Connect with us

    ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ಅಧಿಕಾರ ಸ್ವೀಕಾರ

    Published

    on

    ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ಅಧಿಕಾರ ಸ್ವೀಕಾರ….

    ಮಂಗಳೂರು: ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ರವರು ಬೆಂಗಳೂರಿನ ಕಿಯೋನಿಕ್ಸ್ ಕಚೇರಿಯಲ್ಲಿ ಇಂದು ಅಧಿಕಾರ ಸ್ವೀಕರಿಸಿದರು.

    ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿ ಪ ಸದಸ್ಯರಾದ ತುಂಗಪ್ಪ ಬಂಗೇರ,

    ಬೂಡ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ, ಪ್ರಕಾಶ್ ಅಂಚನ್,ಬೊಳ್ಳುಕಲ್ಲು ನಾರಾಯಣ ಪೂಜಾರಿ,ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ’ 76 ನೇ ಮುದ್ರಣ: ಈ ದಾಖಲೆಯ ಬಗ್ಗೆ ಸಾಹಿತಿ ಡಾ.ನರೇಂದ್ರ ರೈ ದೇರ್ಲಾ ಬರೆದ ಲೇಖನ

    Published

    on

    ಪೂರ್ಣಚಂದ್ರ ತೇಜಸ್ವಿಯವರ ‘ ಕರ್ವಾಲೊ’ ಕಾದಂಬರಿಗೆ ಈಗ 50 ವರ್ಷ. ಅದೊಂದೇ ಕಾರಣವಾಗಿದ್ದರೆ ನಾನಿಲ್ಲಿ ಈ ಲೇಖನ ಬರೆಯುವ ಯಾವ ಅಗತ್ಯವೂ ಇರಲಿಲ್ಲ. ಕನ್ನಡದಲ್ಲಿ ಶತಮಾನ ಪೂರೈಸಿದ ಮತ್ತೆ ಮತ್ತೆ ಮರುಮುದ್ರಣಗೊಳ್ಳುವ ಹತ್ತಾರು ಕಾದಂಬರಿಗಳಿವೆ. ಭೈರಪ್ಪ, ಕುವೆಂಪು, ಕಾರಂತ, ತಾರಾಸು, ಕಟ್ಟಿಮನಿ… ಸ್ವತಃ ತೇಜಸ್ವಿಯವರದ್ದೇ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣವಾಗುತ್ತಲೇ ಇವೆ. ಇವರೆಲ್ಲರ ನಡುವೆ   ತೇಜಸ್ವಿ ಅವರ ಕರ್ವಾಲೊ ಈಗ 76ನೇಯ ಮರುಮುದ್ರಣವನ್ನು ಕಂಡಿದೆ !

    ನಿಜವಾಗಿಯೂ ಇದು ಕನ್ನಡ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಅಥವಾ ಮುಖಪುಟ ಸುದ್ದಿ ಆಗಬೇಕಾದ ಸಾಹಿತ್ಯ ಚೋದ್ಯ . ಕನ್ನಡದ ಹೆಮ್ಮೆ. ಈ ವಿಚಾರವನ್ನು ತೇಜಸ್ವಿ ಪುಸ್ತಕಗಳ ಪ್ರಕಾಶಕ ಶ್ರೀರಾಮ್ ನನಗೆ ತಿಳಿಸಿ ತಿಂಗಳು ದಾಟಿತು. ಆದರೆ, ಮತ್ತೆ ಮತ್ತೆ  ತೇಜಸ್ವಿ ಬಗ್ಗೆ ಇವನೊಬ್ಬನೆ ಪುಂಗಿ ಉದುತ್ತಾನೆ ಎಂದಾಗಬಾರದೆಂದು ಸುಮ್ಮಗೆ ಕೂತಿದ್ದೆ .

    ಕನ್ನಡದ ಯಾವುದೋ ಒಂದು ಚಲನಚಿತ್ರ, ಇನ್ಯಾವುದೋ ಒಂದು ನಾಟಕ ನೂರು ಇನ್ನೂರರ ಪ್ರದರ್ಶನದ ಗಡಿ ದಾಟಿದಾಗ ಅದನ್ನು ಕೂಡು ಸಂಭ್ರಮವಾಗಿ ಆಚರಿಸುವ ಪರಂಪರೆ ನಮ್ಮದು. ಆದರೆ, ಕನ್ನಡ ಲೇಖಕನೊಬ್ಬನ ಪುಸ್ತಕವೊಂದು 75 ದಾಟಿ 76ನೇಯ ಮುದ್ರಣ ಕಂಡದ್ದು ಈ ನಾಡಿಗೆ ಗೊತ್ತಾಗಲೇ ಬೇಕು ಅನ್ನುವ ಸಾಂಸ್ಕೃತಿಕ ಕಾರಣಕ್ಕಾಗಿ ನಾನಿಲ್ಲಿ ಇದನ್ನು ದಾಖಲಿಸುತ್ತಿದ್ದೇನೆ. ಓದು ಜಗತ್ತಿನ ಅತಿ ವಿರಳ ಸಂಗತಿಯಾದ ಇದು ಕನ್ನಡವನ್ನು ಲೋಕಕ್ಕೇರಿಸುವ ಘನತೆಯೂ ಹೌದು.

    ನೀವೇ ಲೆಕ್ಕ ಹಾಕಿ. ಪ್ರತಿ ಬಾರಿ ಇದು ಮುದ್ರಣವಾದಾಗ ಎರಡು ಸಾವಿರಕ್ಕಿಂತ ಕಡಿಮೆ ಇಲ್ಲದಷ್ಟು ಪ್ರತಿ ಮುದ್ರಣಗೊಂಡಿದೆ. ಹಾಗಾದರೆ   ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು  ಪ್ರತಿಯನ್ನು ಪುಸ್ತಕ ಪ್ರಕಾಶನವು ಮಾರಿದೆ. ಇಷ್ಟೇ ಅಲ್ಲ, ತೇಜಸ್ವಿಯವರ ಕೃತಿಗಳ ಪೈಕಿ ಅತ್ಯಂತ ಹೆಚ್ಚು ಸಲ  ಪದವಿ ತರಗತಿಗಳ ಕನ್ನಡ ಪಠ್ಯದ ಒಳಗಡೆ ಪಾಠ, ಉಪಪಠ್ಯವಾಗಿ ಸೇರಿದ ಕೃತಿ ಕರ್ವಾಲೊ. ಪಿಯು ತರಗತಿಗೂ  ಪಾಠವಾಗಿತ್ತು. ಈ ಕಾರಣಕ್ಕಾಗಿ ಲಕ್ಷಾಂತರ ಪ್ರತಿಗಳನ್ನು ಈವರೆಗೆ ವಿಶ್ವವಿದ್ಯಾನಿಲಯಗಳ ಪಠ್ಯ ಸಮಿತಿ, ಪ್ರಸಾರಂಗಗಳು ಮುದ್ರಿಸಿ ಹಂಚಿರಬಹುದು. ಅಥವಾ ಪಿಡಿಎಫ್ ಮೂಲಕ ಹಂಚಿಕೆಯಾಗಿರಬಹುದು. ಹೀಗೆ ಬಹು ದಾರಿಯಲ್ಲಿ ಈ ಕಾದಂಬರಿ ಕಡಿಮೆ ಎಂದರೆ ಎರಡು ಮೂರು ಲಕ್ಷಕ್ಕಿಂತ ಹೆಚ್ಚು ಪ್ರತಿ ಓದುಗರನ್ನು ಸೇರಿರಬಹುದು!

