Connect with us

    LATEST NEWS

    ಇನ್ಮುಂದೆ ಬಾರ್, ಪಬ್‌ ಎಂಟ್ರಿಗೆ ಗುರುತಿನ ಚೀಟಿ ಕಡ್ಡಾಯ..!

    Published

    on

    ಮಹಾರಾಷ್ಟ್ರ/ಮಂಗಳೂರು: ಇನ್ಮುಂದೆ ಪಬ್, ಬಾರ್‌ಗೆ ಮದ್ಯ ಸೇವನೆ ಮಾಡಬೇಕು ಅಂದ್ರೆ ಬೇಕಂತೆ ಐಡಿ ಕಾರ್ಡ್. ಹೌದು, ಮಹಾರಾಷ್ಟ್ರ ಸರಕಾರ ಇಂತಹದೊಂದು ಕಾನೂನನ್ನು ಜಾರಿಗೊಳಿಸಿದೆ. ಇನ್ಮುಂದೆ  ಪಬ್, ಬಾರ್‌ಗಳಿಗೆ ಪ್ರವೇಶ ನೀಡಬೇಕಾದರೆ ಸರಕಾರದ ಗುರುತಿನ ಚೀಟಿಯನ್ನು ಹೊಂದಿರಬೇಕು. ಈ ಹಿಂದೆ ಪುಣೆಯಲ್ಲಿ ನಡೆದಿದ್ದ ಕಾರು ಅಫಘಾತದಿಂದ ಎರಡು ಜೀವ ಬಲಿಯಾಗಿತ್ತು. ಇದರಿಂದ ಎಚ್ಚೆತ್ತ ಸರಕಾರ ಈ ಕಾನೂನು ಜಾರಿ ತಂದಿದೆ ಎನ್ನಲಾಗಿದೆ.

    Read More..; ನಕಲಿ ವೈದ್ಯನಿಂದ ಭ್ರೂಣ ಹ*ತ್ಯೆ ..! ತನಿಖೆ ವೇಳೆ ವೈದ್ಯನ ಕರಾಳ ಮುಖ ಬಯಲು..!!

    ಕೆಲವು ದಿನಗಳ ಹಿಂದೆ ಬಾಲಕನೊಬ್ಬ ಪಬ್‌ಗೆ ಹೋಗಿ ಪಾರ್ಟಿ ಮಾಡಿದ್ದಾನೆ. ಬಳಿಕ ಮದ್ಯದ ಅಮಲಿನಲ್ಲಿ ಪೋರ್ಶೆ ಕಾರನ್ನು ಚಲಾಯಿಸಿಕೊಂಡು ಹೋಗಿ ಅಪಘಾತ ಮಾಡಿದ್ದು ಇಬ್ಬರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣದಿಂದ ಎಚ್ಚೆತ್ತ ಬಾರ್‌, ಪಬ್ ಮಾಲೀಕರೂ ಕೂಡಾ ಕಟ್ಟು ನಿಟ್ಟಿನ ನಿಯಮಗಳನ್ನು ಕೈಗೊಂಡಿದ್ದಾರೆ.

    ಇತ್ತೀಚೆಗೆ ಅಪ್ರಾಪ್ತರು ಮದ್ಯಪಾನ ಸೇವಿಸಿ ವೇಗವಾಗಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಮುಂಬೈ ಹಾಗೂ ಪುಣೆಯಲ್ಲಿ ಮದ್ಯಪಾನ ಮತ್ತು ವೈನ್ ಸೇವನೆ ಮಾಡುವವರಿಗೆ ವಯಸ್ಸಿನ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ವಯಸ್ಸಿನ ಪ್ರಮಾಣ ಪತ್ರ ಪರಿಶೀಲನೆ ಮಾಡಿದ ಬಳಿಕವೇ ಪಬ್, ಬಾರ್‌ಗಳಿಗೆ ಪ್ರವೇಶ ನೀಡಲಾಗುತ್ತಿದೆ. ವೈನ್ ಮತ್ತು ಬಿಯರ್ ಕುಡಿಯಲು 21 ವರ್ಷ ಮತ್ತು ಮದ್ಯ ಸೇವಿಸಲು 25 ವರ್ಷ ವಯಸ್ಸು ಕಡ್ಡಾಯವಾಗಿರುತ್ತದೆ.

    DAKSHINA KANNADA

    ಅತ್ತಾವರ: ಮಳೆಗೆ ಧರೆಗುರುಳಿದ ಬೃಹತ್ ಮರ

    Published

    on

    ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅತ್ತಾವರ ಕಾಪ್ರಿಗುಡ್ಡದ ಬ್ರಿಟ್ಟೋಲೇನ್ ಬಳಿ ವಾಣಿಜ್ಯ ಸಂಕೀರ್ಣದ ತಳಪಾಯದ ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಮೇಲ್ಭಾಗದಲ್ಲಿದ್ದ ಬೃಹತ್ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ.

    ಮಳೆಯ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕಾಮಗಾರಿ ನಿಲ್ಲಿಸಲಾಗಿದ್ದ ಕಾರಣ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    Continue Reading

    DAKSHINA KANNADA

    ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು?

