LATEST NEWS
ಗೃಹಲಕ್ಷ್ಮಿ ಹಣ ಕೂಡಿಟ್ಟು ಶೌಚಾಲಯ ನಿರ್ಮಿಸಿದ ಮಹಿಳೆ
Published
22 hours agoon
By
NEWS DESK3ಮಂಗಳೂರು/ಮೈಸೂರು : ರಾಜ್ಯ ಸರಕಾರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2 ಸಾವಿರ ಹಣವನ್ನು ಕೂಡಿಟ್ಟು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ಮಹಿಳೆಯೊಬ್ಬರು ತಮ್ಮ ಖಾತೆಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಸ್ವಕ್ಷೇತ್ರವಾದ ವರುಣ ಚಿಕ್ಕಯ್ಯನ ಛತ್ರ ಹೋಬಳಿಯ ರಾಂಪುರ ಗ್ರಾಮದ ಮಂಜುಳಾ ಎಂಬ ಮಲಹಿಳೆಯೊಬ್ಬರು ತಮಗೆ ಬರುತ್ತಿದ್ದ ಗೃಹಲಕ್ಷ್ಮಿ ಹಣದಿಂದ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.
ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ತಮಗೆ ಹಾಗೂ ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ಗ್ರಾಮದಲ್ಲಿ ಮಹಿಳೆಯರು ಒಟ್ಟಾಗಿ ಕೂಡಿಕೊಂಡು ಗೃಹಲಕ್ಷ್ಮಿ ಹಣದಿಂದ ದೇವಸ್ಥಾನಕ್ಕೆ ರಥ, ಹಿಟ್ಟಿನ ಗಿರಣಿ, ಗ್ರಂಥಾಲಯ ನಿರ್ಮಿಸಿಕೊಟ್ಟ ಉದಾಹರಣೆಗಳು ಸಹ ಇದೆ.
ಇದನ್ನೂ ಓದಿ: ಮೇಲ್ಛಾವಣಿಯಿಂದ ವಿದ್ಯಾರ್ಥಿನಿಯನ್ನು ತಳ್ಳಿ ಹತ್ಯೆ ಮಾಡಿದ ಮಂಗಗಳು
ಇದೀಗ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಟೈಲರಿಂಗ್ ವೃತ್ತಿಯ ಮಂಜುಳಾ ಅವರಿಗೆ ಹೊಲಿಗೆ ಯಂತ್ರ ಖರೀದಿಸುವ ಉದ್ದೇಶದಿಂದ ಪ್ರತೀ ತಿಂಗಳು ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಗಳನ್ನು ಕೂಡಿಟ್ಟಿದ್ದರು.
ಈ ನಡುವೆ ಶೌಚಲಯವೇ ಕುಟುಂಬದ ಬಳಕೆಗೆ ಮುಖ್ಯ ಎಂಬುದನ್ನು ಅರಿತು ಆ ಹಣದಿಂದ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಡಿಸೆಂಬರ್‌ನಲ್ಲಿ ಗ್ರಾಮದಲ್ಲಿ ನಡೆದ ಶೌಚಾಲಯ ಬಳಕೆ ಜಾಗೃತಿ ಜಾಥಾ ಸ್ವಂತಕ್ಕೆ ಶೌಚಗೃಹ ಕಟ್ಟಿಸಿಕೊಳ್ಳಲು ಪ್ರೇರಣೆಯಾಯಿತು ಎಂದಿದ್ದಾರೆ.
LATEST NEWS
ಶಕ್ತಿ ವಿದ್ಯಾಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ
Published
31 minutes agoon
27/01/2025By
NEWS DESK4ಮಂಗಳೂರು : ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಸೂರಜ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹಾಗೂ ರುಪ್ಸಾ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಆದ ಡಾ.ಮಂಜುನಾಥ್ ರೇವಣ್ಕರ್ ನೇರವೇರಿಸಿದರು. ಡಾ.ಅಂಬೇಡ್ಕರ್ ಮತ್ತು ಡಾ.ರಾಜೇಂದ್ರ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ನಮ್ಮ ತಾಯ್ನಾಡು. ನಮ್ಮನ್ನು ಹೆತ್ತ ತಾಯಿ ಬೇರೆ ಬೇರೆಯಾಗಿದ್ದರೂ ನಮ್ಮೆಲ್ಲರನ್ನು ಹೊತ್ತು ಬೆಳೆಸುವ ತಾಯಿ ಈ ಭಾರತ ಮಾತೆ. ಈ ದೇಶದ ಒಳಿತಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಂದು ಮಗುವಿನಲ್ಲೂ ಒಂದು ಶಕ್ತಿ ಇದೆ. ಒಂದಲ್ಲ ಒಂದು ರೀತಿಯಲ್ಲಿ ಅದು ಅವನ ವ್ಯಕ್ತಿತ್ವದಲ್ಲಿ ತೋರುತ್ತದೆ. ಆ ಶಕ್ತಿಯೇ ಅವರನ್ನು ಮುಂದಕ್ಕೆ ಸಮಾಜದಲ್ಲಿ ಒಂದು ಸ್ಥಾನವನ್ನು ಗಳಿಸಲು ಪ್ರೇರೇಪಿಸುತ್ತದೆ ಎಂದರು.