    ಕನ್ನಡದ ಸೃಜನಶೀಲ ಕೃತಿಯೊಂದು ಈ ಮಟ್ಟದಲ್ಲಿ ಓದುಗರಿಗೆ ಸೇರಿರುವುದು ಸಾರ್ವಕಾಲಿಕ ದಾಖಲೆಯೇ ಸರಿ. ಕರ್ವಾಲೊ ಕಾದಂಬರಿ ಭಾರತೀಯ ಅಷ್ಟೇ ಅಲ್ಲ , ಜಗತ್ತಿನ ಬೇರೆ ದೇಶದ ಅನೇಕ ಭಾಷೆಗಳಿಗೂ ಅನುವಾದಗೊಂಡಿದೆ .ಜಪಾನ್, ಜರ್ಮನಿ ಇಂಗ್ಲಿಷ್ ಮುಂತಾದ ಜಾಗತಿಕ ವ್ಯಾಪ್ತಿಯ, ಮರಾಠಿ ತಮಿಳು ತೆಲುಗು ಹಿಂದಿ ಮಲಯಾಳಂ ಓಡಿಸ್ಸೆ ಮುಂತಾದ ಭಾರತೀಯ ಭಾಷೆಗಳಲ್ಲೂ ಅನುವಾದಗೊಂಡಿದೆ.  ಕಡಿಮೆ ಜನ ಮಾತನಾಡುವ ಕರ್ನಾಟಕದ ಪ್ರಾದೇಶಿಕ ಭಾಷೆಯಾದ ತುಳುವಿಗೆ ಕರ್ವಾಲೊ ಕೃತಿಯನ್ನು ನಾನೇ ಅನುವಾದಗೊಳಿಸಿ ಆ ಕೃತಿಗೆ ಕುವೆಂಪು ಭಾಷಾ ಭಾರತಿ ಅತ್ಯುತ್ತಮ ಅನುವಾದ ಪ್ರಶಸ್ತಿಯೂ ಲಭಿಸಿದೆ.  ಜಪಾನಿ ಜರ್ಮನಿ ಭಾಷೆಗಳಲ್ಲಿ  ಕರ್ವಾಲೊ ಹತ್ತಕ್ಕಿಂತ ಹೆಚ್ಚು ಸಲ ಮರುಮುದ್ರಣಗೊಂಡಿದೆಯಂತೆ. ಕನ್ನಡ ಪರಿಸರದಿಂದ ಬಹು ದೂರದ ಉಪಖಂಡ ಒಂದರಲ್ಲೂ ಆ ಕೃತಿಗೆ ಇರುವ ಜನಪ್ರಿಯತೆಯನ್ನು ಅದು ತೋರಿಸುತ್ತದೆ. ಅಲ್ಲಿಯೂ ಇಲ್ಲಿಯಂತೆ ಯುವಕರನ್ನು ಆ ಕೃತಿ ಆಕರ್ಷಿಸಿದೆ.

    ಕರ್ವಾಲೊ  ಮೊತ್ತ ಮೊದಲು ಪ್ರಕಟವಾದದ್ದು ಪುಸ್ತಕ ರೂಪದಲ್ಲಿಯಲ್ಲ, ಧಾರಾವಾಹಿ ರೂಪದಲ್ಲಿ. ತುಷಾರ ಪತ್ರಿಕೆಯಲ್ಲಿ. ಆಗ ಆ ಪತ್ರಿಕೆಯ ಸಂಪಾದಕರಾಗಿದ್ದವರು ಕನ್ನಡದ ಜನಪ್ರಿಯ ಕಲಾ ವಿಮರ್ಶಕ ಈಶ್ವರಯ್ಯ ಅವರು. 50 ವರ್ಷದ ಹಿಂದೆ ಆ ಕೃತಿಯನ್ನು ಬರೆಯುವ ಮುಂಚೆಯೇ ತೇಜಸ್ವಿಯವರು ತುಷಾರ ಪತ್ರಿಕೆಗೆ  ಅನಿಯತವಾಗಿ ಚಿತ್ರಲೇಖನ, ನುಡಿಚಿತ್ರಗಳನ್ನು ಬರೆಯುತ್ತಿದ್ದರು. ಪರಿಸರಕ್ಕೆ ಸಂಬಂಧಪಟ್ಟ ಮುಖ್ಯವಾಗಿ ಹಕ್ಕಿ, ಜೇಡ,  ಕಾಡು ಜಂತುಗಳ ಬಗ್ಗೆ ತೇಜಸ್ವಿಯವರು ಸ್ವತಃ ಫೋಟೋಗ್ರಾಫಿ ಮಾಡಿ ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಬರೆದು ಚಿತ್ರಲೇಖನ ಸ್ವರೂಪದಲ್ಲಿ ಅವುಗಳು ಪ್ರಕಟವಾಗುತ್ತಿದ್ದವು.

