Connect with us

LATEST NEWS

ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ

Published

on

ಬೆಳಗಾವಿ: ಕರ್ನಾಟಕ ಸರ್ಕಾರ ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆ ಅಡಿ ಬಂದ ಹಣದಿಂದ ಗೋಕಾಕ್ ತಾಲೂಕಿನ ತವಗ ಗ್ರಾಮದ ರೈತ ಮಹಿಳೆ ಎತ್ತು ಖರೀದಿಸಿದ್ದಾರೆ.

ತವಗ ಗ್ರಾಮದಲ್ಲಿ ಬಸವ್ವ ಮತ್ತು ಶಿವಪ್ಪ ದಂಪತಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಬೇಸಾಯಕ್ಕಾಗಿ ಒಂದೇ ಎತ್ತು ಇತ್ತು. ಇದೀಗ ಗೃಹಲಕ್ಷ್ಮೀ ಯೋಜನೆ ಅಡಿ ಬಂದ 22 ಸಾವಿರ ರೂ. ಹಣದಿಂದ ಮತ್ತೊಂದು ಎತ್ತು ಖರೀದಿಸಿದ್ದಾರೆ.

ಮಕ್ಕಳಿಲ್ಲದ ಬಸವ್ವ, ಶಿವಪ್ಪ ದಂಪತಿ ಎತ್ತುಗಳನ್ನೇ ಮಕ್ಕಳಂತೆ ಸಾಕುತ್ತಿದ್ದಾರೆ. ಬಸವ್ವ ಮನೆಗೆ ಗೋಕಾಕ್ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಹಾಂತೇಶ್ ಕಡಾಡಿ ಭೇಟಿ ನೀಡಿ, ದಂಪತಿಗೆ ವೈಯಕ್ತಿಕವಾಗಿ ನೆರವು ನೀಡಿದರು. ಬೇಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ದಂಪತಿಗೆ ಅನುಕೂಲವಾಗಿದೆ.

LATEST NEWS

22ನೇ ವಯಸ್ಸಿಗೆ ಸಾಧನೆ; ಐಪಿಎಸ್ ಅಧಿಕಾರಿಯಾದ ಸಫಿನ್ ಹಸನ್

Published

on

ಮಂಗಳೂರು/ಗುಜರಾತ್ : ಸಫಿನ್ ಹಸನ್ 22ನೇ ವಯಸ್ಸಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಘಟನೆ ಗುಜರಾತ್‌ನ ಪಾಲನ್ ಪುರಿಯ ಕನೋದರ್‌ನಲ್ಲಿ ನಡೆದಿದೆ.

ಸಫಿನ್ ತಂದೆ-ತಾಯಿ ವಜ್ರ ಖನಿಜ ಕಂಪನಿಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದರೆ 2000 ದಲ್ಲಿ ತಂದೆ-ತಾಯಿ ಕೆಲಸವನ್ನು ಕಳೆದುಕೊಂಡ ಬಳಿಕ ಕುಟುಂಬ ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿ ಬಂತು. ಸಫಿನ್ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಲೆಯು ಅವರ 11 ಮತ್ತು 12 ನೇ ತರಗತಿಗಳ ಶುಲ್ಕವನ್ನು ಮನ್ನಾ ಮಾಡಿತ್ತು. ನಿತ್ಯ ಬೆಳಗ್ಗೆ ಸಫನ್ ತಾಯಿ ಬೇರೆಯವರ ಮನೆಗೆ ಅಡುಗೆ ಕೆಲಸಕ್ಕೆ ತೆರಳಿ, ತಂದೆ ಇಟ್ಟಿಗೆಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದರು.ಅಲ್ಲದೇ , ಪ್ರತೀ ರಾತ್ರಿ ವೇಳೆ ಅಂಗಡಿಯಲ್ಲಿ ಬೇಯಿಸಿದ ಮೊಟ್ಟೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕುಟುಂಬದವರು ಭೋಧನಾ ಶುಲ್ಕ ನೀಡಿದ ಕಾರಣ ಸಫೀನ್ ಇಂಜಿನಿಯರಿಂಗ್ ಪೋರ್ಣಗೊಳಿಸಿದರು.

ಚಿಕ್ಕ ವಯಸ್ಸಿನಿಂದಲೇ ದೊಡ್ಡ ಅಧಿಕಾರಿಯಾಗುವ ಕನಸು ಕಂಡಿದ್ದ ಸಫೀನ್, ಶಾಲಾ, ಕಾಲೇಜುಗಳಲ್ಲಿ ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದರು. 2017ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯಲು ಹೋಗುವಾಗ ದಾರಿ ಮಧ್ಯೆ ಭೀಕರ ಅಪಘಾತವಾಗಿ ಗಾಯಗೊಂಡಿದ್ದರೂ, ಎದೆಗುಂದದೆ ಪರೀಕ್ಷೆಗೆ ಹಾಜರಾಗಿದ್ದರು.

ತನ್ನ ಜೀವನದಲ್ಲಿ ಇಷ್ಟೆಲ್ಲಾ ಘಟನೆಗಳು ನಡೆದರೂ ದೃತಿಗೆಡದೆ ಸಫಿನ್ ಹಸನ್ 2018 ರಲ್ಲಿ 2ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದರು. ಶ್ರಮಕ್ಕೆ ಪ್ರತಿಫಲವಾಗಿ 570 ನೇ ರ್‍ಯಾಂಕ್ ಗಳಿಸಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ 2019ರ ಡಿಸೆಂಬರ್ 23ರಂದು ಜಾಮ್‌ನಗರ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು, ಇದೀಗ ಐಪಿಯಸ್ ಅಧಿಕಾರಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

Continue Reading

LATEST NEWS

ಬಾಂ*ಬ್ ಇದೆ ಎಂದು ಆಟೋ ಸಮೇತ ಠಾಣೆಗೆ ಬಂದ ಚಾಲಕ

Published

on

ಮಂಗಳೂರು/ಬೆಂಗಳೂರು : ‘ಬಾಂ*ಬ್ ಇದೆ’ ಎಂದು ಆಟೋ ಸಮೇತ ಠಾಣೆಗೆ ಬಂದ ಚಾಲಕನಿಂದ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಯಾರೋ ನನ್ನ ಆಟೋದಲ್ಲಿ ಬಾಂ*ಬ್​ ಇಟ್ಟಿದ್ದಾರೆ ಎಂದು ಆಟೋವನ್ನ ನೇರವಾಗಿ ಪೊಲೀಸ್ ಠಾಣೆಗೆ ತಂದ ಚಾಲಕನನ್ನು ಕಂಡು ಪೊಲೀಸರು ತಬ್ಬಿಬ್ಬಾಗಿದ್ದಾರೆ. ಈ ಘಟನೆ ನಡೆದಿರೋದು ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ.ತಕ್ಷಣ ಠಾಣೆ ಆವರಣದಿಂದ ಪೊಲೀಸರು ಹೊರಗೆ ಸಾಗಿಸಿದ್ದಾರೆ. ಖಾಲಿ ಮೈದಾನಕ್ಕೆ ಕೊಂಡೊಯ್ದು ಆಟೋವನ್ನು ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಬಾಂ*ಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಆಟೋದಲ್ಲಿ ಪ್ರಯಾಣಿಕರ ಬ್ಯಾಗ್ ಪತ್ತೆಯಾಗಿದೆ.  ಆಟೋ ಹಿಂದಿನ ಸೀಟ್ ನಲ್ಲಿ ಎರಡು ಚೀಲಗಳು ಪತ್ತೆಯಾಗಿದ್ದು, ಯಾರೋ ಚೀಲ ಇಟ್ಟು ಹೋಗಿದ್ದಾರೆ ಎಂದು ಆಟೋ ಚಾಲಕ ಆತಂಕ ವ್ಯಕ್ತಪಡಿಸಿದ್ದ.

ಬ್ಯಾಗ್ ನಿಂದಾದ ಎಡವಟ್ಟು :

ಆಟೋದಲ್ಲಿ ಯಾರೋ ಪ್ರಯಾಣಿಕರು ಬ್ಯಾಗ್ ಬಿಟ್ಟು ಹೋಗಿದ್ದರು. ಇದನ್ನ ಕಂಡು ಆತಂಕಕ್ಕೆ ಒಳಗಾಗಿದ್ದ ಆಟೋ ಚಾಲಕ, ಬಾಂ*ಬ್ ಎಂದು ಬ್ಯಾಗ್ ಸಮೇತ ಜಯನಗರ ಪೊಲೀಸ್ ಠಾಣೆಗೆ ಹೋಗಿದ್ದ. ಪರಿಶೀಲನೆ ನಡೆಸಿದಾಗ, ಬ್ಯಾಗ್ ನಲ್ಲಿ ಮಿಕ್ಸಿ ಹಾಗೂ ಡ್ರಿಲ್ಲಿಂಗ್ ಮಷಿನ್ ಬಳಸುವ ಆರ್ಮಿಚರ್ ಇರುವುದು ಪತ್ತೆಯಾಗಿದೆ. ಪರಿಶೀಲನೆ ನಡೆಸಿ ಪೊಲೀಸರು ನಿರಾಳರಾಗಿದ್ದಾರೆ. ಸದ್ಯ ಪರಿಶೀಲನೆ ನಡೆಸಿ ಆಟೋ ಚಾಲಕನನ್ನು ಪೊಲೀಸರು ವಾಪಾಸು ಕಳುಹಿಸಿದ್ದಾರೆ.

