ಪಾಕಿಗೆ ಯುದ್ದ ವಿಮಾನಗಳ ಮಾಹಿತಿ ರವಾನೆ : ಹೆಚ್‌ಎಎಲ್ ಉದ್ಯೋಗಿಯ ಬಂಧನ..!
ಮುಂಬೈ : ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳ ಬಗ್ಗೆ ಅತ್ಯಂತ ರಹಸ್ಯ ಮಾಹಿತಿ ಪೂರೈಕೆ ಮಾಡಿದ ಆರೋಪದ ಮೇಲೆ ಹೆಚ್ಎಎಲ್ ಸಿಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಉದ್ಯೋಗಿದೀಪಕ್ ಸಿರ್ಸಾತ್ ಬಂಧಿತ ಆರೋಪಿಯಾಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳ ಎಟಿಎಸ್ ನಾಸಿಕ್ ಲ್ಲಿರುವ ಎಚ್‌ಎಎಲ್ ಕಂಪೆನಿಗೆ ದಾಳಿ ನಡೆಸಿ ಆರೋಪಿ ದೀಪಕ್‌ನನ್ನು ವಶಕ್ಕೆ ತಗೊಂಡಿದ್ದಾರೆ.
ಈತ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐಗೆ ಎಚ್‌ಎಎಲ್ನ ಯುದ್ಧ ವಿಮಾನಗಳು, ತಯಾರಿಕಾ ಘಟಕ, ವಾಯುನೆಲೆ ಮತ್ತು ನಿರ್ಬಂತ ಪ್ರದೇಶಗಳ ಕುರಿತು ಗೌಪ್ಯ ಮಾಹಿತಿಗಳನ್ನು ರವಾನಿಸಿದ್ದ ಎಂಬ ಆರೋಪಗಳು ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಈತನ ವಿಚಾರಣೆಯಿಂದ ರಹಸ್ಯ ಮಾಹಿತಿ ರವಾನೆ ಪ್ರಕರಣದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಬಗ್ಗೆ ಲಭಿಸಲಿದ್ದು, ಅವರನ್ನು ಸಹ ಬಂಧಿಸುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.