ಮಾಜಿ ಮುಖ್ಯಮಂತ್ರಿಗಳ ಆರೋಪಕ್ಕೆ ವಿಶ್ವಪ್ರಸನ್ನ ತೀರ್ಥರು ಹೇಳಿದ್ದೇನು..!?
ಉಡುಪಿ : ರಾಮ ಜನ್ಮಭೂಮಿ ನಿಧಿ ಸಂಗ್ರಹ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಉಡುಪಿ ಪೇಜಾವರ ಶ್ರೀ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಮ ಜನ್ಮಭೂಮಿ ನಿಧಿ ಸಂಗ್ರಹ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೇಜಾವರ ಶ್ರೀ ಉಡುಪಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮಾಹಿತಿ ಸಂಗ್ರಹಿಸಿ ಇರಿಸುವಂತೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಗಲಿ ಅಥವಾ ಆರ್.ಎಸ್.ಎಸ್ ಆಗಲಿ ಯಾವುದೇ ಸೂಚನೆ ನೀಡಿಲ್ಲ.
ದೇಣಿಗೆ ಕೊಟ್ಟವರ ಮಾಹಿತಿ ಮಾತ್ರ ಟ್ರಸ್ಟ್ ಗೆ ಅಗತ್ಯವಾದುದು, ಆದ್ದರಿಂದ ಸಂಗ್ರಹಿಸುತ್ತಾರೆ” ಎಂದು ಸ್ಪಷ್ಟಪಡಿಸಿದರು.
ರಾಮ ಮಂದಿರ ನಿರ್ಮಾಣಕ್ಕಾಗಿ ನಿರೀಕ್ಷೆಗೂ ಅಧಿಕ ದೇಣಿಗೆ ಸಂಗ್ರಹವಾಗುತ್ತಿದೆ. ಅದರಿಂದಾಗಿ ಈಗ ದೇಣಿಗೆ ಸ್ವೀಕಾರ ರಶೀದಿ ಹಾಗೂ ಕೂಪನ್‍ಗಳ ಕೊರತೆ ಎದುರಾಗಿದೆ.
ಹಾಗಾಗಿ ಮುಂದೆ ದೇಣಿಗೆ ಪಡೆಯಲು ಅನುಕೂಲವಾಗಲಿ ಎಂದು ಮನೆಗಳಿಗೆ ಗುರುತು ಹಾಕಿರಬಹುದು. ಹಾಗೆ ಮಾಡಿದ್ದರೆ. ಅದು ತಪ್ಪೇನಲ್ಲ”ಹೆಚ್ ಡಿ ಕುಮಾರಸ್ವಾಮಿ ಅವರು ಮಾಡಿರುವುದು ಗಂಭೀರ ಆರೋಪ.
ಅದಕ್ಕೆ ಬೇಕಾದ ಸಾಕ್ಷ್ಯ ಅವರು ನೀಡಿ ಆರೋಪ ಮಾಡಬೇಕು. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಸುಮ್ಮನೆ ಆರೋಪ ಮಾಡಬಾರದು ಎಂದವರು ಹೇಳಿದರು.