ಡಿಸೆಂಬರ್ ನಲ್ಲಿ ಹರೇಕಳ ಡ್ಯಾಂ ಉದ್ಘಾಟನೆ; ಶಾಸಕಯು.ಟಿ ಖಾದರ್ ಭರವಸೆ..!
Harekala’s Dam Inauguration in December; former minister U.T Khader assured
ಮಂಗಳೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಹರೇಕಳ- ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಶಾಸಕ ಯು.ಟಿ ಖಾದರ್ ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೊದಲ ಯೋಜನೆ ಇದಾಗಿದೆ. ಬ್ಯಾರೇಜ್ ನಲ್ಲಿ 7.5 ಮೀ ಅಗಲದ ರಸ್ತೆ, 1 ಮೀ ನಷ್ಟು ಎರಡು ಕಡೆಗಳಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ಬೃಹತ್ ವಾಹನಗಳನ್ನು ಸೇತುವೆಯಲ್ಲಿ ಬಿಡಲಾಗುವುದಿಲ್ಲ. ಗ್ರಾಮೀಣ ಮಟ್ಟ ಹರೇಕಳ ಸಂಸ್ಕೃತಿಯನ್ನು ಸಂಪೂರ್ಣ ನಶಿಸಿ ಹೋಗುವ ಸಾಧ್ಯತೆಯಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ.ಸೇತುವೆ ಮೂಲಕ ಮಂಗಳೂರು ತಲುಪಬೇಕಾದ ಗ್ರಾಮದ ಜನರಿಗೆ 25 km ಕಡಿಮೆಯಾಗಲಿದೆ. ನಿರ್ಮಾಣ ಹಂತದಲ್ಲಿರುವ ಬ್ಯಾರೇಜ್ ನಲ್ಲಿ 18.7 ಮಿಲಿಯನ್ ಕ್ಯೂಸೆಕ್ಸ್ ಮೀ ನೀರು ಶೇಖರಿಸುವ ಸಾಮಥ್ಯ೯ವಿದೆ.ತುಂಬೆಯಲ್ಲಿ ನೀರು ಖಾಲಿಯಾದಲ್ಲಿ ನಗರ ಪ್ರದೇಶಕ್ಕೆ ನೂತನ ಯೋಜನೆಯಿಂದ ನೀರು ಕೊಡುವ ಕಾರ್ಯ ಆಗಲಿದೆ. ಈ ವೇಳೆ ಮಾಧ್ಯಮದ ಜತೆಗೆ ಮಾತನಾಡಿದ ಶಾಸಕರು ‘ ಬ್ರಿಡ್ಜ್ ಕಂ ಬ್ಯಾರೇಜ್ ಕುರಿತು ಸ್ಥಳೀಯರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ.ಅನುದಾನ ಮಂಜೂರಾಗುವ ಮುನ್ನ ಸೇತುವೆ ಕುರಿತು ಟೀಕೆಗಳು ಕೇಳಿಬಂದಿತ್ತು, ಪ್ರತಿಪಕ್ಷಗಳು ಸಾಧ್ಯ ವಿಲ್ಲದ ತೀರ್ಮಾನ ಎಂದು ಹೇಳಿಕೆ ನೀಡಿದ್ದರು.ಆದರೆ ಪಶ್ಚಿಮವಾಹಿನಿ ಯೋಜನೆಯ ಅಂಗವಾದ ಎತ್ತಿನ ಹೊಳೆ ಯೋಜನೆಯಲ್ಲಿ ಜಿಲ್ಲೆಗೆ ಅನ್ಯಾಯವಾಗಿದೆ ಈ ಬಗ್ಗೆ ನ್ಯಾಯ ಕೊಡುವ ಉದ್ದೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಜಿ. ಶಂಕರ್ ಆಂಡ್ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಒಟ್ಟು ವೆಚ್ಚ 200 ಕೋಟಿ ರೂ. ಇಡಲಾಗಿತ್ತು., ಡಿಪಿಆರ್ ನಲ್ಲಿ ಟೆಂಡರ್ ಕರೆದಾಗ ರೂ. 192.5 ಕೋಟಿಗೆ ಕಾಮಗಾರಿಯ ಗುತ್ತಿಗೆಯನ್ನು ಜಿ.ಶಂಕರ್ ಕಂಪೆನಿ ಕಾಮಗಾರಿ ವಹಿಸಿಕೊಂಡರು.ಮುಂದಿನ ಮಳೆಗಾಲ ಬರುವ ಮುನ್ನ ಪಾದಚಾರಿಗಳಿಗೆ ನಡೆದುಕೊಂಡು ಹೋಗುವ ವ್ಯವಸ್ಥೆಯನ್ನು ನೂತನ ಡ್ಯಾಂನಲ್ಲಿ ಕಲ್ಪಿಸಲಾಗುವುದು.ಡಿಸೆಂಬರ್ ನಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ನಡೆಸಲಾಗುವುದು. . ಸೇತುವೆ ನಿರ್ಮಾಣದಿಂದ ಹರೇಕಳ ಗ್ರಾಮ ಪ್ರವಾಸೋದ್ಯಮ ಕೇಂದ್ರವೂ ಆಗುವುದು, ಡ್ಯಾಂ ನೋಡಲು ಜನ ಬಂದಾಗ ವ್ಯಾಪಾರ ವಹಿವಾಟುಗಳು ಅಭಿವೃದ್ಧಿ ಆಗಲಿದೆ.
