Connect with us

    FILM

    ನಟ ಪುನೀತ್‌ ಸಮಾಧಿಗೆ ಇಂದು ಬೆಳಿಗ್ಗೆ ಹಾಲು ತುಪ್ಪ ಕಾರ್ಯ

    Published

    on

    ಬೆಂಗಳೂರು: ಇತ್ತೀಚೆಗೆ ನಿಧನರಾಗಿರುವ ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಇಂದು ಬೆಳಿಗ್ಗೆ ಹಾಲು ತುಪ್ಪ ಅರ್ಪಿಸುವ ಕಾರ್ಯಕ್ರಮ ನೆರವೇರಿತು.


    ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 5 ದಿನಗಳಾಗಿದ್ದು, ಕುಟುಂಬದ‌ ಸಂಪ್ರದಾಯದ ಪ್ರಕಾರ ಇಂದು ಬೆಳಿಗ್ಗೆ ಶಾಸ್ತ್ರೋಕ್ತವಾಗಿ ಸಮಾಧಿಗೆ ಹಾಲು ತುಪ್ಪ ಸಮರ್ಪಿಸಲಾಯಿತು.
    ಸಹೋದರರಾದ ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಇಬ್ಬರು ಪುತ್ರಿಯರು, ಕುಟುಂಬ ವರ್ಗ ಸೇರಿದಂತೆ ಆಪ್ತ ಬಳಗ ಭಾಗಿಯಾಗಿತ್ತು.

    ಇಂದು ಹಾಲು-ತುಪ್ಪ ಕಾರ್ಯದ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಸ್ಟುಡಿಯೋ ಮುಂದೆ ಜಮಾಯಿಸುತ್ತಿದ್ದು, ಆದರೆ ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಾರೆ.

    ಸ್ಟುಡಿಯೋದ ಸುತ್ತಮುತ್ತ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಭದ್ರತೆಗಾಗಿ ಸ್ಥಳೀಯ ಪೊಲೀಸರು, ಕೆಎಸ್​ಆರ್​ಪಿ ತುಕಡಿ, ಆರ್​ಎಎಫ್ ಪೊಲೀಸರನ್ನು ನಿಯೋಜಿಸಲಾಗಿದೆ.

    ಅಪ್ಪು ಸಮಾಧಿ ಮೇಲೆ ಮಣ್ಣಿನ ಹಣತೆ ಹಚ್ಚಿ ಬಾಳೆ ಎಲೆಯಲ್ಲಿ ಅಪ್ಪುಗೆ ಇಷ್ಟವಾದ ಆಹಾರಗಳನ್ನು ಇಡಲಾಗಿತ್ತು. ಮುದ್ದೆ, ನಾಟಿ, ಕೋಳಿ, ಸಾರು, ಬಿರಿಯಾನಿ, ಕಬಾಬು, ಇಡ್ಲಿ, ಕಡ್ಲೆಕಾಳು, ಗೊಜ್ಜು, ಮೊಟ್ಟೆ, ಬಿರಿಯಾನಿ, ಬಜ್ಜಿ ಇನ್ನಿತರೆ ತಿನಿಸುಗಳು ಹಾಗೂ ಕೆಲವು ಮಾದರಿಯ ಸಿಹಿ ತಿನಿಸುಗಳನ್ನು ಕುಟುಂಬಸ್ಥರು ಮಾಡಿಕೊಂಡು ಬಂದಿದ್ದರು, ಬಾಳೆ ಎಲೆಯಲ್ಲಿ ನೈವೇದ್ಯ ಇಟ್ಟರು.

    ಪುನೀತ್ ಅವರು ನಿಧನವಾದ ದಿನದಿಂದ ಅಂತ್ಯಕ್ರಿಯೆ ಮುಗಿಯುವವರೆಗೂ ಮೂರು ದಿನಗಳ ಕಾಲ ಸ್ಥಳದಲ್ಲಿಯೇ ಇದ್ದು ನಿರ್ವಹಣೆ ಮಾಡಿದ್ದ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    FILM

    ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ

    Published

    on

    ಉಡುಪಿ : ಖ್ಯಾತ ನಟಿ  ಮಾಲಾಶ್ರೀ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಮಾಲಾಶ್ರೀ ಜೊತೆ ಪುತ್ರಿ ಕಾಟೇರಾ ನಟಿ ಆರಾಧನಾ ಕೂಡ ಉಪಸ್ಥಿತರಿದ್ದರು.

    ಪರ್ಯಾಯದಲ್ಲಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.

    Continue Reading

    FILM

    ವಿರಹದ ನಂತರ ಸಂಭಾವನೆಗೆ ಹೊಸ ದಾರಿ; ಮಲೈಕಾ ಪ್ಲಾನ್ ಏನು ಗೊತ್ತಾ ?

