Home ಕರ್ನಾಟಕ ವಾರ್ತೆ ವೇಷ ಧರಿಸಿ ಎಂಡೋ, ಕ್ಯಾನ್ಸರ್ ಪೀಡಿತರಿಗೆ ಸಹಾಯ: ನೇತಾಜಿ ಬ್ರಿಗೇಡ್‌ ಕಾರ್ಯಕ್ಕೆ ಮೆಚ್ಚುಗೆ

ವೇಷ ಧರಿಸಿ ಎಂಡೋ, ಕ್ಯಾನ್ಸರ್ ಪೀಡಿತರಿಗೆ ಸಹಾಯ: ನೇತಾಜಿ ಬ್ರಿಗೇಡ್‌ ಕಾರ್ಯಕ್ಕೆ ಮೆಚ್ಚುಗೆ

ವೇಷ ಧರಿಸಿ ಎಂಡೋ, ಕ್ಯಾನ್ಸರ್ ಪೀಡಿತರಿಗೆ ಸಹಾಯ: ನೇತಾಜಿ ಬ್ರಿಗೇಡ್‌ ಕಾರ್ಯಕ್ಕೆ ಮೆಚ್ಚುಗೆ

ಮೂಡಬಿದಿರೆ: ಎಂಡೋ, ಕ್ಯಾನ್ಸರ್ ಪೀಡಿತ ಮತ್ತು ಕಿಡ್ನಿ ವೈಫಲ್ಯದಂತಹ ಅನಾರೋಗ್ಯ ಪೀಡಿತ, ಅಶಕ್ತರ ಚಿಕಿತ್ಸೆಗಾಗಿ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನೇತಾಜಿ ಬ್ರಿಗೇಡ್ ಮೂಡುಬಿದಿರೆ ಯುವಕರ ತಂಡ ವಿಶೇಷ ವೇಷ ಧರಿಸಿ ಹಣ ಸಂಗ್ರಹ ಮಾಡಿತ್ತು.

ಫೆ. 2ರಂದು ಮಧ್ಯಾಹ್ನ 2.30 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವಿಶೇಷ ವೇಷ ಧರಿಸಿದ ವಿಜೇಶ್ ಹಾಗೂ ನೇತಾಜಿ ಬ್ರಿಗೇಡ್ ಯುವ ಸಂಘಟನೆ ತಂಡ ಸಹಾಯ ಹಸ್ತ ಕೊರಿ ಸಂಗ್ರಹಿಸಿದ ಹಣದ ಮೊತ್ತ  ಸುಮಾರು 1,41,287 ಆಗಿದ್ದು, ಇದನ್ನು ಸಂಘಟನೆ ನಿರ್ಧರಿಸಿದ್ದಂತೆ ಅನಾರೋಗ್ಯ ಪೀಡಿತರ ಮನೆಗೆ ತೆರಳಿ ಹಸ್ತಾಂತರಿಸಲಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರಸಾದ, ಫೋಟೋ ಹಾಗೂ ಹಣ್ಣು ಹಂಪಲಿನೊಂದಿಗೆ ಸಹಾಯ ಧನದ ಮೊತ್ತವನ್ನು ನೀಡಿ, ಅನಾರೋಗ್ಯ ಪೀಡಿತರಿಗೆ ಮಾನಸಿಕ ಧೈರ್ಯ ತುಂಬಿದರು.

ಈ ವೇಳೆ ಉಪಸ್ಥಿತರಿದ್ದ ಯುವ ವಾಹಿನಿ ಅಧ್ಯಕ್ಷ ಶ್ರೀ ಜಗದೀಶ್ ಚಂದ್ರ, ಮಾತೃಭೂಮಿ ಬ್ಯಾಂಕ್ ಮ್ಯಾನೇಜರ್ ಶ್ರೀ ಕೃಷ್ಣ ನೇತಾಜಿ ಬ್ರಿಗೇಡ್‌ಸಾಮಾಜಿಕ ಕಳಕಳಿಯನ್ನು ಪ್ರಶಂಶಿಸಿದರು.

ಪುರಸಭಾ ಸದಸ್ಯರುಗಳಾದ ನಾಗರಾಜ್ ಪೂಜಾರಿ , ಪ್ರಸಾದ್ ಕುಮಾರ್ , ನವೀನ್ ಶೆಟ್ಟಿ, ದಿವ್ಯ ಜಗದೀಶ್ ಎಂ.ಕೆ. ಅಜಿತ್ ಕುಮಾರ್, ದಿನೇಶ್ ಮಾರೂರು , ಗೋಪಾಲ್ ಶೆಟ್ಟಿಗಾರ್, ಪ್ರಶಾಂತ್ ಒಂಟಿಕಟ್ಟೆ, ನೇತಾಜಿ ಬ್ರಿಗೇಡ್ ಸಂಚಾಲಕಾರದ ರಾಹುಲ್, ಸದಸ್ಯರುಗಳಾದ ವಿಶೇಷ ವೇಷ ಧರಿಸಿದ ವಿಜೇಶ್ ಅಮೀನ್, ಅಭಿಷೇಕ್ ಸಾಲ್ಯಾನ್, ಶಶಿಕುಮಾರ್, ನಿತ್ಯಾನಂದ ಕೋಡಂಗಲ್ಲು, ನಿತೇಶ್,ಪ್ರಸಾದ್, ನವೀನ್, ರಾಜೇಶ್ ಪುತ್ತಿಗೆ, ತೃಪ್ತಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

RECENT NEWS

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..! ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್‌ ಪಿ ಎಲ್‌...

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..!

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..! ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗ್ಳೂರು ಬಳಿಕ ಕರಾವಳಿ ನಗರಿ, ಮಂಗಳೂರು...

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..!

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..! ಮಂಗಳೂರು : ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ಆದ್ದರಿಂದ ಶೀಘ್ರದಲ್ಲೇ ರಾಂಡಮ್ ಟೆಸ್ಟ್‌ ಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ರಾಂಡಂ ಟೆಸ್ಟ್‌...

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..!

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..! ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಜನ ಸಾಮಾನ್ಯರಲ್ಲಿ ಚಳಿ ಕೂರಿಸಿದೆ. ಕಳೆದ...
error: Content is protected !!