ತುಂಬಿ ಹರಿಯುತ್ತಿದ್ದ ಉಪ್ಪಿನಂಗಡಿ ಹೊಳೆಯಲ್ಲಿ ಪಿಕಪ್ ಚಲಾಯಿಸುವ ಹುಚ್ಚು ಸಾಹಸ : ಕೊಚ್ಚಿ ಹೋದ ಪಿಕಪ್..!
ಪುತ್ತೂರು/ಮಂಗಳೂರು : ಕರಾವಳಿಯಲ್ಲಿ ಮಳೆಯ ಆರ್ಭಟ ಮುಂದುವೆರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಡೆಬಿಡದೇ ನಿರಂತರವಾಗಿ ಮಳೆ ಸುರಿಯುತ್ತಿದೆ.
ಅಲ್ಲ್ಲಿ ಮಳೆಯ ಕಾರಣ ಅನೇಕ ಅವಘಡಗಳು ಸಂಭವಿಸಿವೆ. ಈ ಮಧ್ಯೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೀರಕಟ್ಟೆ ಸಮೀಪ ಪಿಕಪ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಉಪ್ಪಿನಂಗಡಿ ಸಮೀಪದ ಕಾಂಚನ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.
.ತುಂಬಿ ಹರಿಯುತ್ತಿದ್ದ ಕಾಂಚನ ಹಳ್ಳದಲ್ಲಿ ಪಿಕಪ್ ಚಲಾಯಿಸುವ ಹುಚ್ಚು ಸಾಹಸ ಮಾಡಿದ್ದ ಚಾಲಕನ ನಿಯಂತ್ಣ ತಪ್ಪಿ ವಾಹನ ಕೊಚ್ಚಿ ಹೋಗಿದ್ದು ಚಾಲಕ ಆರಿಫ್ ಹೊಳೆ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೊಚ್ಚಿ ಹೋಗುತ್ತಿದ್ದ ಜೀಪನ್ನು ಸ್ಥಳಿಯ ಗ್ರಾಮಸ್ಥರು ರಕ್ಷಣೆ ಮಾಡಿ ದಡಕ್ಕೆ ಎಳೆದು ತಂದಿದ್ದಾರೆ.
ಮಂಗಳೂರರು ಪಂಪ್ವೆಲ್ ಮೇಲ್ಸೇತುವೆ ಮೇಲೆ ಕಾರೊಂದು ಮಳೆಯ ಕಾರಣ ಸ್ಕಿಡ್ ಆಗಿ ಪಲ್ಟಿಯಾಗಿದೆ. ಆದರೆ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾನೆ.