DAKSHINA KANNADA
ಪವಿತ್ರ ಮೆಕ್ಕಾ ಅವಹೇಳನ ಪೋಸ್ಟ್ ಪ್ರಕರಣ: ಸೌದಿ ಜೈಲಿನಿಂದ ಹರೀಶ್ ಬಂಗೇರ ಬಿಡುಗಡೆ
ಮಂಗಳೂರು:ಫೇಸ್ಬುಕ್ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಅವಹೇಳನ ಪ್ರಕರಣದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿರುವ ಕೋಟೇಶ್ವರದ ಹರೀಶ್ ಬಂಗೇರ ಎಸ್. ಅವರು ಜೈಲಿನಿಂದ ಬಿಡುಗಡೆಯಾಗಿ ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ.
ಈ ಬಗ್ಗೆ ಮಂಗಳೂರು ಅಷೋಷಿಯೇಷನ್ ಸೌದಿ ಅರೇಬಿಯಾ(MASA) ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಮಾಹಿತಿ ನೀಡಿ ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ. ವಿಮಾನ ಪ್ರಯಾಣದ ವೆಚ್ಚವನ್ನು ಕೂಡಾ ಮಂಗಳೂರು ಅಷೋಷಿಯೇಷನ್ ನ ಪರವಾಗಿ ಜೈಲು ಅಧಿಕಾರಿಗಳಿಗೆ ನೀಡಲಾಗಿದೆ. ಇವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ಕೆ ಸಹಕರಿಸಿದ ಭಾರತ ರಾಯಭಾರಿ ಕಚೇರಿ IOF ( Indian overseas forum) ಸಂಸ್ಥೆ , ಮಣಿಕಂಠನ್, ಮಹಮ್ಮದ್ ಶರೀಫ್ ದಮ್ಮಾಮ್, ಪ್ರಸನ್ನ ಭಟ್ ರಿಯಾದ್ , ಪ್ರಕಾಶ್ ಪೂಜಾರಿ ರಿಯಾದ್, ಕಮಾಲಾಕ್ಷ ಅಡ್ಯಾರ್ ಅಲ್, ಕೋಬರ್, ಜೋಯಿಸನ್ ಅಲ್ ಅಸಾ, ಹಾಗೂ ಅವರ ಬಿಡುಗಡೆಗೆ ಸಹಕರಿಸಿದ್ದಾರೆ.
ಘಟನೆಯ ವಿವರ:
2019 ರ ಡಿಸೆಂಬರ್ನಲ್ಲಿ ಸಿಎಎ ಹಾಗೂ ಎನ್ಆರ್ಸಿ ಕಾಯಿದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೀಡಿಯೋವೊಂದನ್ನು ಹರೀಶ್ ಬಂಗೇರ ಎಸ್. ಎನ್ನುವ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿನ ಯುವಕರು ಹರೀಶ್ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಘಟನೆಯ ಬಗ್ಗೆ ಹರೀಶ್ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. 2019 ರ ಡಿ.19 ರಾತ್ರಿ ತನ್ನ ಫೇಸ್ ಬುಕ್ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿದ್ದರು. ಈ ಎಲ್ಲ ವಿಚಾರಗಳನ್ನು ಹರೀಶ್ ಬಂಗೇರ ಅವರು ತಮ್ಮ ಪತ್ನಿಯಲ್ಲಿ ಹಂಚಿಕೊಂಡಿದ್ದರು.
ಆದರೆ 2019 ಡಿ. 20ರಂದು ಮತ್ತೆ ಯಾರೋ ಕಿಡಿಗೇಡಿಗಳು ಹರೀಶ್ ಬಂಗೇರ ಎನ್ನುವ ನಕಲಿ ಫೇಸ್ ಬುಕ್ ಖಾತೆಯಿಂದ ಮೆಕ್ಕಾ ಕುರಿತು, ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ಅಪ್ಲೋಡ್ ಮಾಡಿದ್ದರು. ಇದು ನಿಂದನಾತ್ಮಕ ಹಾಗೂ ವಿವಾದಾತ್ಮಕವಾಗಿದ್ದು, ಸೌದಿಯಾದ್ಯಂತ ಭಾರಿ ವೈರಲ್ ಆಗಿತ್ತು. ಆ ಬಳಿಕ ಅವರನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದರು.
ಇನ್ನು ಇತ್ತ ಪತಿ ಬಂಧನದಿಂದ ಕಂಗೆಟ್ಟ ಹರೀಶ್ ಬಂಗೇರ ಎಸ್. ಅವರ ಪತ್ನಿ, “ಫೇಕ್ ಅಕೌಂಟ್ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಲಾಗಿರುವ ವಿಚಾರದ ಕುರಿತು ಉಡುಪಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ದೂರಿನ ವರದಿಯನ್ನು ಸೌದಿ ಪೊಲೀಸರಿಗೆ ಉಡುಪಿ ಪೊಲೀಸರು ರವಾನಿಸಿದ್ದರು.
