Monday, July 4, 2022

ಮಂಗಳೂರು: ಪ್ರಾಧ್ಯಾಪಕಿಗೆ ಕಿರುಕುಳ ಪ್ರಕರಣ- ಆರೋಪಿಗಳಿಗೆ ಪೊಲೀಸ್‌ ಕಸ್ಟಡಿ

ಮಂಗಳೂರು: ನಗರದ ಕಾಲೇಜಿನ ಪ್ರಾಧ್ಯಾಪಕಿಯ ಅವಾಚ್ಯ ಭಾಷೆಯಲ್ಲಿ ಹಾಗೂ ಮಾನಹಾನಿಕರವಾಗಿ ಪತ್ರ ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಇಬ್ಬರು ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.


ಬಂಟ್ವಾಳ ಎಸ್‌ವಿಎಸ್‌ ಕಾಲೇಜಿನ ಸಂಚಾಲಕ ಲಾಯಿಲ ನಿವಾಸಿ ಪ್ರಕಾಶ್ ಶೆಣೈ (44), ಅರ್ಥಶಾಸ್ತ್ರ ಉಪನ್ಯಾಸಕ

ಬಂಟ್ವಾಳ ಸಿದ್ಧಕಟ್ಟೆ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ (36) ಹಾಗೂ ಕ್ರೀಡಾ ತರಬೇತುದಾರ ಹೆಬ್ರಿ ನಾಡ್ಪಾಲು ನಿವಾಸಿ ತಾರಾನಾಥ ಬಿ ಎಸ್. ಶೆಟ್ಟಿ (32) ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಆರೋಪಿಗಳು ಪೋಸ್ಟರ್ ಅಂಟಿಸಿದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುವ ಪ್ರಕ್ರಿಯೆ ಹಾಗೂ ಹೆಚ್ಚಿನ ವಿಚಾರಣೆಗೆ ಎರಡು ದಿನಗಳ ಕಾಲ ನಡೆಯಲಿದೆ.

ಇನ್ನೂ ಯಾರೆಲ್ಲಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕೆರೆಗೆ ಬಿದ್ದ ಹಾಲಿನ ವಾಹನ-ನೀರುಪಾಲಾದ ಲೀಟರ್‌ಗಟ್ಟಲೆ ಹಾಲು

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಹಾಲು ತುಂಬಿಸಿಕೊಂಡು ಹೋಗುತ್ತಿದ್ದ ವಾಹನ ಕೆರೆಯಲ್ಲಿ ಮುಳುಗಿದ ಘಟನೆ ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೆಳಿಗ್ಗೆ ಅಂಗಡಿಗೆ ನಂದಿನಿ ಹಾಲು ಪೂರೈಸುತ್ತಿದ್ದ ವಾಹನ ದೇವರಹಳ್ಳಿ ಕೆರೆಯಲ್ಲಿ...

ಉಡುಪಿ: ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿದ ಕಂಟೈನರ್ ಲಾರಿ

ಉಡುಪಿ: ಗೋವಾ ಕಡೆಗೆ ರದ್ದಿ ಪೇಪರ್‌ ತುಂಬಿಕೊಂಡು ಹೊರಟ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಶನಿವಾರ ರಾತ್ರಿ ಉಡುಪಿ ಮಣಿಪಾಲದ ಕೆಳಪರ್ಕಳದಲ್ಲಿ ನಡೆದಿದೆ.ಪರ್ಕಳದಿಂದ ಗೋವಾದ ಕಡೆಗೆ ಹೋಗುತ್ತಿದ್ದ...

“ನ್ಯಾಯಮೂರ್ತಿಗಳ ವೈಯುಕ್ತಿಕ ದಾಳಿ ನಡೆಸುವ ಸೋಷಿಯಲ್‌ ಮೀಡಿಯಾ ಅಪಾಯಕಾರಿ”

ನವದೆಹಲಿ: ನ್ಯಾಯಧೀಶರ ಕುರಿತು ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ.ಸಂವಿಧಾನದಡಿ ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದಲ್ಲಿ ಇವುಗಳ ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್...