ಬೋಟ್ ರೈಡಿಂಗ್, ಮೀನು ಸಂತಾನ ಉತ್ಪತ್ತಿ ಕಾರ್ಯಗಳಿಗೂ ಇಲ್ಲಿ ಚಾಲನೆ ನೀಡಬಹುದು ಎಂದು ಹೇಳಿದರು. ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಗ್ರಾ.ಪಂ ಅಧ್ಯಕ್ಷ ಬದ್ರುದ್ದೀನ್, ಮಾಜಿ ಅಧ್ಯಕ್ಷ ಮಹಾಬಲ ಹೆಗ್ಡೆ, ಇಂಜಿನಿಯರ್ ಗೋಕುಲ್ ದಾಸ್, ಹರೇಕಳ ಗ್ರಾ.ಪಂ ಉಪಾಧ್ಯಕ್ಷ ಕಲ್ಯಾಣಿ ಉಪಸ್ಥಿತರಿದ್ದರು.
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ 12ನೇ ವರ್ಷದ ಪಾದಯಾತ್ರೆ ನ.26ರಂದು ಜರುಗಿತು. ತಾಲೂಕಿನ 81 ಗ್ರಾಮಗಳಿಂದ ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಉಜಿರೆ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ಶ್ರೀ ಭಗವಾನ್ ಶಿರಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳಕೋಟೆ ಬೆಳ್ತಂಗಡಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಉಜಿರೆ ದೇವಸ್ಥಾನದ ಧ್ವಜಸ್ತಂಭದ ಬಳಿ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ಅವರು ದೀಪ ಪುಜ್ವಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರವುಳ್ಳ ಟ್ಯಾಬ್, ವಿವಿಧ ಯಕ್ಷಗಾನ ವೇಷ ಭೂಷಣಗಳು, ಭಜನಾ ತಂಡಗಳು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ವಿಪತ್ತು ನಿರ್ವಹಣಾ ತಂಡ, ವಿವಿಧ ಸಂಘ ಸಂಸ್ಥೆಯವರು ಪಾದಯಾತ್ರೆಯಲ್ಲಿ ಶಿಸ್ತಿನಿಂದ ಭಾಗವಹಿಸಿದರು. ಚೆಂಡೆ, ವಾದ್ಯ, ಸಮವಸ್ತ್ರಧಾರಿ ಭಕ್ತರು, ಯಕ್ಷಗಾನ ವೇಷಧಾರಿಗಳು, ಭಜನಾ ತಂಡಗಳ ಕುಣಿತ ಭಜನೆ ಪಾದಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಜನಜಾಗೃತಿ ವೇದಿಕೆ ಸ್ಮಾಪಕಾಧ್ಯಕ್ಷ ವಸಂತ ಸಾಲ್ಯಾನ್, ಯು.ಸಿ ಪೌಲೋಸ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ನಿಕಟಪೂರ್ವ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಉಜಿರ ಲಕ್ಷ್ಮೀ ಗ್ರೂಪ್ ಮಾಲಕ ಮೋಹನ್ ಕುಮಾರ್, ಲಯನ್ಸ್ ಕ್ಲಬ್ ಪೂರಣ್ ವರ್ಮ, ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಸಿರಿಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕ ಕೆ.ಎನ್.ಜನಾರ್ದನ್, ನ್ಯಾಯವಾದಿ ಧನಂಜಯ್ ರಾವ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನ, ಮಾಜಿ ಅಧ್ಯಕ್ಷ, ತಿಮ್ಮಪ್ಪ ಗೌಡ ಬೆಳಾಲು, ಡಿ.