ಹಿಂದು ಜಾಗರಣ ವೇದಿಕೆ ಸುರತ್ಕಲ್ ವತಿಯಿಂದ ಸಹಾಯಾಸ್ತ..
ಮಂಗಳೂರು : ವಿಶ್ವವೇ ಕೊರೊನಾ ದಿಂದ ತತ್ತರಿಸಿದೆ. ಈ ಸಮಸ್ಯೆಯಿಂದ ಭಾರತ ಕೂಡ ಹೊರತ್ತಗಿಲ್ಲ. ಕೊರೊನಾ ಪೀಡಿತರಿಗಾಗಿ ರಾತ್ರಿ ಹಗಲು ಎನ್ನದೆ ಅಸ್ಪತ್ರೆಗಳಲ್ಲಿ ವೈದ್ಯರು, ನರ್ಸಗಳು, ವಾರ್ಡನ್ ಗಳು, ಸ್ವಚಾತ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.
ಪೌರಕಾರ್ಮಿಕರು ನಗರ ಸ್ವಚತೆಯಲ್ಲಿ ಈಗಲು ದುಡಿಯುತ್ತಿದ್ದರೆ, ಈ ಕೊರೊನಾದ ಸಮಸ್ಯೆಯ ನಡುವೆ ಕೂಡ ಕಾನೂನು ಸುವ್ಯವಸ್ಧೆ ಕಾಪಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ,
ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಸೂಚನೆಯಂತೆ ಸ್ವಯಂ ಸೇವಕರು ಸಮಾಜ ಸೇವೆಗೆ ಇಳಿದಿದ್ದಾರೆ.
ಈ ನಿಟ್ಟಿನಲ್ಲಿ ಹಿಂದು ಜಾಗರಣ ವೇದಿಕೆ ಸುರತ್ಕಲ್ ನಗರದ ವತಿಯಿಂದ ಪೊಲೀಸ್ ಠಾಣೆ ಮತ್ತು ಬಿಸಿಲಿನ ಮಧ್ಯೆ ಕೂಡ ಟ್ರಾಪಿಕ್ ನಲ್ಲಿ ಕರ್ತವ್ಯದಲ್ಲಿರುವ ಸಂಚಾರಿ ಠಾಣೆಗೆ ಸೇವಾ ರೂಪದಲ್ಲಿ ಸಾವಿರಾರು ನೀರಿನ ಬಾಟಲ್, ಹ್ಯಾಂಡ್ ವಾಶ್ ಸ್ಯಾನಿಟರಿ, ಹ್ಯಾಂಡ್ ಗ್ಲೌಸ್ ಗಳನ್ನು ನೀಡಲಾಯಿತು.
ಹಿಂದೂ ಜಾಗರಣಾ ವೇದಿಕೆಯ ನಗರ ಅಧ್ಯಕ್ಷರಾದ ಸತೀಶ್ ಮುಂಚೂರು, ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಮುಂಚೂರು, ಜಿಲ್ಲಾ ಕಾರ್ಯದರ್ಶಿ ಪುಷ್ಪರಾಜ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು