ಬಂಟ್ವಾಳ: ಇಂದು ಸಂಜೆ ವೇಳೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪ್ರದೇಶದಾದ್ಯಂತ ಸಿಡಿಲು ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದೆ.
ಅರ್ಧ ತಾಸುಗಳ ಕಾಲ ನಿರಂತರವಾಗಿ ಮಳೆ ಸುರಿದ್ದಿದ್ದು, ಕಾದು ಕುದಿಯುವ ಇಳೆಗೆ ತಂಪೆರೆದ ಮಳೆರಾಯನ ಕೃಪೆಯಿಂದ ರೈತರು ಸಂತಸವಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಸೆಖೆ ಜಾಸ್ತಿಯಾಗಿದ್ದು, ನಿರೀಕ್ಷಿತವಾಗಿ ಮಳೆ ಸುರಿದಿದ್ದರಿಂದ ತಂಪು ಗಾಳಿ ಬೀಸಿದೆ. ಪ್ರತಿ ವರ್ಷ ಪೊಳಲಿ ಚೆಂಡು ನಡೆಯುವ ಸಂದರ್ಭದಲ್ಲಿ ಮಳೆ ಬರುವುದು ವಾಡಿಕೆಯಾಗಿದೆ.