Connect with us

LATEST NEWS

ಉಡುಪಿ: ರಸ್ತೆ ನಿರ್ಮಾಣ ವಿರೋಧಿಸಿದ ಮಹಿಳೆ ಮೇಲೆ ಪಂಚಾಯತ್ ಸದಸ್ಯನಿಂದ ಗಂಭೀರ ಹಲ್ಲೆ

Published

on

ಉಡುಪಿ: ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಹಿಳೆ ಮೇಲೆ ಹಲ್ಲೆ ನಡೆಸಿ ನೆಲಕ್ಕೆ ದೂಡಿ ಗಂಭೀರ ಗಾಯಗೊಳಿಸಿದ ಘಟನೆ ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ನಡೆದಿದೆ.


ಆರತಿಯವರಿಗೆ ಸೇರಿದೆ ಎನ್ನಲಾದ ಪಟ್ಟಾ ಜಾಗದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್‌ ವಿರೋಧದ ನಡುವೆಯೂ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ತಯಾರು ನಡೆಸಿದ್ದರು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿಗೆ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದಾಗ ಪಂಚಾಯತ್‌ ಸದಸ್ಯ ರತ್ನಾಕರ್‌ ಶೆಟ್ಟಿ ಮಹಿಳೆ ಮೇಲೆ ಮೊದಲು ಹಲ್ಲೆ ನಡೆಸಿದ್ದಾರೆ.

ತಕ್ಷಣವೇ ಕೋಪಗೊಂಡ ಮಹಿಳೆ ಕಾಲಲ್ಲಿದ್ದ ಚಪ್ಪಲಿಯಿಂದ ತಿರುಗಿ ಹೊಡೆದಿದ್ದಾರೆ. ಈ ವೇಳೆ ಪಂಚಾಯತ್‌ ಸದಸ್ಯ ರತ್ನಾಕರ್‌ ಶೆಟ್ಟಿ ಈಶ್ವರನಗರ ಮತ್ತು ಮನೆ ಪಕ್ಕದ ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಆರತಿಯವರನ್ನು ತಳ್ಳಿದ್ದಾರೆ.

ಈ. ವೇಳೆ ಮಹಿಳೆಯ ತಲೆಗೆ ಗಾಯವಾಗಿದೆ. ಆರತಿ ಅವರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

LATEST NEWS

ಇಸ್ರೋ ಅಧ್ಯಕ್ಷರಾಗಿ ವಿ. ನಾರಾಯಣನ್ ನೇಮಕ

Published

on

ಮಂಗಳೂರು/ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷರನ್ನಾಗಿ ವಿ. ನಾರಾಯಣನ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಇಸ್ರೋ ಹಾಲಿ ಅಧ್ಯಕ್ಷ ವಿ. ಸೋಮನಾಥ್ ಅವರಿಂದ ಅಧಿಕಾರವನ್ನು ನಾರಾಯಣನ್ ಅವರು ಜ. 14ರಂದು ವಹಿಸಿಕೊಳ್ಳಲಿದ್ದಾರೆ.

ಕೇಂದ್ರ ಸಂಪುಟದ ನೇಮಕಾತಿಗಳ ಸಮಿತಿಯು ನಾರಾಯಣನ್ ಅವರನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇಸ್ರೋ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಇದನ್ನೂ ಓದಿ: ಚೀನಾ ಸೈನಿಕರ ಕಾಲರ್ ನಲ್ಲಿ ಗುಂಡು ಪಿನ್ ಏಕಿದೆ ಗೊತ್ತಾ ?

ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳ ಸಂಚಲನೆಯ ವಿಷಯ ಪರಿಣಿತರಾಗಿರುವ ನಾರಾಯಣನ್ ಅವರು ಸದ್ಯ ಕೇರಳದ ತಿರುವನಂತಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋದ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್’ ನ (LPSC) ನಿರ್ದೇಶಕರಾಗಿ 2018ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Continue Reading

International news

ಚೀನಾ ಸೈನಿಕರ ಕಾಲರ್ ನಲ್ಲಿ ಗುಂಡು ಪಿನ್ ಏಕಿದೆ ಗೊತ್ತಾ ?

Published

on

ಮಂಗಳೂರು/ಬೀಜಿಂಗ್ : ಸಾಮಾನ್ಯವಾಗಿ ಭಾರತೀಯ ಸೇನೆ ಮತ್ತು ಚೀನಾ ಸೇನೆಯ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಚೀನಾದ ಸೈನಿಕರ ತರಬೇತಿಯಲ್ಲಿ, ಯೋಧರ ಕೊರಳಪಟ್ಟಿಗಳ ಮೇಲೆ ಗುಂಡು ಪಿನ್ ಗಳನ್ನು ಅಂಟಿಸಿರುವುದು, ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.

