ಮೈಸೂರು: ದುಡಿಯುವ ವಯಸ್ಸಿನಲ್ಲಿ ಪುಂಡ ಪೋಕರಿಯಂತೆ ಅಲೆಯುತ್ತಿದ್ದುದಕ್ಕೆ ಬೈಯುತ್ತಿದ್ದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ಕೊಂದು ಸುಟ್ಟು ಹಾಕಿ ಶವವನ್ನು ಮಣ್ಣಿನಡಿ ಹೂತ್ತಿಟ್ಟ ಭಯಾನಕ ಘಟನೆ ನಗರದ ಗಾಯತ್ರಿ ಪುರಂನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರು ನಗರದ ಗಾಯತ್ರಿ ಪುರಂ ನಿವಾಸಿ ಸುಪ್ರೀತ್ 23 ಬಂಧಿತ ಆರೋಪಿ. ಈತ ತನ್ನ ಅಜ್ಜಿ ಸುಲೋಚನಾ 75 ಅವರನ್ನು ಕೊಲೆಗೈದಿದ್ದ.
ಮನೆಯಲ್ಲಿ ಸದಾ ತನಗೆ ಕೆಲಸ ಇಲ್ಲದವನು ಎಂದು ಅಜ್ಜಿ ಬೈಯುತ್ತಿದ್ದಳು ಇದರಿಂದ ಬೇಸತ್ತು ಅಜ್ಜಿಯನ್ನು ಹೊಡೆದು ಸಾಯಿಸಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಬಾಕ್ಸ್ದಲ್ಲಿ ಹಾಕಿಕೊಂಡು ಕೆಆರ್ಎಸ್ ಹಿನ್ನೀರಿಗೆ ತೆಗೆದುಕೊಂಡು ಹೋಗಿದ್ದ ಕೆ.ಆರ್ ಎಸ್ ಹಿನ್ನೀರಿನ ನಿರ್ಜನ ಪ್ರದೇಶದಲ್ಲಿ ಅಜ್ಜಿ ಶವವನ್ನು ಒಂದು ಗುಂಡಿಯಲ್ಲಿ ಹಾಕಿ ಸುಟ್ಟು ಹಾಕಿದ್ದು,
ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಮೊಮ್ಮಗ ಸುಪ್ರಿತ್ ಸ್ಥಳದಿಂದ ಪರಾರಿಯಾಗಿದ್ದನು ಈ ಘಟನೆ ಕುರಿತಾಗಿ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರಣೆ ವೇಳೆ ತಿಳಿದ ಸತ್ಯಾಂಶ ಅರೆಬೆಂದ ಸ್ಥಿತಿಯಲ್ಲಿದ್ದ ಅಜ್ಜಿಯ ಶವ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಪೊಲೀಸರು ಗಾಯತ್ರಿಪುರಂ ಮನೆಗೆ ಬಂದು ತನಿಖೆ ಆರಂಭಿಸಿದಾಗ ಏನು ಗೊತ್ತಿಲ್ಲದಂತೆ ಇದ್ದ ಮೊಮ್ಮಗ ಸುಪ್ರಿತ್ನನ್ನು ವಶಕ್ಕೆ ಪಡೆದು ವಿಚಾರಿಸಿದ್ದರುಈ ವೇಳೆ ಮೊಮ್ಮಗ ಅಜ್ಜಿಯನ್ನು ಕೊಂದಿದ್ದು ತಾನೇ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ ಅಜ್ಜಿಯ ಅರೆಬೆಂದ ಶವ ಸಿಕ್ಕ ಅರು ದಿನದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು.
ಚೆನ್ನೈ: ತಿರುಪತಿಯಲ್ಲಿ ಟೋಕನ್ ವಿತರಣೆ ಕೇಂದ್ರದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಭಕ್ತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ.
ತಿರುಪತಿ ನಗರದ ಬೈರಾಗಿಪಟ್ಟೇಡದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.48 ಜನರು ಅಸ್ವಸ್ಥರಾಗಿದ್ದಾರೆ. ಗಾಯಾಳುಗಳನ್ನು ರುಯಾ ಮತ್ತು ಸ್ವಿಮ್ಸ್ಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಕಾಲ್ತುಳಿತ ಘಟನೆಯ ವಿರುದ್ಧ ಪ್ರಕರಣ ದಾಖಲಾಗಿದೆ. ನಾರಾಯಣವನಂ ತಹಸೀಲ್ದಾರ್ ಅವರ ದೂರಿನಂತೆ ಪೂರ್ವ ಪಿಎಸ್ನಲ್ಲಿ ಬಿಎನ್ಎಸ್ ಕಲಂ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವ ದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.