ನಕಲಿ ಖಾತೆ ಸೃಷ್ಟಿಸಿದ್ದವರು ಬಿಡುಗಡೆ
ನಕಲಿ ಖಾತೆ ಕ್ರಿಯೇಟ್ ಆಗಿರುವ ಬಗ್ಗೆ ಉಡುಪಿ ಸೆನ್ ಪೊಲೀಸರು ತನಿಖೆ ನಡೆಸಿದಾಗ ಮೂಡುಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಹಾಗೂ ಅಬ್ದುಲ್ ತುವೇಸ್ ಈ ಕೃತ್ಯದ ಹಿಂದಿರುವುದು ಬೆಳಕಿಗೆ ಬಂದಿತ್ತು.2020 ರ ಜೂನ್ ತಿಂಗಳಲ್ಲಿ ಸಹೋದರರಿಬ್ಬರನ್ನು ಬಂಧಿಸಿ ಅಕ್ಟೋಬರ್ ನಲ್ಲಿ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
DAKSHINA KANNADA
ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?
ಮಂಗಳೂರು : ಕೆಲವೊಮ್ಮೆ ನಾವು ಕೆಟ್ಟ ಮಾತುಗಳನ್ನಾಡುವಾಗ ನಮ್ಮ ಹಿರಿಯರು ತಡೆಯುತ್ತಾರೆ. ಬಿಡ್ತು ಅಂತಾ ಹೇಳು ಎಂದು ಹೇಳಿದ ಅನುಭವ ನಿಮಗೂ ಆಗಿರಬಹುದು. ನಮ್ಮ ಹಿರಿಯರು ಹೇಳುವ ಪ್ರಕಾರ ನಾವು ಕೆಟ್ಟ ಮಾತುಗಳನ್ನಾಡುವಾಗ ಅಶ್ವಿನಿ ದೇವತೆಗಳು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುತ್ತಾರೆ. ಈ ಕಾರಣಕ್ಕಾಗಿ ಅವರು ನಾವು ಬೇಜಾರಲ್ಲಿ ಏನಾದರೂ ತಪ್ಪಿ ಮಾತನಾಡಿದಾಗ ಬಿಡ್ತು ಎಂದು ಹೇಳುವಂತೆ ನಮಗೆ ಹೇಳುತ್ತಿದ್ದರು. ಹಾಗಾದರೆ ಈ ಅಸ್ತು ದೇವತೆಗಳು ಯಾರು.? ಇವರು ಅಸ್ತು ಅಂದಾಕ್ಷಣ ನಾವು ಆಡಿದ ಮಾತುಗಳು ನಿಜವಾಗುತ್ತದೆಯೇ..?
ಅಶ್ವಿನಿ ದೇವತೆಗಳು ಯಾರು.?
ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಭಗವಾನ್ ಸೂರ್ಯ ದೇವನಿಗೆ ಮತ್ತು ಸಂಧ್ಯಾದೇವಿಗೆ ಜನಿಸಿದ ಅವಳಿ ಮಕ್ಕಳು. ಇವರು ಅದೃಷ್ಟದ ದೇವತೆಗಳಾಗಿದ್ದು, ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು. ಇವರನ್ನು ಅಶ್ವಿನಿ ಕುಮಾರರೆಂದು, ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ. ಅಶ್ವಿನಿ ದೇವತೆಗಳ ರೂಪವೇ ವಿಚಿತ್ರ. ಯಾಕೆಂದರೆ ಈ ಅವಳಿ ಅಶ್ವಿನಿ ಕುಮಾರರದ್ದು ಮಾನವ ದೇಹವಾದರೆ, ಕುದುರೆಯ ಮುಖ. ಆದರೂ ನೋಡಲು ಅತ್ಯಂತ ಆಕರ್ಷಕರಾಗಿದ್ದರು.
ಅಶ್ವಿನಿ ದೇವತೆಗಳಿಗೆ ಕುದುರೆ ಮುಖ ಬರಲು ಕಾರಣವೇನು.?
ಒಮ್ಮೆ ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ ದೇವನ ತಾಪವನ್ನು ತಡೆಯಲಾರದೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಇದನ್ನು ನೋಡಿದ ಸೂರ್ಯ ದೇವನು ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಸಂಧ್ಯಾ ದೇವಿಯು ಸೂರ್ಯದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿ, ಹಿಮಾಲಯ ಪರ್ವತ ದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ.
ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ಹೋಗುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ. ಅಶ್ವಗಳ ಅವತಾರದಲ್ಲಿ ಇವರಿಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ದೇವತೆಗಳು. ಹಾಗಾಗಿ ಅವರಿಗೆ ಹುಟ್ಟಿದ ಮಕ್ಕಳಿಗೂ ಕುದುರೆಯ ಮುಖ ಇರುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯ ಮತ್ತು ಮೋಡದ ಪುತ್ರರು ಎಂದು ಹೇಳಲಾಗಿದೆ.