    ಸಹಜವಾಗಿಯೇ ಕಾಡೊಳಗಡೆ ಕೃಷಿ ಮಾಡುತ್ತಿದ್ದ ತೇಜಸ್ವಿ ಅವರಿಗೆ ತನ್ನ ದುಡಿಮೆಯ ದಾರಿಯಲ್ಲಿ, ಬೇಟೆ ಚಾರಣದ ನಡೆಯಲ್ಲಿ ಒದಗುತ್ತಿದ್ದ ಇಂತಹ ಪ್ರಕೃತಿ ಸೂಕ್ಷ್ಮಗಳನ್ನು ಕಪ್ಪು ಬಿಳುಪು ಚಿತ್ರಗಳಲ್ಲಿ ದಾಖಲಿಸಿ ಅವುಗಳಿಗೆ ಪೂರಕ ವಿವರಗಳನ್ನು ಬರೆದು ಪತ್ರಿಕೆಗೆ ಕಳಿಸುತ್ತಿದ್ದರು. ಹಾಗಂತ ತೇಜಸ್ವಿ ಆಗ ಕನ್ನಡದ ಬಹು ಜನಪ್ರಿಯ ಲೇಖಕರಾಗಿರಲಿಲ್ಲ. ಕಾದಂಬರಿ ಕತೆಗಾರರಾಗಿರಲಿಲ್ಲ, ಪ್ರಜಾವಾಣಿಯ ಕಥಾ ಸ್ಪರ್ಧೆಯಲ್ಲಿ ಆವಾಗಲೇ ಅವರ ‘ಲಿಂಗ ಬಂದ’ ಕಥೆ ಪ್ರಥಮ ಬಹುಮಾನವನ್ನು ಪಡೆದಿತ್ತು ಎಂಬುವುದು ಇಲ್ಲಿ ಉಲ್ಲೇಖನಿಯ.

    ತುಷಾರ ಸಂಪಾದಕರಾದ ಈಶ್ವರಯ್ಯರಿಗೆ ಆ ಕಾಲದ ಎಲ್ಲಾ ಸಂಪಾದಕರ ಹಾಗೆ ಹೊಸ ಲೇಖಕರ ಬರಹದ ಶಕ್ತಿಯನ್ನು ಗುರುತಿಸಿ ಅವುಗಳ ಸರಿತಪ್ಪುಗಳನ್ನು ತಿದ್ದಿ ಅವರಿಂದ ಮತ್ತೆ ಮತ್ತೆ ಹೊಸ ಲೇಖನಗಳನ್ನು ಬರೆಸುವ , ಪ್ರೋತ್ಸಾಹಿಸುವ ಸಂಪಾದಕತನ ಇತ್ತು. ಎಷ್ಟೋ ಲೇಖಕರಿಗೆ ಅವರು ಸ್ವತಃ ಪತ್ರಗಳನ್ನು ಬರೆದು ಮಾರ್ಗದರ್ಶನ ಮಾಡುತ್ತಿದ್ದರು. ಹಿಂತಿರುಗಿಸುವ ಲೇಖನದ ಜೊತೆಗೆ ತಪ್ಪುಗಳನ್ನು ಗುರುತಿಸುತ್ತಿದ್ದರು. ಹೊಸದಾಗಿ ಅದನ್ನು ಹೇಗೆ ಬರೆಯಬೇಕೆಂದು ವಿವರಿಸುತ್ತಿದ್ದರು.

    ತೇಜಸ್ವಿಯವರ ಬರಹದ ಶಕ್ತಿ ಈಶ್ವರಯ್ಯನವರಿಗೆ ಗೊತ್ತಾದುದಷ್ಟೇ ಅಲ್ಲ, ಭವಿಷ್ಯದಲ್ಲಿ ಭರವಸೆಯ ಲೇಖಕರಾಗಿ ತೇಜಸ್ವಿ ಬೆಳೆಯುತ್ತಾರೆ ಅನ್ನುವ ನಂಬಿಕೆಯು ಅವರದಾಗಿತ್ತು. ಹೀಗೆ ಕರ್ವಾಲೊ 50 ವರ್ಷಗಳ ಹಿಂದೆ  ತುಷಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ 12 ಸಂಚಿಕೆಯಲ್ಲಿ ಪ್ರಕಟವಾಯಿತು.