ಗುರುವಾರದಿಂದ ತಿರುಪತಿಯ 9 ಕೇಂದ್ರಗಳಲ್ಲಿ 94 ಕೌಂಟರ್ಗಳ ಮೂಲಕ ವೈಕುಂಠ ದರ್ಶನ ಟೋಕನ್ಗಳನ್ನು ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ. ನಿನ್ನೆ ಸಂಜೆ ಟೋಕನ್ಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಜನವರಿ 10, 11 ಮತ್ತು 12 ರಂದು ಮೊದಲ ಮೂರು ದಿನಗಳ ವೈಕುಂಠ ದ್ವಾರ ದರ್ಶನಕ್ಕಾಗಿ ಇಂದು ಬೆಳಗ್ಗೆ 1.20 ಲಕ್ಷ ಟೋಕನ್ಗಳನ್ನು ನೀಡಲು ಟಿಟಿಡಿ ನಿರ್ಧರಿಸಿದೆ.
ನಿಂಬೆಯ ಪರಿಮಳ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಸೌಂದರ್ಯದಿಂದ ಹಿಡಿದು ಆರೋಗ್ಯದವರೆಗೆ ನಿಂಬೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹಳ ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ನಿಂಬೆಹಣ್ಣನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಲಾಭಗಳಿವೆ? ಇಲ್ಲಿದೆ ಮಾಹಿತಿ.
ಫ್ರಿಡ್ಜ್ ನಲ್ಲಿ ಯಾವುದೇ ರೀತಿಯ ದುರ್ವಾಸನೆ ಇರುವುದಿಲ್ಲ:
ಸಾಮಾನ್ಯವಾಗಿ ಫ್ರಿಡ್ಜ್ ಶುಚಿತ್ವದ ವಿಷಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ಕೆಲವೊಮ್ಮೆ ದುರ್ವಾಸನೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನ ಸಮಯದಲ್ಲಿ ಈ ವಾಸನೆ ರೆಫ್ರಿಜರೇಟರ್ ನಲ್ಲಿ ಇರಿಸಲಾದ ಆಹಾರ ಪದಾರ್ಥಗಳಲ್ಲಿಯೂ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ವಾಸನೆಯ ಸಮಸ್ಯೆಯನ್ನು ನಿವಾರಿಸಲು ಸುಲಭವಾದ ಮಾರ್ಗವೆಂದರೆ ನಿಂಬೆಯನ್ನು ಎರಡು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್ ನಲ್ಲಿ ಇಡುವುದು. ಈ ರೀತಿ ಮಾಡುವುದರಿಂದ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಫ್ರಿಡ್ಜ್ ನಲ್ಲಿರುವ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ. ಇದು ಗಾಳಿಯನ್ನು ನೈಸರ್ಗಿಕವಾಗಿ ತಾಜಾ ಮತ್ತು ಪರಿಮಳಯುಕ್ತವಾಗಿರಿಸುತ್ತದೆ.
ಆಹಾರವನ್ನು ದೀರ್ಘಕಾಲದ ವರೆಗೆ ತಾಜಾವಾಗಿರಿಸುತ್ತದೆ:
ಹೆಚ್ಚಿನ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡಲಾಗುತ್ತದೆ. ಆದರೆ ರೆಫ್ರಿಜರೇಟರ್ ನಲ್ಲಿ ಇರಿಸಿದ ನಂತರವೂ ಕೆಲವು ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಅಂತಹ ಸಮಯದಲ್ಲಿ ನಿಂಬೆಯನ್ನು ದೀರ್ಘಕಾಲದ ವರೆಗೆ ತಾಜಾವಾಗಿಡಲು ಬಳಸಬಹುದು. ನಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ಆಹಾರ ಪದಾರ್ಥಗಳನ್ನು ದೀರ್ಘಕಾಲದ ವರೆಗೆ ಕೊಳೆಯದಂತೆ ರಕ್ಷಿಸುತ್ತವೆ ಮತ್ತು ಅವುಗಳನ್ನು ತಾಜಾವಾಗಿರಿಸುತ್ತವೆ. ಆದರೆ ರೆಫ್ರಿಜರೇಟರ್ ನಲ್ಲಿ ಇಡಲು ಯಾವಾಗಲೂ ತಾಜಾ, ಸ್ವಚ್ಛವಾದ ನಿಂಬೆಯನ್ನು ಮಾತ್ರ ಬಳಸಿ.
