Thursday, August 11, 2022

ಮಂಗಳೂರಿನಲ್ಲಿ ಹೃದಯ ತಪಾಸಣಾ ವಿಭಾಗ ಫುಲ್‌ ರಷ್‌: ಗಂಡಂದಿರನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬರುತ್ತಿರುವ ಪತ್ನಿಯರು

ಮಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರು ಹೃದಯ ಸ್ತಂಭನದಿಂದ ಮೃತಪಟ್ಟ ಬೆನ್ನಲ್ಲೇ ಸಾರ್ವಜನಿಕರಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದ್ದು,

ರಾಜ್ಯಾದ್ಯಂತ ಹೃದಯ ಪರೀಕ್ಷೆಗಾಗಿ ಜನರು ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ. ಅದರಲ್ಲೂ ಮೆಡಿಕಲ್‌ ಹಬ್‌ ಮಂಗಳೂರಿನಲ್ಲಿ ಬೆಂಗಳೂರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಯತ್ತ ಮುಗಿಬಿದ್ದಿದ್ದಾರೆ.

  ಸಾಂದರ್ಭಿಕ ಚಿತ್ರ

ಎಷ್ಟು ಬ್ಯುಸಿ ಎಂದರೆ ಪೋನ್‌ ಎತ್ತಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಬೆಳ್ಳಂ ಬೆಳಗ್ಗೆ ಅಪಾಯಿಂಟ್‌ಮೆಂಟ್‌ಗಳ ಮೇಲೆ ಅಪಾಯಿಂಟ್‌ಮೆಂಟ್‌ ಅಂತಿದ್ದಾರೆ ಡಾಕ್ಟರ್‌ಗಳು.
ಮೊನ್ನೆ ಭಾನುವಾರ ವಾರದ ರಜೆ ಹಾಗೂ ನಿನ್ನೆ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಸರ್ಕಾರಿ ರಜಾ ಇದ್ದರೂ ಮಂಗಳೂರು ನಗರ ಆಸ್ಪತ್ರೆ,

ಕ್ಲಿನಿಕ್‌ ಹಾಗೂ ಹೊರವಲಯದ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಹೃದಯ ಪರೀಕ್ಷೆಗೆ ಮುಂದಾಗಿದ್ದರು. ಅದರಲ್ಲೂ ತಮ್ಮ ಗಂಡಂದಿರನ್ನು ಪತ್ನಿಯರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿದ್ದು ದೃಶ್ಯ ಕಂಡುಬಂದಿತ್ತು.
ಖಾಸಗಿ ಕ್ಲಿನಿಕ್‌ಗಳಲ್ಲೂ ಹೃದಯ ಆರೋಗ್ಯ ತಪಾಸಣೆ ಮಾಡುತ್ತಿರು ವವರ ಸಂಖ್ಯೆಯಲ್ಲಿ ಶೇ.50 ರಷ್ಟು ಏರಿಕೆಯಾಗಿದೆ. ಹೆಚ್ಚಿನವರು 40-50 ವರ್ಷದವರು. 10ರಲ್ಲಿ ಏಳೆಂಟು ಮಂದಿಯನ್ನು ಅವರ ಪತ್ನಿಯರೇ ಕರೆದುಕೊಂಡು ಬರುತ್ತಿದ್ದಾರೆ. ಅದರಲ್ಲೂ ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಯುವಕರನ್ನು ಪತ್ನಿ, ತಂಗಿ, ತಾಯಿ ಕರೆದುಕೊಂಡು ಬಂದಿದ್ದರು.

ಕೆಲವರು ಅಗತ್ಯವಿಲ್ಲದಿದ್ದರೂ ವೈದ್ಯರು ಸಲಹೆ ನೀಡದಿದ್ದರೂ ಒತ್ತಾಯಪೂರ್ವವಾಗಿ ಇಸಿಜಿ ಮಾಡಿಸಿಕೊಳ್ಳುತ್ತಿದ್ದರು. ಇದರ ಜೊತೆಗೆ ಹೊಸ ಪೇಷೆಂಟುಗಳ ಮಧ್ಯೆ ಹೃದ್ರೋಗ ಸಮಸ್ಯೆ ಇರುವ ರೋಗಿಗಳೂ ಅಪಾಯಿಂಟ್‌ಮೆಂಟ್‌ ಕೊಟ್ಟ ದಿನಾಂಕಕ್ಕಿಂತ ಮುಂಚೆ ಬರುತ್ತಿದ್ದಾರೆ ಎನ್ನುತ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ

ಪ್ರತಿನಿತ್ಯ 100ರ ಗಡಿಯಲ್ಲಿ ಹೃದಯ ತಪಾಸಣೆಗೆ ಬರುತ್ತಿದ್ದರು. ಇದೀಗ ಅದೇ ಸಂಖ್ಯೆ 250ರ ಮೇಲೆ ಏರಿದೆ”
ಡಾ.ಪದ್ಮನಾಭ್‌ ಕಾಮತ್‌, ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ

LEAVE A REPLY

Please enter your comment!
Please enter your name here

Hot Topics

ಕಾಶ್ಮೀರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 3 ಯೋಧರು ಹುತಾತ್ಮ -ಇಬ್ಬರು ಉಗ್ರರು ಉಡೀಸ್

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.ಘಟನೆಯಲ್ಲಿ ಇನ್ನಿಬ್ಬರು ಯೋಧರು ಗಾಯಗೊಂಡಿದ್ದು, ಅದರಲ್ಲಿ ಓರ್ವ ಸ್ಥಿತಿ...

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...