    ವಿಶೇಷವೆಂದರೆ ಮೊದಲ ಬಾರಿಗೆ ಧಾರಾವಾಹಿಯಾಗಿ ಮುದ್ರಣಗೊಂಡ ತುಷಾರದ ಸಂಚಿಕೆಗಳು ಇನ್ನೂ ಮಣಿಪಾಲದ ಮುದ್ರಣಾಲಯದಲ್ಲಿ ಸುರಕ್ಷಿತವಾಗಿರುವುದು. ಇತ್ತೀಚೆಗೆ ಆ ಧಾವಾಹಿ ಪ್ರಕಟವಾದ ಮೊದಲ ಸಂಚಿಕೆಗಳನ್ನು ನೋಡುವ ಕುತೂಹಲದಿಂದ  ನಾನು ಹೋದಾಗ ಸಂಪಾದಕರು   ಅವುಗಳನ್ನ ಹುಡುಕಿ ನನಗೆ ತೋರಿಸಿದ್ದು ಖುಷಿಯ ಸಂಗತಿಯೇ ಹೌದು.

    ತೇಜಸ್ವಿ ಅವರನ್ನು ಪ್ರೀತಿಸುವ ಕನ್ನಡದ ಬಹುದೊಡ್ಡ ಯುವ ಓದುಗ ಬಳಗ ಓದು ಜಗತ್ತಿಗೆ ಮೊದಲ ಬಾರಿಗೆ ಪ್ರವೇಶಿಸಿದ್ದೇ ಕರ್ವಾಲೋ ಮೂಲಕ . ಕರ್ವಾಲೋ ನನಗೂ ಪದವಿಯಲ್ಲಿ ಪಠ್ಯವಾಗಿತ್ತು, ಈ ಹಿನ್ನೆಲೆಯಲ್ಲಿ ತೇಜಸ್ವಿಯವರನೊಮ್ಮೆ ಪ್ರಶ್ನಿಸುವಾಗ ಅದರಿಂದ ಡಿಗ್ರಿ ವಿದ್ಯಾರ್ಥಿಗಳು ಏನು ತಿಳಿದುಕೊಂಡಿದ್ದಾರೆ ಎಂದು ನಿಮಗೆ ಗೊತ್ತಿದೆಯೇ ಎಂಬ ಪ್ರಶ್ನೆಯನ್ನು ಸಹಜವಾಗಿಯೇ ಕೇಳಿದ್ದೆ .

    ಆ ಇಡೀ ಕೃತಿ ಇರುವುದು ಮಾನವ ವಿಕಾಸವಾದ, ಜೀವಶಾಸ್ತ್ರದ ಸೂಕ್ಷ್ಮ ನಡೆಯ ಹುಡುಕಾಟದಲ್ಲಿ. ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರವನ್ನು ಓದಿದ ವಿಜ್ಞಾನಿ ಕರ್ವಾಲೊ ಮತ್ತು ಶಾಲಾ ಕಾಲೇಜುಗಳಲ್ಲಿ ಅಕ್ಷರವನ್ನೇ ಓದದ, ಲೋಕ ವಿಶ್ವವಿದ್ಯಾನಿಲಯದ ನುರಿತ ಮಂದಣ್ಣ ಅವರನ್ನು ತೇಜಸ್ವಿ ಜೊತೆಗೆ ಜೋಡಿಸಿ ಹಾರುವ ಓತಿಯನ್ನು ಹುಡುಕುವ ಪ್ರಮೇಯ ಈ ಕೃತಿಯಲ್ಲಿದೆ. ವಿಜ್ಞಾನದ ಜೊತೆಗೆ ನೆಲ ಜ್ಞಾನ – ಜಾನಪದವನ್ನು ಜೋಡಿಸಿ ಒಂದು ಅಗಣಿತ ಸೂಕ್ಷ್ಮ ಪರಿಸರ ಮಾಹಿತಿಯನ್ನು ತೇಜಸ್ವಿಯವರು ನೀಡುತ್ತಾ ಹೋಗುತ್ತಾರೆ. ಸರಳ ಸೂತ್ರದಲ್ಲಿ ಪರಿಸರವೇ ಕ್ರಿಯಾರಂಗದಲ್ಲಿ ನಡೆಯುವ ಸೂಕ್ಷ್ಮ ಪರಿಸರ ಕೊಂಡಿ ಒಂದನ್ನು ಹುಡುಕುತ್ತಾ ಪರಿಚಯಿಸುತ್ತಾ ಹೋಗುತ್ತಾರೆ.

