Connect with us

  LATEST NEWS

  ಸರ್ಕಾರದ ಕೋವಿಡ್‌ ರೂಲ್ಸ್‌- ಸೊಂಟದಲ್ಲಿ ಗಂಟು ಕಟ್ಟಿದ ಲುಂಗಿ, ಕೆಳಗೆ ಪೂರ್ತಿ ಬಿಟ್ಟಂತಿದೆ..!

  Published

  on

  ಮಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಮತ್ತು ನೈಟ್‌ ಕರ್ಪ್ಯೂ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಇದರಿಂದ ಸಾಮಾನ್ಯ ಜನ, ಉದ್ಯಮಿಗಳು ಅದರಲ್ಲೂ ದುಡಿದು ತಿನ್ನುವ ಜನ ಕಂಗಾಲಾಗಿದ್ದಾರೆ.

  ರಾಜ್ಯದ ಕೆಲವು ಜಿಲ್ಲೆ ಹಾಗೂ ನಗರಗಳಲ್ಲಿ ಹೊರತುಪಡಿಸಿ ಹಲವೆಡೆ ಕೋವಿಡ್‌ ಪ್ರಮಾಣ ಜಾಸ್ತಿ ಇಲ್ಲ. ಆದರೆ ರಾಜ್ಯ ಸರ್ಕಾರ ತನ್ನ ಮೂಗಿನ ನೇರಕ್ಕೆ ನಿಯಮಾವಳಿ ಮಾಡುತ್ತಿದೆಯೇ ಎಂಬ ಬಗ್ಗೆ ಆರೋಪ ಕೇಳಿಬಂದಿದೆ.

  ಕರಾವಳಿಯ ಸಚಿವ ಶಾಸಕರ ಬಾಯಿ ಮುಚ್ಚಿ ಕೈಕಟ್ಟಿದ ಪರಿಸ್ಥಿತಿಯೇ?
  ಕಳೆದ ಎರಡು ವರ್ಷಗಳಿಂದ ಕರೋನಾ ಕರಿನೆರಳಿನಲ್ಲಿ ಬೆಂದು ಬರಡಾಗಿದ್ದ ರಾಜ್ಯದ ವಾಣಿಜ್ಯ ಹೆಬ್ಬಾಗಿಲು ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಈಗ ತಾನೆ ತೆರೆದುಕೊಳ್ಳುತ್ತಿದೆ. ಇದರ ಜೊತೆ ತುಳುನಾಡಿನ ಧಾರ್ಮಿಕ ಆಚರಣೆಗಳಾದ ದೈವದ ಕೋಲ, ದೇವಸ್ಥಾನದ ಹಬ್ಬ, ಬ್ರಹ್ಮಕಲಶ ಹಾಗೂ ಕಂಬಳ, ಉರೂಸ್‌, ಕ್ರೈಸ್ತ ಧರ್ಮದ ಧಾರ್ಮಿಕ ಹಬ್ಬಗಳು ಈಗಷ್ಟೆ ಆರಂಭವಾಗಿವೆ.

  ಹೂಮಾರುವವನಿಂದ ಹಿಡಿದು ಕ್ಯಾಟರಿಂಗ್‌ ಸೇರಿ ಪ್ರತಿಯೊಬ್ಬರಿಗೂ ಕೈಗೊಂದು ಉದ್ಯೋಗ ನೀಡುವ ಕೆಲಸ ನಡೆಯುತ್ತಿತ್ತು. ಇದೀಗ ಅದಕ್ಕೆಲ್ಲಾ ಬ್ರೇಕ್‌ ಬಿದ್ದಿದೆ. ದೇಶದಲ್ಲಿ ಬೆಂಗಳೂರು ನಗರ ಕೊರೋನಾದಿಂದ ರೆಡ್‌ಝೋನ್‌ನಲ್ಲಿದೆ. ಆದರೆ ರಾಜ್ಯ ಸರ್ಕಾರ ಬೆಂಗಳೂರು ಎಂದರೆ ಇಡೀ ಕರ್ನಾಟಕ ಎಂದುಕೊಂಡಂತಿದೆ.

  ಸರ್ಕಾರದ ನಿಯಮಕ್ಕೆ ಗ್ರಾಮೀಣಭಿವೃದ್ದಿ ಸಚಿವ ಈಶ್ವರಪ್ಪ ಹೊರತುಪಡಿಸಿದರೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಕರಾವಳಿಯ ಶಾಸಕರದ್ದು ಕೈ ಕಟ್ಟಿ ಬಾಯಿ ಮುಚ್ಚಿ ಕುಳಿಕೊಂಡ ಪರಿಸ್ಥಿತಿ. ಕ್ಯಾಬಿನೆಟ್‌ ಸಭೆಯಲ್ಲಿ ಜಿಲ್ಲೆಯ ಪ್ರಭಾವಿ ಸಚಿವರಿದ್ದರೂ ಜಿಲ್ಲೆಯ ಜನರ ಭಾವನೆಗೆ ಧ್ವನಿಯಾಗದಿರುವುದು ಬೇಸರದ ಸಂಗತಿ.


