LATEST NEWS
ಸರ್ಕಾರಿ ಉದ್ಯೋಗಿಗಳೇ ಬಿಪಿಎಲ್ ಕಾರ್ಡ್ ನಿಮ್ಮ ಬಳಿ ಇದೆಯಾ ? ಇದನ್ನೊಮ್ಮೆ ಓದಿ ..
Published
5 hours agoon
ಈಗಾಗಲೇ ಕರ್ನಾಟಕ ಸರ್ಕಾರ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ನಡೆಸುತ್ತಿದ್ದು, ಬಿಪಿಎಲ್ ಕಾರ್ಡ್ (BPL Card) ಪಡೆಯುವ ಅರ್ಹತೆ ಷರತ್ತುಗಳ ಆಧಾರದಲ್ಲಿ ಸರ್ಕಾರೀ ನೌಕರರು, ತೆರಿಗೆದಾರರ ಬಳಿ ಬಿಪಿಎಲ್ ಇದ್ದರೆ ಅದನ್ನು ಎಪಿಎಲ್ ಗೆ ವರ್ಗಾಯಿಸುವ ಕೆಲಸ ಮಾಡುತ್ತಿದೆ. ಅಂತೆಯೇ ಈ ನಡುವೆ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರೀ ನೌಕರರಿಗೆ ಬಿಗ್ ಶಾಕ್ ಸಿಕ್ಕಿದೆ.
ಸರ್ಕಾರದ ಮಾನದಂಡದ ಪ್ರಕಾರ ಸರ್ಕಾರೀ ನೌಕರರು, ತೆರಿಗೆ ಪಾವತಿ ಮಾಡುವವರಿಗೆ ಬಿಪಿಎಲ್ ಕಾರ್ಡ್ ರದ್ದಾಗಿದೆ. ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿದ್ದ ನೌಕರರ ರೇಷನ್ ಕಾರ್ಡ್ ನ್ನು ಎಪಿಎಲ್ ಗೆ ವರ್ಗಾಯಿಸಿರುವುದಲ್ಲದೆ ದಂಡದ ಬರೆ ನೀಡಿದೆ.
ಇನ್ನು ಇದುವರೆಗೆ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 4,12, 890 ರೂ. ದಂಡ ವಿಧಿಸಲಾಗಿದೆ ಹಾಗೂ ಸುಮಾರು 72 ಸರ್ಕಾರಿ ನೌಕರರಿಗೆ ದಂಡ ವಿಧಿಸಲಾಗಿದೆ. ಒಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಅರ್ಹತೆ ಇರುವ ಬಡವರಿಗೆ ಮಾತ್ರ ಲಭಿಸುವಂತಾಗಬೇಕು. ಬಿಪಿಎಲ್ ಕಾರ್ಡ್ ಮೂಲಕ ಅನರ್ಹರೂ ಉಚಿತ ಯೋಜನೆಗಳ ಲಾಭ ಪಡೆಯುತ್ತಿದ್ದರೆ ಅದು ಸರ್ಕಾರಕ್ಕೆ ನಷ್ಟ ಉಂಟು ಮಾಡಲಿದೆ.
bangalore
ಆನ್ ಲೈನ್ ಗೇಮಿಂಗ್ ಹುಚ್ಚಿಗೆ ಬ*ಲಿಯಾದ ಯುವಕ !
Published
36 minutes agoon
04/12/2024By
NEWS DESK3ಮಂಗಳೂರು/ಬೆಂಗಳೂರು: ಆನ್ ಲೈನ್ ಗೇಮಿಂಗ್ ಹುಚ್ಚು ಜಾಸ್ತಿಯಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ಗೃಹಿಣಿಯರು, ಸೆಲೆಬ್ರಿಟಿಗಳು ಹೀಗೆ ಎಷ್ಟೋ ಮಂದಿ ಹಣದೊಂದಿಗೆ ಜೀವವನ್ನು ಕಳೆದುಕೊಂಡ ಹಲವು ಕೇಸುಗಳು ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಿರ್ದೇಶಕ ಗುರುಪ್ರಸಾದ್ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನ್ ಲೈನ್ ಗೇಮಿಂಗ್ ನಿಂದ ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ವಂಚನೆಗೆ ಬಲಿ*ಯಾಗುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.
ಇದನ್ನೂ ಓದಿ: ಹತ್ತು ನಿಮಿಷದಲ್ಲಿ 2.63 ಕೋಟಿಗೆ ಬ್ರಾಡ್ಮನ್ ಕ್ಯಾಪ್ ಹರಾಜು !
ಈಗ ಇಂಥದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪ್ರವೀಣ್ ಎಂಬ 19 ವರ್ಷದ ಯುವಕ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾಗಿದ್ದಾನೆ. ಕಳೆದ ಹತ್ತು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರವೀಣ್ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸ ಇದ್ದ. ಕಾಲೇಜಿಗೆ ಹೋಗೋದು ಬಿಟ್ಟು ಯಾವಾಗಲೂ ಗೇಮ್ ಆಡುತ್ತಿದ್ದ. ಆನ್ ಲೈನ್ ಗೇಮ್ ಆಡಲು ಬಹಳ ಸಾಲ ಮಾಡಿಕೊಂಡಿದ್ದ. ಗೆದ್ರೂ ಆ ಹಣವನ್ನು ಸಾಲಗಾರರೇ ತೆಗೆದುಕೊಳ್ಳುತ್ತಿದ್ರು. ಹೀಗಾಗಿ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಪ್ರವೀಣ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆ.ಆರ್ ಪುರಂ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಆನ್ ಲೈನ್ ಗೇಮ್ ಭೂತ ಹೊಕ್ಕು ಆತನ ಜೀವವನ್ನೆ ಕಿತ್ತುಕೊಂಡಿದೆ. ಆನ್ ಲೈನ್ ಮೂಲಕ ಆಟವಾಡಿ ಹಣವನ್ನು ಕಳೆದುಕೊಂಡು ನಂತರ ಸಾಲ ಮಾಡುತ್ತಾರೆ. ಸಾಲಗಾರರ ಕಾಟ ತಡೆಯಲಾಗದೇ ಆತ್ಮಹತ್ಯೆಗೆ ಬ*ಲಿಯಾಗುತ್ತಿದ್ದಾರೆ.
LATEST NEWS
ಪುತ್ರಿ ಸಾರಾಗೆ ಹೊಸ ಜವಾಬ್ದಾರಿ ವಹಿಸಿದ ಸಚಿನ್ ತೆಂಡೂಲ್ಕರ್
Published
1 hour agoon
04/12/2024By
NEWS DESK4ಮಂಗಳೂರು/ ಮುಂಬೈ : ಸಚಿನ್ ತೆಂಡೂಲ್ಕರ್ ತಮ್ಮ ಪುತ್ರಿ ಸಾರಾ ತೆಂಡೂಲ್ಕರ್ ಹೆಗಲಿಗೆ ಹೊಸ ಜವಾಬ್ದಾರಿ ಹೊರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಷನ್(ಎಸ್‌ಟಿಎಫ್) ನಿರ್ದೇಶಕಿಯಾಗಿ ಸಾರಾ ತೆಂಡೂಲ್ಕರನ್ನು ನೇಮಕ ಮಾಡಿದ್ದಾರೆ.
ಈ ಕುರಿತು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಾರಾ ಯೂನಿವರ್ಸಿಟಿ ಕಾಲೇಜು ಲಂಡನ್‌ನಲ್ಲಿ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕ್ರೀಡೆ, ಆರೋಗ್ಯ ಮತ್ತ ಶಿಕ್ಷಣ ಕ್ಷೇತ್ರದ ಮೂಲಕ ಭಾರತವನ್ನು ಸಶಕ್ತಗೊಳಿಸಲು ಆಕೆ ಪ್ರಯಾಣವನ್ನು ಪ್ರಾರಂಭಿಸಿದಾಗ ಜಾಗತಿಕ ಕಲಿಕೆಯು ಹೇಗೆ ಪರಿಪೂರ್ಣತೆಗೆ ತಲುಪಿದೆ ಎಂಬುದನ್ನು ನೆನಪಿಸುತ್ತದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ : WATCH VIDEO : ಬೆಂಕಿ ಉಂಡೆಯಾಗಿ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹ
2019ರಲ್ಲಿ ಸಚಿನ್ ತೆಂಡೂಲ್ಕರ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿತ್ತು.
LATEST NEWS
WATCH VIDEO : ಬೆಂಕಿ ಉಂಡೆಯಾಗಿ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹ
Published
2 hours agoon
04/12/2024By
NEWS DESK4ಮಂಗಳೂರು/ರಷ್ಯಾ : ಆಗೊಮ್ಮೆ ಈಗೊಮ್ಮೆ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಘಟನೆಗಳು ನಡೆಯುತ್ತಿರುತ್ತವೆ. 2024 ರಲ್ಲಿ ಈಗಾಗಲೇ ಮೂರು ಕ್ಷುದ್ರಗ್ರಹಗಳು ಈ ರೀತಿ ಭೂಮಿಗೆ ಬಂದು ಅಪ್ಪಳಿಸಿವೆ. ಇದೀಗ ರಷ್ಯಾದ ಅರಣ್ಯ ಪ್ರದೇಶಕ್ಕೆ ಕ್ಷುದ್ರಗ್ರಹ COWEPC5, ಕೇವಲ 70 ಸೆಂ ವ್ಯಾಸದಲ್ಲಿ, ರಷ್ಯಾದ ಯತ್ಸ್ಯ ಎಂಬ ಪ್ರದೇಶದ ಮೇಲೆ ಬಿದ್ದಿದೆ. ಈ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ಯಾಕುಟಿಯಾದ ಆಕಾಶದಲ್ಲಿ ಕ್ಷುದ್ರಗ್ರಹವು ಬೃಹತ್ ಬೆಂಕಿಯ ಉಂಡೆಯಂತೆ ಕಾಣಿಸಿಕೊಂಡಿತು. ಇದು ಭೂಮಿಗೆ ಅಪ್ಪಳಿಸುವ ಕೇವಲ ಹನ್ನೆರಡು ಘಂಟೆಗಳ ಮೊದಲು ವಿಜ್ಞಾನಿಗಳು ಇದರ ದಿಕ್ಕು ಬದಲಾಯಿಸಿದ್ದಾರೆ. ಹೀಗಾಗಿ ಇದು ರಷ್ಯಾದ ಯತ್ಸ್ಯ ಎಂಬ ಪ್ರದೇಶದಲ್ಲಿನ ಅರಣ್ಯ ಪ್ರದೇಶಕ್ಕೆ ಬಿದ್ದಿದೆ.
ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ !!
ಬೆಂ*ಕಿ ಉಂಡೆಯಂತೆ ವೇಗವಾಗಿ ಬಂದ ಈ ಕ್ಷುದ್ರಗ್ರಹ ಬೇರೆ ಬೇರೆ ಕಡೆಗಳಲ್ಲಿ ಕ್ಯಾಮರಾ ಕಣ್ಣಿನಲ್ಲಿ ಕಾಣಿಸಿಕೊಂಡಿದೆ. ನಿನ್ನೆ ಅಪ್ಪಳಿಸಿದ ಕ್ಷುದ್ರಗ್ರಹವು ಈ ಹಿಂದೆ ಪತ್ತೆಯಾದ 2022 WJ, 2023 CX1 ಮತ್ತು 2024 BX1 ಅನ್ನು ಹೋಲುತ್ತದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ . ಇವೆಲ್ಲವೂ ವಾತಾವರಣಕ್ಕೆ ಪ್ರವೇಶಿಸಿದ ತಕ್ಷಣ ದೊಡ್ಡ ಬೆಳಕನ್ನು ಉತ್ಪಾದಿಸುತ್ತವೆ. ನಾಸಾ ಮತ್ತು ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಈ ಕ್ಷುದ್ರಗ್ರಹವನ್ನು ಗುರುತಿಸಿ ಅದರ ಪಥ ಬದಲಾಯಿಸಿ ಬಹುದೊಡ್ಡ ಅಪಾಯವನ್ನು ತಪ್ಪಿಸಿದೆ.
LATEST NEWS
ಎಂ.ಆರ್.ಪಿ.ಎಲ್ ನಿಂದ ಶಿಕ್ಷಣಕ್ಕೆ ಪೂರಕ ಗೋಡೆ ಬರಹ…!!
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ನಾಳೆ ಪ್ರಮಾಣ ವಚನ ಸ್ವೀಕಾರ
12ನೇ ತರಗತಿ ವಿದ್ಯಾರ್ಥಿಯಿಂದ ಮನುಷ್ಯರನ್ನೇ ಹೊತ್ತೊಯ್ಯುವ ಡ್ರೋನ್ ಆವಿಷ್ಕಾರ !!
ಭಟ್ರಕುಮೇರು : ಡಿ.8 ರಂದು ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ
16 ವರ್ಷದ ಬಾಲಕನನ್ನು ಮದುವೆಯಾದ ಶಿಕ್ಷಕಿ !
ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ
Trending
- BANTWAL6 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM5 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru7 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS6 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !