Wednesday, January 27, 2021

ಅಕಾಲಿಕ ಮಳೆಗೆ ಉಕ್ಕಿ ಹರಿದ ನಂದಿನಿ ನದಿ : ಕಿನ್ನಿಗೋಳಿ ಪರಿಸರದಲ್ಲಿ ಕೃಷಿ ಭೂಮಿಗೆ ನುಗ್ಗಿದ ನೀರು..!

ಅಕಾಲಿಕ ಮಳೆಗೆ ಉಕ್ಕಿ ಹರಿದ ನಂದಿನಿ ನದಿ : ಕಿನ್ನಿಗೋಳಿ ಪರಿಸರದಲ್ಲಿ ಕೃಷಿ ಭೂಮಿಗೆ ನುಗ್ಗಿದ ನೀರು..!

ಮಂಗಳೂರು : ನಿನ್ನೆ ( ಬುಧವಾರ)  ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ಹೊರವಲಯದ ನಂದಿನಿ ನದಿ ಉಕ್ಕಿ ಹರಿಯುತ್ತಿದೆ,

ಕಿನ್ನಿಗೋಳಿ ಸಮೀಪದ ಅತ್ತೂರು ಪುಚ್ಚಾಡಿ ಅಣೆಕಟ್ಟಿನ ಬಾಗಿಲು ಹಾಕಿದ ಪರಿಣಾಮ, ತಗ್ಗು ಪ್ರದೇಶ ಜಲಾವೃತವಾಗಿದೆ.

ಜೊತೆಗೆ ಪಕ್ಕದ  ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ನಾಟಿ ಮಾಡಿದ ಹೆಚ್ಚಿನ ಗದ್ದೆಗಳು ಅಕಾಲಿಕ ಮಳೆ ನೀರಿನಿಂದ ಮುಳುಗಡೆಯಾಗಿವೆ.

ಪ್ರತೀ ವರ್ಷದಂತೆ ಈ ಬಾರಿಯೂ ಡಿಸೆಂಬರ್ ನಲ್ಲಿ ಅಣೆಕಟ್ಟು ಬಾಗಿಲು ಹಾಕಿದ್ದು ಅಣೆಕಟ್ಟಿನಲ್ಲಿ ನೀರು ಬರ್ತಿಯಾಗಿದ್ದು ಅಣೆಕಟ್ಟಿನ ಮೇಲಿಂದ ನೀರು ಹರಿಯುತ್ತಿದೆ,

ಗದ್ದೆಗಳಿಗೆ ಹೆಚ್ಚಿನ ನೀರು ಹರಿಯುವುದನ್ನು ತಪ್ಪಿಸಲು ಅಣೆಕಟ್ಟಿ ಕೆಲ ಹಲಗೆಗಳನ್ನು ತೆಗೆಯಲಾಗಿದ್ದು ನೀರು ಹರಿದು ಹೋಗುವಂತೆ ಮಾಡಲಾಗಿದೆ.

ಇತ್ತಿಚೆಗಷ್ಟೇ ನಾಟಿ ಕಾರ್ಯ ನಡೆದರಿಂದ ಕೃಷಿಭೂಮಿಗೆ ಹಾನಿಯಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...
Copy Protected by Chetans WP-Copyprotect.