ಉಳ್ಳಾಲ: ಅಕ್ರಮ ಮರಳು ದಾಸ್ತಾನಿರಿಸಿದ ಪ್ರದೇಶಕ್ಕೆ ದಾಳಿ ನಡೆಸಿದ ತಹಸೀಲ್ದಾರ್ ನೇತೃತ್ವದ ತಂಡ ಎರಡು ಲೋಡ್ ಮರಳನ್ನು ವಶಪಡಿಸಿಕೊಂಡಿದೆ.
ಅಂಬ್ಲಮೊಗರು ಗ್ರಾಮದ ಕುಂಡೂರು ಮಸೀದಿ ಬಳಿ ದಾಸ್ತಾನಿರಿಸಿದ ಮರಳು ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ತಹಸೀಲ್ದಾರ್ ಡಿ.ಎ ಪುಟ್ಟರಾಜು ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಹೆಚ್, ಪಿಡಿಓ ರವೀಂದ್ರ ನಾಯಕ್, ಗ್ರಾಮಕರಣಿಕೆ ನಯನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.