LATEST NEWS
ಹೊಸ ವರ್ಷ ಬರಮಾಡಿಕೊಳ್ಳಲು ದಿನಗಣನೆ; ಪಬ್, ರೆಸ್ಟೋರೆಂಟ್ ಮತ್ತು ಪಿಜಿಗಳಿಗೆ ಮಾರ್ಗಸೂಚಿ
Published
3 days agoon
By
NEWS DESK2ಹೊಸ ವರ್ಷ ಬರಮಾಡಿಕೊಳ್ಳಲು ಇಡೀ ವಿಶ್ವವೇ ಈಗ ಕಾತುರದಿಂದ ಕಾಯುತ್ತಿದೆ. ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ಸಂಭ್ರಮ ಬೇರೆಯದ್ದೇ ಮಟ್ಟಕ್ಕೆ ಹೋಗಿರುತ್ತೆ. ಇದರಿಂದ ಅಲ್ಲಲ್ಲಿ ಕೆಲವು ಸಮಸ್ಯೆಗಳು ಅನುಚಿತ ವರ್ತನೆ, ಗದ್ದಲ ಗಲಾಟೆಗಳು ನಡೆಯುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಈ ಬಾರಿ ಅವು ಯಾವುದು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಪಬ್, ಕ್ಲಬ್, ಪಿಜಿ ಮಾಲೀಕರು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಠಾಣಾ ಮಟ್ಟದಲ್ಲಿ ಸಭೆ ನಡೆಸಲಿರುವ ಆಯಾ ಠಾಣೆ ಇನ್ಸ್ಪೆಕ್ಟರ್, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಪಿಜಿಗಳಿಗೆ ಮಾರ್ಗಸೂಚಿ
ಪಿಜಿಯಲ್ಲಿ ಇರುವವರು ಆಗಮನ ಮತ್ತು ನಿರ್ಗಮನದ ಬಗ್ಗೆ ನಿಖರವಾದ ಸಮಯವನ್ನು ಲೆಡ್ಜರ್ನಲ್ಲಿ ನಮೂದಿಸಬೇಕು. ತಮ್ಮ ಪಿಜಿ ಟೆರಸ್ಗಳ ಮೇಲೆ ಪಾರ್ಟಿ ಮಾಡಿ ಕುಡಿಯುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು. ಹೊಸ ವರ್ಷದ ದಿನ ಹೊಸಬರು ಮತ್ತು ಅಪರಿಚಿತರನ್ನು ಪಿಜಿಯೊಳಗೆ ಬಿಟ್ಟುಕೊಳ್ಳುವಂತಿಲ್ಲ. ಪಿಜಿ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್ಗಳನ್ನು ಕಟ್ ಮಾಡಕೂಡದು. ಮಹಿಳಾ ಪಜಿಗಳಿಗೆ ಶುಭ ಕೋರಲು ಆ ವೇಳೆಯಲ್ಲಿ ಬರುವ ಪುರುಷರಿಗೆ ಅವಕಾಶ ನೀಡುವಂತಿಲ್ಲ. ಒಂದು ವೇಳೆ ಯಾವುದೇ ಈ ರೀತಿಯ ಅಹಿತಕರ ಘಟನೆ ನಡೆದಲ್ಲಿ ಅದಕ್ಕೆ ಪಿಜಿ ಮಾಲೀಕರೆ ಹೊಣೆ ಎಂದು ಎಲ್ಲಾ ಪಿಜಿಗಳಿಗೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ ಪೊಲೀಸರು.
ಪಬ್ ರೆಸ್ಟೋರೆಂಟ್ ಮಾಲೀಕರಿಗೆ ಹಲವು ನಿಬಂಧನೆಗಳು
ಇನ್ನು ಹೊಸ ವರ್ಷ ಅಂದ್ರೆ ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಅಬ್ಬರದ ಸಂಭ್ರಮ ಕಳೆಗಟ್ಟುತ್ತದೆ. ಹೀಗಾಗಿ ಅವುಗಳಿಗೂ ಕೂಡ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಲಿದೆ.
ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾರ್ಯಕ್ರಮ ಆಯೋಜಿಸುವ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮರಾ ಅಳವಡಿಸುವುದರ ಜೊತೆಗೆ ಅವುಗಳು ಸೂಕ್ತವಾಗಿ ಕಾರ್ಯನಿರ್ವಹಿಸುವುಂತೆ ನೋಡಿಕೊಳ್ಳಬೇಕು. ಸಿಸಿಟಿವಿ ಫೂಟೇಜ್ ಬ್ಯಾಕಪ್ ಇಟ್ಟುಕೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಗ್ರಾಹಕರ ಬ್ಯಾಗ್ ಲಗೇಜ್ಗಳನ್ನು ತಪ್ಪದೇ ಚೆಕ್ ಮಾಡುವುದು. ಯಾವುದೇ ಆಯುಧ, ಸ್ಫೋಟಕ, ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಇಲ್ಲದಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಕಾರ್ಯಕ್ರಮಕ್ಕೆ ಬರುವ ಗ್ರಾಹಕರಿಗೆ ಆಗಮನ ಅಥವಾ ನಿರ್ಗಮನ ಸ್ಥಳಗಳನ್ನು ಪ್ರತ್ಯೇಕವಾಗಿ ರಚಿಸಬೇಕು. ನಿರ್ವಹಿಸುವುದು ಮತ್ತು ಒಳಬಿಡುವ ಗ್ರಾಹಕರಿಗೆ ಹೆಚ್.ಹೆಚ್,ಎಂ.ಡಿ ಮೂಲಕ ಚೆಕ್ ಮಾಡಿ ಪರಿಶೀಲಿಸಬೇಕು. ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ ಒಳಗಡೆ ಪ್ರವೇಶ ನೀಡಬಾರದು. ಒಂದು ವೇಳೆ ಅಪ್ರಾಪ್ತರಿಗೆ ಒಳಗೆ ಹೋಗಲು ಅವಕಾಶ ನೀಡಿದ್ದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸವರ್ಷಾಚರಣೆ ಸಂಬಂಧ ಹೆಚ್ಚಾಗಿ ಮದ್ಯಪಾನ ಮಾಡಿದವರು ಸುಧಾರಿಸಿಕೊಳ್ಳಲು ಐಸ್‌ಲ್ಯಾಂಡ್ ಸ್ಥಳ ಆಯೋಜಿಸುಬೇಕು.
ಮಹಿಳೆಯರ ಭದ್ರತೆ ಮತ್ತು ಸುರಕ್ಷತೆ ಸಲುವಾಗಿ ಮಹಿಳಾ ಬೌನ್ಸರ್ ಗಳನ್ನು ನೇಮಿಸಿಕೊಳ್ಳಬೇಕು.ಮದ್ಯಸೇವಿಸಿ ಅನುಚಿತವಾಗಿ ವರ್ತಿಸುವ ಮಹಿಳೆಯರನ್ನು ಮಹಿಳಾ ಬೌನ್ಸರ್‌ಗಳ ಸಹಾಯದಿಂದ ಮನೆಗೆ ಕಳುಹಿಸಿಕೊಡಬೇಕು.ಅಂತಹ ಮಹಿಳೆಯರನ್ನು ಕಳುಹಿಸುವ ವಾಹನಗಳ ನಂಬರ್ ಹಾಗೂ ಚಾಲಕರ ಫೋಟೋ ತೆಗೆದುಕೊಂಡಿರಬೇಕು.
ಮದ್ಯದಂಗಡಿ ಒಳಗೆ ಹೊರಗೆ ಯಾವುದೇ ಅಹಿತಕರ ಘಟನೆ. ಜರುಗದಂತೆ ಎಚ್ಚರವಹಿಸಬೇಕು. ಹಾಗೇನಾದರು ಅಪರಾಧ ನಡೆದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು, ಕಾರ್ಯಕ್ರಮ ಆಯೋಜಿಸಲು ಪೊಲೀಸ್ ಇಲಾಖೆಯಿಂದ ಮತ್ತು ಸಂಬಂಧಪಟ್ಟಿ ಪ್ರಾಧಿಕಾರ ಅಥವಾ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳತಕ್ಕದ್ದು. ಧ್ವನಿವರ್ಧಕ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸತಕ್ಕದ್ದು. ಹೀಗೆ ಹಲವು ಮಾರ್ಗಸೂಚಿಗಳನ್ನು ಪಿಜಿ, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.
LATEST NEWS
ಕಾನ್ ಸ್ಟೆಬಲ್ ಮನೆಯಲ್ಲಿ ಭರ್ಜರಿ ಬೇಟೆಯಾಡಿದ ಲೋಕಾಯುಕ್ತ ಪೊಲೀಸರು !
Published
12 hours agoon
21/12/2024By
NEWS DESK3ಮಂಗಳೂರು/ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆದಾಯ ಮೀರಿದ ಆಸ್ತಿ ಸಂಪಾದಿಸಿದ ಆರೋಪದಡಿಯಲ್ಲಿ ಸಾರಿಗೆ ಇಲಾಖೆಯ ಮಾಜಿ ಕಾನ್ ಸ್ಟೆಬಲ್ ವೊಬ್ಬರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.