    Published

    on

    ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆದಮೇಲೆ ಒಂಟಿತನ ಅನುಭವಿಸಿದ್ದ ಮಲೈಕಾ ಅರೋರಾ ಈಗ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮಲೈಕಾ ಅರೋರಾ ಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ್ದಾರೆ. ತಮ್ಮ ಮಗ ಅರ್ಹಾನ್ ಖಾನ್ ಜೊತೆ ಮಲೈಕಾ ಹೊಸ ರೆಸ್ಟೋರೆಂಟ್ ಓಪನ್ ಮಾಡ್ತಿದ್ದಾರೆ. ಈಗಾಗಲೇ ರೆಸ್ಟೋರೆಂಟ್ ಕೆಲಸವೆಲ್ಲ ಪೂರ್ಣಗೊಂಡಿದ್ದು, ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಮಲೈಕಾ ಅರೋರಾ, ಹೊಸ ರೆಸ್ಟೋರೆಂಟ್ ಈಗಾಗಲೇ ಸೆಲೆಬ್ರಿಟಿಗಳಿಗೆ ಪ್ರಸಿದ್ಧ ಸ್ಥಳವಾಗಿದೆ. ಮಲೈಕಾ ಮತ್ತು ಮಗ ಅರ್ಹಾನ್ ತಮ್ಮ ಹೊಸ ರೆಸ್ಟೋರೆಂಟ್‌ಗೆ ಸ್ಕಾರ್ಲೆಟ್ ಹೌಸ್ ಎಂದು ಹೆಸರಿಟ್ಟಿದ್ದಾರೆ. 90 ವರ್ಷ ಹಳೆಯದಾದ ಪೋರ್ಚುಗೀಸ್ ವಿಂಟೇಜ್ ಬಂಗಲೆಯನ್ನು ನವೀಕರಣ ಮಾಡಿ, ಸುಂದರವಾದ ಹ್ಯಾಂಗ್ಔಟ್ ಸ್ಥಳವಾಗಿ ಮಾರ್ಪಡಿಸಲಾಗಿದೆ. ಡಿಸೆಂಬರ್ 3 ರಿಂದ ಸಾರ್ವಜನಿಕರಿಗೆ ರೆಸ್ಟೋರೆಂಟ್ ತೆರೆಯಲಿದೆ.  ಐಷಾರಾಮಿ ಕೆಫೆಯ ಒಳಾಂಗಣ ಆಕರ್ಷಕವಾಗಿದೆ. ರೆಸ್ಟೋರೆಂಟ್ ಓಪನ್ ಆಗುವ ಮುನ್ನವೇ ಈ ರೆಸ್ಟೋರೆಂಟ್ ಗೆ  ಸೋಹೈಲ್ ಖಾನ್ ಅವರ ಮಗ ನಿರ್ವಾನ್, ಅಮೃತಾ ಅರೋರಾ ಮತ್ತು ಇತರ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಆರ್ಕಿಟೆಕ್ಚರಲ್ ಡೈಜೆಸ್ಟ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಫೆಯ ಒಳಾಂಗಣ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

    ವಾಲ್‌ಪೇಪರ್, ಐಷಾರಾಮಿ ಪೀಠೋಪಕರಣಗಳು, ಡಿನ್ನರ್ ವೇರ್ ಕೆಫೆಗೆ ವಿಂಟೇಜ್ ವೈಬ್‌ ನೀಡುತ್ತಿದೆ. ಮಲೈಕಾ ಅರೋರಾ ಮತ್ತು ಮಗ ಅರ್ಹಾನ್ ಕೂಡ ಸ್ಕಾರ್ಲೆಟ್ ಹೌಸ್ ಬಾಂಬೆಗಾಗಿ ವಿಶೇಷ ಫೋಟೋಶೂಟ್ ಕೂಡ ನಡೆದಿದೆ. ಅದರಲ್ಲಿ ಮಲೈಕಾ ಹಾಗೂ ಅವರ ಮಗ ಕಪ್ಪು ಬಣ್ಣದ ಬ್ಲೇಜರ್‌ ಧರಿಸಿದ್ದು, ಅದರ ಮೇಲೆ ಸ್ಕಾರ್ಲೆಟ್ ಹೌಸ್ ಎಂದು ಕೆಂಪು ಬಣ್ಣದಲ್ಲಿ  ಬರೆಯಲಾಗಿದೆ. 1998ರಲ್ಲಿ ಅರ್ಬಾಜ್ ಖಾನ್ ಜೊತೆ ಮದುವೆಯಾಗಿದ್ದ ಮಲೈಕಾ ಅರೋರಾ 19 ವರ್ಷಗಳ ನಂತ್ರ ವಿಚ್ಛೇದನ ಪಡೆದಿದ್ದರು. ಅದಾದ ಮೇಲೆ ಮಲೈಕಾ ಹೆಸರು ಅರ್ಜುನ್ ಕಪೂರ್ ಜೊತೆ ಕೇಳಿ ಬಂದಿತ್ತು. ಐದು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಜೋಡಿ ಈಗ ಬೇರೆಯಾಗಿದ್ದಾರೆ.

