Connect with us

FILM

ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ

Published

on

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ಚೊಚ್ಚಲ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಗುವಿನೊಂದಿಗೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹರ್ಷಿಕಾ ಮತ್ತು ಭುವನ್ ಜೋಡಿ ಭೇಟಿ ನೀಡಿದ್ದಾರೆ.

ಮಗು ಜನಿಸಿದ ಬಳಿಕ ಕೊಲ್ಲೂರಿಗೆ ಭೇಟಿ ನೀಡುತ್ತೇನೆ ಎಂದು ಹರ್ಷಿಕಾ ದಂಪತಿ ಹರಿಸಿಕೊಂಡಿದ್ದರು. ಅದರಂತೆ ಮಗಳ ಜೊತೆ ಮೊದಲ ಬಾರಿಗೆ ಕೊಲ್ಲೂರು ದೇಗುಲಕ್ಕೆ ಭೇಟಿ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನೂ 2023ರ ಆಗಸ್ಟ್ 24ರಂದು ಕೊಡಗಿನಲ್ಲಿ ಹರ್ಷಿಕಾ ಮತ್ತು ಭುವನ್ ಹೊಸ ಬಾಳಿಗೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಈ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಕಳೆದ ವರ್ಷ ಅಕ್ಟೋಬರ್ 3ರಂದು ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಮಗಳ ಪಾಲನೆಯಲ್ಲಿ ಬ್ಯುಸಿಯಿರುವ ಹರ್ಷಿಕಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

FILM

ಶಾರುಖ್ ಪತ್ನಿ ಗೌರಿ ಮತಾಂತರ?

Published

on

ಮಂಗಳೂರು/ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಮತ್ತು ಮಗ ಆರ್ಯನ್ ಖಾನ್ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅದರಲ್ಲಿ ಜ. 1ರಂದು ಹೊಸ ವರ್ಷಕ್ಕೆ ಶಾರುಖ್, ಪತ್ನಿ ಗೌರಿ ಖಾನ್, ಮಗ ಆರ್ಯನ್ ಖಾನ್ ಇಸ್ಲಾಂನ ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾಗೆ ತೆರಳಿದ್ದಾರೆ. ಗೌರಿ ಅವರು ಇಸ್ಲಾಂಗೆ ಮತಾಂತರ ಆಗಿದ್ದಾರೆ ಎನ್ನುವಂತೆ ಫೋಟೋ ವೈರಲ್ ಆಗಿತ್ತು.

ಆದರೆ ಬಳಿಕ ಇದು ಫೇಕ್ ಎಂದು ತಿಳಿದು ಬಂದಿದೆ. ಈ ಫೋಟೋವನ್ನು ಡೀಪ್ ಫೇಕ್ ಬಳಸಿ ಎಡಿಟ್ ಮಾಡಲಾಗಿದೆ.

“ಡೀಪ್ ಫೇಕ್” ಜಾಲಕ್ಕೆ ಖ್ಯಾತ ಸಿನಿ ತಾರೆಯರೆ ಸಿಲುಕುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಕಾಜಾಲ್, ಕತ್ರಿನಾ ಕೈಫ್, ಆಲಿಯಾ ಭಟ್ ಈಗಾಗಲೇ ಇದರ ಜಾಲಕ್ಕೆ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಮೊಮ್ಮಗುವಿನ ಪಾಲನೆಗೆ ಟೆಕ್ಕಿ ಅತುಲ್ ತಾಯಿ ಮೊರೆ; ಸುಪ್ರೀಂ ನಕಾರ 

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ಡೀಪ್ ಫೇಕ್ ಗಳನ್ನು ಸೃಷ್ಟಿಸಿ ವೈರಲ್ ಮಾಡಿದರೆ 1 ಲಕ್ಷ ರೂ. ದಂಡ ಮತ್ತು 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ವೈರಲ್ ಆಗುತ್ತವೆ. ರಾತ್ರಿ ಕಳೆದು ಬೆಳಕಾಗುವಷ್ಟರಲ್ಲಿ ಒಬ್ಬರ ಜೀವನವನ್ನೇ ಅಳಿಸುವಂತ ಶಕ್ತಿ ಈ ಇಂಟರ್ ನೆಟ್ ಗಿದೆ.