ಚಿನ್ನ ಮತ್ತು ಅಮೂಲ್ಯ ಲೋಹಗಳ ವಶ
ದಾಳಿಯ ವೇಳೆ 40 ಕೆ.ಜಿ ಬೆಳ್ಳಿಯ ಗಟ್ಟಿ ಹಾಗೂ 200 ಮುಖಬೆಲೆ ನೋಟುಗಳ ಬಂಡಲ್ ಗಳು, 50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮುಂಬೈ ಬೋಟ್ ದುರಂತ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ, ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಇನ್ನೂ ಲೋಕಾಯುಕ್ತ ಪೊಲೀಸರು ಗುರುವಾರವೂ ಮಧ್ಯಪ್ರದೇಶ ಸಾರಿಗೆ ಇಲಾಖೆಯ ಕಾನ್ ಸ್ಟೆಬಲ್ ವೊಬ್ಬರ ಮನೆ ಮೇಲೆ ದಾಳಿ ನಡೆಸಿ 2.85 ಕೋಟಿ ನಗದು ಸೇರಿದಂತೆ 3 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.
ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಎಸ್ ಪಿ ತಿಳಿಸಿದ್ದಾರೆ.
LATEST NEWS
ಮುಂಬೈ ಬೋಟ್ ದುರಂತ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ, ಸಾವಿನ ಸಂಖ್ಯೆ 15ಕ್ಕೆ ಏರಿಕೆ
Published
12 hours agoon
21/12/2024By
NEWS DESK2ಮುಂಬೈ: ಮುಂಬೈ ಕರಾವಳಿಯಲ್ಲಿ ದೋಣಿ ಅಪಘಾತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕ ಜೋಹಾನ್ ಮೊಹಮ್ಮದ್ ನಿಸಾರ್ ಅಹ್ಮದ್ ಪಠಾಣ್ ಅವರ ಶವವನ್ನು ಮೂರು ದಿನಗಳ ಶೋಧ ಕಾರ್ಯಾಚರಣೆಯ ನಂತರ ಶನಿವಾರ ಬೆಳಿಗ್ಗೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ಡಿಸೆಂಬರ್ 18ರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ನಗರದ ಬಂದರು ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾದ ಬಗ್ಗೆ ನೌಕಾಪಡೆ ತನಿಖೆಯನ್ನು ಪ್ರಾರಂಭಿಸಿದೆ. ಶೋಧ ಮತ್ತು ಪಾರುಗಾಣಿಕಾ (ಎಸ್ಎಆರ್) ಕಾರ್ಯಾಚರಣೆಯಲ್ಲಿ ನೌಕಾ ಹೆಲಿಕಾಪ್ಟರ್, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ನ ದೋಣಿಗಳನ್ನು ನಿಯೋಜಿಸಲಾಗಿದೆ. ಎರಡು ಹಡಗುಗಳಲ್ಲಿದ್ದ 113 ಜನರಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಗಾಯಗೊಂಡ ಇಬ್ಬರು ಸೇರಿದಂತೆ 98 ಜನರನ್ನು ರಕ್ಷಿಸಲಾಗಿದೆ.
ನೌಕಾಪಡೆಯ ವಿಮಾನದಲ್ಲಿ ಆರು ಜನರಿದ್ದರು, ಅವರಲ್ಲಿ ಇಬ್ಬರು ಬದುಕುಳಿದಿದ್ದಾರೆ ಎಂದು ಅಧಿಕಾರಿ ವರದಿ ಮಾಡಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ನೌಕಾಪಡೆಯ ದೋಣಿಯು ಎಂಜಿನ್ ಪ್ರಯೋಗಗಳಿಗೆ ಒಳಗಾಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಮುಂಬೈ ಕರಾವಳಿಯಲ್ಲಿ ಪ್ರಯಾಣಿಕರ ದೋಣಿ ‘ನೀಲ್ ಕಮಲ್’ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ದೋಣಿ ಗೇಟ್ವೇ ಆಫ್ ಇಂಡಿಯಾದಿಂದ ಪ್ರಾಚೀನ ಗುಹೆಗಳಿಗೆ ಹೆಸರುವಾಸಿಯಾದ ಜನಪ್ರಿಯ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪಕ್ಕೆ ತೆರಳುತ್ತಿತ್ತು. ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್ (ಎಂಎಂಬಿ) ದಾಖಲೆಗಳು ದೋಣಿಯಲ್ಲಿ 84 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಸಾಗಿಸಲು ಅನುಮತಿ ಇತ್ತು ಆದರೆ ಓವರ್ಲೋಡ್ ಆಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಎಂಎಂಬಿ, ತನ್ನ ಸಾಮರ್ಥ್ಯವನ್ನು ಮೀರಿ ಒಳನಾಡಿನ ಹಡಗು ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ದೋಣಿಯ ಪರವಾನಗಿಯನ್ನು ರದ್ದುಪಡಿಸಿದೆ. ದೋಣಿಯಲ್ಲಿ ಗರಿಷ್ಠ 90 ಜನರ ಸಾಮರ್ಥ್ಯವಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
International news
ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !
Published
13 hours agoon
21/12/2024By
NEWS DESK3ಮಂಗಳೂರು/ಕೀವ್: ಉಕ್ರೇನ್ ನ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜನ್ ನಗರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು.
ಇತ್ತೀಚೆಗೆ ಉಕ್ರೇನ್ ಮೇಲೆ ಕ್ಷೀಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋನ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆ ಬೆಚ್ಚಿ ಬಿದ್ದಿದ್ದಾರೆ.
ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿರುವುದಾಗಿ ವರದಿಗಳು ತಿಳಿಸಿವೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡೋಕ್ಲಾಂನಲ್ಲಿ 22 ಗ್ರಾಮಗಳನ್ನು ನಿರ್ಮಾಣ ಮಾಡಿದ ಚೀನಾ !
ಕಜನ್ ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯ ಕಜಾನ್ ನಗರದಲ್ಲಿ ಡ್ರೋನ್ ಅನ್ನು ಉರುಳಿಸಿದ್ದು, ಕೆಲವು ಡ್ರೋನ್ ಗಳು ಅದನ್ನು ಭೇದಿಸಿ ದಾಳಿನಡೆಸಿವೆ ಎಂದು ತಿಳಿಸಿದೆ.
9/11 ಶೈಲಿಯ ದಾಳಿ
ಉಕ್ರೇನ್ ದಾಳಿಯು, ಸಪ್ಟೆಂಬರ್ 11, 2001ರಂದು ನ್ಯೂಯಾರ್ಕ್ ವಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿದ ಘಟನೆಯನ್ನು ನೆನಪಿಸುವಂತಿದೆ.
ಸೆಪ್ಟೆಂಬರ್ 11, 2001ರಂದು ಅಮೆರಿಕಗೆ ಅಲ್ ಕೈದಾ ಉಗ್ರ ಸಂಘಟನೆ ಶಾಕ್ ಕೊಟ್ಟಿದ್ದರು. ಈ ಭೀಕರ ಉಗ್ರ ದಾಳಿಯಲ್ಲಿ 2977 ಅಮಾಯಕರು ಮೃತರಾಗಿದ್ದರು.
ಅಲ್ ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಉಕ್ರೇನ್ ನ ಈ ದಢೀರ್ ದಾಳಿಯು 9/11ರ ಅಟ್ಯಾಕ್ ಸ್ಮರಿಸುವಂತೆ ಮಾಡಿದೆ.
LATEST NEWS
3 ಮಕ್ಕಳ ತಾಯಿಗೆ, 2 ಮಕ್ಕಳ ತಂದೆ ಜೊತೆ ಅ*ಫೇರ್; ಜೋಡಿಗೆ ಭರ್ಜರಿ ಮರುವಿವಾಹ
BBK11: ಆಟದ ದಿಕ್ಕು, ದಾರಿ ತಪ್ಪಿಸಿದ್ರಾ ಚೈತ್ರಾ ಕುಂದಾಪುರ? ಕಿಚ್ಚ ಸುದೀಪ್ ಖಡಕ್ ಕ್ಲಾಸ್!
ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹ*ತ್ಯೆ
ಉಡುಪಿಯ ರೆಸಾರ್ಟ್ ನಲ್ಲಿ ಭಾರಿ ಅಗ್ನಿ ಅವಘಡ : ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು!
ಮೂಲ್ಕಿ: ವಿವಿಧ ರಂಗಗಳ ಸಾಧಕರಿಗೆ ‘ಅರಸು ಕಂಬಳ’ ಪ್ರಶಸ್ತಿ ಪ್ರದಾನ
ಬಿಗ್ಬಾಸ್ ಮನೆಯಲ್ಲಿ ದೆವ್ವ, ಭೂತಗಳ ಓಡಾಟ
Trending
- BIG BOSS6 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- DAKSHINA KANNADA6 days ago
ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧವಾಗಿ ಆಯ್ಕೆ
- BIG BOSS7 days ago
ದಿಢೀರ್ ನಿರ್ಧಾರ ಕೈಗೊಂಡ ಗೋಲ್ಡ್ ಸುರೇಶ್; ಕಿಚ್ಚ ಸುದೀಪ್ ಶಾಕ್ !
- LATEST NEWS3 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್