Saturday, August 20, 2022

ಮಂಗಳೂರಿನಲ್ಲಿ ವರುಣ ಆರ್ಭಟ: ಗಲ್ಫ್‌ ವಿಮಾನಗಳಲ್ಲಿ ಭಾರೀ ವ್ಯತ್ಯಯ

ಮಂಗಳೂರು: ಕರಾವಳಿಯಲ್ಲಿ ವರುಣ ಆರ್ಭಟದಿಂದ ಮಂಗಳವಾರ ಮಂಗಳೂರಿನಲ್ಲಿ ಲ್ಯಾಂಡ್‌ ಆಗಬೇಕಿದ್ದ ಎರಡು ವಿಮಾನಗಳು ಬೆಂಗಳೂರಿನಲ್ಲಿ ಲ್ಯಾಂಡ್‌ ಆಗಿವೆ.


ದುಬಾಯಿ ಮತ್ತು ದಮಾಮ್‌ನಿಂದ ಮಂಗಳವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನಗಳು ಭಾರೀ ಮಳೆಯ ಕಾರಣ ಮಂಗಳೂರಿನಲ್ಲಿ ಇಳಿಯಲು ಸಾಧ್ಯವಾಗದೆ ಬೆಂಗಳೂರಿಗೆ ನಿರ್ಗಮಿಸಿವೆ. ಬಳಿಕ ವಿಳಂಬವಾಗಿ ಮಂಗಳೂರಿಗೆ ವಾಪಸಾಗಿವೆ.

ದುಬಾಯಿಯಿಂದ ಬಂದ ವಿಮಾನವು ಬೆಳಗ್ಗೆ 4.40 ಕ್ಕೆ ಮಂಗಳೂರಿನಲ್ಲಿ ಇಳಿಯಬೇಕಾಗಿತ್ತು. ಆದರೆ ಅದು ಬೆಂಗಳೂರಿಗೆ ತೆರಳಿ ಬಳಿಕ 8.49 ಕ್ಕೆ ಮಂಗಳೂರಿನಲ್ಲಿ ಬಂದಿಳಿದಿದೆ.
ದಮಾಮ್‌ನಿಂದ ಹೊರಟ ವಿಮಾನವು ಇಂದು ಬೆಳಗ್ಗೆ 5.05 ಕ್ಕೆ ಮಂಗಳೂರಿನಲ್ಲಿ ಇಳಿಯಬೇಕಾಗಿತ್ತು. ಅದು ಬೆಂಗಳೂರಿಗೆ ತೆರಳಿ ಬಳಿಕ ಅಪರಾಹ್ನ 3.35 ಕ್ಕೆ ಮಂಗಳೂರಿಗೆ ಬಂದಿಳಿದಿದೆ.

ಬಹ್ರೇನ್- ಕಣ್ಣೂರ್- ಮಂಗಳೂರು ವಿಮಾನ ಕೂಡಾ ವಿಳಂಬವಾಗಲಿದ್ದು, ಸಂಜೆ 7-10 ರ ಬದಲು ರಾತ್ರಿ 11.40 ಕ್ಕೆ ಮಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಇದೇ ವೇಳೆ ಮಂಗಳೂರಿನಿಂದ ದುಬಾಯಿಗೆ ತೆರಳುವ ವಿಮಾನದ ಯಾನದಲ್ಲಿಯೂ ವಿಳಂಬವಾಗಿದೆ. ಜೂ.5 ರಂದು ಬೆಳಗ್ಗೆ 6.45 ಕ್ಕೆ ಮಂಗಳೂರಿನಿಂದ ದುಬಾಯಿಗೆ ನಿರ್ಗಮಿಸ ಬೇಕಾಗಿದ್ದ ಈ ವಿಮಾನವು 4.30ಕ್ಕೆ ಹೊರಟಿದೆ.

LEAVE A REPLY

Please enter your comment!
Please enter your name here

Hot Topics