Connect with us

ಮಂಗಳೂರಿನಲ್ಲಿ ಭಾರಿ ಮಳೆ : ಕೊರೊನಾ ಬಿಸಿಗೆ ತಂಪೆರೆದ ಮಳೆರಾಯ..!

Published

on

ಮಂಗಳೂರಿನಲ್ಲಿ ಭಾರಿ ಮಳೆ : ಕೊರೊನಾ ಬಿಸಿಗೆ ತಂಪೆರೆದ ಮಳೆರಾಯ..!

ಮಂಗಳೂರು : ಮಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಇಂದು ರಾತ್ರಿ ಭಾರಿ ಮಳೆ ಸುರಿದಿದೆ.

ಕಳೆದ ಕೆಲ ದಿನಗಳಿಂದ ಕೊರೊನಾದ ಬಿಸಿಯಲ್ಲಿ ಸುಡುತ್ತಿದ್ದ ಮಂಗಳೂರಿನ ಜನರಿಗೆ ಮಳೆ ಕೊಂಚ ತಂಪೆರೆದಿದೆ. ನಗರದ ಆನೇಕ ಭಾಗಗಳಲ್ಲಿ ಒಂದೇ ಸವನೆ ಮರೆ ಸುರಿದಿದೆ.

ರಾತ್ರಿ ಸುಮಾರು 9.30 ಕ್ಕೆ ಆರಂಭವಾದ ಮಳೆ ಸತತ ಒಂದು ಗಂಟೆ ಸುರಿದಿದೆ. ಮಂಗಳೂರು ನಗರದ ಆನೇಕ ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ.

ಬೆಂಗಳೂರು , ಕೊಡಗಿನಲ್ಲಿ ನಿನ್ನೆಯಿಂದ ಮಳೆಯಾಗುತ್ತಿದ್ದು ರಾಜ್ಯದ ಕರಾವಳಿ ಭಾಗಲ್ಲಿ ಮಳೆ ಸುರಿಯುವ ಬಗ್ಗೆ ಹವಮಾನ ಇಲಾಖೆ ಮಾಹಿತಿ ನೀಡಿತ್ತು.

ಇನ್ನು ಒಂದೆರಡು ದಿನ ಇದೇ ರೀತಿ ಮಳೆ ಮುಂದುವೆರೆಯಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

WATCH VIDEO : ದಪ್ಪು ಹಿಡಿದು ನೃತ್ಯ ಮಾಡಿದ ಯು.ಟಿ.ಖಾದರ್; ಹಬ್ಬದ ಸಂಭ್ರಮದ ವಿಡಿಯೋ ವೈರಲ್

Published

on

ಮಂಗಳೂರು : ವಿಧಾನ ಸಭಾ ಸ್ಪೀಕರ್ ಆಗಿದ್ರೂ ಸದಾ ಒಂದಿಲ್ಲ ಒಂದು ಕಾರಣದಿಂದ ಸ್ಪೀಕರ್ ಯು.ಟಿ ಖಾದರ್ ಅವರು ಸುದ್ದಿಯಾಗ್ತಾನೆ ಇರ್ತಾರೆ. ಅವರು ಎಲ್ಲೇ ಹೋದ್ರು ಅವರ ಅಭಿಮಾನಿಗಳು ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಾರೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ.

ಎರಡು ದಿನಗಳ ಹಿಂದೆ ನಡೆದ ರಮ್ಜಾನ್ ಹಬ್ಬದಂದು ಈ ವಿಡಿಯೋ ಶೂಟ್ ಮಾಡಲಾಗಿದೆ. ಹಬ್ಬದ ಸಲುವಾಗಿ ನಡೆದಿದ್ದ ಮೆರವಣಿಗೆ ಒಂದರಲ್ಲಿ ಸ್ಪೀಕರ್ ಖಾದರ್ ಅವರು ದಪ್ಪು ಬಾರಿಸಿ ನೃತ್ಯ ಮಾಡಿದ್ದಾರೆ. ದಪ್ಪು ಅನ್ನೋದು ಮುಸ್ಲಿಂ ಸಮೂದಾಯದ ಸಾಂಪ್ರದಾಯಿಕ ನೃತ್ಯವಾಗಿದ್ದು, ಹೆಚ್ಚಾಗಿ ಇದನ್ನು ಮಕ್ಕಳು ಪ್ರದರ್ಶನ ಮಾಡುತ್ತಾರೆ.


ಇಲ್ಲಿ ಕೂಡಾ ಮೆರವಣಿಗೆಯಲ್ಲಿ ದಪ್ಪು ಪ್ರದರ್ಶನ ಮಾಡುತ್ತಿರುವ ಮಕ್ಕಳ ಜೊತೆ ಮಕ್ಕಳಾಗಿ ದಪ್ಪು ನೃತ್ಯಕ್ಕೆ ಖಾದರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಖಾದರ್ ಅವರ ಅಭಿಮಾನಿಗಳು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Continue Reading

DAKSHINA KANNADA

WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Published

on

ಮಂಗಳೂರು : ಸ್ಪೀಕರ್ ಯು.ಟಿ.ಖಾದರ್ ಅವರನ್ನು ಕ್ಷೇತ್ರದ ಜನ ತುಂಬಾ ಪ್ರೀತಿ ಮಾಡೋದು ಅವರ ಸಿಂಪ್ಲಿಸಿಟಿ ಹಾಗೂ ಜನರ ಜೊತೆ ಅವರ ಬೆರೆಯುವಿಕೆಯಿಂದ. ಹೀಗಾಗಿ ಖಾದರ್ ಎಲ್ಲೇ ಹೋದ್ರು ಅದೊಂದು ದೊಡ್ಡ ಸುದ್ದಿಯಾಗಿ ಜನ ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ. ಜನ ಸೇವಕನಾಗಿರೋ ಯು.ಟಿ.ಖಾದರ್ ಈಗ ಮತ್ತೊಂದು ರೀತಿಯಲ್ಲಿ ಸುದ್ಧಿಯಾಗಿದ್ದಾರೆ.

ಮಕ್ಕಳಿಗೆ ಬಡವರ ಕಷ್ಟದ ಅರಿವು :


ಜನರ ಸಮಸ್ಯೆ ಆಲಿಸಲು ರೌಂಡ್ಸ್‌ ಹಾಕಿದ್ದ ಸ್ಪೀಕರ್ ಖಾದರ್, ತನ್ನ ಜೊತೆ ಪುತ್ರಿ ಹವ್ವಾ ನಸೀಮಾ ಹಾಗೂ ಸಹೋದರ ಇಫ್ತಿಕಾರ್ ಪುತ್ರಿ ಲಯಾ ಸಸೀಮಾ ಅವನ್ನು ಜತೆ ಕರೆದೊಯ್ದಿದ್ದಾರೆ. ಐಶಾರಾಮಿ ಬದುಕು ಸಾಗಿಸುವ ಮಕ್ಕಳಿಗೆ ಬಡವರ ಕಷ್ಟ ಅರ್ಥ ಮಾಡಿಸೋ ನಿಟ್ಟಿನಲ್ಲಿ ಸ್ಪೀಕರ್ ಖಾದರ್ ಈ ರೀತಿ ಮಾಡಿದ್ದಾರೆ. ಉಳ್ಳಾಲ ಕ್ಷೇತ್ರದ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಮನೆಯ ಪರಿಸ್ಥಿತಿಯನ್ನು ಖಾದರ್ ಅವಲೋಕಿಸಿದ್ರು. ಈ ವೇಳೆ ಅವರ ಸಂಕಷ್ಟಗಳನ್ನು ಕೇಳಿ ಅವರಿಗೆ ಸ್ಪಂದಿಸಿದ್ರು.

ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣ : ಪ.ಬಂಗಾಳದಲ್ಲಿ ಮಾಸ್ಟರ್ ಮೈಂಡ್ ಅರೆಸ್ಟ್

ಈ ವೇಳೆ ಪುತ್ರಿ ಹಾಗೂ ಸಹೋದರನ ಪುತ್ರಿಯನ್ನೂ ಜೊತೆ ಕರೆದೊಯ್ದು ಅವರಿಗೂ ಜನರ ಸಂಕಷ್ಟದ ಅರಿವು ಮೂಡಿಸಿದ್ರು. ಸ್ಪೀಕರ್ ಖಾದರ್ ಅವರ ಈ ನಡೆ ಈಗ ಜನರ ಮೆಚ್ಚುಗೆ ಗಳಿಸಿದೆ. ಮಕ್ಕಳಿಗೆ ಬಡ ಜನರ ಕಷ್ಟವನ್ನು ಅರ್ಥ ಮಾಡಿಸಿ ಅವರಿಗೆ ಸಹಾಯ ಮಾಡುವಂತಹ ಪ್ರೇರಣೆ ನೀಡಿದ್ದಾರೆ. ಇದು ಒಬ್ಬ ನೈಜ್ಯ ಸಮಾಜ ಸೇವಕನಿಗೆ ಇರಬೇಕಾದ ಗುಣ ಅಂತ ಜನರು ಗುಣಗಾನ ಮಾಡಿದ್ದಾರೆ.

Continue Reading

LATEST NEWS

ವಿಮಾನದಲ್ಲೇ ರೋಮ್ಯಾನ್ಸ್‌…ಜೋಡಿಗಳ ಫೋಟೋ ವೈರಲ್‌..!

Published

on

ಬಸ್, ರೈಲು, ವಿಮಾನ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಕೆಲ ಶಿಸ್ತು ಪಾಲಿಸಬೇಕಾಗಿರುವುದು ಅಗತ್ಯವಿದೆ. ಆದರೆ ಇತ್ತೀಚೆಗೆ ವಿಮಾನ ಪ್ರಯಾಣದ ವೇಳೆ ಹಲವು ಅಹಿತಕರ ಘಟನೆಗಳು ನಡೆದಿರುವುದನ್ನು ನಾವು ಕಾಣಬಹುದು. ಹಾಗೇಯೇ ಇದೀಗ ವಿಮಾನದಲ್ಲಿ ಜೋಡಿ ಹಕ್ಕಿಗಳ ರೋಮ್ಯಾನ್ಸ್ ಕೂಡ ಸಖತ್ ವೈರಲ್ ಆಗಿದೆ. ಈ ಜೊಡಿ ಹಕ್ಕಿಗಳಿಗೆ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಬೆಡ್ ರೂಂ ಲೈಟ್ ಆಫ್ ಮಾಡಿದಷ್ಟು ಖಷಿಯಾಗಿದೆ.

ರೋಮ್ಯಾಟಿಕ್ ಮೂಡ್‌ನಲ್ಲಿ ಈ ಜೊಡಿ ಹಕ್ಕಿಗಳು 4 ಗಂಟೆಗಳ ಕಾಲ ಪ್ರಯಾಣ ಮಾಡಿದ್ದಾರೆ. ಒಂದೆಡೆ ಇವರ ಜರ್ನಿ ಭಾರೀ ವೈರಲ್ ಆದ್ರೆ ಮತ್ತೊಂದೆಡೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಹೇಸಿಗೆ ಆಗಿದೆ.

ವಿಮಾನ ಹತ್ತಿದ ಈ ಜೋಡಿ ತಮ್ಮ ಸೀಟಿನಲ್ಲಿ ಆಸಿನರಅಗಿದ್ದರಂತೆ. ವಿಮಾನ ಟೇಕ್ ಆಫ್ ಮೊದಲು ಕಡ್ಡಾಯವಾಗಿ ಸೀಟು ಬೆಲ್ಟು ಹಾಕಬೇಕು ಎಂದು ಗಗನ ಸಖಿಯರು ಹೇಳಿದ್ದರು. ಹೀಗಾಗಿ ಅಕ್ಕ ಪಕ್ಕ ಕುಳಿತಿದ್ದ ಈ ಜೋಡಿ ಸೀಟು ಬೆಲ್ಟು ಹಾಕಿ ಶಿಸ್ತಿನಿಂದ ಕುಳಿತಿದೆ. ಆದರೆ ಟೇಕ್ ಆಫ್ ಆದ ಬೆನ್ನಲ್ಲೇ ಸೀಟು ಬೆಲ್ಟ್ ತೆಗೆದು ಬೆಡ್ ರೂಂ ಮಾಡಿಕೊಂಡಿದ್ದಾರೆ. ಕುಳಿತುಕೊಳ್ಳುವ ಸೀಟಿನಲ್ಲಿ ಇಬ್ಬರು ಮಲಗಿದ್ದಾರೆ. ಒಂದೆಡೆ ವಿಮಾನ ಆಗಸದಲ್ಲಿ ಹಾರಾಡುತ್ತಿದ್ದರೆ, ಈ ಜೋಡಿ ಹಕ್ಕಿಗಳು ತಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದರು.

4 ಗಂಟೆಗಳ ಪ್ರಯಾಣವನ್ನು ಮಲಗಿಕೊಂಡೇ ಮಾಡಿದ್ದಾರೆ ಈ ಜೋಡಿಗಳು. ಹಾರ್ಟ್‌ ಸಿಂಬಲ್ ತೋರಿಸಿ ಕಿಸ್ ಮಾಡುತ್ತಾ, ತಮ್ಮ ಪ್ರಯಾಣವನ್ನು ಮರೆಯದ ಹಾಗೇ ಮಾಡಿದ್ದಾರೆ. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಸೀಟು ಬೆಲ್ಟು ತೆಗೆದು ಈ ರೀತಿ ಪ್ರಯಾಣ ಮಾಡುವದನ್ನು ಸಿಬ್ಬಂದಿಗಳು ವಿರೋಧಿಸಲಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅಲ್ಲದೇ ಬೇರೆ ಪ್ರಯಾಣಿಕರಿಗೆ ಇದು ಹೇಸಿಗೆಯಾಗಿ ಯಾವಾಗ ಒಮ್ಮೆ ನಮ್ಮ ಸ್ಥಳವನ್ನು ರೀಚ್ ಆಗ್ತೇವೋ ಎನ್ನುವ ಹಾಗೇ ವರ್ತಿಸುತ್ತಿದ್ದರು.

Continue Reading

LATEST NEWS

Trending