ಎ ರಹಿಮಾನ್, ಉದ್ಯಮಿ ಮೋಹನ ಶೆಟ್ಟಿಗಾರ್, ರಾಘವೇಂದ್ರ ನಾಯಕ್, ಕೊರಗಪ್ಪ ಗೌಡ ಚಾರ್ಮಾಡಿ, ಸೀತಾರಾಮ ಬೆಳಾಲ್, ರವೀಂದ್ರ ಶೆಟ್ಟಿ, ಬಳಂಜ, ಡಾ. ಶ್ರೀಧರ ಭಟ್, ರವಿ ಚಕ್ಕಿತ್ತಾಯ, ವಡಿವೇಲು ಗುರುವಾಯನಕೆರೆ, ಮಮತಾ ಶೆಟ್ಟಿ, ಅಡೂರು ವೆಂಕಟ್ರಾವ್, ಜಯಂತಿ ಪಾಲೇದು, ಗಣೇಶ್ ಗೌಡ,, ಪುಭಾಕರ ಪೂಸಂದೋಡಿ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಬೂದಪ್ಪ ಗೌಡ, . ಉದ್ಯಮಿ ರಾಘವೇಂದ್ರ ಬೈಪಾಡಿತ್ತಾಯ, ವಿವೇಕ್ ವಿನ್ಸೆಂಟ್ ಪಾಯಿಸ್, ಮಮತಾ ಎಂ. ಶೆಟ್ಟಿ,, ಶ್ಯಾಮ್ ಸುಂದರ್ ನಡ, ಶಶಿಧರ ಕಲ್ಮಂಜ, ಅರುಣ್ ಕುಮಾರ್, ಡಾ. ಬಿ.ಎ ಕುಮಾರ ಹಗ್ಗ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್, ನ್ಯಾಯವಾದಿ ಧನಂಜಯ್ ರಾವ್, ಅಡೂರು ವೆಂಕಟ್ರಾವ್,, ತಿಮ್ಮಪ್ಪ ಗೌಡ ಬೆಳಾಲು, ಪುಷ್ಪರಾಜ ಹೆಗ್ಡೆ ಮಡಂತ್ಯಾರು, ಉಜಿರ ಗ್ರಾ.ಪಂ ಅಧ್ಯಕ್ಷ ಮಾಜಿ ಅಧ್ಯಕ್ಷ ಪುಷ್ಪಾವತಿ ಆರ್ ಶೆಟ್ಟಿ, ವಿಠಲ ಶೆಟ್ಟಿ, ಲಾಯಿಲ, ಶಂಕರ ಹೇಡ, ಯೋಗೀಶ್ ಕುಮಾರ್ ನಡಕ್ಕರ, ಗಿರೀಶ್ ವೇಣೂರು, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರುಗಳಾದ ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ, ಕಿಶೋರ್ ಹಗ್ಡೆ, ಪುಷ್ಪರಾಜ ಹಗ್ಡೆ ಮಡಂತ್ಯಾರು, ರತ್ನವರ್ಮ ಬುಣು, ಪ್ರಶಾಂತ ಪಾರಂಕಿ, ದುಗೇಗೌಡ, ತಾಲೂಕು ಯೋಜನಾಧಿಕಾರಿಗಳು, ತಾಲೂಕಿನ ಗಣ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೧೫ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಹಗಡೆ ಅಭಿಮಾನಿಗಳು ಮರವಣಿಗೆಯ ಜೊತ ಸಾಗಿದರು.
ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನವೆಂಬರ್ 9ರಂದು ನಡೆದಿದ್ದ ಲಾಕಪ್ ಡೆ*ತ್ ನಲ್ಲಿ ಮೃ*ತಪಟ್ಟ ಕೇರಳ ಮೂಲದ ಬಿಜು ಮೋನ್ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.
ಬಿಜು ಮೋನ್ ಮೈಮೇಲೆ ಕೆಲ ಗಾಯಗಳ ಗುರುತು, ಮೊಣಕಾಲಿನ ಕೆಳಗೆ ಕೆಲ ಗಾಯದ ಗುರುತು ಕಂಡುಬಂದಿತ್ತು ಎಂದಿರುವ ಬಿಜು ಮೋನ್ ಕುಟುಂಬಸ್ಥರು ಹೇಳಿದ್ದಾರೆ. ಲಾಕಪ್ ಡೆತ್ ಪ್ರಕರಣದ ಬಗ್ಗೆ ಸಿಒಡಿ ತನಿಖೆ ನಡೆಯುತ್ತಿದ್ದು, ಆರೋಪಿ ಕುಸಿದು ಬಿದ್ದು ಸಾವನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಲಾಕಪ್ ಡೆತ್ ಎಂದು ಪ್ರಕರಣ ಬೆಳಕಿಗೆ ಬಂತು ಎಂದವರು ಹೇಳಿದ್ದಾರೆ.
