ಉಳ್ಳಾಲ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಟ್ಟಡ ಕುಸಿದು ಬಿದ್ದಿರುವ ಘಟನೆ ಕಿನ್ಯಾ ಬೆಳರಿಂಗೆಯಲ್ಲಿ ನಡೆದಿದೆ.
ಕಿನ್ಯಾ ಬೆಳರಿಂಗೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ ಕುಸಿದುಬಿದ್ದಿದೆ. ಸಮೀಪದಲ್ಲೇ ಹೊಸತಾದ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ತರಗತಿಗಳು ನಡೆಯುತ್ತಿದ್ದುದರಿಂದ ತರಗತಿ ನಡೆಸಲು ಅಡಚಣೆಯಾಗಿಲ್ಲ.
ಆದರೆ ರಾತ್ರಿ ವೇಳೆ ಕಟ್ಟಡ ಕುಸಿದು ಬಿದ್ದಿರುವುದರಿಂದ ಸಂಭಾವ್ಯ ಅನಾಹುತ ತಪ್ಪಿದೆ.
ಹಳೇ ಕಟ್ಟಡ ಕೆಡವಲು ಗ್ರಾ.ಪಂ ನಿಂದ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅನುಮತಿ ನೀಡದ ಹಿನ್ನೆಲೆಯಲ್ಲಿ ಕೆಡವಲು ಸಾಧ್ಯವಾಗಿಲ್ಲ ಎಂದು ಗ್ರಾ.ಪಂ ಸದಸ್ಯ ಸಿರಾಜ್ ಕಿನ್ಯಾ ತಿಳಿಸಿದ್ದಾರೆ.