  ಲಾಕ್‌ಡೌನ್‌ ಒಂದೇ ಪರಿಹಾರವೇ?
  ಲಾಕ್‌ಡೌನ್‌ ಹೊರತುಪಡಿಸಿದರೆ ಕೊರೋನಾಕ್ಕೆ ಬೇರೆ ಪರಿಹಾರ ಇಲ್ಲವೇ? ಖಂಡಿತಾ ಇದೆ ಎನ್ನುತ್ತಾರೆ ಕರಾವಳಿ ಆರ್ಥಿಕ ತಜ್ಞರು. ಮೊದಲಿಗೆ ಎಲ್ಲರಿಗೂ ವಾಕ್ಸಿನೇಷನ್‌ ಮಾಡಿಸಿ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ.

  ಸರ್ಕಾರಿ ಕಚೇರಿ, ಬ್ಯಾಂಕ್‌, ಮಾಲ್‌ ಸೇರಿದಂತೆ ಹಲವೆಡೆ ಮಾಸ್ಕ್‌ ಇಲ್ಲದೇ ಪ್ರವೇಶ ನೀಡಲೇಬೇಡಿ. ರೇಷನ್‌ ಕಿಟ್‌ ಕೊಡುವ ಸಂದರ್ಭ ಪ್ರತಿಯೊಬ್ಬರಿಗೂ ಗುಣಮಟ್ಟದ ಮಾಸ್ಕ್‌ ನೀಡಿ, ಮಾಸ್ಕ್‌ ಧರಿಸದೆ ನಗರಕ್ಕೆ ಕಾಲಿಡುವವರಿಗೆ ಹಿಡಿದು ದಂಡ ವಿಧಿಸಿ.

  ಮದುವೆ ಸಮಾರಂಭಕ್ಕೆ ಕಟ್ಟುನಿಟ್ಟಿನ ರೂಲ್ಸ್‌ ಜಾರಿಗೊಳಿಸಿ, ರೂಲ್ಸ್‌ ತಪ್ಪಿದ್ದಲ್ಲಿ ಸಮಾರಂಭ ಆಯೋಜಕರಿಗೆ ದಂಡದೊಂದಿಗೆ, ಕಾನೂನು ಕ್ರಮ ಜರುಗಿಸಿ. ಅದು ಬಿಟ್ಟು ಒಂದಿಷ್ಟು ತಿಂಗಳು ಜನರನ್ನು ಬೇಕಾಬಿಟ್ಟಿಯಾಗಿ ಬಿಟ್ಟು ಮತ್ತೆ ಕೆಲವು ತಿಂಗಳು ಲಾಕ್‌ ಡೌನ್‌ನಿಂದ ಬಂಧಿಸಿಟ್ಟರೆ ಏನು ಪ್ರಯೋಜನ? ಸರ್ಕಾರದ ಈ ಮಾರ್ಗಸೂಚಿ ಗಮನಿಸುವಾಗ ಸೊಂಟದಲ್ಲಿ ಲುಂಗಿ ಗಂಟು ಹಾಕಿ ಕಟ್ಟಿ ಕೆಳಗೆ ಪೂರ್ತಿ ಬಿಟ್ಟಂತಿದೆ.

  ಈಗಲಾದರೂ ಸರಕಾರದ ಜನಪ್ರತಿನಿಧಿ, ಅಧಿಕಾರಿ ವರ್ಗ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಜನರ ಮೇಲಿರುವ ಕೊರೋನಾ ಹೊರೆಯನ್ನು ಕಡಿಮೆಗೊಳಿಸುವಲ್ಲಿ ಚಿಂತನೆ ನಡೆಸಬೇಕು. ಇಲ್ಲವಾದಲ್ಲಿ ಕೋರೋನಾಕ್ಕಿಂತಲೂ ಭೀಕರವಾದ ಸಾಮೂಹಿಕ ಆತ್ಮಹತ್ಯೆಯಂತಹ ಪ್ರಕರಣ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

  ಕುತ್ತಿಗೆಯವರೆಗೆ ಬಂದ ಸಾಲ
  ಎರಡು ವರ್ಷದಿಂದ ಕೊರೋನಾ ಹೊಡೆತದಿಂದ ಆರ್ಥಿಕವಾಗಿ ಜರ್ಜರಿತವಾಗಿದ್ದ ಜನರು ಕಳೆದ 6 ತಿಂಗಳಿಂದ ಹಂತಹಂತವಾಗಿ ಲಾಕ್‌ಡೌನ್‌ ತೆರವಾಗಿತ್ತು.

  ಆಗ ಹೊಸತೊಂದು ಭರವಸೆ ಮೂಡಿತ್ತು. ಆಗ ಹೊಸ ಹೊಸ ಉದ್ಯಮಕ್ಕೆ ಕೈ ಹಾಕಿದ್ದರು. ಆಗ ಬ್ಯಾಂಕ್‌ ಸಾಲ, ಕೈ ಸಾಲ ಪಡೆದಿದ್ದರು. ಮತ್ತೆ ಕೆಲವರು ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರು.

