Thursday, August 11, 2022

ಕರಾವಳಿಯಲ್ಲಿ ರಣಭೀಕರ ಮಳೆಗೆ ಹೈರಾಣಾದ ಜನತೆ-ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಅನೇಕ ನಗರಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇಂದು ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಕೂಡಾ ಆಗಿದೆ.


ನಗರದ ರಾಷ್ಟ್ರೀಯ ಹೆದ್ದಾರಿ 73ನೇ ಪಡೀಲು ಹೈವೇ ಬ್ರಿಡ್ಜ್‌ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಓವರ್‌ ಬ್ರಿಡ್ಜ್‌ ಒಳಗಡೆ ಕೂಡಾ ಸಂಪೂರ್ಣವಾಗಿ ನೀರು ನಿಂತಿದ್ದು ವಾಹನಗಳು ಸಂಪೂರ್ಣವಾಗಿ ಮುಳುಗಿ ಹೋಗಿದೆ. ಓವರ್‌ ಬ್ರಿಡ್ಜ್‌ನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಹಿಂದೆಯೂ ಹಲವು ಬಾರಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸ್ಥಳೀಯರು ಅಧಿಕಾರಿಗಳಿಗೆ ಛೀಮಾರಿ ಹಾಕುತ್ತಿದ್ದಾರೆ.


ಇನ್ನು ಸುಳ್ಯ ಪುತ್ತೂರು ಕಡೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯಯವಾಗಿದೆ. ಅಷ್ಟೇ ಅಲ್ಲದೆ ಗಾಳಿ ಮಳೆಯ ಪರಿಣಾಮ ಮರಗಳು ರಸ್ತೆ ಅಡ್ಡಕ್ಕೆ ಧರಾಶಾಹಿಯಾಗಿ ಉರುಳಿ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.

ಪೆರ್ಮಂಕಿ-ಮಂಗಳೂರು ರಸ್ತೆಯಲ್ಲಿ ಕೂಡಾ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ನಗರದ ಪಂಪ್ವೆಲ್ , ತೊಕ್ಕೊಟ್ಟು, ಕೊಟ್ಟಾರ ಚೌಕಿ ಮತ್ತಿತರ ಕೆಲವು ಜಂಕ್ಷನ್‌ಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲಾಗದೆ ನಿಂತಿವೆ.

ಕೊಟ್ಟಾರ ಚೌಕಿಯಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗಿರುವ ಕಾರಣ ಇಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಜನತೆ ಕಂಗೆಟ್ಟಿದೆ.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪಾಲಿಕೆ ಆಯುಕ್ತರು , ಸ್ಥಳೀಯ ಕಾರ್ಪೋರೇಟರ್ ಕಿರಣ್ ಕುಮಾರ್ ಸಹಿತ ಇತರ ಅಧಿಕಾರಿಗಳು ಆಗಮಿಸಿ ಇಲ್ಲಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೃತಕ ನೆರೆನೀರಿನಿಂದ ಜನ ಕಂಗೆಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟಾರ ಚೌಕಿಯಲ್ಲಿ ಜನರೇ ಮುಂದೆ ನಿಂತು ವಾಹನಗಳ ಸರಾಗ ಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದರು.

ಪಂಪ್ವೆಲ್‌ನಲ್ಲಿ ಪೈಪ್‌ ಒಡೆದು ಹೋಗಿರುವ ಕಾರಣ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ವಾಹನಗಳಿಗೆ ಸರಾಗವಾಗಿ ಹೋಗಲಾಗದೇ ಸಂಚಾರ ಆಮೆಗತಿಯಲ್ಲಿ ಸಾಗಿದವು.

ರಾ.ಹೆ. 75ರ ಅಡ್ಯಾರ್ ಸಮೀಪದ ‌ಕಣ್ಣೂರು ಮತ್ತು ತೊಕ್ಕೊಟ್ಟು-ಮೆಲ್ಕಾರ್ ರಸ್ತೆಯನ್ನು ಸಂಪರ್ಕಿಸುವ ಹಲವು ಕಡೆಗಳಲ್ಲೂ ಕೂಡ ನೀರು ನಿಂತಿದೆ. ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ‌ ಕಾಮಗಾರಿಯಿಂದಾಗಿ ನಗರದ ಹಲವು ಕಡೆಗಳಲ್ಲೂ ನೀರು ತುಂಬಿಕೊಂಡಿದ್ದು, ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಮಂಗಳೂರಿನ ನೀರುಮಾರ್ಗ ಸಮೀಪದ ಬದನಡಿ ಕ್ಷೇತ್ರ ಆವರಣಕ್ಕೆ ಭಾರೀ ನೀರು ನುಗ್ಗಿದ್ದು, ಮಳೆ ನೀರಿನಿಂದ ಜಲಾವೃತ್ತಗೊಂಡಿದೆ.


ಮಂಗಳೂರಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವು ತೋಟಗಳಿಗೆ ಅಪಾರವಾಗಿ ನೀರು ನುಗ್ಗಿದೆ. ಇನ್ನೂ ಕೆಲವೆಡೆ ಅಡಿಕೆ ಹಾಗೂ ತೆಂಗಿನ ಮರ ಕೂಡಾ ಉರುಳಿಬಿದ್ದಿದ್ದು ಕೃಷಿಕರಿಗೆ ಅಪಾರ ಮಟ್ಟದ ನಷ್ಟ ಸಂಭವಿಸಿದೆ.

ಧಾರಾಕಾರ ಮಳೆ ಪರಿಣಾಮ ಭೂಕುಸಿತ ಸಂಭವಿಸಿದ್ದರಿಂದ ರೈಲು ಸಂಚಾರಕ್ಕೆ ತೊಂದರೆಯಾಗುವುದರಿಂದ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ರೈಲು ಸಂಚಾರ ನಿರ್ಬಂಧ ಮಾಡಲಾಗಿದೆ.

 

ಮಂಗಳೂರು -ಪಡೀಲ್ ಹಾಗೂ ಸುಬ್ರಹ್ಮಣ್ಯ-ಮಂಗಳೂರು ಕಡೆಗೆ ಸಂಚರಿಸುವ ರೈಲು ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಇನ್ನು ಮರವೂರು ಸೇತುವೆ ಬಳಿ ಕೂಡಾ ರಸ್ತೆ ಬಿರುಕುಬಿಟ್ಟಿದೆ.

LEAVE A REPLY

Please enter your comment!
Please enter your name here

Hot Topics

ಪ್ರವೀಣ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ-ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಶಿಯಾಬ್, ಬಶೀರ್, ರಿಯಾಝ್ ಎಂದು...

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ತೊಕ್ಕೊಟ್ಟು ಕಾಪಿಕಾಡಿನಲ್ಲಿ ಬೈಕಿಗೆ ಕಾರು ಡಿಕ್ಕಿ : ಸವಾರರಿಗೆ ಗಾಯ – ಕಾರು ಕಮರಿಗೆ ..!

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದ್ದು ಕಾರು ಮತ್ತು ಬೈಕ್...