    Published

    on

    ಮಂಗಳೂರು: ಪೋಷಕರು ಅಥವಾ ಮನೆಯವರು ಚಹಾ, ಕಾಫಿ ಕುಡಿಯುವುದು ನೋಡಿ ಮಕ್ಕಳು ತಮಗೂ ಕೊಡಿ ಎಂದು ಹಟ ಮಾಡುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು ಎಂದು ಸಂದಿಗ್ಧತೆ ಪೋಷಕರಲ್ಲಿ ಇರುವುದು ಸಹಜ. ಮಕ್ಕಳಿಗೆ ಈ ಪಾನೀಯವನ್ನು ಕೊಡುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

    ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ 12 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾ, ಕಾಫಿ ಕೊಡಬಾರದು ಹಾಗೂ ಎನರ್ಜಿ ಡ್ರಿಂಕ್ ಕೂಡ ನೀಡುವಂತಿಲ್ಲ. 12 ರಿಂದ 18 ವರ್ಷ ಮಕ್ಕಳು 100 ಮಿಲಿ ಗ್ರಾಂ ನಷ್ಟು ಕೆಫಿನ್ ಹೊಂದಬಹುದು.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಅವರ ಹೃದಯ, ಮೆದುಳು, ಮೂತ್ರಪಿಂಡ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಫಿನ್ ಅಂಶ ಇರುವ ಚಹಾ ಮತ್ತು ಕಾಫಿ ಮಾತ್ರವಲ್ಲು ಚಾಕೊಲೇಟ್ ಪಾನೀಯಗಳು, ಬೇಕರಿ ಐಟಂಗಳು, ಕುಕ್ಕೀಸ್ ಇತ್ಯಾದಿಗಳು ಕೂಡ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡುವಂತಿಲ್ಲ.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಇದು ಅವರ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    Continue Reading

    LATEST NEWS

    ಉಳ್ಳಾಲ : ಒಂದೇ ಕುಟುಂಬದ ನಾಲ್ವರ ಪ್ರಾ*ಣ ಬ*ಲಿ ಪಡೆಯಿತಾ ಅಡಿಕೆ ಗಿಡ?

    Published

    on

    ಉಳ್ಳಾಲ : ಮುನ್ನೂರು ಗ್ರಾಮದ ಮದನಿ ನಗರದ ಮನೆಯ ಗೋಡೆ ಕುಸಿದು ಯಾಸೀರ್, ಪತ್ನಿ ಮರಿಯಮ್ಮ, ಮಕ್ಕಳಾದ ರಿಯಾನಾ ಹಾಗೂ ರಿಫಾನಾ ಇಹಲೋಕ ತ್ಯಜಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬೂಬಕ್ಕರ್ ಮನೆಯ ಹಿಂಭಾಗದಲ್ಲೇ ಬೆಳೆದಿದ್ದ ಎರಡು ಅಡಿಕೆ ಗಿಡ ನಾಲ್ವರ ಪ್ರಾ*ಣ ತೆಗೆದಿದೆ ಎಂಬ ಮಾತು ಕೇಳಿ ಬಂದಿದೆ. ಮೇಲ್ಭಾಗದ ಕಂಪೌಂಡ್ ವಾಲ್ ಗೆ ತಾಗಿ ಬೆಳೆದಿದ್ದ ಅಡಿಕೆ ಗಿಡ ಭಾರೀ ಗಾಳಿ ಮಳೆಗೆ ಅಲುಗಾಡಿದ ಪರಿಣಾಮ ಮಣ್ಣು ಸಡಿಲಗೊಂಡು ಜೊತೆಗೆ ಮಳೆ ನೀರು ಶೇಖರಣೆಗೊಂಡ ಪರಿಣಾಮ ಮತ್ತಷ್ಟು ಮೃದುವಾಗಿ ಕಂಪೌಂಡ್ ವಾಲ್ ಕುಸಿದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ನಾಲ್ವರ ಜೀ*ವ ಹೋಗಿದೆ.

    ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೇ ಭಾರೀ ಪ್ರಮಾಣದಲ್ಲಿ ನೀರು ಶೇಖರಣೆಯಾಗಿ ಜೊತೆಗೆ ಅಡಿಕೆ ಮರ ಗಾಳಿಗೆ ಅಲುಗಾಡಿದ ಪರಿಣಾಮ ಕಂಪೌಂಡ್ ಕುಸಿತ ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

    ಒಬ್ಬಳು ಬಾಲಕಿಯ ಕೈ ಅಲುಗಾಡ್ತಿತ್ತು, ಆದರೆ ಪ್ರಾಣ ಉಳಿಸಲು ಆಗಲಿಲ್ಲ :