ಇದೊಂದು ಅಸಹಜ ಸಾವು ಎಂದು ಕೇರಳ ಮುಖ್ಯಮಂತ್ರಿಗೆ ದೂರು ನೀಡಿರುವ ಕುಟುಂಬಸ್ಥರು, ಸಿಐಡಿ ಮೂಲಕ ಕೂಲಂಕಷ ತನಿಖೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಐಡಿಗೂ ಪತ್ರ ಮೂಲಕ ಮನವಿ ಮಾಡಿದ್ದಾರೆ. ನಮಗೆ ನ್ಯಾಯ ಬೇಕು, ತಪ್ಪಿತಸ್ಥ ಪೊಲೀಸರಿಗೆ ಕಠಿಣ ಶಿಕ್ಷೆಯಾಗ ಬೇಕು ಎಂದು ಆಗ್ರಹಿಸಿರುವ ಬಿಜು ಮೋನ್ ಸಹೋದರ ಬಿನು ಯೋಹನ್ನಾನ್ ಹೇಳಿದ್ದಾರೆ. ಸಿಐಡಿ ಅಧಿಕಾರಿಗಳು ಹೇಳಿಕೆ ದಾಖಲಿಸಲು ಕರೆದ ಹಿನ್ನೆಲೆಯಲ್ಲಿ ನಾವು ಉಡುಪಿಗೆ ಬಂದಿದ್ದೇವೆ ಎಂದವರು ತಿಳಿಸಿದರು.
ನನ್ನ ಸಹೋದರನನ್ನು ಪೊಲೀಸರು ಕಾನೂನು ಪ್ರಕಾರವಾಗಿ ವಶಕ್ಕೆ ಪಡೆದ ಬಗ್ಗೆ ಅನುಮಾನವಿದೆ ಎಂದ ಅವರು ಮಹಿಳೆಯೋರ್ವಳ ದೂರಿನ ಹಿನ್ನೆಲೆಯಲ್ಲಿ ನನ್ನ ಸಹೋದರನನ್ನ ಬಂಧಿಸಲಾಗಿದೆ ಎಂದಿದ್ದರು. ಆದರೆ ದೂರು ಕೊಟ್ಟ ಮಹಿಳೆ, ಅವರ ಕೊಟ್ಟ ದೂರಿನ ಪ್ರತಿಯ ಬಗ್ಗೆ ಮಾಹಿತಿ ನೀಡಿಲ್ಲ.
ಇವೆಲ್ಲವನ್ನೂ ನಾವು ಕೇರಳ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇವೆ. ಅಸಹಜ ಸಾವು ಎಂದು ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದೇವೆ ಎಂದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ಮೇರೆಗೆ ಮೃತದೇಹ ಪರಿಶೀಲಿಸಲಾಗಿತ್ತು. ದೇಹದಲ್ಲಿ ಸಾಕಷ್ಟು ಗಾಯದ ಗುರುತುಗಳು ಕಂಡು ಬಂದಿದ್ದವು. ಹೀಗಾಗಿ ಬ್ರಹ್ಮಾವರ ಪೊಲೀಸರ ಮೇಲೆ ತುಂಬಾ ಅನುಮಾನವಿದೆ ಎಂದು ಯೋಹಾನ್ನನ್ ಹೇಳಿದರು.
ಮಂಗಳೂರು/ಹೈದರಾಬಾದ್: 11 ವರ್ಷದ ಬಾಲಕನೊಬ್ಬ ಮೂರಕ್ಕಿಂತ ಹೆಚ್ಚು ಪೂರಿಗಳನ್ನು ಒಟ್ಟಾಗಿ ಬಾಯಿಗೆ ಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವ ಅಘಾತಕಾರಿ ಘಟನೆ ಹೈದರಾಬಾದ್ ನ ಶಾಲೆಯೊಂದರಲ್ಲಿ ನಡೆದಿದೆ.
6ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮನೆಯಿಂದ ತಂದಿದ್ದ ಪೂರಿಯನ್ನು, ಮಧ್ಯಾಹ್ನದ ಊಟಕ್ಕೆ ಕೂತಿದ್ದ ಸಮಯದಲ್ಲಿ ಒಂದೇ ಬಾರಿಗೆ ಮೂರಕ್ಕಿಂತ ಹೆಚ್ಚು ಪೂರಿಗಳನ್ನು ಬಾಯಿಗೆ ಹಾಕಿಕೊಂಡಿದ್ದ. ಈ ವೇಳೆ ಉಸಿರಾಡಲು ಸಾಧ್ಯವಾಗದೆ ವಿದ್ಯಾರ್ಥಿ ಸಾವನ್ನಪಿದ್ದಾನೆ.