Connect with us

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

Published

on

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮನವಿ ಮಾಡಿದ್ದಾರೆ.

ಕೇರಳ ಗಡಿ ದಿಗ್ಭಂದನ ಹಿನ್ನೆಲೆ ಸಾಕಷ್ಟು ದಾರುಣ ಘಟನೆಗಳು ನಡೆಯುತ್ತಿವೆ ಎಂದು ಕೇರಳ-ಕರ್ನಾಟಕ ಬಾರ್ಡರ್ ಬಗ್ಗೆ ದೇವೇಗೌಡರು ಪತ್ರ ಬರೆದಿದ್ದಾರೆ.

ಕರ್ನಾಟಕ‌ದ ಕೇರಳ ಗಡಿ ದಿಗ್ಬಂಧನ ಹಿನ್ನೆಲೆ ಸಾಕಷ್ಟು ದಾರುಣ ಘಟನೆಗಳು ನಡೆಯುತ್ತಿವೆ.

ಕಾಸರಗೋಡು ಮತ್ತು ಮಂಗಳೂರು ನಡುವಣ ಆಂಬುಲೆನ್ಸ್ ನಿರ್ಬಂಧದಿಂದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಗರ್ಭಿಣಿ ಮಹಿಳೆಗೆ ಚೆಕ್‌ಪೋಸ್ಟ್‌ನಲ್ಲಿ ಹೆರಿಗೆಯಾಗಿತ್ತು.

ಕ್ಯಾನ್ಸರ್, ಹೃದಯ ಹಾಗೂ ಮೂತ್ರಪಿಂಡ ತುರ್ತು ಚಿಕಿತ್ಸೆ ಮತ್ತು ಉನ್ನತ ಚಿಕಿತ್ಸೆಗೆ ಕಾಸರಗೋಡಿನ ಬಹುತೇಕರು ಮಂಗಳೂರನ್ನೇ ಅವಲಂಬಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಗಳನ್ನು ನಿಲ್ಲಿಸುವುದು ಅಮಾನವೀಯ. ಹೀಗಾಗಿ ಆಂಬುಲೆನ್ಸ್ ಗಳ ಓಡಾಟಕ್ಕೆ ಬಿಡಬೇಕು. ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಬೇಕು.

ಕರಾವಳಿಯಲ್ಲಿ ಮೀನು ಜನರ ನಿತ್ಯದ ಆಹಾರ. ಹೀಗಾಗಿ ಮೀನುಗಾರಿಕೆ ಮೇಲಿನ ನಿಷೇಧ ಹಿಂಪಡೆಯಬೇಕು.

ಸಾಮಾಜಿಕ ಅಂತರದೊಂದಿಗೆ ಮೀನು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ವಿಧಾನ ಪರಿಷತ್ ಸದಸ್ಯ ಸಮಸ್ಯೆ ಗಮನಕ್ಕೆ ತಂದಿದ್ದಾರೆ ಹಾಗೂ ಕೇರಳ ಸರ್ಕಾರಕ್ಕೂ ಪತ್ರ ಬರೆದಿದ್ದಾರೆ. ಒಟ್ಟಾರೆ ಪತ್ರದ ಮೂಲಕ ಕರಾವಳಿ ಸಮಸ್ಯೆ ಪರಿಹರಿಸಲು ದೇವೇಗೌಡರು ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಹಳೆಯಂಗಡಿ : ಯಕ್ಷ ಧ್ರುವ ಕೇಂದ್ರ ಮಹಿಳಾ ಘಟಕದ ವಾರ್ಷಿಕೋತ್ಸವ

Published

on

ಹಳೆಯಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಕೇಂದ್ರ ಮಹಿಳಾ ಘಟಕ ಇದರ ಸಪ್ತಮ ವಾರ್ಷಿಕೋತ್ಸವ ಹಳೆಯಂಗಡಿ ಸಮೀಪದ ಶ್ರೀ ಪಾವಂಜೆ ಕ್ಷೇತ್ರದಲ್ಲಿ ನಡೆಯಿತು.

ಸಮಾರಂಭದಲ್ಲಿ ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಹಳುವಳ್ಳಿ ಇದರ ನಿರ್ದೇಶಕಿ ಜ್ಯೋತಿ ಟಿ ಎನ್ ಕಳಸ, ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇದರ ನಿರ್ದೇಶಕಿ ಪದ್ಮಾ ಕೆ ಆರ್ ಆಚಾರ್ಯ ಪುತ್ತೂರು, ಯಕ್ಷಗಾನ ತಾಳಮದ್ದಲೆ ಕಲಾವಿದೆ ರೇವತಿ ನವೀನ್ ಕುಳಾಯಿ ಇವರನ್ನು ಸನ್ಮಾನಿಸಲಾಯಿತು.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನ್ಯಾಯವಾದಿ ನಾರಾಯಣ ಪಾಟಾಳಿ, ಕಲಾ ಪೋಷಕರಾದ ಶಕುಂತಳಾ ರಮಾನಂದ ಭಟ್, ಸಂಧ್ಯಾ ಜಯದೇವ ಐತಾಳ್, ಪಟ್ಲ ಫೌಂಡೇಶನ್ ನ ಟ್ರಸ್ಟಿ ಸಹನಾ ರಾಜೇಶ್ ರೈ, ಜೆಸಿಐ ಸುರತ್ಕಲ್ ಘಟಕದ ಅಧ್ಯೆಕ್ಷೆ ಜ್ಯೋತಿ ಪ್ರವೀಣ್ ಶೆಟ್ಟಿ,ಪಟ್ಲ ಪೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು.