Continue Reading

FILM

ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್‌ಡೇ ಸಂಭ್ರಮ

Published

on

ನ್ಯಾಷನಲ್ ಸ್ಟಾರ್ ಯಶ್‌ಗೆ ಇಂದು (ಜ.8) 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಪತ್ನಿ ರಾಧಿಕಾ ಹಾಗೂ ಆಪ್ತರೊಂದಿಗೆ ಗೋವಾದಲ್ಲಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ.

ಗೋವಾದಲ್ಲಿ ಮಧ್ಯರಾತ್ರಿ ಯಶ್‌ ಕೇಕ್‌ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ದಾರೆ. ಪತ್ನಿ ರಾಧಿಕಾ ಮತ್ತು ಮಕ್ಕಳೊಂದಿಗೆ ಬರ್ತ್‌ಡೇ ಆಚರಿಸಿ ಯಶ್ ಖುಷಿಪಟ್ಟಿದ್ದಾರೆ. ನಟನ ಆಪ್ತ ಪಾನಿ ಪುರಿ ಕಿಟ್ಟಿ, KVN ಸಂಸ್ಥೆಯ ರೂವಾರಿ ವೆಂಕಟ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಶುಭಕೋರಿದ್ದಾರೆ.

ಈ ಮೊದಲೇ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ. ಅಭಿಮಾನಿಗಳಿಗೆ ನೀವು ಇರುವ ಕಡೆಯಿಂದಲೇ ಹಾರೈಸಿ ಎಂದು ನಟ ತಿಳಿಸಿದ್ದರು. ಆದರೆ ಇದೀಗ ‘ಟಾಕ್ಸಿಕ್‌’ ಲುಕ್‌ನಿಂದ ಫ್ಯಾನ್ಸ್‌ಗೆ ಸರ್ಪ್ರೈಸ್‌ ಕೊಟ್ಟಿದ್ದಾರೆ. ಫ್ಯಾನ್ಸ್‌ ನಿರೀಕ್ಷೆಗೆ ಅವರು ನಿರಾಸೆ ಮಾಡಿಲ್ಲ. ರಾಕಿ ಭಾಯ್ ಬರ್ತ್‌ಡೇ ಪ್ರಯುಕ್ತ 59 ಸೆಕೆಂಡ್ ಗ್ಲಿಂಪ್ಸ್ ರಿವೀಲ್ ಆಗಿದ್ದು, ಡ್ರಗ್ಸ್ ಮಾಫಿಯಾ ಕುರಿತ ಚಿತ್ರವಾಗಿದೆ. ರಿಲೀಸ್ ಆದ ಗ್ಲಿಂಪ್ಸ್‌ನಲ್ಲಿ ಕಲರ್‌ಫುಲ್ ಸೆಟ್‌ನಲ್ಲಿ ನಟನ ಸ್ಟೈಲೀಶ್ ವಾಕ್, ಹಾಟ್ ಮ್ಯಾನರಿಸಮ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Continue Reading

FILM

ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?

Published

on

ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ, ಏಕಾಏಕಿ ಸುದೀಪ್ ಮಗಳ ಮೇಲೆ ನೆಟ್ಟಿಗರು ಕೋಪಗೊಂಡಿದ್ದು ಏಕೆ? ಅವರು ಮಾಡಿದ ತಪ್ಪೇನು? ಆ ಎಲ್ಲಾ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿ ಉತ್ತರ ಸಿಗಲಿದೆ. ಸುದೀಪ್ ಅವರು ಈ ವಿಚಾರವಾಗಿ ಏನಾದರೂ ಸ್ಪಷ್ಟನೆ ನೀಡುತ್ತಾರಾ ಎನ್ನುವ ಕುತೂಹಲವೂ ಇದೆ.