ಮಿಲಿಟರಿ ಸೇವೆಯಲ್ಲಿ ಸೈನಿಕರು ನಡೆಯುವ ರೀತಿ, ಚಲಿಸುವ ಅಥವಾ ನಿಂತಿರುವ ರೀತಿಯಲ್ಲಿ ವಿಶೇಷ ಗಮನ ಹರಿಸುತ್ತಾರೆ. ಸೈನಿಕರು ತಮ್ಮ ಎದೆಯನ್ನು ಮೇಲಕ್ಕೆತ್ತಿ, ಕುತ್ತಿಗೆಯನ್ನು ನೇರವಾಗಿ ಮತ್ತು ಕೈಗಳನ್ನು ನೇರವಾಗಿ ನಿಲ್ಲಬೇಕು ಎಂಬ ನಿಯಮ ಇದೆ. ಈ ನಿಯಮ ಚೀನಾದ ಸೇನೆಯಲ್ಲೂ ಇದೆ.

ಚೀನಾದ ಸೈನಿಕರ ಸಮವಸ್ತ್ರದ ಕೊರಳಪಟ್ಟಿಗಳ ಮೇಲೆ ಗುಂಡುಪಿನ್ ಗಳನ್ನು ಅಂಟಿಕೊಂಡಿರುವ ರೀತಿಯಲ್ಲಿ ಇರಿಸಲಾಗುತ್ತದೆ. ಇದಕ್ಕೆ ಒಂದು ಕಾರಣವೂ ಇದೆ. 2009ರಲ್ಲಿ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿತ್ತು. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ಗಟ್ಟಿಯಾಗಿರಿಸಲು ಈ ರೀತಿಯಾಗಿ ಪಿನ್ ಗಳನ್ನು ಧರಿಸುತ್ತಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ

ಕುತ್ತಿಗೆಯನ್ನು ಬಾಗಿಸಿದಾಗ ಪಿನ್ ಗಳು ಕುತ್ತಿಗೆಗೆ ಚುಚ್ಚುವ ರೀತಿಯಲ್ಲಿ ಕಾಲರ್ ನಲ್ಲಿ ಇರಿಸಲಾಗಿದೆ. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ನೇರವಾಗಿರಿಸಲು ಈ ರೀತಿ ಮಾಡಲಾಗುತ್ತದೆ. ಅಲ್ಲದೆ, ಸದಾ ಅಲರ್ಟ್ ಆಗಿರಲು ಈ ರೀತಿ ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಪರೇಡ್ ಸಂದರ್ಭಗಳಲ್ಲಿ ಅನುಸರಿಸಲಾಗುತ್ತದೆ.

ಪ್ರತಿಯೊಬ್ಬ ಸೈನಿಕನಿಗೂ ಈ ವಿಧಾನ ಅನ್ವಹಿಸುವುದಿಲ್ಲ. ಬದಲಾಗಿ ಕುತ್ತಿಗೆ ನೇರವಾಗಿರಿಸದ ಸೈನಿಕರಿಗೆ ಇದನ್ನು ಬಳಸುತ್ತಾರೆ ಮತ್ತು ಇದರಿಂದ ಅವರ ಭಂಗಿಯನ್ನು ಸರಿಪಡಿಸಲಾಗುತ್ತದೆ.

Continue Reading

DAKSHINA KANNADA

ಜ.10 ರಂದು ಡೊಂಗರಕೇರಿ ವೆಂಕಟರಮಣ ದೇವಳದಲ್ಲಿ ವೈಕುಂಠ ಏಕಾದಶಿ

Published

on

ಮಂಗಳೂರು :  ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10 ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು  ಎಂದು ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು, ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ  ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಮಹಾಕುಂಭ ಮೇಳಕ್ಕೆ ನಾಗಾಸಾಧುಗಳ ಗ್ರ್ಯಾಂಡ್ ಎಂಟ್ರಿ..!

ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತನಾಡಿ, ಅಂದು ಬೆಳಗ್ಗೆ 7 ರಿಂದ 8ರ ವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ರಿಂದ 3ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ  ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ವಿನಾಯಕ ಶೇಟ್, ಸಾಯಿದತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

 

Continue Reading

LATEST NEWS

Trending

Exit mobile version