Connect with us

    LATEST NEWS

    ಉಕ್ರೇನ್‌ನಲ್ಲಿ ರಷ್ಯಾದ ಬಾಂಬ್‌ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿ..!

    Published

    on

    ಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಸೇನೆಯು ನಡೆಸಿದ ಶೆಲ್‌ ದಾಳಿಗೆ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ್ದಾನೆ.


    ಸಾವನ್ನಪ್ಪಿದ ವಿದ್ಯಾರ್ಥಿಯನ್ನು ಹಾವೇರಿ ಮೂಲದ ನವೀನ್‌ ಎಂದು ಗುರುತಿಸಲಾಗಿದೆ.

    ಖಾರ್ಕಿವ್‌ ನಗರದಲ್ಲಿ ತಂಗಿದ್ದ ಆತ ಬೆಳಗ್ಗೆ ತಿಂಡಿ ತರಲು ಹೊಟೇಲ್‌ಗೆ ಹೋಗಿದ್ದ ವೇಳೆ ರಷ್ಯಾ ಸೇನೆಯ ರಾಕೆಟ್‌ ದಾಳಿಗೆ ಬಲಿಯಾಗಿದ್ದಾನೆ.

    ಈ ಬಗ್ಗೆ ವಿದೇಶಾಂಗ ಇಲಾಖೆ ಟ್ವೀಟ್‌ ಮಾಡಿದೆ. ಸದ್ಯ ಆತನ ದೇಹ ಖಾರ್ಕಿವ್‌ ನಗರದ ಶವಗಾರದಲ್ಲಿರಿಸಲಾಗಿದೆ.

    ‘ಉಕ್ರೇನ್​​ ಖಾರ್ಕಿವ್​​ನಲ್ಲಿ ಬೆಳಗ್ಗೆ ನಡೆದ ಶೆಲ್ ದಾಳಿಯ ವೇಳೆ ಭಾರತೀಯ ವಿದ್ಯಾರ್ಥಿವೊರ್ವ ಸಾವಿಗೀಡಾಗಿರುವುದು ಅತ್ಯಂತ ದುಃಖದ ವಿಚಾರ.

    ವಿದ್ಯಾರ್ಥಿಯ ಪೋಷಕರ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್​ ಬಗ್ಚಿ ಮಾಹಿತಿ ನೀಡಿದ್ದಾರೆ.

    ಉಕ್ರೇನ್‌ ರಾಜಧಾನಿ ಕೀವ್‌ ನ್ನು ಈಗಿಂದೀಗಲೇ ತೊರೆಯಿರಿ : ಭಾರತದ ನಾಗರಿಕರಿಗೆ ರಾಯಭಾರಿ ಕಚೇರಿ ಟ್ವೀಟ್..!

    ರಷ್ಯಾ ಮತ್ತು ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತದ ಮೂಲದ ಪ್ರಜೆಗಳಿಗೆ ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ಈಗಿಂದೀಗಲೇ ತೊರೆಯಿರಿ ಎಂದು ಭಾರತದ ನಾಗರಿಕರಿಗೆ ರಾಯಭಾರಿ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.
    ಉಕ್ರೇನ್‌ ರಾಜಧಾನಿಯಲ್ಲಿರುವ ಭಾರತೀಯ ಮೂಲದವರು ಈ ಕೂಡಲೇ ಕೀವ್‌ ಅನ್ನು ತೊರೆಯಿರಿ. ರೈಲು ಅಥವಾ ಇನ್ನಿತರ ಲಭ್ಯ ಸಾರಿಗೆ ವ್ಯವಸ್ಥೆ ಮೂಲಕ ರಾಜಧಾನಿಯಿಂದ ಹೊರಡಿ ಎಂದು ಉಕ್ರೇನ್‌ನಲ್ಲಿರುವ ಭಾರತ ರಾಯಭಾರಿ ಕಚೇರಿ ಟ್ವೀಟ್‌ ಮಾಡಿ ತಿಳಿಸಿದೆ ಎನ್ನಲಾಗಿದೆ.

    International news

    ಖಾಸಗಿ ವಿಮಾನ ಪತನ; 10 ಜನ ಸಾವು, ಹಲವರಿಗೆ ಗಾಯ !