ಇದನ್ನೂ ಓದಿ : ಪತಿಗೆ ಕಿರು*ಕುಳ, ಮಾನಸಿಕ ಹಿಂ*ಸೆ ನೀಡಿದ ಆರೋಪ; ಖ್ಯಾತ ಕಿರುತೆರೆ ನಟಿ ವಿರುದ್ಧ ಎಫ್‌ಐಆರ್
ಈ ಸಂದರ್ಭದಲ್ಲಿ ಎಸ್.ಜಿ.ಎಫ್.ಐ.ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಯ್ಕ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಿಯಾಂಕ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
LATEST NEWS
ವಾಷಿಂಗ್ ಮೆಷಿನ್‌ನಲ್ಲಿ ಕ್ಲೀನ್ ಆಗಿ ಬಟ್ಟೆಯ ಕೊಳೆ ಹೋಗಬೇಕಾ: ಹಾಗಾದರೆ ಇದನ್ನು ಬಳಸಿ ನಿಮಿಷಗಳಲ್ಲಿ ಸ್ವಚ್ಛವಾಗುತ್ತೆ..!
Published
53 minutes agoon
27/01/2025By
NEWS DESK2ಕೆಲವರು ಬಟ್ಟೆ ಒಗೆಯಲು ಹೆಣಗಾಡುತ್ತಾರೆ. ಏಕೆಂದರೆ ಅವರಿಗೆ ಬಟ್ಟೆ ಒಗೆಯುವುದಕ್ಕಿಂತ ಕಷ್ಟಕರವಾದ ಕೆಲಸ ಮತ್ತೊಂದಿಲ್ಲ. ಹಾಗಾಗಿ ಕೆಲ ಮಂದಿ ವಾಷಿಂಗ್ ಮಷಿನ್ ಬಳಸುತ್ತಾರೆ. ಆದರೆ ಬಟ್ಟೆ ತೊಳೆದ ನಂತರ ವಾಷಿಂಗ್ ಮೆಷಿನ್ ನಲ್ಲಿ ಕೆಟ್ಟ ವಾಸನೆ ಬರುವುದು, ಬಟ್ಟೆಯ ಮೇಲೆ ಕಲೆಗಳು, ಬಟ್ಟೆಯ ಮೇಲೆ ಬಿಳಿ ಗೆರೆ ಬೀಳುವುದು ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತದೆ.
ಸಮಸ್ಯೆ ಯಾವುದೇ ಇರಲಿ ಅದಕ್ಕೆ ಒಂದು ಪರಿಹಾರವಿದ್ದೆ ಇರುತ್ತದೆ. ಹಾಗಾಗಿ ವಾಷಿಂಗ್ ಮಷಿನ್ನಲ್ಲಿ ಎದುರಾಗುವ ಈ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ ಎಂಬುದರ ಕುರಿತಂತೆ ಒಂದು ಟಿಪ್ಸ್ ಇಲ್ಲಿದೆ.
ಜನರು ಸಾಮಾನ್ಯವಾಗಿ ಆಹಾರವನ್ನು ಬೆಚ್ಚಗಾಗಲು ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸುತ್ತಾರೆ, ಆದರೆ ನೀವು ಅದನ್ನು ಬಟ್ಟೆಗಳನ್ನು ತೊಳೆಯಲು ಸಹ ಬಳಸಬಹುದು. ಹೌದು, ಅಲ್ಯೂಮಿನಿಯಂ ಫಾಯಿಲ್‌ನಿಂದ ಚೆಂಡನ್ನು ತಯಾರಿಸಿ ವಾಷಿಂಗ್ ಮೆಷಿನ್‌ನಲ್ಲಿ ಹಾಕುವ ಮೂಲಕ ನೀವು ಸುಲಭವಾಗಿ ಬಟ್ಟೆಗಳನ್ನು ಸ್ವಚ್ಛಗೊಳಿಸಬಹುದಾಗಿದೆ.
ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ಒಗೆಯುವಾಗ, ಬಟ್ಟೆಗಳು ಸಾಮಾನ್ಯವಾಗಿ ಕುಗ್ಗುತ್ತವೆ, ಇದರಿಂದಾಗಿ ಹೊಸ ಬಟ್ಟೆಗಳು ಸಹ ಹಾಳಾಗುತ್ತವೆ. ಹಾಗೆಯೇ ಬಟ್ಟೆ ಒಗೆದ ನಂತರ ಇಸ್ತ್ರಿ ಮಾಡುವುದು ತುಂಬಾ ಕಷ್ಟ ಆದರೆ ಅಲ್ಯೂಮಿನಿಯಂ ಫಾಯಿಲ್ ಬಾಲ್ ಮಾಡಿ ವಾಷಿಂಗ್ ಮೆಷಿನ್ ಗೆ ಹಾಕಿದರೆ ಬಟ್ಟೆ ಹಾಳಾಗುವುದಿಲ್ಲ.
