Saturday, May 21, 2022

ಪದ್ಮಶ್ರೀ ಸುಕ್ರಜ್ಜಿಯ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ: ಸಚಿವ ಕೋಟಾ

ಮಂಗಳೂರು: ಅನಾರೋಗ್ಯದ ಕಾರಣದಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಿಂದ ಜನರಲ್ ವಾರ್ಡ್ ಗೆ ಶಿಫ್ಟ್ ಆಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರೀ ಬೊಮ್ಮೆಗೌಡ ಅವರನ್ನು ಹಿಂದುಳಿದ ವರ್ಗ ಹಾಗು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.


ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಬೊಮ್ಮೆಗೌಡರ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಸರ್ಕಾರದಿಂದ ಭರಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಸುಕ್ರಿ ಬೊಮ್ಮೆ ಗೌಡರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ,ಅವರ ಆರೋಗ್ಯವನ್ನು ನೋಡಿಕೊಳ್ಳುವಂತೆ ಸೂಚನೆ ನೀಡಿದ್ದರು.

ಜೊತೆಗೆ ಅವರ ಆಸ್ಪತ್ರೆಯ ಎಲ್ಲ ಖರ್ಚು ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ ಎಂಬ ಮಾಹಿತಿಯನ್ನು ಸುಕ್ರೀ ಬೊಮ್ಮೆ ಗೌಡ ಹಾಗು ಅವರ ಕುಟುಂಬಸ್ಥರಿಗೆ ನೀಡಲಾಗಿದೆ ಎಂದರು.

ಈ ಸಂದರ್ಭ ಸಚಿವರೊಂದಿಗೆ ಮಾತನಾಡಿದ ಸುಕ್ರೀ ಬೊಮ್ಮೆಗೌಡ ಅವರು ಆಸ್ಪತ್ರೆ ಹಾಗು ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋದ ಬಳಿಕ ಸಚಿವರು ಹಾಗು ಸಂಬಂಧಿಸಿದ ಎಲ್ಲರೂ ತಮ್ಮ ಮನೆಗೆ ಭೇಟಿ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಆಸ್ಪತ್ರೆ ಪ್ರಮುಖರು, ವೈದ್ಯ ಸಿಬ್ಬಂದಿಗಳು,ಸುಕ್ರಿ ಬೊಮ್ಮೆ ಗೌಡ ಸಂಬಂಧಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿತ: ಸಂಕಷ್ಟದಲ್ಲಿ 10 ಸಾವಿರ ಯಾತ್ರಿಕರು

ಬಂದಾರ್: ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾದ ಉತ್ತರಾಖಂಡ್‌ನ ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.ಮೂಲಗಳ...

‘ಶಿವಲಿಂಗ’ ಪತ್ತೆ ಕುರಿತಂತೆ ಆಕ್ಷೇಪಾರ್ಹ ಪೋಸ್ಟ್: ದೆಹಲಿ ವಿವಿ ಪ್ರಾಧ್ಯಾಪಕನ ಬಂಧನ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ 'ಶಿವಲಿಂಗ' ಪತ್ತೆ ಕುರಿತಂತೆ ಹೇಳಿಕೆಗಳನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ನಿನ್ನೆ ರಾತ್ರಿ ದೆಹಲಿಯ ಉತ್ತರ...

ಮಂಗಳೂರು: ಮೇ.27ರಂದು ಅಭ್ಯರ್ಥಿಗಳಿಗೆ ನೇರ ಸಂದರ್ಶನ

ಮಂಗಳೂರು: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನವನ್ನು ಇದೇ ಮೇ.27ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಗಂಟೆಯಿಂದ ಆಯೋಜಿಸಲಾಗಿದೆ.ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಯಾವುದೇ...