ಬಂಟ್ವಾಳ: ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯು ಸಂಪೂರ್ಣ ಕಂಬಳ ಗದ್ದೆಯಂತಾಗಿ ವಾಹನ ಸವಾರರು ದಾರಿಹೋಕರು ಕಷ್ಟ ಅನುಭವಿಸುತ್ತಿರುವ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ ಪೋಸ್ಟ್ ಆಫೀಸ್, ಸಂಚಯಗಿರಿ, ಅಜ್ಜಿಬೆಟ್ಟು ಮೊದಲಾದ ಕಡೆಗಳಿಗೆ ತೆರಳುವ ಹೆದ್ದಾರಿ ಪಕ್ಕದ ಭಾಗದಲ್ಲಿ ಹಾಕಲಾದ ಮಣ್ಣು ಸಂಪೂರ್ಣ ರಸ್ತೆಗೆ ಬಂದಿದೆ.
ಹೆದ್ದಾರಿಯಿಂದ ಪೋಸ್ಟ್ ಆಫೀಸ್ ಕಡೆಗೆ ತೆರಳುವ ಮಾರ್ಗದ ಆರಂಭಿಕ ಜಾಗದಲ್ಲೇ ಈ ಸಮಸ್ಯೆ ಇದೆ. ಹಿಂದೆ ಇದೇ ಜಾಗದಲ್ಲಿ ಪೈಪ್ ಒಡೆದು ಬಳಿಕ ಅದರ ದುರಸ್ತಿ ಕಾರ್ಯವನ್ನು ನಡೆಸಲಾಗಿತ್ತು. ಇದೀಗ ಮಳೆಯ ಅವಾಂತರದಿಂದ ಈ ಸಮಸ್ಯೆ ಕಂಡುಬಂದಿದೆ.