Connect with us

DAKSHINA KANNADA

ಗಣೇಶ ಚೌತಿ: ಕೋಮುಗಲಭೆಯ ನಾಡಿನಲ್ಲಿ ಸಾಮರಸ್ಯದ ದೀಪ ಬೆಳಗಿಸಿದ ಮಂಗಳೂರಿನ ಹರ್ಬಟ್ ಡಿಸೋಜಾ..!

Published

on

ವಿಶೇಷ ವರದಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೋಮುಧ್ರುವೀಕರಣದ ಕೊಲೆ, ಗಲಭೆಗಳಿಗೆ ಬಹಳಷ್ಟು ಸುದ್ದಿಯಾಗುತ್ತಿದೆ. ಆದರೆ ಪರಶುರಾಮನ ಸೃಷ್ಟಿಯ ತುಳುನಾಡಿನ ಹಲವು ಧಾರ್ಮಿಕ ಆಚರಣೆಗಳಲ್ಲಿ ಭಾವಕ್ಯತೆ ಇನ್ನೂ ಇದೆ. ಅದು ಸುದ್ದಿಯಾಗುವುದು ವಿರಳ. ಅಂತಹ ಸುದ್ದಿ ಇಲ್ಲಿದೆ ನೋಡಿ.


ಮಂಗಳೂರು ನಗರದ ಜಪ್ಪಿನಮೊಗರುವಿನ ಹರ್ಬಟ್‌ ಡಿ’ಸೋಜ ಯಾವುದೇ ಫಲಾಪೇಕ್ಷೆ ಇಲ್ಲದೆ ವಿಘ್ನ ನಿವಾರಕ ಗಣೇಶನ ಹಬ್ಬ ಹಾಗೂ ಕೆಲವೇ ದಿನಗಳಲ್ಲಿ ಕರಾವಳಿ ಕ್ರೈಸ್ತರು ಆಚರಿಸುವ ಮೊಂತಿ ಹಬ್ಬಕ್ಕೆ ತೆನೆ ಹಂಚುತ್ತಾರೆ.

ಈ ಎರಡೂ ಹಬ್ಬಗಳಿಗೆ ತನ್ನ 20 ಸೆಂಟ್ಸ್‌ ಗದ್ದೆಯನ್ನು ಮೀಸಲಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಇಂತಹ ಸೇವೆ ಮಾಡುತ್ತಿರುವ ಸ್ಥಳೀಯರ ಪ್ರೀತಿಯ ಅಬ್ಬೆರ್‌ ಸೋಜೆರ್‌ಗೆ 60 ರ ಇಳಿವಯಸ್ಸು.

                         ಹರ್ಬಟ್‌ ಡಿ’ಸೋಜ

 

ಮಂಗಳೂರಿನ ಮಂಗಳಾದೇವಿ, ಮಾರಿಯಮ್ಮ, ವೈದ್ಯನಾಥ, ಆದಿಮಾಯೆ ಸೇರಿ ಸರಿಸುಮಾರು 25 ದೇವಸ್ಥಾನಗಳಿಗೆ ತೆನೆಯನ್ನು ಹಂಚುತ್ತಾರೆ. ಜೊತೆಗೆ ಹಲವು ಮನೆಗಳ ಚೌತಿಗೂ ಇವರ ತೆನೆಯನ್ನು ಬಳಸುತ್ತಾರೆ.

ವಿಶೇಷ ಎಂದರೆ ಇವರು ಬೆಳೆಸಿದ ತೆನೆ ಹೊರದೇಶಕ್ಕೂ ರವಾನೆಯಾಗುತ್ತದೆ. ಇದರ ಜೊತೆಗೆ ಕರಾವಳಿ ಕ್ರೈಸ್ತರ ಮೊಂತಿ ಫೆಸ್ತ್‌ಗೂ ತೆನೆಯನ್ನು ಬೆಳೆದು ಸ್ಥಳೀಯ ಬಜಾಲ್‌ ಚರ್ಚ್‌ ಸೇರಿ ಹಲವು ಚರ್ಚ್‌ಗಳಿಗೆ ನೀಡುತ್ತಾರೆ. ಇವರ ಬಳಿ ತೆನೆ ಕೇಳಿ ಯಾರೂ ಬಂದರೂ ಇಲ್ಲ ಅಂತ ಹೇಳಲ್ಲ.