ಅಶ್ವಿನಿ ದೇವತೆಗಳ ಮಹತ್ವ:
ಅಶ್ವಿನಿ ದೇವತೆಗಳಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನವನ್ನು ನೀಡಲಾಗಿದೆ. ಮುಸ್ಸಂಜೆ ಸಮಯವನ್ನು ಅಂದರೆ ಸೂರ್ಯ ಮುಳುಗುವುದಕ್ಕಿಂತ ಮೊದಲು 24 ನಿಮಿಷಗಳನ್ನು ಅಶ್ವಿನಿ ದೇವತೆಗಳ ಸಮಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಚಿನ್ನದ ಕುದುರೆಯಲ್ಲಿ ಸಂಚಾರವನ್ನು ಮಾಡುತ್ತಾರೆ ಎನ್ನುವುದು ನಂಬಿಕೆ. ಈ ಸಮಯದಲ್ಲಿ ಅಪಶಕುನದಂತಹ ಮಾತುಗಳನ್ನು ಆಡಬಾರದು, ಸುಳ್ಳನ್ನು ಹೇಳಬಾರದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹ ಪದಗಳನ್ನು ಬಳಸಬಾರದು, ಮಲಗಬಾರದು ಎಂದು ಹೇಳಲಾಗುತ್ತದೆ. ಅಶ್ವಿನಿ ದೇವತೆಗಳು ಅಸ್ತು, ಅಸ್ತು ಎಂದು ನುಡಿಯುತ್ತಿರುತ್ತಾರೆ. ನಾವು ಒಂದು ವೇಳೆ ಅಪಶಕುನ ಮಾತನಾಡಿದಾಗ ಅವರು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಯಾವಾಗಲೂ ನಾವು ಒಳ್ಳೆಯದನ್ನೇ ಮಾತನಾಡಬೇಕು.
ಒಟ್ಟಾರೆಯಾಗಿ ಹೇಳುವುದಾದರೆ ಅಶ್ವಿನಿ ದೇವತೆಗಳು ನಾವು ಒಳ್ಳೆಯದನ್ನ ಮಾತನಾಡಿದರೆ ಒಳ್ಳೆಯದೇ ಬಯಸುತ್ತಾರೆ ಹಾಗೆಯೇ ಕೆಟ್ಟದ್ದನ್ನೇ ಮಾತನಾಡಿದರೇ ಕೆಟ್ಟದ್ದು ಬಯಸುತ್ತಾರೆ ಎನ್ನುವುದು ಜನರ ನಂಬಿಕೆ.
DAKSHINA KANNADA
ವೋಟ್ ಮಾಡಿ, ಊಟ ಮಾಡಿ: ಹೋಟೆಲ್ಗಳಲ್ಲಿ ಸಿಗಲಿದೆ ಫ್ರೀ ದೋಸೆ, ಸಿಹಿ ತಿಂಡಿ!
ಬೆಂಗಳೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಕೆಲವು ಹೋಟೆಲ್ಗಳು ವಿಶಿಷ್ಟ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಕಳೆದ ವರ್ಷ ವಿಧಾನ ಚುನಾವಣೆಯಲ್ಲಿ ಮಾಡಿದಂತೆಯೇ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಆಹಾರ, ರಿಯಾಯಿತಿ ದರದಲ್ಲಿ ತಿಂಡಿ ನೀಡುವ ಬಗ್ಗೆ ಘೋಷಣೆ ಮಾಡಿವೆ.
ವೋಟ್ ಮಾಡಿ, ಊಟ ಮಾಡಿ:
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಮತದಾನದ ದಿನದಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿದೆ. 2018 ರ ವಿಧಾನಸಭಾ ಚುನಾವಣೆ ವೇಳೆಯೂ ಹೋಟೆಲ್ ಇಂತಹ ಕೊಡುಗೆ ನೀಡಿತ್ತು.
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಈ ಕುರಿತು ಜಾಗೃತಿ ಮೂಡಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ಕೆಲವು ಹೋಟೆಲ್ಗಳು ಕೆಲವು ತಿನಿಸುಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಮತದಾನದ ದಿನದಂದು ನೀಡುತ್ತವೆ. ಸಿಹಿತಿಂಡಿಗಳು ಮತ್ತು ಕೇಕ್ಗಳಂತಹ ಕೆಲವು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿವೆ.
SawaariZimmedariKi ಅಭಿಯಾನದಡಿ ಶುಕ್ರವಾರ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರಿಗೆ ಉಚಿತ ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆ ದೊರೆಯಲಿದೆ.
ಈ ವಿಶೇಷ ಸೇವೆಯನ್ನು ಪಡೆಯಲು ಮತದಾರರು ‘VOTENOW’ ಕೋಡ್ ಅನ್ನು ಬಳಸಬಹುದು ಎಂದು Rapido ತಿಳಿಸಿದೆ.
ಬಿಡದಿ ಬಳಿಯ ಜನಪ್ರಿಯ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ, ಮತದಾನದ ಗುರುತು ಪ್ರದರ್ಶಿಸುವವರಿಗೆ ಏಪ್ರಿಲ್ 26, 27 ಮತ್ತು 28 ರಂದು ಟಿಕೆಟ್ ಮೇಲೆ ಶೇಕಡಾ 15 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
BANTWAL
ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ
ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.
ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.
ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.
ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.
- DAKSHINA KANNADA7 days ago
“ಸೆಕ್ಸ್” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್..!
- FILM3 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- LATEST NEWS6 days ago
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
- FILM3 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು