Connect with us

  NATIONAL

  ಕೊಡಗಿನಲ್ಲಿ ಮಳೆ ಅಬ್ಬರ: ತಲಕಾವೇರಿಯ ಅರ್ಚಕರ ಮನೆಗಳ ಮೇಲೆ ಬಿದ್ದ ಬ್ರಹ್ಮಗಿರಿ ಬೆಟ್ಟ -ಐವರು ಕಣ್ಮರೆ..!

  Published

  on

  ಕೊಡಗಿನಲ್ಲಿ ಮಳೆ ಅಬ್ಬರ: ತಲಕಾವೇರಿಯ ಅರ್ಚಕರ ಮನೆಗಳ ಮೇಲೆ ಬಿದ್ದ ಬ್ರಹ್ಮಗಿರಿ ಬೆಟ್ಟ -ಐವರು ಕಣ್ಮರೆ..!

  ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಗಿಲು ಮುಟ್ಟಿದೆ. ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್ ಘೋಷಿಸಲಾಗಿದೆ.

  ಮಡಿಕೇರಿ–ವಿರಾಜಪೇಟೆ ರಸ್ತೆಯ ಭೇತ್ರಿಯಲ್ಲಿ ಕಾವೇರಿ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಭೇತ್ರಿ ಸೇತುವೆ ಮೇಲಿನ ಸಂಚಾರ ಬಂದ್ ಮಾಡಲಾಗಿದೆ.

  ನೆಲ್ಯಹುದಿಕೇರಿ ಹಾಗೂ ಬೆಟ್ಟದಕಾಡು ಗ್ರಾಮದ 150 ಜನರನ್ನು ಸ್ಥಳಾಂತರ ಮಾಡಲಾಗಿದೆ.

  ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ.

  ಸುಮಾರು ಎರಡು ಕಿ.ಮೀ.ನಷ್ಟು ಉದ್ದಕ್ಕೆ ಗುಡ್ಡ ಕುಸಿದು ಬಿದ್ದಿದೆ. ಭಾರಿ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.

  ಪರಿಣಾಮ ಮನೆಯ ಐವರು ಸದಸ್ಯರು ಕಣ್ಮರೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ತಕ್ಷಣ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದೆ.

  ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುತ್ತಾರೆ. ತಲಕಾವೇರಿಯ ಮನೆ ಖಾಲಿ ಇರುತ್ತದೆ.

  ಇನ್ನೊಬ್ಬ ಅರ್ಚಕರು ತಲಕಾವೇರಿಯ ಮನೆಯಲ್ಲಿಯೇ ಕುಟುಂಬದೊಂದಿಗೆ ವಾಸವಿರುತ್ತಾರೆ. 04 ಜನ ಕಾಣೆಯಾಗಿರುವ ಮಾಹಿತಿ ಇದೆ ಎಂದು ಕೊಡಗು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

  LATEST NEWS

  ಅಂತೂ ಟೇಕಾಫ್ ಆದ ಪ್ರಜ್ವಲ್‌ ಫ್ಲೈಟ್‌..! ಲ್ಯಾಂಡ್ ಆಗ್ತಾ ಇದ್ದಂತೆ SIT ಲಾಕ್‌..!

  Published

  on

  ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಜ್ವಲ್‌ ರೇವಣ್ಣ ಅಂತೂ ಇಂತು ಸ್ವದೇಶಕ್ಕೆ ರಿಟರ್ನ್‌ ಆಗ್ತಾ ಇದ್ದಾನೆ. ಪೆನ್‌ಡ್ರೈವ್ ಲೀಕ್‌ ಆಗ್ತಾ ಇದ್ದಂತೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದ ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ಹಲವು ನೊಟೀಸ್ ನೀಡಿದ್ರೂ ಕ್ಯಾರೆ ಅಂದಿರಲಿಲ್ಲ. ಇದೀಗ ವಿದೇಶದಿಂದ ವಾಪಾಸಾಗಲು ಮನಸ್ಸು ಮಾಡಿರೋ ಪ್ರಜ್ವಲ್‌ನನ್ನು ಲಾಕ್‌ ಮಾಡಲು ಎಸ್‌ಐಟಿ ಅಧಿಕಾರಿಗಳು ಕೂಡಾ ಸಿದ್ಧತೆ ನಡೆಸಿಕೊಂಡಿದ್ದಾರೆ.