ತೊಳೆದ ನಂತರ ಬಟ್ಟೆಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಒಣಗಿಸಲು ಬಯಸಿದರೆ, ಇದಕ್ಕಾಗಿಯು ಸಹ ಅಲ್ಯೂಮಿನಿಯಂ ಫಾಯಿಲ್ ಅನ್ನು ಸಹ ಬಳಸಬಹುದು. ಬಟ್ಟೆಗಳನ್ನು ಒಣಗಿಸಲು, ನೀವು ಅದರ ಚೆಂಡುಗಳನ್ನು ತಯಾರಿಸಬಹುದು ಮತ್ತು ಅವುಗಳನ್ನು ತೊಳೆಯುವ ಯಂತ್ರದಲ್ಲಿ ಹಾಕಕಿದರೆ, ಬಟ್ಟೆಗಳನ್ನು ಬೇಗನೆ ಒಣಗುತ್ತದೆ.
ನೀವು ಈ ಟ್ರಿಕ್ ಅನ್ನು ಪದೇ ಪದೇ ಬಳಸಿದರೆ, ಅದು ವಾಷಿಂಗ್ ಮೆಷಿನ್ ಮತ್ತು ಬಟ್ಟೆಯನ್ನು ಹಾಳು ಮಾಡಬಹುದು, ಆದ್ದರಿಂದ ಹೆಚ್ಚು ಮಣ್ಣಾದ ಲಾಂಡ್ರಿಗಾಗಿ ಮಾತ್ರ ಅಲ್ಯೂಮಿನಿಯಂ ಫಾಯಿಲ್ ಬಳಸಿ.
LATEST NEWS
ಹೃದಯಾಘಾತದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾ*ವು
Published
1 hour agoon
27/01/2025By
NEWS DESK4ಮಂಗಳೂರು/ ಮೈಸೂರು : ಇತ್ತೀಚೆಗೆ ಹೃದಯಾ*ಘಾತ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರೂ ಹೃದಯಾ*ಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೊಂದು ದುರಂ*ತ ಸಂಭವಿಸಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬಳು ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿರುವ ಘಟನೆ ಪಿ ರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಸೋಮವಾರ(ಜ.27) ನಡೆದಿದೆ.
ಇದನ್ನೂ ಓದಿ : ಇದು ಸ್ಕ್ರಿಪ್ಟ್ ಶೋ…. ಬಿಗ್‌ಬಾಸ್ ಜರ್ನಿ ಬಗ್ಗೆ ಮೋಕ್ಷಿತಾ ಹೇಳಿದ್ದೇನು ಗೊತ್ತಾ ?
ನಾಗರಾಜ್, ವಸಂತ ದಂಪತಿಯ ಪುತ್ರಿ ದೀಪಿಕಾ(15) ಮೃ*ತ ವಿದ್ಯಾರ್ಥಿನಿ. ದೀಪಿಕಾ ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ದೀಪಿಕಾ ಅಸ್ವಸ್ಥಳಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
LATEST NEWS
ಪರೀಕ್ಷೆ ವೇಳೆ ಮುಟ್ಟು; ವಿದ್ಯಾರ್ಥಿನಿಯನ್ನು ಕೊಠಡಿಯಿಂದ ಹೊರ ಹಾಕಿದ ಪ್ರಾಂಶುಪಾಲ
ಇದು ಸ್ಕ್ರಿಪ್ಟ್ ಶೋ…. ಬಿಗ್‌ಬಾಸ್ ಜರ್ನಿ ಬಗ್ಗೆ ಮೋಕ್ಷಿತಾ ಹೇಳಿದ್ದೇನು ಗೊತ್ತಾ ?
ಪತಿಗೆ ಕಿರು*ಕುಳ, ಮಾನಸಿಕ ಹಿಂ*ಸೆ ನೀಡಿದ ಆರೋಪ; ಖ್ಯಾತ ಕಿರುತೆರೆ ನಟಿ ವಿರುದ್ಧ ಎಫ್‌ಐಆರ್
ಮೊಹಮ್ಮದ್ ಸಿರಾಜ್ ಹಾಗೂ ಝನಾಯಿ ಭೋಸ್ಲೆ ಡೇಟಿಂಗ್ ; ಫೋಟೋ ವೈರಲ್
ಕಿಚ್ಚ ಸುದೀಪ್ ಜೊತೆ ಬಿಗ್‌ಬಾಸ್ ಧ್ವನಿ ಪ್ರದೀಪ್ ಬಡೆಕ್ಕಿಲ ವಿದಾಯ
ತಡರಾತ್ರಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ; ಜಪ್ಪಿನಮೊಗರು ಬಳಿ ಹೊತ್ತಿ ಉರಿದ ಅಂಗಡಿ
Trending
- BIG BOSS5 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS7 days ago
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?
- BIG BOSS5 days ago
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