    Published

    on

    ಮಂಗಳೂರು/ಬ್ರೆಜಿಲ್: ಬ್ರೆಜಿಲ್​ನ ಪ್ರವಾಸಿ ತಾಣವಾದ ಗ್ರಾಮಡೊದಲ್ಲಿ ವಿಮಾನ ಸ್ಫೋಟಗೊಂಡು ಸುಮಾರು 10 ಜನರು ಜೀವವನ್ನು ಬಿಟ್ಟಿದ್ದು. 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

     

    ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದ ಮಧ್ಯಭಾಗಕ್ಕೆ 10 ಜನರನ್ನ ಹೊತ್ತು ಮಿನಿ ವಿಮಾನವೊಂದು ಸಾಗುತ್ತಿತ್ತು. ಆದ್ರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಇದ್ದಕ್ಕಿದಂತೆ ವಿಮಾನವು ಅಂಗಡಿಗಳು ಮತ್ತು ಮನೆಗಳಿಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ.

    ಗ್ರಾಮಾಡೊದ ಬಹುಪಾಲು ಅಪಾರ್ಟ್ ಮೆಂಟ್ ನ ಅಕ್ಕಪಕ್ಕ ಮೊಬೈಲ್ ಫೋನ್ ಅಂಗಡಿಗೆ ಅಪ್ಪಳಿಸುವ ಮೊದಲು ವಿಮಾನವು ಮನೆಯ ಚಿಮಣಿಗೆ ಮತ್ತು ನಂತರ ಕಟ್ಟಡದ ಎರಡನೇ ಮಹಡಿಗೆ ಅಪ್ಪಳಿಸಿತು ಎಂದು ಬ್ರೆಜಿಲಿಯನ್ ಸಿವಿಲ್ ಡಿಫೆನ್ಸ್ ಏಜೆನ್ಸಿ ತಿಳಿಸಿದೆ.

    ಇದನ್ನೂ ಓದಿ: ಫ್ಲೋರಿಡಾ ಕ್ರಿಸ್ಮಸ್ ಶೋನಲ್ಲಿ ಜನಸಂದಣಿಗೆ ಡ್ರೋನ್ ಡಿಕ್ಕಿ: ಹಲವರಿಗೆ ಗಾಯ

     

    ವಿಮಾನದಲ್ಲಿದ್ದವರೆಲ್ಲಾ ಒಂದೇ ಕುಟುಂಬದ ಸದಸ್ಯರು
    ಇನ್ನು ಸ್ಥಳೀಯ ಮಾಧ್ಯಮಗಳು ನೀಡಿದ ವರದಿ ಪ್ರಕಾರ ವಿಮಾನದಲ್ಲಿದ್ದ ಎಲ್ಲರೂ ಒಂದೇ ಕುಟುಂಬದವರಾಗಿದ್ದರು ಎಂದು ತಿಳಿದು ಬಂದಿದೆ. ಸಾವೊ ಪೈಲೋ ರಾಜ್ಯದಿಂದ ರಿಯೋ ಗ್ರಾಂಡೆ ಡು ಸೊಲ್​ಗೆ ಪ್ರಯಾಣ ಬೆಳೆಸಿದ್ದರು ಸೆರಾ ಎಂಬ ಗುಡ್ಡುಗಾಡು ಪ್ರದೇಶದಲ್ಲಿ ಈ ಗ್ರಾಮಾಡೊ ಎಂಬ ಪ್ರವಾಸಿ ತಾಣ ಬರುತ್ತದೆ. ಈ ಪ್ರದೇಶವನ್ನು ತಲುಪಿದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು. ವಸತಿ ಕಟ್ಟಡ ಹಾಗೂ ಮೊಬೈಲ್​ ಶಾಪ್​ಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡಿದೆ.

    ಗ್ರಾಮಡೊದ ವಿಶೇಷತೆ
    ಗ್ರಾಮಡೊ ಸೆರ್ರಾ ಗೌಚಾ ಪರ್ವತಗಳಲ್ಲಿದೆ. ಇದು ತಂಪಾದ ಹವಾಮಾನ, ಹೈಕಿಂಗ್ ತಾಣಗಳನ್ನು ಆನಂದಿಸುವ ಬ್ರೆಜಿಲಿಯನ್ ಪ್ರವಾಸಿಗರಿಗೆ ಇಷ್ಟವಾದ ಜಾಗವಾಗಿದೆ. ಈ ಪಟ್ಟಣವು 19ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯ ಜರ್ಮನ್ ಮತ್ತು ಇಟಾಲಿಯನ್ ವಲಸಿಗರಿಂದ ನೆಲೆಸಲ್ಪಟ್ಟಿತು. ಇದು ಕ್ರಿಸ್​ಮಸ್ ರಜಾದಿನಗಳಿಗೆ ಜನಪ್ರಿಯ ಸ್ಥಳವಾಗಿದೆ.