Continue Reading

LATEST NEWS

ಯುವ ಬಾಕ್ಸರ್‌ನಿಂದ ದಿಗ್ಗಜ ಮೈಕ್ ಟೈಸನ್‌ಗೆ ಸೋಲು !!

Published

on

20 ವರ್ಷದ ನಂತರ ಮತ್ತೆ ಅಖಾಡಕ್ಕೆ ಇಳಿದ ಬಾಕ್ಸಿಂಗ್ ಲೋಕದ ಲೆಜೆಂಡ್ ಮೈಕ್ ಟೈಸನ್ ಶನಿವಾರ ( ನ .16) ನಡೆದ ಜೇಕ್ ಪಾಲ್ ವಿರುದ್ಧದ ಪಂದ್ಯದಲ್ಲಿ 79-73 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.

2003ರಲ್ಲಿ ಮೈಕ್ ಟೈಸನ್ ಕೊನೆಯದಾಗಿ ಬಾಕ್ಸಿಂಗ್‌ ಪಂದ್ಯ ಗೆದ್ದಿದ್ದರು. 2004 ಮತ್ತು 2005ರಲ್ಲಿ ಸೋಲನುಭವಿಸಿದ ಬಳಿಕ ಬಾಕ್ಸಿಂಗ್‌ನಿಂದ ದೂರವುಳಿದಿದ್ದರು. ಅದಾದ ನಂತರ 20 ವರ್ಷಗಳ ಕಳೆದು  ಈಗ ಮತ್ತೆ ಬಾಕ್ಸಿಂಗ್‌ ರಿಂಗ್‌ಗೆ ಮರಳಿದ್ದ ಕಾರಣ ಈ ಪಂದ್ಯವನ್ನು ಬಹಳ ವಿಶೇಷವಾಗಿ ಪರಿಗಣಿಸಲಾಗಿತ್ತು

ಆರಂಭಿಕ ಸುತ್ತಿನಲ್ಲಿ ನಿಧಾನಗತಿಯಲ್ಲಿ ಆಡಿದ 58 ವರ್ಷದ ಟೈಸನ್ ಬಳಿಕ ಆಕ್ರಮಣಕಾರಿ ಪಂಚ್‌ಗಳ ಮೂಲಕ ಸತತವಾಗಿ ಅಂಕಗಳಿಸಿದರು. ಆದರೂ, ಅಂತಿಮವಾಗಿ 6 ಅಂಕಗಳ ಹಿನ್ನಡೆಯಿಂದ ಸೋಲನ್ನು ಅನುಭವಿಸಿದರು. ಗೆಲುವಿನ ಬಳಿಕ ಮಾತನಾಡಿದ 27 ವರ್ಷದ ಯುವ ಬಾಕ್ಸರ್ ಜೇಕ್ ಜೇಕ್ ಪಾಲ್, ‘ಇದು ಮರೆಯಲಾಗದ ಪಂದ್ಯವಾಗಿದ್ದು. “ನಾನು ಗೆದ್ದಿರಬಹುದು. ಆದರೆ ನನ್ನ ಪ್ರಕಾರ ಈ ಪಂದ್ಯವನ್ನು ಗೆದ್ದಿರುವುದು ಟೈಸನ್. ಏಕೆಂದರೆ ಅವರು ದಿಗ್ಗಜ ಬಾಕ್ಸರ್‌, ಇಷ್ಟು ವಯಸ್ಸಾಗಿದ್ದರೂ ಇಂತಹ ಒಳ್ಳೆಯ ಪ್ರದರ್ಶನ ನೀಡಿದ ಅವರ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು'” ಎಂದು ಹೇಳುವ ಮೂಲಕ ಟೈಸನ್‌ಗೆ ಗೌರವ ಸೂಚಿಸಿದರು.

ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವೆ ಒಟ್ಟು 8 ಸುತ್ತಿನ ಸ್ಫರ್ಧೆ ನಡೆದಿದ್ದು, ಪೌಲ್ ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರೇ, ಮೈಕ್ ಟೈಸನ್ ಕೇವಲ ಎರಡು ಸುತ್ತುಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಪೌಲ್ 10-9, 10-9, 9-10, 9-10, 9-10, 9-10, 9-10, 9-10 ಅಂಕಗಳಿಂದ ಜಯಭೇರಿ ಬಾರಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿಲು ಜೇಕ್​ ಪೌಲ್ ಬರೋಬ್ಬರಿ 40 ಮಿಲಿಯನ್​ ಡಾಲರ್​ (ರೂ.337 ಕೋಟಿ) ಪಡೆದುಕೊಂಡಿದ್ದು, ಟೈಸನ್ ರೂ.168 ಕೋಟಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Continue Reading

LATEST NEWS

Trending

Exit mobile version