರಿಯಿಸದೆ ಮೌನವಾಗಿರುತ್ತೇನೆ. ಆದರೆ, ಈ ಬಾರಿ ಪ್ರತಿಕ್ರಿಯೆ ನೀಡುವ ಸಮಯ ಬಂದಿದೆ. ನನ್ನ ಚಲನಚಿತ್ರ ಬಿಡುಗಡೆ, ಜಾಹೀರಾತುಗಳು, ವೃತ್ತಿಗೆ ಸೇರಿದ ವಿಚಾರದಲ್ಲಿ ಯಾವುದೇ ಆಧಾರರಹಿತ ಸುದ್ದಿಗಳನ್ನು ಹಬ್ಬಿಸಿದರೆ, ಜನಪ್ರಿಯ ಮಾಧ್ಯಮ ಕಂಪನಿ ಅಥವಾ ವ್ಯಕ್ತಿ ಯಾರೇ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಾಯಿಪಲ್ಲವಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್​; ಫೋಟೋ ವೈರಲ್ !!  

    ರಾಮಾಯಣ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ. ರಾಮನಾಗಿ ರಣ್‌ಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದು, ಸೀತೆಯಾಗಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮನಾಗಿ ಬಣ್ಣ ಹಚ್ಚುತ್ತಿದ್ದಾರೆ.

     

    Continue Reading

    LATEST NEWS

    ಸಖತ್ ಸದ್ದು ಮಾಡುತ್ತಿದೆ ರಾಹುಲ್ ದ್ರಾವಿಡ್ ಕುರಿತಾದ ಸೂರ್ಯವಂಶಿ ಹೇಳಿಕೆ !

    Published

    on

    ಮಂಗಳೂರು/ನವದೆಹಲಿ: ಕಳೆದ ತಿಂಗಳು ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಹಾರ ಮೂಲದ 13 ವರ್ಷದ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, ಬರೊಬ್ಬರಿ 1.10 ಕೋಟಿ ನೀಡಿ ಖರೀದಿಸಿತ್ತು.

    ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಕೋಟ್ಯಧಿಪತಿಯಾದ ಅತಿ ಕಿರಿಯ ಆಟಗಾರ ಎನಿಸಿರುವ ವೈಭವ್ ಸೂರ್ಯವಂಶಿ, ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡಲು ಕಾತರದಲ್ಲಿದ್ದಾರೆ.

    ಇದನ್ನೂ ಓದಿ: ಇಂದಿಗೂ ಅಚ್ಚಳಿಯದೇ ಉಳಿದಿದೆ ವಿನೋದ್ ಕಾಂಬ್ಳಿಯವರ ಈ ದಾಖಲೆ !

    ಈ ಕುರಿತು ಹೇಳಿಕೆ ನೀಡಿರುವ ಈ ಯುವ ಎಡಗೈ ಆರಂಭಿಕ ಬ್ಯಾಟರ್, ‘ನನಗೆ ಐಪಿಎಲ್ ಗಿಂತ ಮಿಗಿಲಾಗಿ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡಲು ಉತ್ಸುಕನಾಗಿದ್ದಾನೆ’ ಎಂದು ತಿಳಿಸಿದ್ದಾರೆ.

    ‘ಐಪಿಎಲ್ ಗಾಗಿ ಯಾವುದೇ ವಿಶೇಷ ಯೋಜನೆ ರೂಪಿಸಿಲ್ಲ. ಸಹಜ ರೀತಿಯಲ್ಲೇ ಆಡಲಿದ್ದೇನೆ. ಐಪಿಎಲ್ ನಲ್ಲಿ ಆಡಲು ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ದ್ರಾವಿಡ್ ಸರ್ ಮಾರ್ಗದರ್ಶನದಲ್ಲಿ ಆಡಲು ಉತ್ಸುಕನಾಗಿದ್ದಾನೆ. ಐಪಿಎಲ್ ಗಿಂತ ಹೆಚ್ಚಾಗಿ ದ್ರಾವಿಡ್ ಅಡಿಯಲ್ಲಿ ಆಡಲು ಖುಷಿಯಾಗುತ್ತಿದೆ’ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.

     

    Continue Reading

    FILM

    2025 ರಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ ನಟಿ ಸಮಂತಾ ??

    Published

    on

    ಇತ್ತೀಚಿಗೆ ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಅದ್ದೂರಿಯಾಗಿ ನೆರವೇರಿದ್ದು, ದಂಪತಿ ಹನಿಮೂನ್​ಗೆ ಹೋಗಿದ್ದಾರೆ. ಮಾಜಿ ಪತಿ ಹೊಸ ಜೀವನ ಶುರುಮಾಡಿ ಆಯ್ತು. ಸ್ಯಾಮ್ ಯಾವಾಗ ಹೊಸ ಲೈಫ್ ಸ್ಟಾರ್ಟ್ ಮಾಡ್ತಾರಾ ಎನ್ನುವ ವಿಷಯ ಚರ್ಚೆ ಹುಟ್ಟಿಹಾಕಿದೆ.