    Continue Reading

    BIG BOSS

    ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯಗೌಡ

    Published

    on

    ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕನ್ನಡದ ಬಿಗ್​ಬಾಸ್​ ಸೀಸನ್​ 11 ಯಶಸ್ವಿಯಾಗಿ ಸಾಗುತ್ತಿದ್ದು 14ನೇ ವಾರಕ್ಕೆ ಎಂಟ್ರಿಕೊಟ್ಟಿದೆ. ಬಿಗ್​ಬಾಸ್​ ಕೊನೆ ಹಂತಕ್ಕೆ ಬರುವುದರಿಂದ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಕುದಿಯುತ್ತಿದ್ದು ತಮ್ಮನ್ನು ತಾವು ಎಚ್ಚರಿಸಿಕೊಳ್ಳಬೇಕಿದೆ. ಸೂಪರ್ ಸಂಡೇಯಲ್ಲಿ ಕಿಚ್ಚನಿಂದ ಭವ್ಯಗೌಡ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಭವ್ಯ ಟೀ ಚೆಲ್ಲಿದ್ದಾರೆ.

    ಬಿಗ್​ಬಾಸ್​ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂದು ಟಾಸ್ಕ್ ಶುರುವಾಗಿದ್ದು ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.

    ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಇದು ಬಿಗ್ ಬಾಸ್ ಆರ್ಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್​ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎನ್ನಲಾಗಿದೆ.

    ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದ್ದು ಕಿಚ್ಚು ಬಿದ್ದಂತೆ ಆಗಿದೆ. ನೀನು ಯಾವಳೇ ಎ.. ಅನ್ನೋಕೆ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯ ತಿರುಗೇಟು ಕೊಟ್ಟಿದ್ದಾರೆ.

    Continue Reading

    LATEST NEWS

    ಏಕಾಏಕಿ ಗ್ಯಾ*ಸ್ ಸಿ*ಲಿಂಡರ್ ಸ್ಫೋ*ಟ; 9 ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂ*ಭೀರ

    Published

    on

    ಮಂಗಳೂರು/ಹುಬ್ಬಳಿ: ಏಕಾಏಕಿ ಗ್ಯಾ*ಸ್ ಸಿಲಿಂಡರ್ ಸ್ಫೋ*ಟಗೊಂಡ ಪರಿಣಾಮ 9 ಅಯ್ಯಪ್ಪ ಮಾಲಾಧಾರಿಗಳು ಗಂ*ಭೀರ ಗಾ*ಯಗೊಂಡಿರುವ ಘಟನೆ ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡ 9 ಮಾಲಾಧಾರಿಗಳ ಸ್ಥಿತಿ ಚಿಂ*ತಾಜನಕವಾಗಿದೆ. ನಿನ್ನೆ (ಡಿ.22) ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಅಯ್ಯಪ್ಪ ಸ್ವಾಮಿಗಳು ಮಲಗಿದ್ದ ವೇಳೆ ಸಿಲಿಂಡರ್ ಸ್ಫೋ*ಟಗೊಂಡಿದೆ. ಗ್ಯಾ*ಸ್ ಲೀ*ಕ್ ಆಗಿ ದೀಪದ ಬೆಂ*ಕಿ ತಗುಲಿ ಬ್ಲಾ*ಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದೆ.

     

    ಇದನ್ನು ಓದಿ : ಗ್ಯಾಸ್ ಸ್ಪೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ !

     

    ಈ ಅ*ವಘಡದಲ್ಲಿ ರಾಜು ಹರ್ಲಾಪುರ, ಬಾಲಕ ವಿನಾಯಕ ಬಾರಕೇರ, ಪ್ರಕಾಶ ಬಾರಕೇರ, ಶಂಕರ ರಾಯನಗುಂಡಿ, ಮಂಜು ತೋರದ, ಸಂಜಯ ಸವದತ್ತಿ, ಅಂಜು ಸ್ವಾಮಿ, ಪ್ರವೀಣ, ತೇಜಸ್ ರೆಡ್ಡಿ ಗಾ*ಯಾಳುಗಳು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಗಾ*ಯಾಳುಗಳನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಹುಬ್ಬಳ್ಳಿ -ಧಾರವಾಡ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    Trending