ಫ್ರಿಡ್ಜ್ ಗಾಳಿಯನ್ನು ನೈಸರ್ಗಿಕವಾಗಿ ಸ್ವಚ್ಛಮಾಡುತ್ತದೆ:
ನಿಂಬೆ ತುಂಡುಗಳನ್ನು ಫ್ರಿಡ್ಜ್ ನಲ್ಲಿ ಇಡುವ ಒಂದು ಪ್ರಯೋಜನವೆಂದರೆ ಅದು ನೈಸರ್ಗಿಕವಾಗಿ ಫ್ರಿಡ್ಜ್ ನಲ್ಲಿರುವ ಗಾಳಿಯನ್ನು ಶುದ್ಧೀಕರಿಸುತ್ತದೆ. ಏಕೆಂದರೆ ಇದು ಆಂಟಿ- ಆಕ್ಸಿಡೆಂಟ್ಗಳು ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಅಂಶಗಳು ಫ್ರಿಡ್ಜ್ ನಲ್ಲಿರುವ ಗಾಳಿಯನ್ನು ತಾಜಾವಾಗಿರಿಸುತ್ತದೆ. ಇದಲ್ಲದೆ, ಇದು ಆಹಾರವನ್ನು ಸೋಂಕಿನಿಂದ ರಕ್ಷಿಸುತ್ತದೆ. ಇದಲ್ಲದೆ, ನಿಂಬೆಯ ತುಂಡನ್ನು ಇಡುವುದು ಸೋಂಕು ಹರಡುವ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.
ಮಂಗಳೂರು/ಮುಂಬೈ : ಟೀಮ್ ಇಂಡಿಯಾ ಸ್ಪೀನ್ನರ್ ಯಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಸೆಲೆಬ್ರಿಟಿ ದಂಪತಿಗಳು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ.
ಚಾಹಲ್ ಮತ್ತು ಧನಶ್ರೀ ಇನ್ ಸ್ಟಾ ಗ್ರಾಮ್ ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದರು. ಚಾಹಲ್ ಅವರು ತಮ್ಮ ಪತ್ನಿಯೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಅಲ್ಲದೇ, ಚಹಾಲ್ ಅವರು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಮಾರ್ಮಿಕ ಪೋಸ್ಟ್ ಕೂಡ ವಿಚ್ಛೇದನದ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ.
ಕಠಿಣ ಪರಿಶ್ರಮವು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಜೀವನದ ಪ್ರಯಾಣ ನಿಮಗೆ ಮಾತ್ರ ಗೊತ್ತಿರುತ್ತದೆ. ನೀವೀಗ ಎತ್ತರದಲ್ಲಿದ್ದೀರಿ. ನಿಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಉಳಿಯಿರಿ ಎಂದು ಯಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದರೆ, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗುತ್ತದೆ.
ಇದುವರೆಗೂ ಧನಶ್ರೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕೊನೆಗೂ ಮೌನ ಮುರಿದಿರುವ ಧನಶ್ರೀ, ಇನ್ ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಂದ ತಾವು ಮಾನಸಿಕ ಯಾತನೆಯನ್ನು ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ ಕೆಲ ದಿನಗಳು ತುಂಬಾ ಕಠಿಣ ದಿನಗಳಾಗಿವೆ. ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷವನ್ನು ಹರಡುವ ಟ್ರೋಲ್ ಗಳಿಂದ ನನ್ನ ಗೌರವವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಹೆಸರುಗಳಿಸಲು ಮತ್ತು ಖ್ಯಾತಿಯನ್ನು ಪಡೆಯಲು ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನ ನನ್ನ ದೌರ್ಬಲ್ಯವಲ್ಲ. ಅದು ನನ್ನ ಶಕ್ತಿ. ನಕಾರಾತ್ಮಕತೆಯು ಆನ್ ಲೈನ್ ನಲ್ಲಿ ಸುಲಭವಾಗಿ ಹರಡುತ್ತದೆ. ಇದು ಇತರರನ್ನು ಮೇಲಕ್ಕೆತ್ತಲು ಧೈರ್ಯ ನೀಡುತ್ತದೆ.
ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಪುರಾವೆಗಳಿಲ್ಲದಿದ್ದರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ… ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಬೆನ್ನಲ್ಲೇ ಮತ್ತೆ ಧನಶ್ರೀ ವರ್ಮಾ ಹಾಗೂ ಯುಜ್ವೇಂದ್ರ ಚಹಲ್ ನಡುವಣ ಸಂಬಂಧದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.
ಅಂದಹಾಗೆ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಾಲ್ಕು ವರ್ಷಗಳ ವೈಯಕ್ತಿಕ ಜೀವನದ ಬಳಿಕ ಇಬ್ಬರು ಬೇರ್ಪಡುತ್ತಿದ್ದಾರೆ ಎಂಬ ಊಹಾಪೋಹಗಳು ಕೂಡ ಹರಡಿವೆ.