Home ಪ್ರಮುಖ ಸುದ್ದಿ ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ

ಬೆಳ್ತಂಗಡಿ: ಒಂದೆಡೆ ಕೊರೊನಾ ವೈರಸ್ ಭೀತಿಯಾದ್ರೆ, ಇತ್ತ ಮಳೆರಾಯ ಕೂಡ ತನ್ನ ಕೆಲಸ ಶುರು ಹಚ್ಚಿಕೊಂಡು ಬಿಟ್ಟಿದ್ದಾನೆ.

ರಣ ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿ ಜನತೆಗೆ ವರುಣ ಸಿಂಪಡಣೆಯಿಂದ ಕೊಂಚ ತಂಪೆರೆದಿದ್ದಾನೆ.

ಜಿಲ್ಲೆಯ ಬೆಳ್ತಂಗಡಿ ತಾಲೂಕು, ಕಾರ್ಕಳ, ನಾರಾವಿ ಸೇರಿದಂತೆ ಕೆಲವೆಡೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ.

ಬೆಳ್ತಂಗಡಿ ಪೇಟೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಎಡೆಬಿಡದೆ ಧಾರಾಕಾರ ಮಳೆ ಸುರಿದಿದೆ.

ದಕ್ಷಿಣಕನ್ನಡ ಜಿಲ್ಲೆಯ ಕಡಬ,ನೆಲ್ಯಾಡಿ, ಅಲಂಕಾರು ಪ್ರದೇಶಗಳಲ್ಲಿ ಸಿಡಿಲು ಮಿಂಚು ಸಹಿತ ಭಾರೀ ಮಳೇ ಸುರಿದಿದೆ.

ಅಲ್ಲದೆ ಸುಳ್ಯ, ಸುಬ್ರಹ್ಮಣ್ಯ, ಪಂಜ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿತ್ತು.

ಮೊದಲೇ ಕೊರೋನಾ ಸಂಕಷ್ಟದಲ್ಲಿರುವಾಗ ಅಕಾಲಿಕವಾಗಿ ಸುರಿದ ಮಳೆಯು ಇಳೆಯನ್ನು ತಂಪಾಗಿಸಿದರೂ, ಕೃಷಿಕರನ್ನು ಮಾತ್ರ ಕಂಗಾಲಾಗಿಸಿದೆ.

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...