Connect with us

LATEST NEWS

ಡ್ಯೂಟಿ ವೇಳೆ ಕ್ರಿಮಿನಲ್ ವ್ಯಕ್ತಿ ಜೊತೆ ಪೊಲೀಸರ ಗುಂಡು ಪಾರ್ಟಿ: ಮಂಗಳೂರು ಸಿಸಿಬಿ 8 ಸಿಬ್ಬಂದಿ ಎತ್ತಂಗಡಿ..!

Published

on

ಡ್ಯೂಟಿ ವೇಳೆ ಕ್ರಿಮಿನಲ್ ವ್ಯಕ್ತಿ ಜೊತೆ ಪೊಲೀಸರ ಗುಂಡು ಪಾರ್ಟಿ: ಮಂಗಳೂರು ಸಿಸಿಬಿ 8 ಸಿಬ್ಬಂದಿ ಎತ್ತಂಗಡಿ..!

ಮಂಗಳೂರು : ಕರ್ತವ್ಯದ ವೇಳೆ ಹಾಡು ಹಗಲೇ ಬಾರಿನಲ್ಲಿ ಕೂತು  ಕ್ರಿಮಿನಲ್ ಆರೋಪಿಯೊಂದಿಗೆ ಗುಂಡು ಪಾರ್ಟಿ ಮಾಡಿದ್ದ 8 ಮಂದಿ ಸಿಸಿಬಿ ಪೊಲೀಸರನ್ನು ಎತ್ತಂಗಡಿ ಮಾಡಲಾಗಿದೆ.

ಮಂಗಳೂರು ಸಿಟಿ ಕ್ರೈಂ ಬ್ರಾಂಚಿನ (CCB)  ಮೂರು ಎಎಸ್‌ಐ ಗಳು ಮತ್ತು ಐದು ಮಂದಿ ಹೆಡ್ ಕಾನ್ಸ್ ಟೇಬಲ್ ಗಳನ್ನು  ವರ್ಗಾವಣೆ ಮಾಡಿ ಮಂಗಳೂರು ನಗರ ಪೊಲೀಸ್​ ಆಯುಕ್ತರಾದ ಶಶಿಕುಮಾರ್ ಪೋಲಿಸ್ ಠಾಣೆಯಲ್ಲಿ ಡ್ಯೂಟಿ ಮಾಡಲು ಸೂಚಿಸಿದ್ದು ಜೊತೆಗೆ ತನಿಖೆ ನಡೆಸಲು ಆದೇಶ ಹೊರಡಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯದಲ್ಲೇ ಇರುವಾಗ ಪೊಲಿಸ್ ಅಧಿಕಾರಿಗಳು ಮತ್ತು ಸಿಬಂದಿಗಳು ಎಣ್ನೇ ಪಾರ್ಟಿ ಮಾಡಿದ್ದು ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಸಿಸಿಬಿಯಿಂದ ಅವರನ್ನು ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಡಿಸಿಪಿ ಹರಿರಾಂ ಶಂಕರ್ ಗೆ ಆದೇಶ ನೀಡಲಾಗಿದೆ.

ಸಿಬ್ಬಂದಿಯನ್ನು ‌ನಗರದ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಜೊತೆಗೆ ಇಲಾಖಾ ಶಿಸ್ತು ಕ್ರಮ ಜರುಗಿಸಲು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಕೊಣಾಜೆ ಕುತ್ತಾರು ಬಳಿಯ ಬಾರ್​ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸಿಸಿಬಿ ಘಟಕದ 8 ಸಿಬ್ಬಂದಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಹಾಡಹಗಲೇ ಎಣ್ಣೆ ಪಾರ್ಟಿ ಮಾಡಿದ್ದರು. ಬಾರ್ ಬಳಿ ತಮ್ಮ ಸರ್ಕಾರಿ ವಾಹನ ನಿಲ್ಲಿಸಿ ಪಾರ್ಟಿ ಮಾಡಿದ್ದ ಆರೋಪ ಕೇಳಿಬಂದಿತ್ತು. ಜೊತೆಗೆ, ಸಿಸಿಬಿ ಪೊಲೀಸರ ಪಾರ್ಟಿ ಮಾಡಿದ್ದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಕುರಿತಂತೆ  ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಮೂವರು ಎಎಸ್‌ಐಗಳು ಹಾಗು ಐದು ಮಂದಿ ಹೆಡ್ ಕಾನ್ಸ್ ಟೇಬಲ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಬೆಟ್ಟಿಂಗ್ ಆರೋಪಿ ಜೊತೆ ಜವಾಬ್ದಾರಿ ಸ್ಥಾನದಲ್ಲಿರುವ ಪೊಲೀಸರು  ಪಾರ್ಟಿ ಮಾಡಿರುವುದು ಇಲಾಖೆಗೆ ಮುಜುಗರ ತರುವಂತದ್ದಾಗಿದೆ, ಈ ವಿದ್ಯಮಾನ ಇಲಾಖೆ ಮೇಲಿನ ನಂಬಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