ಗಣೇಶೋತ್ಸವಕ್ಕೆ ತೆನೆ ಕತ್ತರಿಸುತ್ತಿರುವ ಸ್ಥಳೀಯರು

“ಜಪ್ಪಿನಮೊಗರು ಗಣೇಶನ ಜಲಸ್ತಂಭನಕ್ಕೆ ಇವರದ್ದೇ ದೋಣಿ”
ಮಂಗಳೂರಿನ ಜಪ್ಪಿನಮೊಗರು ಗಣೇಶೋತ್ಸವ ಹಲವು ವಿಶೇಷತೆ ಹೊಂದಿದೆ. ಇಲ್ಲಿನ ಗಣೇಶೋತ್ಸವ ಸಮಿತಿಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಬಂಧುಗಳಿದ್ದಾರೆ. ಹರ್ಬಟ್‌ ಡಿ’ಸೋಜ ಅವರೂ ಸಹ ಗಣೇಶ ವಿಗ್ರಹ ಜಲಸ್ತಂಭದ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದಾರೆ.

                                   ದೇವರಾಜ್‌

ಕಳೆದ 14 ವರ್ಷಗಳಿಂದ ವಿಗ್ರಹ ಜಲಸ್ತಂಭನಕ್ಕೆ ತಮ್ಮದೇ ದೋಣಿಯನ್ನು ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ದೋಣಿಯನ್ನು ಇಟ್ಟುಕೊಂಡಿದ್ದಾರೆ ಎನ್ನುತ್ತಾರೆ ಗಣೇಶೋತ್ಸವ ಸಮಿತಿ ಸದಸ್ಯ ದೇವರಾಜ್‌.

DAKSHINA KANNADA

ಮಂಗಳೂರಿಗೆ ದುಬೈನಿಂದ ಬಂದ ವ್ಯಕ್ತಿಯಲ್ಲಿ ಮಂಕಿಫಾಕ್ಸ್ ಪತ್ತೆ

Published

on

ಬೆಂಗಳೂರು, ಜನವರಿ 23: ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ವ್ಯಕ್ತಿಯೊಬ್ಬ ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಿದ್ದು, ಅವನಿಗೆ ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಮಂಕಿಫಾಕ್ಸ್ ಇರುವುದು ದೃಢವಾಗಿದ್ದು ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿದೆ.

ಸೋಂಕಿತನ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ. ಇನ್ನು ಏರ್‌ಪೋರ್ಟ್‌ನಲ್ಲಿ ಸೋಂಕಿತ ಪತಿಯನ್ನು ನೋಡಲು ಬಂದಿದ್ದ ಪತ್ನಿಯನ್ನು ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ. ತಕ್ಷಣ ಐಸೋಲೆಟ್ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವ್ಯಕ್ತಿಯ ಸ್ಯಾಂಪಲ್​ನ್ನು ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ಪುಣೆಯ ಎನ್‌ಐವಿ ಲ್ಯಾಬ್‌ಗೆ ರವಾನಿಸಲಾಗಿತ್ತು. ಇದೀಗ ಎನ್‌ಐವಿ ಲ್ಯಾಬ್‌ ರಿಪೋರ್ಟ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ದೃಢ ಪಟ್ಟಿದೆ. ಸದ್ಯ ಮಂಕಿಪಾಕ್ಸ್​ಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿಲ್ಲ.

ಮಂಕಿಪಾಕ್ಸ್​ನ ಲಕ್ಷಣಳು :

  • ಊದಿಕೊಂಡ ದುಗ್ಧರಸ ಗ್ರಂಥಿಗಳು
  • ಜ್ವರ
  • ಚಳಿಯ ಅನುಭವ
  • ಸ್ನಾಯು ನೋವು
  • ತಲೆನೋವು
  • ಸುಸ್ತು

ಮಂಕಿಪಾಕ್ಸ್​ಗೆ ಇಲ್ಲಿಯವರೆಗೆ ಯಾವುದೇ ಲಸಿಕೆ ಅಥವಾ ಶಿಫಾರಸು ಮಾಡಿದ ಔಷಧವಿಲ್ಲ. ರೋಗಿಗೆ ಆತನ ರೋಗಲಕ್ಷಣಗಳ ಆಧಾರದ ಮೇಲೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಆಂಟಿವೈರಲ್ ಔಷಧಿಗಳನ್ನು ನೀಡುವ ಮೂಲಕ ವೈದ್ಯರು ರೋಗಿಯ ರೋಗವನ್ನು ನಿಯಂತ್ರಿಸುತ್ತಾರೆ.

Continue Reading

DAKSHINA KANNADA

ಮಸಾಜ್ ಸೆಂಟರ್ ದಾಂಧಲೆ ಪ್ರಕರಣ; 14 ಮಂದಿ ಅರೆಸ್ಟ್

Published

on

ಮಂಗಳೂರು : ಅನೈತಿಕ ಚಟುವಟಿಕೆ ಆರೋಪದಲ್ಲಿ ಮಂಗಳೂರಿನ ಬಿಜೈ ಬಳಿ ನಡೆದಿದ್ದ ಮಸಾಜ್ ಪಾರ್ಲರ್ ದಾಳಿಯಲ್ಲಿ ಹದಿನೈದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಈ ದಾಳಿ ನಡೆದಿದ್ದು, ರಾಮಸೇನೆಯ ಕಾರ್ಯಕರ್ತರು ಈ ದುಷ್ಕೃತ್ಯ ನಡೆಸಿದ್ದಾರೆ. ಪಾರ್ಲರ್ ಒಳ ನುಗ್ಗಿದ್ದ 10 ಜನ ರಾಮಸೇನಾ ಕಾರ್ಯಕರ್ತರು ಅಲ್ಲಿದ್ದ ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದಾರೆ. ಪಾರ್ಲರ್‌ನಲ್ಲಿ ಭಯದ ವಾತಾವರಣ ಸೃಷ್ಟಿಮಾಡಿ ಅಲ್ಲಿನ ಪಿಠೋಪಕರಣಗಳನ್ನು ಪುಡಿ ಗೈದಿದ್ದಾರೆ.

ಅಷ್ಟೇ ಅಲ್ಲದೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಎತ್ತಾಡಿ ಬಿಸಾಡಿದ್ದು, ಪಾರ್ಲರ್‌ನಲ್ಲಿದ್ದ ನಾಲ್ವರು ಯುವತಿಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕುಡುಪು ಗ್ರಾಮದ ಮನೆಯಿಂದ ರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಿ ಎಳೆದೊಯ್ದಿದ್ದಾರೆ.

ಇದನ್ನೂ ಓದಿ: ಮಸಾಜ್ ಸೆಂಟರ್‌ಗೆ ಹಿಂದೂ ಕಾರ್ಯಕರ್ತರ ಅನಿರೀಕ್ಷಿತ ದಾಳಿ; ಪೀಠೋಪಕರಣ ಧ್ವಂಸ ಮಾಡಿ ಅಟ್ಟಹಾಸ

ಉಡುಪಿ ಪ್ರವಾಸದಲ್ಲಿದ್ದ ಗೃಹ ಸಚಿವರು ಹಾಗೂ ಬೆಂಗಳೂರಿನಿಂದ ಉಸ್ತುವಾರಿ ಸಚಿವರು ಘಟನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಪಾರ್ಲರ್ ಮಾಲಕ ಸುಧೀರ್ ಶೆಟ್ಟಿ ಎಂಬುವವರ ದೂರಿನ ಆಧಾರದಲ್ಲಿ ಹಾಗೂ ಸಿಸಿ ಟಿವಿ ದೃಶ್ಯ ಮತ್ತು ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ ಆರೋಪಿಗಳನ್ನು ಗುರುತಿಸಲಾಗಿದೆ.

ಹನ್ನೊಂದು ಜನ ಪಾರ್ಲರ್ ಒಳಗೆ ಹೋಗಿದ್ದು, ಇದಕ್ಕೆ ಕುಮ್ಮಕ್ಕು ನೀಡಿದ ನಾಲ್ವರನ್ನು ಬಂಧಿಸಲಾಗಿದೆ.

Continue Reading

DAKSHINA KANNADA

ಮಂಗಳೂರು: ಮಸಾಜ್ ಸೆಂಟರ್‌ನಲ್ಲಿ ದಾಂಧಲೆ ಪ್ರಕರಣ: ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರ ಬಂಧನ

Published

on

ಮಂಗಳೂರು: ನಗರದ ಬಿಜೈಯ ಮಸಾಜ್ ಸೆಂಟರ್‌ನಲ್ಲಿ ದಾಂಧಲೆ ನಡೆಸಿದ ಪ್ರಕರಣದ ಆರೋಪಿ ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.

ನಗರ ಹೊರವಲಯದ ಕುಡುಪು ಬಳಿಯ ಮನೆಯಿಂದ ಪ್ರಸಾದ್ ಅತ್ತಾವರನನ್ನು ಬಂಧಿಸಲಾಗಿದೆ.

ನಗರದ ಮಸಾಜ್ ಸೆಂಟರ್ ಮೇಲೆ ರಾಮ ಸೇನಾ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಸಾದ್ ಅತ್ತವಾರ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸಂಘಟನೆಯ ಕಾರ್ಯಕರ್ತರು ಮಸಾಜ್ ಸೆಂಟರ್‌ಗೆ ನುಗ್ಗಿರುವುದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿರುವುದು ವರದಿಯಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Continue Reading

LATEST NEWS

Trending

Exit mobile version