ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋ ಅಂದರೆ ಬಿಗ್ಬಾಸ್. ಕನ್ನಡಿಗರ ಮನ ಗೆದ್ದ ಈ ಶೋ ದಿನದಿಂದ ದಿನಕ್ಕೆ ವೀಕ್ಷಕರನ್ನು ಬಹಳಷ್ಟು ಸೆಳೆಯುತ್ತಿದೆ. ಸ್ಪರ್ಧಿಗಳು ಕೂಡ ಅಷ್ಟೇ ಯೋಚಿಸಿ ಟಾಸ್ಕ್ಗಳನ್ನು ಆಡುತ್ತಿದ್ದು ವಾರದ ಕೊನೆಯಲ್ಲಿ ಕಿಚ್ಚ ಬಂದು ಬಿಸಿ ಮುಟ್ಟಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಈ ವಾರದ ಕಳಪೆ ಆಟ ಹನುಮಂತು ಎಂದು ಮನೆಯ ಸದಸ್ಯರು ಘೋಷಣೆ ಮಾಡಿದ್ದಾರೆ.
ಬಿಗ್ಬಾಸ್ನಲ್ಲಿ ಬೆಸ್ಟ್ ಫ್ರೆಂಡ್ ಎಂದು ಹನುಮಂತು ಹಾಗೂ ಧನ್ರಾಜ್ ರಾಜ್ಯಾದ್ಯಾಂತ ಹೆಸರು ಪಡೆದಿದ್ದಾರೆ. ಇವರ ಇಬ್ಬರ ಜೋಡಿಗೆ ಗೆಳೆಯರೆಂದರೆ ಹೀಗೆ ಇರಬೇಕು ಎಂದು ಯುವಕರು ಮಾತನಾಡುತ್ತಾರೆ. ಆದರೆ ಬಿಗ್ ಮನೆಯಲ್ಲಿ ಹನುಮಂತು ಈ ವಾರ ಚೆನ್ನಾಗಿ ಆಡಲಿಲ್ಲ ಎಂದು ಧನ್ರಾಜ್ ಜೊತೆ ಉಳಿದ ಸ್ಪರ್ಧಿಗಳು ಕೂಡ ಹೇಳಿದ್ದಾರೆ.
ಮನೆಯಲ್ಲಿ ಈ ವಾರ ಹನುಮಂತು ಚೆನ್ನಾಗಿ ಆಡಲಿಲ್ಲ, ಕಳಪೆಯಾಗಿ ಕಾಣಿಸಿದರು ಎಂದು ಮೋಕ್ಷಿತಾ, ರಜತ್, ಗೌತಮಿ, ಚೈತ್ರಾ, ಮಂಜು ಸೇರಿ ಎಲ್ಲರೂ ಹೇಳಿದ್ದಾರೆ. ಇದರಲ್ಲಿ ಧನ್ರಾಜ್ ಕೂಡ ನೀವು ಚೆನ್ನಲಾಗಿ ಆಡಲಿಲ್ಲ ಎಂದು ಹೇಳಿರುವುದು ಹನುಮಂತುಗೆ ಬೇಸರ ತರಿಸಿದೆ ಎನ್ನಬಹುದು. ಧನ್ರಾಜ್ ಹೇಳುತ್ತಿದ್ದಂತೆ ಹನುಮಂತು ಮಾತನಾಡಿ, ಥ್ಯಾಂಕ್ಸ್, ಧನ್ಯವಾದಗಳು ಎಂದು ಹೇಳುತ್ತ.. ನೀವು ಕಳಪೆ ಕೊಟ್ಟರೇ ಎಂದು ನಾನು ಕುಗ್ಗೋದು ಇಲ್ಲ, ಬಗ್ಗೋದಿಲ್ಲ ಎಂದು ಹೇಳಿದ್ದಾರೆ.
ಈ ವಾರ ಟಾಸ್ಕ್ನ ಮೇನ್ ಥಿಂಗ್ ಇದ್ದಿದ್ದೇ ತುಂಬಾ ಸ್ವಚ್ಛತೆ ಕಾಪಾಡಬೇಕು ಎಂದು. ಈ ಶುಚಿತ್ವನೇ ಹನುಮಂತಗೆ ಹೊಡೆತ ಕೊಟ್ಟಿದೆ. ಆದರೆ ಹನುಮಂತು ಶುಚಿತ್ವ ಕಾಪಾಡಲಿಲ್ಲ ಎಂದು ಮನೆ ಸದಸ್ಯರು ಆರೋಪ ಮಾಡಿದ್ದಾರೆ. ಹನುಮಂತುವಿನಿಂದ ನಮಗೆ ಕಿರಿಕಿರಿ ಅನಿಸುತ್ತೆ ಎಂದು ಉಗ್ರಂ ಮಂಜು ಹೇಳಿದ್ದಾರೆ.