DAKSHINA KANNADA

MANGALURU : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಅನಾಹುತ

Published

on

ಮಂಗಳೂರು : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಕಾರು ಮಾಲಕ ಆರೋಪಿಸಿದ್ದಾರೆ.

ಹೊಟೇಲ್ ಉದ್ಯಮಿ ಜೀವನ್ ಶೆಟ್ಟಿ ಎಂಬವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸುವ ಸಲುವಾಗಿ, ಎಪ್ರಿಲ್ 5 ರಂದು ಮಧ್ಯಾಹ್ನ 12 ರ ಸುಮಾರಿಗೆ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ.

 

ಪರಿಣಾಮ ಕಾರು ಕೆಲವೇ ಕಿಲೋ ಮೀಟರ್ ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲಿಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರು ಇಂಜಿನ್ ದುರಸ್ಥಿಗೆ 2 ಲಕ್ಷಕ್ಕೂ ಅಧಿಕ ಖರ್ಚು ಆಗಲಿದೆ. ಆದರೆ, ಪೆಟ್ರೋಲ್ ಬಂಕ್ ಮಾಲಕ ಬರೀ 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಇಂತಹ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ಬಂಕ್ ಮಾಲಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದಾಗಿ ಜೀವನ್ ಶೆಟ್ಟಿ ಹೇಳಿದ್ದಾರೆ.

Continue Reading

DAKSHINA KANNADA

ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್‌..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು

Published

on

ಉಳ್ಳಾಲ: ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಸ್ಟಾಲ್ ಒಂದರಲ್ಲಿ ಆಕಸ್ಮಿ*ಕ ಬೆಂಕಿಯಿಂದಾಗಿ ಸ್ಟಾಲ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಉಳ್ಳಾಲದ ದೇರಳಕಟ್ಟೆಯಲ್ಲಿ ನಡೆದಿದೆ.

sweet corn burn

ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲೇ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಅಂಗಡಿ ಮಾಲೀಕ ಕಾರ್ನ್ ತಯಾರಿಸುವಾಗ ಈ ಅವಘಡ ಸಂಭವಿಸಿದೆ. ತಕ್ಷಣ ಅಂಗಡಿ ಮಾಲೀಕ ಹಾಗೂ ಸ್ವೀಟ್ ಕಾರ್ನ ತಿನ್ನಲು ಬಂದಿದ್ದ ಗ್ರಾಹಕರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಮರಳು ಹಾಗೂ ನೀರನ್ನ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸ್ಟಾಲ್ ಉರಿದು ಭಸ್ಮವಾಗಿ ಹೋಗಿದೆ.

Read More..; ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

sweet corn burn 2

Continue Reading

LATEST NEWS

ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

Published

on

ಬೆಳಗಾವಿ: 25 ರಿಂದ 30 ವರ್ಷದ ಯುವತಿಯೊಬ್ಬಳನ್ನು ಬರ್ಬರವಾಗಿ ಹ*ತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಮಮದಾಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಕೊ*ಲೆ ಮಾಡಿದವರಾರು? ಹ*ತ್ಯೆ ಆದವಳು ಯಾರು? ಎಂಬುದಾಗಲಿ ಗೊತ್ತಾಗಿಲ್ಲ. ನಿನ್ನೆ(ಎ.18) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುವೆ ಪಕ್ಕದಲ್ಲಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಬಿಸಿಲಿನ ತಾಪಕ್ಕೆ ಹುಲ್ಲು ಇರುವ ಜಾಗಕ್ಕೆ ಬೆಂಕಿ ಬಿದ್ದಿರಬಹುದು ಎಂದು ಕೆಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಮೃತದೇಹ ಕಂಡು ಬಂದಿದೆ.

murder

ಯುವತಿಯ ಕತ್ತು ಕೊಯ್ದು ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರಬೇಕು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಯುವತಿಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕುವ ಪ್ರಯತ್ನ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಈ ಯುವತಿ ಯಾರು ಹಾಗೂ ಯಾರು ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ.

Read More..: ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

Continue Reading

LATEST NEWS

Trending