  ದೇಶಕ್ಕೆ ಬರುವುದಾಗಿ ಹಲವು ಬಾರಿ ಸುದ್ದಿಯಾಗಿದ್ರೂ ಪ್ರಜ್ವಲ್‌ ರೇವಣ್ಣ ಬಾರದೆ ಜಾರಿಕೊಂಡಿದ್ದ. ಪ್ರಜ್ವಲ್‌ ಬರ್ತಾನೆ ಅನ್ನೋ ಸುದ್ದಿಯಾದಾಗ ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಾದು ಕೂತು ಸುಸ್ತಾಗಿ ಹೋಗಿದ್ದರು. ಇಷ್ಟೆಲ್ಲಾ ಬೆಳವಣಿಗೆಯ ಬಳಿಕ ಜನರೂ ಕೂಡಾ ರೊಚ್ಚಿಗೆದ್ದು ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಕೊನೆಗೂ ಹಲವು ಒತ್ತಡಗಳ ಬಳಿಕ ತಾನು ಬರುತ್ತಿರುವುದಾಗಿ ವಿಡಿಯೋ ಮಾಡಿ ಸಂದೇಶ ನೀಡಿ ಫ್ಲೈಟ್ ಹತ್ತಿದ್ದಾನೆ.

  ವಿದೇಶದಲ್ಲಿ ಕುಳಿತು  ಮೇ.31 ರಂದು ಅಂದ್ರೆ ನಾಳೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವೀಡಿಯೋ ಮೂಲಕ ಹೇಳಿದ್ದ. ಇದೀಗ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಹೊರಟಿರುವ ವಿಮಾನವನ್ನು ಹತ್ತಿದ್ದಾನೆ. ಇಂದು ತಡರಾತ್ರಿ ಪ್ರಜ್ವಲ್ ರೇವಣ್ಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

  ಪ್ರಜ್ವಲ್​ ರೇವಣ್ಣಗೆ ಬಂಧನ ಭೀತಿ ಕಾಡುತ್ತಿರುವ ಮಧ್ಯೆ ವಿದೇಶದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದ. ಆದರೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಆ ಮೂಲಕ ಪ್ರಜ್ವಲ್ ಬಂಧನ ಫಿಕ್ಸ್​ ಆಗಿದೆ. ಇದೀಗ ಪ್ರಜ್ವಲ್ ಬರುವಿಕೆಯನ್ನು ಕಾದು ಕುಳಿತಿರುವ SIT ತಂಡ ಈಗಾಗಲೇ ಏರ್​ಪೋರ್ಟ್​ನಲ್ಲೇ ಬೀಡುಬಿಟ್ಟಿದೆ.

  Continue Reading

  LATEST NEWS

  ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್‌ ಮದುವೆ ಡೇಟ್‌ ಫಿಕ್ಸ್‌..! ವೈರಲ್ ಆಯ್ತು ವೆಡ್ಡಿಂಗ್ ಕಾರ್ಡ್‌..!

  Published

  on

  ಮುಂಬೈ/ಮಂಗಳೂರು: ಅನಂತ್ ಅಂಬಾನಿ ಹಾಗೂ ರಾದಿಕಾ ಮರ್ಚಂಟ್‌ ರವರ ವಿವಾಹವು ಇಟಲಿಯಲ್ಲಿ ನಡೆಯಲಿದ್ದು, ಇದೀಗ ಮದುವೆಯ ಆಮಂತ್ರಣ ಪತ್ರ ಬಹಿರಂಗವಾಗಿದೆ.

  ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಗೆ ತೆರೆ ಬಿದ್ದಿದೆ. ಇನ್ನು ಇವರಿಬ್ಬರ ಪ್ರಿ ವೆಡ್ಡಿಂಗ್‌ ಬಹಳ ಅದ್ಧೂರಿಯಾಗಿ ಜರಗಿದ್ದು  ಸ್ಟಾರ್ ನಟ-ನಟಿಯರು ಸಾಕ್ಷಿಯಾಗಿದ್ದರು. ಅತೀ ಶೀಘ್ರದಲ್ಲೇ ರಾಧಿಕಾ ಮರ್ಚಂಟ್‌ ಹಾಗೂ ಅನಂತ್ ಅಂಬಾನಿ ವಿವಾಹವಾಗಲಿದ್ದಾರೆ. ಇನ್ನು ಮದುವೆಗೂ ಮುನ್ನ ಮೊದಲನೇ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದ್ದು, ಎರಡನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಇಟಲಿಯ ಕ್ರೂಸ್‌ನಲ್ಲಿ ಆಯೋಜಿಸಲಾಗಿದೆ.


  ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜು.12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ನಡೆಯಲಿದೆ.  ಅತಿಥಿಗಳು  ಆಮಂತ್ರಣ ಕಾರ್ಡ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಅನಂತ್-ರಾಧಿಕಾ ಮದುವೆ ಕಾರ್ಡ್ ಸಾಂಪ್ರದಾಯಿಕ ಕೆಂಪು ಮತ್ತು ಗೋಲ್ಡನ್ ಬಣ್ಣದಿಂದ ಕೂಡಿದ್ದು ಇವರಿಬ್ಬರ ವಿವಾಹ ಕಾರ್ಯಕ್ರಮದ ವಿವರಗಳನ್ನೂ ಕಾರ್ಡ್‌ನಲ್ಲಿ ನೀಡಲಾಗಿದೆ.

  ಇದನ್ನೂ ಓದಿ.. ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?

  ಕಾರ್ಡ್‌ನಲ್ಲಿ ಜು.12ರಂದು ವಿವಾಹವಿದ್ದು ಇದಕ್ಕೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು, ಜು.13ರಂದು ಆಶೀರ್ವಾದ ಕಾರ್ಯಕ್ರಮವಿದ್ದು ಇದಕ್ಕೆ ಭಾರತೀಯ ಫಾರ್ಮಲ್ ಹಾಗೂ ಜು. 14ರಂದು  ಆರತಕ್ಷತೆ ಸಮಾರಂಭವಿದ್ದು, ಇದಕ್ಕೆ ಇಂಡಿಯನ್ ಚಿಕ್ ಥೀಮ್ ಬಟ್ಟೆಗಳನ್ನು ಧರಿಸಿ ಬರಲು ಕೇಳಲಾಗಿದೆ. ಈ ಆಮಂತ್ರಣದ ಬೆನ್ನಲ್ಲೇ ಅಧಿಕೃತ ಆಮಂತ್ರಣ ಬರಲಿದೆ ಎಂದೂ ಹೇಳಲಾಗಿದೆ.

  Continue Reading

  LATEST NEWS

  ಕೊರಿಯರ್ ಏಜೆಂಟ್ ವೇಷದಲ್ಲಿ ಬಂದು ದರೋಡೆಗೆ ಯತ್ನಿಸಿದ ಮಹಿಳೆ..! ಅಸಲಿಗೆ ಈಕೆ ಯಾರು ಗೊತ್ತಾ?

  Published

  on

  ಬೆಂಗಳೂರು: ಮಹಿಳೆಯೊಬ್ಬರು ಕೊರಿಯರ್ ಏಜೆಂಟ್‌ನಂತೆ ವೇಷ ಧರಿಸಿ ದರೋಡೆ ಮಾಡುತ್ತಿದ್ದು ಆಕೆಯನ್ನು ಪೊಲೀಸರು ಬಂಧಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಕೊರಿಯರ್‌ ಏಜೆಂಟ್‌ ವೇಷ ಧರಿಸಿ ಮನೆಗಳಿಗೆ ನುಗ್ಗಿ ಬೆದರಿಸಿ, ಹಲ್ಲೆಗೈದು ದರೋಡೆ ಮಾಡುತ್ತಿದ್ದ ಈಕೆಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈಕೆ ದೆಹಲಿಯ ದ್ವಾರಕಾ ಅಕ್ಕ-ಪಕ್ಕ ಪ್ರದೇಶಗಳಲ್ಲಿ ದರೋಡೆಗಳನ್ನು ಮಾಡುತ್ತಿದ್ದಳು ಎನ್ನಲಾಗಿದೆ.

  ನಾಗರಿಕ ರಕ್ಷಣಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈಕೆ ಈಗ ಕೆಲಸ ಕಳೆದುಕೊಂಡಿದ್ದಾಳೆ. ಈಕೆಯ ಬಳಿಯಿದ್ದ ಕೊರಿಯರ್ ಬ್ಯಾಗ್, ಟಾಯ್‌ಗನ್, ಹ್ಯಾಂಡ್‌ಗ್ಲೌಸ್, ಎರಡು ಹಗ್ಗಗಳು, ಒಂದು ಬ್ಯಾಗ್ ಹೆಲ್ಮೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  ನಡೆದ ಘಟನೆ ಏನು..?

  ಮೇ.23ರಂದು ಪೊಲೀಸರಿಗೆ ಬಂದ ದರೋಡೆ ಕುರಿತ ದೂರಿನ ಪ್ರಕಾರ ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಕೊರಿಯರ್‌ ವೇಷದಲ್ಲಿ ಬಂದ ಮಹಿಳೆ ‘ನಿಮಗೊಂದು ಕೊರಿಯರ್ ಬಂದಿದೆ ಸಹಿ ಹಾಕಿ ಪಡೆಯಿರಿ’ ಎಂದಿದ್ದಾರೆ. ಇನ್ನು ನನ್ನಲ್ಲಿ ಸಹಿ ಹಾಕಲು ಪೆನ್ ಇಲ್ಲ ನೀವೇ ಪೆನ್ನು ತರುತ್ತೀರಾ..? ಎಂದು ಕೇಳಿಕೊಂಡಿದ್ದಾಳೆ. ಮಹಿಳೆ ಮನೆಯೊಳಗಡೆ ಪೆನ್ನು ತರಲು ಹೋಗುತ್ತಿದ್ದಾಗ ಹಿಂದಿನಿಂದ ಹಿಂಬಾಳಿಸಿಕೊಂಡು ಏಕಾಏಕಿ ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಟಾಯ್‌ ಗನ್‌ನಿಂದ ಹೊಡೆದಿದ್ದಾಳೆ. ಹೊಡೆತದ ರಭಸಕ್ಕೆ ಮಹಿಳೆಯ ಮುಖದಲ್ಲಿ ರಕ್ತ ಸೋರಿದೆ. ಮಹಿಳೆ ಜೋರಾಗಿ ಬೊಬ್ಬೆ ಹೊಡೆದು ಅಕ್ಕ-ಪಕ್ಕದ ಮನೆಯವರನ್ನು ಕರೆಯುತ್ತಾಳೆ. ಕೂಡಲೇ ಸ್ಥಳೀಯರು ಮಹಿಳೆ ಮನೆಗೆ ಧಾವಿಸಿ ಬರುತ್ತಾರೆ. ಇದನ್ನು ಅರಿತ ಕೊರಿಯರ್ ವೇಷ ಧರಿಸಿದ್ದ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಈಕೆ ಕೈಗೆ ಗ್ಲೌಸ್‌, ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರಿಂದ ಮುಖ ಚಹರೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಗಾಯಗೊಂಡಿದ್ದ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

  ಅಷ್ಟಕ್ಕೂ ಈ ಮಹಿಳೆ ಯಾರು ಗೊತ್ತಾ..?