    ಚೈಯಾ-ಚೈಯಾದಿಂದ ಅನಾರ್ಕಲಿ ಡಿಸ್ಕೋ ಚಾಲಿಯಂತಹ ಐಟಂ  ಸಾಂಗ್ ಮಾಡಿ ಅಭಿಮಾನಿಗಳ ಮನಸ್ಸು ಕದ್ದಿದ್ದ ಮಲೈಕಾ ಅರೋರಾ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಮಲೈಕಾ ಬಾಲಿವುಡ್‌ನಿಂದ ದೂರವಿದ್ದಾರೆ. ಹಾಗಿದ್ದಲ್ಲಿ ಮಲೈಕಾ ಹೇಗೆ ಹಣ ಮಾಡ್ತಿದ್ದಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ಮಲೈಕಾ ಉತ್ತಮ ಡಾನ್ಸರ್ ಮಾತ್ರವಲ್ಲ ಬ್ಯುಸಿನೆಸ್ ವುಮೆನ್ ಕೂಡ ಹೌದು. ಡಾನ್ಸ್ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ. ಅದರ ಜೊತೆ ಯೋಗ್ಯ ಸ್ಥಳದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. 2012ರಲ್ಲಿಯೇ ಮಲೈಕಾ ದಿ ಲೇಬಲ್ ಲೈಫ್ ನಲ್ಲಿ ಹೂಡಿಕೆ ಮಾಡಿ ದಿ ಲೇಬಲ್ ಲೈಫ್ ಬಟ್ಟೆ ಬ್ರಾಂಡ್ ನ ಸ್ಟೈಲ್ ಎಡಿಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

    ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡುವ ಮಲೈಕಾ ಇದರಿಂದಲೂ ಹಣ ಸಂಪಾದನೆ ಮಾಡತ್ತಾ ಇದ್ದಾರೆ.  2018ರಲ್ಲಿಯೇ ‘ಯೋಗ ಕೇಂದ್ರ ದಿವಾ’ ಯೋಗ ಶುರು ಮಾಡಿದ್ದಾರೆ. ರೆಸ್ಟೋರೆಂಟ್‌ಗಳು, ಸೌಂದರ್ಯ ಉತ್ಪನ್ನಗಳ ಕಂಪನಿ ಮತ್ತು ಸ್ವಂತ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ ಮಲೈಕಾ. ಅವರು 2022 ರಲ್ಲಿ ಹ್ಯಾಂಡ್ ಬ್ಯಾಗ್ ಬ್ರಾಂಡ್  ಅಹಿಕೋಜಾ ನಲ್ಲಿ ಹೂಡಿಕೆಯನ್ನೂ ಮಾಡಿದ್ದಾರೆ. ಉದ್ಯಮಿ ನಮ್ರತಾ ಕರಾದ್‌ನೊಂದಿಗೆ ಕೈಜೋಡಿಸಿದ್ದು, ಮೊದಲು ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ ಮತ್ತು ಸಿಂಗಾಪುರದಲ್ಲಿದ್ದ ಈ ಬ್ರ್ಯಾಂಡ್ ಈಗ ಭಾರತದಲ್ಲೂ ಶುರುವಾಗಿದೆ.

    Continue Reading

    FILM

    ಎಷ್ಟು ಕ್ಯೂಟ್ ಆಗಿದ್ದಾಳೆ ನೋಡಿ ಮಿಲನಾ ಮಗಳು; ಇಲ್ಲಿವೆ ಸುಂದರ ಚಿತ್ರಗಳು

    Published

    on

    ನಟಿ ಮಿಲನಾ ನಾಗರಾಜ್ ಅವರು ಈ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಅವರು ಈ ಮೊದಲು ಹಂಚಿಕೊಂಡಿದ್ದಾರೆ. ಈಗ ಮಿಲನಾ ನಾಗರಾಜ್ ಅವರು ಮಗಳ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಮಗಳಿಗೆ ಪರಿ ಎಂದು ಹೆಸರು ಇಟ್ಟಿದ್ದಾರೆ. ಈ ಹೆಸರಿನಲ್ಲಿ ಮಗಳ ಫೋಟೋಗಳನ್ನು ಮಿಲನಾ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಮಗಳ ಫೋಟೋ ಹಂಚಿಕೊಂಡಿದ್ದಾರೆ.

    ಮಿಲನಾ ಅವರು ಹಂಚಿಕೊಂಡಿರೋ ಫೋಟೋದಲ್ಲಿ ಪರಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ‘ಅಮ್ಮ ಮಗಳು ಇಬ್ಬರೂ ಕ್ಯೂಟ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಹೆಸರು ಹಾಗೂ ಇಬ್ಬರೂ ಚೆನ್ನಾಗಿ ಕಾಣಿಸುತ್ತಿದ್ದೀರಿ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

    ಸದ್ಯ ಮಿಲನಾ ಅವರು ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಅದರ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ.

    Continue Reading

    LATEST NEWS

    Trending