    ಅಗ್ನಿಶಾಮಕ, ಪೊಲೀಸರು ಬರೋ ಮೊದಲೇ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ ಸ್ಥಳೀಯ ಯುವಕರ ತಂಡ.
    “ಬೆಳಗ್ಗೆ ಆರು ಗಂಟೆಗೆ ಭಾರೀ ಶಬ್ದ ಕೇಳಿ ಹೊರಗೆ ಬಂದು ನೋಡಿದೆವು. ಆಗ ಮನೆಯ ಮೇಲೆ ಗೋಡೆ ಕುಸಿದು ಬಿದ್ದಿರೋದು ಗೊತ್ತಾಯ್ತು. ತಕ್ಷಣ ಸ್ಥಳೀಯರೆಲ್ಲ ಸೇರಿ ಮನೆಯ ಬಾಗಿಲು ಒಡೆದವು. ಆ ಬಳಿಕ ಒಳಗೆ ಹೋದಾಗ ನಮಗೆ ಕರೆಂಟ್ ಶಾಕ್ ಹೊಡೀತು. ಮಳೆ ನೀರು ನುಗ್ಗಿ ವಯರಿಂಗ್ ನಲ್ಲಿ ಕರೆಂಟ್ ಹೊಡೀತಾ ಇತ್ತು. ಬಳಿಕ ನಮ್ಮಲ್ಲೇ ಇದ್ದ ಎಲೆಕ್ಟ್ರಿಷನ್ ಒಬ್ಬರು ಲೈನ್ ಆಫ್ ಮಾಡಿದ್ರು.
    ಆ ಬಳಿಕ ನಾವು ಕಾರ್ಯಾಚರಣೆ ನಡೆಸಲು ಶುರು ಮಾಡಿದೆವು.

    ಮೂವರು ಹಾಲ್ ನಲ್ಲಿದ್ದರು, ಒಬ್ಬಳು ಕೋಣೆಯಲ್ಲಿ ಇದ್ದಳು. ನಾವು ಮೊದಲು ಮೂವರನ್ನ ತೆಗೆದಾಗ ಅದರಲ್ಲಿ ಬಾಲಕಿ ಕೈ ಅಲುಗಾಡ್ತಿತ್ತು. ಆದರೆ, ರಸ್ತೆ ಕಿರಿದಾಗಿ ಆ್ಯಂ*ಬುಲೆನ್ಸ್ ಬರಲಾಗದೇ ಆಸ್ಪತ್ರೆ ದಾರಿ ಮಧ್ಯೆ ಮೃ*ತಪಟ್ಟಿದ್ದಾಳೆ. ನಾವು ಮೂರು ಮೃ*ತದೇಹ ಹೊರ ತೆಗೆದ ಬಳಿಕ ಅಗ್ನಿಶಾಮಕ, ಪೊಲೀಸರು ಬಂದಿದ್ದಾರೆ.ನಾಲ್ಕನೇ ಮೃತದೇಗ ಸ್ವಲ್ಪ ತಡವಾಗಿ ತೆಗೆದೆವು. ಕಳೆದ ಬಾರಿಯೂ ಇದೇ ಗೋಡೆ ಬಿದ್ದು, ಈ ಮನೆಗೆ ಹಾನಿ ಆಗಿತ್ತು .ಆದರೆ ಆಗ ಅವರು ಇರಲಿಲ್ಲ, ಮಂಗಳೂರಿನಲ್ಲಿ ವಾಸ ಇದ್ರು ಎಂದು ಕಾರ್ಯಾಚರಣೆ ನಡೆಸಿದ ವ್ಯಕ್ತಿ ತಿಳಿಸಿದ್ದಾರೆ.

    ಇದನ್ನೂ ಓದಿ : ULLALA : ಕಂಪೌಂಡ್ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರ ದು*ರ್ಮರಣ

    ಪ್ರಾಣಾ*ಪಾಯದಿಂದ ಪಾರಾದ ರಶೀನಾ!

    ಮೃತ ಯಾಸೀರ್ ಅವರ ದೊಡ್ಡ ಮಗಳು ರಶೀನಾಳನ್ನ ಕೇರಳ ಭಾಗಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಬಕ್ರೀದ್ ಹಿನ್ನೆಲೆಯಲ್ಲಿ ತಂದೆಯ ಮನೆಗೆ ರಶೀನಾ ಬಂದಿದ್ದರು. ನಿನ್ನೆ ಸಂಜೆ ವೇಳೆ ಪತಿಯ ಜೊತೆಗೆ ವಾಪಸ್ಸಾಗಿದ್ದರು. ರಶೀನಾ ತೆರಳಿದ ಬಳಿಕ ಪಕ್ಕದ ಮನೆಯಲ್ಲಿ ಕೂತು ಮಾತನಾಡ್ತಿದ್ದ ಮರಿಯಮ್ಮ ದಂಪತಿ ಬಳಿಕ ಮಕ್ಕಳ ಜೊತೆ ಊಟ ಮುಗಿಸಿ ನಿದ್ದೆಗೆ ಜಾರಿದ್ದರು. ನಂತರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಬೂಬಕ್ಕರ್ ಮನೆಯ ಕಂಪೌಂಡ್ ಕುಸಿದು ಬಿದ್ದು ದುರಂತವೇ ಸಂಭವಿಸಿದೆ.

    Continue Reading

    LATEST NEWS

    Trending