Connect with us

ಕಳಸಗುರಿಯಲ್ಲಿ ತ್ಯಾಜ್ಯ ರಾಶಿ ಹಾಕುತ್ತಿದ್ದವರ ವಿರುದ್ಧ ಕ್ರಮ: ಇದು ನಮ್ಮ ಕುಡ್ಲ ನ್ಯೂಸ್ ವರದಿಯ ಬಿಗ್ ಇಂಪಾಕ್ಟ್ 

Published

on

ಕಳಸಗುರಿಯಲ್ಲಿ ತ್ಯಾಜ್ಯ ರಾಶಿ ಹಾಕುತ್ತಿದ್ದವರ ವಿರುದ್ಧ ಕ್ರಮ: ಇದು ನಮ್ಮ ಕುಡ್ಲ ನ್ಯೂಸ್ ವರದಿಯ ಬಿಗ್ ಇಂಪಾಕ್ಟ್ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಗುರುಪುರ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕಳಸಗುರಿ ಅನ್ನೋ ಪ್ರದೇಶದಲ್ಲಿ, ರಾಶಿ ರಾಶಿ ತ್ಯಾಜ್ಯಗಳು ತುಂಬಿ ಡಂಪಿಂಗ್ ಯಾರ್ಡ್ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಬಗ್ಗೆ ನಮ್ಮ ಕುಡ್ಲ ವಾಹಿನಿಯಲ್ಲಿ ಸಮಗ್ರ ವರದಿಯನ್ನು ಬಿತ್ತರ ಮಾಡಲಾಗಿದ್ದು, ವರದಿಯನ್ನು ನೋಡಿದ ಗುರುಪುರ ಪಂಚಾಯತ್ ಸೂಕ್ತ ಕ್ರಮ ಕೈಗೊಂಡಿದೆ. ಕಳಸಗುರಿ ಎನ್ನುವ ಪ್ರದೇಶದಲ್ಲಿ ದಾರಿಹೋಕರು, ಹೊಟೇಲ್ ನವರು ಸೇರಿದಂತೆ ಎಲ್ಲರೂ ಈ ಪ್ರದೇಶದಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರು.

ಹೀಗಾಗಿ ಈ ದಾರಿಯಲ್ಲಿ ಸಂಚರಿಸುವ ಮ್ಕಕಳಿಗೆ, ಸಾರ್ವಜನಿಕರಿಗೆ ಕೊಳೆತು ನಾರುವ ತ್ಯಾಜ್ಯ ರಾಶಿಯಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತ ಇತ್ತು. ಇನ್ನು ರೋಝ್ ಫ್ರೆಂಡ್ಸ್ ಕ್ಲಬ್ ಕಳಸಗುರಿ ಅಡ್ಡೂರು ಇಲ್ಲಿಯ ಸದಸ್ಯರು ಸ್ವಚ್ಛತಾ ಕಾರ್ಯವನ್ನು ಮಾಡುವುದರ ಮೂಲಕ ಗುರುಪುರ ಪಂಚಾಯತ್ ನ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಆದರೆ ಇದೀಗ ನಮ್ಮ ಕುಡ್ಲ ವಾಹಿನಿಯಲ್ಲಿ ಈ ಬಗ್ಗೆ ಪ್ರಸಾರವಾದ ವರದಿಯನ್ನು ನೋಡಿ ಎಚ್ಚೆತ್ತುಕೊಂಡಿರುವ ಗುರುಪುರ ಪಂಚಾಯತ್ ಕಸ ಬಿಸಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಇದು ನಮ್ಮ ಕುಡ್ಲ ವಾಹಿನಿಯ ವರದಿಗೆ ಸಂಧ ಫಲಶ್ರುತಿ.

ವಿಡಿಯೋಗಾಗಿ

Click to comment

Leave a Reply

Your email address will not be published. Required fields are marked *

DAKSHINA KANNADA

ಟಿಕೆಟ್ ಕೈ ತಪ್ಪಿದ್ರೂ ಕೈ ಬಿಡದ ಹೈಕಮಾಂಡ್‌..! ಕೇರಳದ ಸಹ ಉಸ್ತುವಾರಿಯಾದ ನಳಿನ್ ಕುಮಾರ್ ಕಟೀಲ್‌

Published

on

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ವಹಿಸಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳದ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು ಬಾರಿ ನಿರಾಸೆ ತಂದಿತ್ತು. ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಹೊಸ ಮುಖವನ್ನು ಪಕ್ಷ ಕಣಕ್ಕೆ ಇಳಿಸಿದೆ. ಇದು ನಳಿನ್ ಕುಮಾರ್ ಕಟೀಲ್‌ ಅವರಿಗೆ ಬೇಸರ ತಂದಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಹಳಷ್ಟು ಭಾವುಕರಾಗಿದ್ದ ನಳಿನ್ ಕುಮಾರ್ ಕಟೀಲ್ ಪಕ್ಷ ನಿಂತ ನೀರಾಗಬಾರದು, ಹೊಸ ಮುಖಗಳು ಬರುತ್ತಿರಬೇಕು, ನಾನು ಪಕ್ಷ ಗುಡಿಸಿ ಒರೆಸು ಅಂತ ಹೇಳಿದ್ರೂ ಮಾಡ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಪಕ್ಷ ಅವರಿಗೆ ಕೇರಳದ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಪಕ್ಷದಲ್ಲಿ ದೊಡ್ಡ ಜವಾಬ್ದಾರಿಯನ್ನೇ ನೀಡಿದೆ.

Continue Reading

LATEST NEWS

ಪ್ರತಾಪ್ ಸಿಂಹ ಬದಲು ಒಡೆಯರ್ ಯಾಕೆ..!? ರಾಜ್ಯಾಧ್ಯಕ್ಷರು ಹೇಳಿದ್ದೇನು?

Published

on

ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರಿನಿಂದ ಯದುವೀರ್ ಕೃಷ್ಣದತ್ತ ಒಡೆಯರ್‌ಗೆ ಟಿಕಿಟ್ ನೀಡಿ, ಪ್ರತಾಪ್ ಸಿಂಹರಿಗೆ ಕೋಕ್ ನೀಡಲಾಗಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಠಿಮಾಡಿತ್ತು ಎಂದರೆ ತಪ್ಪಾಗಲ್ಲ.

ಈ ಕುರಿತು ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೈಸೂರು-ಕೊಡಗು  ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆಯ ಅಂತರದಿಂದ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

 

 

wodeyar

ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿಯಾಗಿರುವ ಯದುವೀರ್ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಜನರಿಗಾಗಿ ಕೆಲಸ ಮಾಡುತ್ತಾ ಹಿಂದಿನ ಹತ್ತು ವರ್ಷಗಳ ಕಾಲ ಈ ಭಾಗದ ಕ್ರಿಯಾಶೀಲ ಸಂಸದರಾಗಿ ಪ್ರತಾಪ್ ಸಿಂಹ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

prathap simha

ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗದೆ ಯದುವೀರ್ ಅವರಿಗೆ ಟಿಕೆಟ್ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ನಾಯಕರು ಪ್ರತಾಪ್ ಸಿಂಹ ಅವರ ಬಗ್ಗೆ ಬೇರೆ ಏನಾದರೂ ಯೋಚನೆ ಮಾಡಿರುತ್ತಾರೆ. ಪ್ರತಾಪ್ ಸಿಂಹ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ವಿಜಯೇಂದ್ರ ಹೇಳಿದರು.

Continue Reading

FILM

ಕೊನೆಗೂ ಸಿಕ್ಕೇ ಬಿಡ್ತು “ಸಮಂತಾ-ನಾಗಚೈತನ್ಯ” ಡಿವೋರ್ಸ್ ಗುಟ್ಟು..!! ಇದೇ ಕಾರಣನಾ?

Published

on

ಟಾಲಿವುಡ್ ಟಾಪ್ ನಟಿ ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್ ದೇಶದೆಲ್ಲೆಡೆ ಸದ್ದುಮಾಡಿತ್ತು.  ಇದೀಗ ಇವರಿಬ್ಬರ ವಿಚ್ಚೇದನಕ್ಕೆ ಸ್ಪಷ್ಟ ಕಾರಣವೊಂದು ಹೊರಬಿದ್ದಿದೆ. ಹೌದು,  ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ.. “ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ” ಎಂದ ನಟಿ ಅದಿತಿ ಪ್ರಭುದೇವ; ಏನದು ಗೊತ್ತಾ!?

ಹಲವು ವರ್ಷಗಳ ಹಿಂದೆ ಬಹಳ ಅದ್ಧೂರಿಯಾಗಿ ಕುಟುಂಬ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸಿನಿ ಇಂಡಸ್ಟ್ರಿಯಲ್ಲಿ ಇರುವ ಅನೇಕರ ಫೇವರೆಟ್ ಕಪಲ್‌ಗಳಲ್ಲಿ ಇವರೂ ಕೂಡಾ ಆಗಿದ್ದರು. ಆದರೆ ವರ್ಷ ಕಳೆದರೂ ಅವರಿಬ್ಬರು ಪ್ರತ್ಯೇಕಗೊಳ್ಳಲು ಕಾರಣ ತಿಳಿದು ಬಂದಿರಲಿಲ್ಲ. ಸಮಂತಾ – ನಾಗಚೈತನ್ಯ ಸ್ಟಾರ್ ನಟರಾಗಿದ್ದು, ಇವರಿಬ್ಬರ ವಿಚ್ಚೇದನಕ್ಕೆ ಹಲವು ಊಹಾಪೋಹಗಳು ಹರಿದಾಡುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಂತೂ ಈ ಮುದ್ದಾದ ಜೋಡಿ ಮತ್ತೆ ಒಂದಾಗಬೇಕು ಎಂದು ಬೇಡಿಕೊಂಡವರೆಷ್ಟೋ.

ಫೋನ್ ಟ್ಯಾಪಿಂಗ್ ಇವರಿಬ್ಬರಿಗೆ ಮುಳುವಾಯಿತಾ..!

ಆದರೆ ಇದೀಗ ಮೂರು ವರ್ಷಗಳ ಬಳಿಕ ಇವರಿಬ್ಬರ ವಿಚ್ಚೇದನಕ್ಕೆ ಕಾರಣ ತಿಳಿದು ಬಂದಿದೆ. ತೆಲಂಗಾಣ ರಾಜಕೀಯದಲ್ಲಿ ಭಾರಿ ಅಲೆಗಳನ್ನು ಎಬ್ಬಿಸಿರುವ ಫೋನ್ ಟ್ಯಾಪಿಂಗ್​ನಿಂದಲೇ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಫೋನ್ ಟ್ಯಾಪಿಂಗ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ತೆಲುಗು ಚಿತ್ರರಂಗದ ತಾರಾ ಜೋಡಿಯೊಂದರ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣವಾಗಿದೆ ಎಂಬ ಅಂಶ ಹರಿದಾಡುತ್ತಲೇ ಇತ್ತು. ಆದರೆ ಆ ತಾರಾ ಜೋಡಿ ಯಾರೆಂಬುದು ಬೆಳಕಿಗೆ ಬಂದಿರಲಿಲ್ಲ. ಆ ತಾರಾ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

 

 

 

Continue Reading

LATEST NEWS

Trending