Monday, January 24, 2022

ಮಹಾಕಾಳಿ ದೇವಿ ಮೂರ್ತಿಯ ಪಾದದ ಬಳಿ ರಕ್ತಸಿಕ್ತ ರುಂಡ: ಬೆಚ್ಚಿಬಿದ್ದ ಸ್ಥಳೀಯರು

ಹೈದರಾಬಾದ್: ಮಹಾಕಾಳಿ ದೇವಿ ಮೂರ್ತಿಯ ಪಾದದ ಬಳಿ ವ್ಯಕ್ತಿಯೊಬ್ಬನ ರುಂಡ ಕತ್ತರಿಸಿ ಇಟ್ಟಿದ್ದಾರೆ. ಈ ಭಯಾನಕ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಇಂತಹ ಭೀಕರ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ ಸಂಭಿವಿಸಿದೆ.


ಈ ಗ್ರಾಮದಲ್ಲಿ ಮಹಾಕಾಳಿ ದೇವಸ್ಥಾನವಿದೆ. ದೇಗುಲದ ಆವರಣದಲ್ಲಿ ಬೃಹತ್​ ಕಾಳಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ನಿನ್ನೆ ಪೂಜೆ ಮಾಡಲೆಂದು ಅರ್ಚಕರು ದೇಗುಲಕ್ಕೆ ಬಂದಾಗ ದೇವಿ ಪಾದದ ಅಡಿ ವ್ಯಕ್ತಿಯ ತಲೆ ಪತ್ತೆಯಾಗಿದೆ.

ರುಂಡವನ್ನ ನೋಡಿ ಬೆಚ್ಚಿಬಿದ್ದ ಅರ್ಚಕರು ಚೀರಾಡಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯರು ಈ ದೃಶ್ಯ ನೋಡಿ ಭಯಗೊಂಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕಾಳಿ ದೇವಿಯ ಪಾದದಡಿ ಇದ್ದ ರುಂಡದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ತಲೆ ಸೂರ್ಯಪೇಟೆ ಜಿಲ್ಲೆಯ 30 ವರ್ಷದ ಯುವಕ ಜಹೇಂದರ್ ನಾಯಕ್ ಎಂಬಾತನದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮಾನಸಿಕ ಅಸ್ವಸ್ಥನಾಗಿದ್ದ ಈತ, ಸುಮಾರು ಐದಾರು ವರ್ಷದಿಂದ ಅಲೆದಾಡುತ್ತಿದ್ದ.

ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂ ಬಳಿಯ ತುರ್ಕಯಾಂಜಲ್ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದ ಎಂದು ತಿಳಿದು ಬಂದಿದೆ. ಕೂದಲು ಮತ್ತು ಚರ್ಮವನ್ನು ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲಾಗಿದೆ.

Hot Topics

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

“ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ”

ಮಂಗಳೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ. ಈ ಸಮಾಜದ ಯುವಕರನ್ನು ಪೂಜಾರಿಯವರಿಂದ ದೂರ ಮಾಡಿದ ಶ್ರೇಯಸ್ಸು ಯಾರಿಗಿದೆ ಎಂದರೆ ಅದೇ ಮಹಾನುಭಾವನಿಗೆ ಎಂದು...