Monday, July 4, 2022

ಸೆ.8ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ :ಆರೆಂಜ್ ಅಲರ್ಟ್ ಘೋಷಣೆ..!

ಸೆ.8ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ :ಆರೆಂಜ್ ಅಲರ್ಟ್ ಘೋಷಣೆ..!

ನವದೆಹಲಿ: ರಾಜ್ಯದ ಕರಾವಳಿಯಲ್ಲಿ ಮುಂದಿನ ಎರಡು ದಿನಗಳವರೆಗೆ ಮತ್ತೆ ಭಾರಿ ಮಳೆಯಾಗುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್ 7 ಮತ್ತು 8 ರಂದು ಕೇರಳದ ವಿವಿಧ ಕಡೆಗಳಲ್ಲಿ ಭಾರಿ ಮಳೆಯಾಗಲಿದೆ ಅದೇ ರೀತಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಕರ್ನಾಟಕದ ಕರಾವಳಿ ಭಾಗಗಳಲ್ಲಿ ಸೆಪ್ಟೆಂಬರ್ 8 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ.

ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ’ ಎಂದು ಬೆಂಗಳೂರಿನ ಹವಾಮಾನ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಲ್ಲಿದ್ದ ಡೆಡ್‌ ಬಾಡಿ ಎರಡು ದಿನಗಳ ಬಳಿಕ ಪತ್ತೆ

ಉಡುಪಿ: ಎರಡು ದಿನಗಳ ಹಿಂದೆ ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಿಂದ ನಾಪತ್ತೆಯಾದ ಓರ್ವನ ಶವ ಇಂದು ಬೈಂದೂರಿನ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.ಮೃತನನ್ನು ರೋಶನ್ ಆಚಾರ್ಯ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ...

ಬೆಳ್ತಂಗಡಿ: ತೋಟಕ್ಕೆ ಹೋದವ ನದಿ ದಡದಲ್ಲಿ ಪತ್ತೆಯಾದ

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಪುದುವೆಟ್ಟು ಗ್ರಾಮದ ಅಡ್ಯ ಎಂಬಲ್ಲಿ ನಡೆದಿದೆ.ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ (65) ಎಂಬವರು ಮೃತಪಟ್ಟ...

ಮಂಗಳೂರು: ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಸಮಾಧಿ ಕುಸಿತ-ಶತಮಾನದ ಕಟ್ಟಡಕ್ಕೆ ಹಾನಿ ಭೀತಿ

ಮಂಗಳೂರು: ಶತಮಾನದ ಇತಿಹಾಸವಿರುವ ನಗರದ ಹೃದಯಭಾಗದಲ್ಲಿರುವ ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಎರಡು ಹೊಂಡ ನಿರ್ಮಾಣವಾಗಿದೆ.ಮಿಲಾಗ್ರಿಸ್ ಚರ್ಚ್‌ನ ಕಟ್ಟಡಕ್ಕೆ 125 ವರ್ಷಗಳ ಇತಿಹಾಸವಿದ್ದು, ಚರ್ಚ್‌ನ ಒಳಗೆ 108 ಜನರ ಮೃತ ದೇಹಗಳನ್ನು ಸಮಾಧಿ ಮಾಡಲಾಗಿದೆ.ಕಳೆದ...