ಘಟನೆ ಏನು?

ಇತ್ತೀಚೆಗೆ ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಆಗಮಿಸಿದ್ದರು. ಈ ವೇಳೆ ಸಾನ್ವಿ ಅವರು ತಂದೆಗಾಗಿ, ‘ಜಸ್ಟ್ ಮಾತ್ ಮಾತಲ್ಲಿ..’ ಹಾಡನ್ನು ಸುಮಧುರವಾಗಿ ಹಾಡಿದರು. ಈ ಹಾಡಿನ ಬಳಿಕ ಅವರು ಸಂಪೂರ್ಣವಾಗಿ ಮಾತನಾಡಿದ್ದು ಇಂಗ್ಲಿಷ್​​ನಲ್ಲಿ. ‘ಪ್ರತಿವರ್ಷ’ ಎಂಬ ಶಬ್ದ ಬಿಟ್ಟು ಅವರು ಮತ್ತೆಲ್ಲಿಯೂ ಕನ್ನಡ ಶಬ್ದ ಮಾತನಾಡಿಲ್ಲ. ಇದು ಟ್ರೋಲ್​ಗೆ ಕಾರಣವಾದ ವಿಚಾರ.

ಸುದೀಪ್ ಕನ್ನಡ ಪ್ರೀತಿ

ಕಿಚ್ಚ ಸುದೀಪ್ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಬಿಗ್ ಬಾಸ್​ನಲ್ಲಿ ಕನ್ನಡಕ್ಕೆ ಗೌರವ ನೀಡದ ಸಂದರ್ಭದಲ್ಲಿ ಅವರು ಇದನ್ನು ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಸ್ಪರ್ಧಿಗಳು ಇಂಗ್ಲಿಷ್ ಮಾತನಾಡಿದಾಗ ಅದನ್ನು ಪ್ರಶ್ನೆ ಮಾಡಬೇಕು ಮತ್ತು ಕನ್ನಡ ಬಳಕೆ ಹೆಚ್ಚುವಂತೆ ಆಗಬೇಕು ಎಂದು ಸುದೀಪ್ ಅವರು ಬಿಗ್ ಬಾಸ್ ಆಯೋಜಕರ ಬಳಿ ಒತ್ತಾಯಿಸಿದ್ದರು ಎನ್ನಲಾಗಿದೆ. ಪರಭಾಷಾ ಸಂದರ್ಶನಗಳಲ್ಲಿ ಯಾರಾದರೂ ‘ಕನ್ನಡ್’ ಎಂದರೆ ‘ಅದು ಕನ್ನಡ್ ಅಲ್ಲ ಕನ್ನಡ’ ಎಂದು ತಿದ್ದುವ ಕೆಲಸ ಮಾಡಿದ್ದಾರೆ. ಆದರೆ, ಕನ್ನಡ ರಿಯಾಲಿಟಿ ಶೋನಲ್ಲಿ ಮಗಳಿಗೇಕೆ ಅವರು ಕನ್ನಡ ಮಾತನಾಡುವಂತೆ ಒತ್ತಾಯಿಸಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾ ಇದ್ದಾರೆ.

ಸಮರ್ಥನೆ

ಇನ್ನೂ ಕೆಲವು ಸಾನ್ವಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಸುದೀಪ್ ಮಗಳು ಸಾನ್ವಿ ಇಂಗ್ಲಿಷ್​ನಲ್ಲೇ ಮಾತನಾಡಿರಬಹುದು, ಆದರೆ, ಅವರು ಹಾಡಿದ್ದು ಕನ್ನಡದ ಹಾಡನ್ನೇ. ಈ ಕಾರಣಕ್ಕೆ ಸಂತೋಷ ವ್ಯಕ್ತಪಡಿಸಬೇಕು ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಜೋರಾಗಿದೆ.

Continue Reading

LATEST NEWS

Trending

Exit mobile version