Friday, August 12, 2022

ದ.ಕದಲ್ಲಿ ಮುಂದುವರೆದ ಧಾರಾಕಾರ ಮಳೆ-ರೆಡ್ ಅಲರ್ಟ್ ಘೋಷಣೆ

ಮಂಗಳೂರು: ದ.ಕ ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಆರಂಭವಾದ ಮಳೆ ಇಂದು ಕೂಡಾ ಧಾರಾಕಾರವಾಗಿ ಸುರಿಯುತ್ತಿದ್ದು ಜೊತೆಗೆ ಚಳಿಗಾಳಿಯೂ ತೀವ್ರವಾಗಿದೆ.

ಹವಾಮಾನ ಇಲಾಖೆಯು ಇಂದು ಕೂಡಾ ರೆಡ್‌ ಅಲರ್ಟ್ ಘೋಷಿಸಿದ್ದು ಮಳೆ ಇನ್ನಷ್ಟು ತೀವ್ರಗೊಳ್ಳುವ ಮುನ್ಸೂಚನೆ ನೀಡಲಾಗಿದೆ.


ನಾಳೆ ಆರೆಂಜ್ ಅಲರ್ಟ್ ಅದರ ಬಳಿಕ ಆ.10 ರವರೆಗೆ ಮೂರು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಳೆಯಿಂದಾಗಿ ಜಿಲ್ಲೆಯ ಮೂರೂ ಮನೆಗಳು (ಕಡಬದಲ್ಲಿ 2, ಉಳ್ಳಾಲದಲ್ಲಿ 1) ಸಂಪೂರ್ಣ ಹಾನಿಯಾಗಿದ್ದರೆ, ಮೂರೂ ಮನೆಗಳು ಭಾಗಶ: ಹಾನಿಗೀಡಾಗಿವೆ. 25 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶಗಳಲ್ಲಿನ 68 ಜನರನ್ನು ತೆರವುಗೊಳಿಸಿ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ತಂಡವನ್ನು ಇರಿಸಲಾಗಿದೆ.

ನದಿ ನೀರಿನ ಮಟ್ಟ ಹೆಚ್ಚಳ: ಜಿಲ್ಲಾದ್ಯಂತ ಮಳೆ ಹಿನ್ನೆಲೆಯಲ್ಲಿ ನದಿಗಳ ನೀರಿನ ಮಟ್ಟವೂ ಏರಿಕಲೆಯಾಗುತ್ತಿದೆ.

ಬಂಟ್ವಾಳದಲ್ಲಿ 8.5 ಮೀ, ಅಪಾಯದ ಮಟ್ಟ ಇರುವ ನೇತ್ರಾವತಿ ನದಿಯಲ್ಲಿ ನಿನ್ನೆ 5.2 ಮೀ ಎತ್ತರಕ್ಕೆ ನೀರು ಹರಿಯುತ್ತಿತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಅಪಾಯದ ಮಟ್ಟ 31.5 ಮೀ ಇದ್ದರೆ ನಿನ್ನೆ 27.30 ಮೀ ನೀರಿನ ಮಟ್ಟ ಇತ್ತು.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಅನ್ಯಕೋಮಿನ ಜೋಡಿ ಪತ್ತೆ-ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಬೆಳ್ತಂಗಡಿ: ಅನ್ಯಕೋಮಿನ ಜೋಡಿಯನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿಯ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ.ಗದಗ ಮೂಲದ ರಫೀಕ್(21) ಎಂಬಾತ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು, ಖಾಸಗಿ ಲಾಡ್ಜ್‌ಗೆ ರೂಮ್ ಬುಕ್ಕಿಂಗ್...

‘ಕಾಡು ಕುದುರೆ ಓಡಿ ಬಂದಿತ್ತಾ’ ಖ್ಯಾತಿಯ ಸುಬ್ಬಣ್ಣ ಇನ್ನಿಲ್ಲ

ಬೆಂಗಳೂರು: ಖ್ಯಾತ ಹಾಡುಗಾರ, ವಕೀಲ ಶಿವಮೊಗ್ಗದ ಸುಬ್ಬಣ್ಣ ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ 83 ವರ್ಷ ವಯಸ್ಸಾಗಿತ್ತು. 'ಕಾಡುಕುದುರೆ' ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲೆ ವೃತ್ತಿಯನ್ನೂ ಮಾಡುತ್ತಿದ್ದರು....

ಆದಾಯಕ್ಕಿಂತ ಅಧಿಕ ಆಸ್ತಿ: ಮಂಗಳೂರು ಮೂಲದ ಸರ್ಕಾರಿ ಅಧಿಕಾರಿಗೆ 3 ವರ್ಷ ಜೈಲು, 50 ಲಕ್ಷ ದಂಡ

ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಗಳಿಸಿದ್ದ ಚಿಕ್ಕಮಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರ ಮೇಲಿನ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು3 ವರ್ಷ 6...