    ಈ ಕಥನ ಕುತೂಹಲ, ಉದ್ದೇಶ ಆ ಪಠ್ಯವನ್ನು ಪಾಠ ಕೇಳುವ ವಿದ್ಯಾರ್ಥಿಗಳಿಗಿಂತ ಪಾಠ ಮಾಡುವ ಕನ್ನಡ ಮೇಷ್ಟ್ರುಗಳಿಗೆ ಅರ್ಥವಾಗಿಲ್ಲ ಎನ್ನುವುದು ತೇಜಸ್ವಿಯವರ ತಕರಾರು ಆಗಿತ್ತು. ನಾಲ್ಕಾರು ಕನ್ನಡ ಪ್ರಾಧ್ಯಾಪಕರು ಮೂಡಿಗೆರೆಯ ಮನೆಗೆ ಬಂದು ಕರ್ವಾಲೊ ತುಂಬಾ ಕ್ಲಿಷ್ಟಕರ ಕೃತಿ. ಅದನ್ನು ಪಾಠ ಮಾಡುವುದು ಹೇಗೆ ಎಂದು ತೇಜಸ್ವಿಯವರನ್ನೇ ಪ್ರಶ್ನಿಸಿದ ಕುತೂಹಲಕಾರಿ ಅಂಶವನ್ನು ತೇಜಸ್ವಿ ವಿವರಿಸಿದ್ದರು. ಅದೊಂದು ಅತ್ಯಂತ ಸರಳವಾದ ನೇರ ಕೃತಿ, ಅದನ್ನು ಉಪನ್ಯಾಸಕರು ಗೂಡಾರ್ಥಗಳಿರುವ ಕಾದಂಬರಿ ಎಂದು ತಿಳಿದಿರಬೇಕು ಎಂಬ ಕಳವಳಕಾರಿ ಅಂಶಗಳನ್ನು ತೇಜಸ್ವಿ ಅವರು ಅಂದು ನನಗೆ ವಿವರಿಸಿದ್ದರು.

    ನವ ಮಾಧ್ಯಮಗಳಿಂದ ಕನ್ನಡದ ಓದು ಸಂಸ್ಕೃತಿ ನಾಶವಾಗುತ್ತಿದೆ ಎಂದು ಕಳವಳ ಪಡುತ್ತಿರುವ ಹೊತ್ತಿನಲ್ಲಿ ಕನ್ನಡದ ಕರ್ವಾಲೊ  ಕಳೆದ 50 ವರ್ಷಗಳಲ್ಲಿ 76ನೆಯ ಮುದ್ರಣ ಕಂಡು ನೂರರತ್ತಾ ಸಾಗುತ್ತಿರುವುದು ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಪಡಬೇಕಾದ ಸಂಗತಿ.

    ಬರಹ : ಡಾ. ನರೇಂದ್ರ ರೈ ದೇರ್ಲ

    Continue Reading

    LATEST NEWS

    ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ಅವಘಡ

    Published

    on

    ಮಂಗಳೂರು/ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಪ್ರಯಾಗ್​ರಾಜ್​ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 19ರಲ್ಲಿ ಸುಮಾರು 12ಕ್ಕೂ ಹೆಚ್ಚು ಸಿಲಿಂಡರ್​​ಗಳು ಸ್ಫೋಟಗೊಂಡಿರುವಂತಹ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಟೆಂಟ್​​ಗಳು ಹೊತ್ತಿ ಉರಿದಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 20ಕ್ಕೂ ಬೆಂಕಿ ವ್ಯಾಪಿಸುತ್ತಿದೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ.

    ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ, ಈ ಮಹಾ ಕುಂಭಮೇಳಕ್ಕೆ ಸಾಧು ಸಂತರು ಸೇರಿದಂತೆ ಕೋಟ್ಯಾಂತರ ಭಕ್ತರು ಆಗಮಿಸಿದ್ದರು.

    ಇದನ್ನೂ ಓದಿ: ಹೊ*ತ್ತಿ ಉರಿದ ಮನೆ; ಮಹಿಳೆ, ಮೂರು ಮಕ್ಕಳು ಸಜೀವ ದ*ಹನ

    ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಿದ್ದರು. ಆದ್ರೆ ಇದೇ ಹೊತ್ತಲ್ಲಿ ಪ್ರಯಾಗ್​ರಾಜ್​ನ ಶಾಸ್ತ್ರಿ ಬ್ರಿಡ್ಜ್​ ಸೆಕ್ಟರ್ 19ರಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಕರ ಸಂಕ್ರಾಂತಿಯದ್ದೇ ಕೋಟ್ಯಂತರ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು.

    ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮಾಹಿತಿ ಪಡೆದಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

    Continue Reading

    LATEST NEWS

    ಹೊ*ತ್ತಿ ಉರಿದ ಮನೆ; ಮಹಿಳೆ, ಮೂರು ಮಕ್ಕಳು ಸಜೀವ ದ*ಹನ

    Published

    on

    ಮಂಗಳೂರು/ಗಾಜಿಯಾಬಾದ್ : ಮನೆಯೊಂದು  ಬೆಂ*ಕಿಗಾಹುತಿಯಾಗಿ, ಒಳಗಿದ್ದ ನಾಲ್ವರು ಸಜೀವದ*ಹನವಾದ ಘಟನೆ ಇಂದು(ಜ.19) ಗಾಜಿಯಾಬಾದ್‌ನ ಲೋನಿ ಪ್ರದೇಶದ ಕಾಂಚನ್ ಪಾರ್ಕ್  ಬಳಿ ನಡೆದಿದೆ. ಕಟ್ಟಡದ ಮೂರನೇ ಮಹಡಿಯ ಮನೆಯಲ್ಲಿ  ಬೆಂ*ಕಿ ಕಾಣಿಸಿಕೊಂಡಿದೆ.  ಮನೆಯಲ್ಲಿ 8 ಮಂದಿ ವಾಸವಾಗಿದ್ದರು. ಬೆಂ*ಕಿ ಕಾಣಿಸಿಕೊಂಡಾಗ  ಮನೆಯವರೆಲ್ಲಾ ನಿದ್ರೆಯಲ್ಲಿದ್ದರು ಎನ್ನಲಾಗಿದೆ.

    ಗುಲ್ಬಹಾರ್ (32),  ಮಕ್ಕಳಾದ ಶಾನ್ (8) ಮತ್ತು ಜಾನ್ (9), ಅವರ   ಸಂಬಂಧಿಕರ ಮಗ ಜೀಶನ್ (5) ಮೃತಪಟ್ಟವರು.  ಮೃತ ಗುಲ್ಬಹಾರ್‌ನ ಪತಿ ಶಹನವಾಜ್ ಯಾವುದೇ ಗಾ*ಯಗಳಿಲ್ಲದೆ ಪಾರಾಗಿದ್ದಾರೆ. ಇನ್ನು ಉಳಿದವರು ಗಾ*ಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : ರಾಜ್ಯದ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ; ಎಲ್ಲೆಲ್ಲಿ ?

    ಶಾರ್ಟ್ ಸರ್ಕ್ಯೂಟ್‌ನಿಂದ ಬೆಂ*ಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ಇದೆ. ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆ ಬಳಿಕವಷ್ಟೇ ತಿಳಿಯಲಿದೆ.

    Continue Reading

    LATEST NEWS

    Trending