    ನಟಿ ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳು ಉಂಟಾಗಿವೆ. ನಾಗ ಚೈತನ್ಯ ಜೊತೆಗಿನ ಅವರ ದಾಂಪತ್ಯ ಅಂತ್ಯವಾಯ್ತು. ಗಂಭೀರವಾದ ಆರೋಗ್ಯ ಸಮಸ್ಯೆ ಕೂಡ ಎದುರಾಯಿತು. ಅದರಿಂದಾಗಿ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬಿತ್ತು. ಎಲ್ಲ ಸಮಸ್ಯೆಗಳನ್ನೂ ಎದುರಿಸಿ ಸ್ಯಾಂ ಅವರು ಮುನ್ನುಗ್ಗುತ್ತಿದ್ದಾರೆ. 2024ರ ವರ್ಷ ಕಳೆಯುತ್ತಿದೆ. 2025ರ ಸ್ವಾಗತಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಸಮಂತಾ ರುತ್ ಪ್ರಭು ಅವರು ಒಂದು ಸೂಚನೆ ನೀಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳ ಕೌತುಕ ಹೆಚ್ಚಾಗಿದೆ.

    ಕೆಲವೇ ದಿನಗಳ ಹಿಂದೆ ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ನಾಗ ಚೈತನ್ಯ ಎರಡನೇ ಮದುವೆ ನಡೆಯಿತು. ನಟಿ ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಹಸೆಮಣೆ ಏರಿದರು. ಹಾಗಾದರೆ ಸಮಂತಾ ಅವರು ಇನ್ನೊಂದು ಮದುವೆ ಆಗುವುದು ಯಾವಾಗ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಇದೆ. 2025ರಲ್ಲಿ ಸಮಂತಾ ಅವರು ಈ ಬಗ್ಗೆ ಯೋಚಿಸಬಹುದು ಎಂಬುದಕ್ಕೆ ಈಗ ಸೂಚನೆ ಸಿಕ್ಕಿದೆ.

    ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸಮಂತಾ ರುತ್ ಪ್ರಭು ಅವರು ಒಂದು ಸ್ಟೋರಿ ಶೇರ್​ ಮಾಡಿಕೊಂಡಿದ್ದಾರೆ. 2025ರಲ್ಲಿ ತಮ್ಮ ರಾಶಿಫಲ ಏನಿದೆ ಎಂಬುದನ್ನು ಈ ಪೋಸ್ಟ್ ವಿವರಿಸುತ್ತಿದೆ. ಸಮಂತಾ ಅವರದ್ದು ವೃಷಭ ರಾಶಿ. ಈ ರಾಶಿಯವರು 2025ರ ವರ್ಷದಲ್ಲಿ ಏನನ್ನೆಲ್ಲ ನಿರೀಕ್ಷೆ ಮಾಡಬಹುದು ಎಂಬ ಪಟ್ಟಿಯನ್ನು ಸಮಂತಾ ಹಂಚಿಕೊಂಡು, ‘ಹಾಗೆಯೇ ಆಗಲಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಮದುವೆ ಮತ್ತು ಮಕ್ಕಳ ಬಗ್ಗೆ ಇದರಲ್ಲಿ ಸೂಚನೆ ಇದೆ.

    ‘ನಿಮಗೆ ನಿಷ್ಠಾವಂತ ಮತ್ತು ಪ್ರೀತಿಯ ಬಾಳಸಂಗಾತಿ ಸಿಗಲಿದ್ದಾರೆ. ಮಕ್ಕಳನ್ನು ಪಡೆಯಲಿದ್ದೀರಿ’ ಎಂಬ ಸಾಲುಗಳು ರಾಶಿ ಫಲದಲ್ಲಿ ಇದೆ. ಇದನ್ನು ಸಮಂತಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿರುವುದರಿಂದ ಬರುವ ವರ್ಷ ಅವರು ಮದುವೆ ಮತ್ತು ಮಗು ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಊಹೆ ನಿಜವಾಗಲಿ ಎಂದು ಕೂಡ ಫ್ಯಾನ್ಸ್ ಆಶಿಸಿದ್ದಾರೆ.

    ‘2025ರ ವರ್ಷ ನೀವು ತುಂಬ ಬ್ಯುಸಿ ಆಗಿರಲಿದ್ದೀರಿ. ಕೌಶಲ ವೃದ್ಧಿ ಆಗಲಿದ್ದು, ಅದರಿಂದ ನಿಮಗೆ ಹೆಚ್ಚಿನ ಆದಾಯ ಬರಲಿದೆ. ಆರ್ಥಕ ಸ್ಥಿರತೆ ಸಿಗಲಿದೆ. ಹಲವು ವರ್ಷಗಳಿಂದ ಇಟ್ಟುಕೊಂಡಿದ್ದ ಗುರಿಯನ್ನು ಸಾಧಿಸುತ್ತೀರಿ. ಆದಾಯದ ಮೂಲಗಳು ಹೆಚ್ಚಲಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸಲಿದೆ’ ಎಂಬ ಸಾಧ್ಯತೆಗಳನ್ನು ಕೂಡ ಸಮಂತಾ ಅವರ ರಾಶಿಫಲದಲ್ಲಿ ಬರೆಯಲಾಗಿದೆ.

    .

    Continue Reading

    LATEST NEWS

    Trending