ಮಹಿಳಾ ಕೇಂದ್ರೀಯ ಘಟಕದ ಅಧ್ಯೆಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷೆ ಆರತಿ ಆಳ್ವ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ‌ ನಿರ್ವಹಿಸಿದರು. ಬಳಿಕ ಪಾವಂಜೆ ಮೇಳದಿಂದ ಧರ್ಮಸಿಂಹಾಸನ ಯಕ್ಷಗಾನ ಪ್ರದರ್ಶನಗೊಂಡಿತು.

 

Continue Reading

DAKSHINA KANNADA

ಟಿಕೆಟ್ ಕೈ ತಪ್ಪಿದ್ರೂ ಕೈ ಬಿಡದ ಹೈಕಮಾಂಡ್‌..! ಕೇರಳದ ಸಹ ಉಸ್ತುವಾರಿಯಾದ ನಳಿನ್ ಕುಮಾರ್ ಕಟೀಲ್‌

Published

on

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ವಹಿಸಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳದ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು ಬಾರಿ ನಿರಾಸೆ ತಂದಿತ್ತು. ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಹೊಸ ಮುಖವನ್ನು ಪಕ್ಷ ಕಣಕ್ಕೆ ಇಳಿಸಿದೆ. ಇದು ನಳಿನ್ ಕುಮಾರ್ ಕಟೀಲ್‌ ಅವರಿಗೆ ಬೇಸರ ತಂದಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಹಳಷ್ಟು ಭಾವುಕರಾಗಿದ್ದ ನಳಿನ್ ಕುಮಾರ್ ಕಟೀಲ್ ಪಕ್ಷ ನಿಂತ ನೀರಾಗಬಾರದು, ಹೊಸ ಮುಖಗಳು ಬರುತ್ತಿರಬೇಕು, ನಾನು ಪಕ್ಷ ಗುಡಿಸಿ ಒರೆಸು ಅಂತ ಹೇಳಿದ್ರೂ ಮಾಡ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಪಕ್ಷ ಅವರಿಗೆ ಕೇರಳದ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಪಕ್ಷದಲ್ಲಿ ದೊಡ್ಡ ಜವಾಬ್ದಾರಿಯನ್ನೇ ನೀಡಿದೆ.

Continue Reading

LATEST NEWS

ಪ್ರತಾಪ್ ಸಿಂಹ ಬದಲು ಒಡೆಯರ್ ಯಾಕೆ..!? ರಾಜ್ಯಾಧ್ಯಕ್ಷರು ಹೇಳಿದ್ದೇನು?

Published

on

ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರಿನಿಂದ ಯದುವೀರ್ ಕೃಷ್ಣದತ್ತ ಒಡೆಯರ್‌ಗೆ ಟಿಕಿಟ್ ನೀಡಿ, ಪ್ರತಾಪ್ ಸಿಂಹರಿಗೆ ಕೋಕ್ ನೀಡಲಾಗಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಠಿಮಾಡಿತ್ತು ಎಂದರೆ ತಪ್ಪಾಗಲ್ಲ.

ಈ ಕುರಿತು ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೈಸೂರು-ಕೊಡಗು  ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆಯ ಅಂತರದಿಂದ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

 

 

wodeyar

ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿಯಾಗಿರುವ ಯದುವೀರ್ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಜನರಿಗಾಗಿ ಕೆಲಸ ಮಾಡುತ್ತಾ ಹಿಂದಿನ ಹತ್ತು ವರ್ಷಗಳ ಕಾಲ ಈ ಭಾಗದ ಕ್ರಿಯಾಶೀಲ ಸಂಸದರಾಗಿ ಪ್ರತಾಪ್ ಸಿಂಹ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

prathap simha

ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗದೆ ಯದುವೀರ್ ಅವರಿಗೆ ಟಿಕೆಟ್ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ನಾಯಕರು ಪ್ರತಾಪ್ ಸಿಂಹ ಅವರ ಬಗ್ಗೆ ಬೇರೆ ಏನಾದರೂ ಯೋಚನೆ ಮಾಡಿರುತ್ತಾರೆ. ಪ್ರತಾಪ್ ಸಿಂಹ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ವಿಜಯೇಂದ್ರ ಹೇಳಿದರು.

Continue Reading

LATEST NEWS

Trending