  ಇನ್ನು ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಕೊರಿಯರ್ ಏಜೆಂಟ್‌ ಪತ್ತೆಗಾಗಿ ಸೋಮೇಶ್ ವಿಹಾರ್‌ನಿಂದ ಚಾವ್ಲಾ ವರೆಗೆ ಸಿಸಿಟಿವಿ ಪರಿಶೀಲನೆ ಮಾಡುತ್ತಾರೆ. ಮೇ.24ರಂದು ಸೋಮೇಶ್ ವಿಹಾರ್‌ನಲ್ಲಿದ್ದ ಖಾಲಿ ಮನೆಯೊಂದರಲ್ಲಿ ಕೊರಿಯರ್ ವೇಷ ಧರಿಸಿದ್ದ ಮಹಿಳೆಯನ್ನು ಪತ್ತೆ ಮಾಡುತ್ತಾರೆ. ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆ. ಇನ್ನು ಈ ಕೃತ್ಯ ಎಸಗಿದ ಮಹಿಳೆಯನ್ನು ರೇಖಾ ಎಂದು ಹೇಳಲಾಗಿದೆ. ಈಕೆ ಸಿವಿಲ್ ಡಿಫೆನ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳಿಂದ ನನ್ನ ಕೆಲಸ ಹೋಗಿದೆ. ಮನೆಯ ಬಾಡಿಗೆ ಮತ್ತು ಮನೆಯ ಖರ್ಚನ್ನು ಸಂಭಾಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಹಣಕ್ಕೆ ಬೇಕಾಗಿ ಈ ಕೆಲಸ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾಳೆ.

  ಇದನ್ನೂ ಓದಿ..; ಹೈಕೋರ್ಟ್‌ ಮಹಿಳಾ ಸಿಬಂದಿಗಳಿಗೆ ಇನ್ಮುಂದೆ ‘ಮುಟ್ಟಿನ ರಜೆ’

  ಉದ್ಯಮಿ ಮನೆಗೂ ಕನ್ನ..!

  ಈ ಹಿಂದೆ ಉದ್ಯಮಿ ಚಂದ್ರಕಾಂತ್‌ ಮನೆಯಲ್ಲಿ ಕನ್ನ ಹಾಕಲು ಈ ಮಹಿಳೆ ಯತ್ನಿಸಿದ್ದಳು. ಮೇ.23 ರಂದು ರೇಖಾ ಕೊರಿಯರ್ ಏಜೆಂಟ್ ವೇಷ ಧರಿಸಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಚಂದ್ರಕಾಂತ್‌ ಮನೆಗೆ ಹೋಗಿದ್ದಾಳೆ. ನಿಮಗೊಂದು ಕೊರಿಯರ್ ಬಂದಿದೆ, ಸಹಿ ಹಾಕಿ ಪಡೆದುಕೊಳ್ಳಿ ಎಂದಿದ್ದಾಳೆ. ನನ್ನಲ್ಲಿ ಪೆನ್ನು ಇಲ್ಲ, ನೀವೆ ಪೆನ್ನು ತನ್ನಿ ಎಂದು ಹೇಳಿದ್ದಾಳೆ. ಇನ್ನು ಪೆನ್ನು ತರಲು ಮನೆಯ ಒಳಗಡೆ ಹೋದ ಚಂದ್ರಕಾಂತ್‌ ರವರನ್ನು ಹಿಂಬಾಲಿಸಿದ ರೇಖಾ ಆಟಿಕೆ ಪಿಸ್ತೂಲ್‌ನಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಚಂದ್ರಕಾಂತ್ ಜೋರಾಗಿ ಬೊಬ್ಬೆ ಹೊಡೆದಿದ್ದು ಭಯದಿಂದ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

  Continue Reading

  LATEST NEWS

  Trending