  ಅದರ ಜೊತೆ ಇದೀಗ ಮತ್ತೆ ಲಾಕ್‌ಡೌನ್‌ ಬಂದಿದೆ. ಆರ್ಥಿಕ ಹೊಡೆತ ಅಂತೂ ಗ್ಯಾರಂಟಿ. ಇದೀಗ ಹೊಸ ಉದ್ಯಮ, ಸಾಲದತ್ತ ಕೈಚಾಚಿದವರು ಸರ್ಕಾರದ ಸೂಚನೆಯಿಂದ ಕಂಗಾಲಾಗಿದ್ದಾರೆ. ಇದರಿಂದ ಈವರೆಗೆ ಸಾಲದ ಸುಳಿದವರು ದೇವರೇ ಗತಿ ತಲೆ ಮೇಲೆ ಕೈಹೊತ್ತಿದ್ದಾರೆ.

  ಸರಕಾರಕ್ಕೆ ಕೊರೋನಾ ಮಾರ್ಗಸೂಚಿ ನೀಡುವ ತಜ್ಞರಲ್ಲಿ ವೈದ್ಯರು, ಸರಕಾರದ ಹಿರಿಯ ಅಧಿಕಾರಿಗಳು ಸೇರಿ ಹಲವರಿದ್ದಾರೆ. ಆದರೆ ಸಾಮಾನ್ಯರನ್ನು ಪ್ರತಿನಿಧಿಸುವವರಿಲ್ಲ. ಈ ಬಗ್ಗೆ ಸರಕಾರ ದೀರ್ಘ ಆಲೋಚನೆ ನಡೆಸಬೇಕಾಗಿದೆ.

  LATEST NEWS

  ಮಳೆ ಆರ್ಭಟ; ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾ*ಲು

  Published

  on

  ಮಳೆ ಬಂದ್ರೆ ಇಳೆಗೆ ಜೀವ ಕಳೆ. ಅದೇ ಮಳೆ ರೌದ್ರನರ್ತನ ಮೆರೆದ್ರೆ ಸಾ*ವು-ನೋವಿನ ಸೆಲೆ. ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಅಬ್ಬಿರಿಸಿ ಬೊಬ್ಬರಿಯುತ್ತಿರೋ ವರುಣ ಸಾ*ವು ನೋವಿನ ಸಂಕಷ್ಟಗಳ ಸರಮಾಲೆಗೆ ಸಾಕ್ಷಿಯಾಗಿದ್ದಾನೆ.

  ಕೃಷ್ಣಾ ನದಿಗೆ ಭಾಗಿನ ಅರ್ಪಿಸಲು ಹೋದ ಯುವಕ ಸಾ*ವು

  ಕೃಷ್ಣಾ ನದಿಯ ಹಿನ್ನೀರಿನಲ್ಲಿ ಭಾಗಿನ ಅರ್ಪಿಸಲು ಹೋದ ಯುವಕ ನೀರುಪಾ*ಲಾಗಿರೋ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

  ಈಜಲು ಬರದ ಹಿನ್ನಲೆ 28 ವರ್ಷದ ಯುವಕ ರೋಹಣ ಪಾಟೀಲ ಆಯತಪ್ಪಿ ನೀರಿಗೆ ಬಿದ್ದು ಸಾ*ವನ್ನಪ್ಪಿದ್ದಾನೆ. ಸ್ಥಳೀಯರ ಸಹಾಯದಿಂದ ಬೋಟ್ ಮೂಲಕ ರೋಹಣ ಪಾಟೀಲ ಮೃ*ತದೇಹ ಹೊರ ತೆಗೆಯಲಾಗಿದೆ.

  Continue Reading

  LATEST NEWS

  ಕೇಂದ್ರ ಬಜೆಟ್ 2024 : ಗಮನ ಸೆಳೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆ

  Published

  on

  ಮಂಗಳೂರು / ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ.  ಪ್ರತೀ ವರ್ಷದಂತೆ ಈ ವರ್ಷವೂ ಅವರ ಸೀರೆ ಗಮನ ಸೆಳೆದಿದೆ. ಅವರು ಮೆಜೆಂಟಾ ಮತ್ತು ಗೋಲ್ಡ್ ಬಾರ್ಡರ್ ಹೊಂದಿರುವ ಬಿಳಿ ಚೆಕ್ ಸೀರೆಯನ್ನು ಉಟ್ಟಿದ್ದಾರೆ.


  ಸತತ ಏಳನೇ ಬಜೆಟ್ ಮಂಡಿಸುತ್ತಿರುವ ಮೊದಲ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಹೊರಹೊಮ್ಮಿದ್ದಾರೆ. ಇದು ಭಾರತದ ಇತಿಹಾಸದ ಪುಟ ಸೇರಿದೆ.

  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕೈಮಗ್ಗ ಸೀರೆ ಸಂಗ್ರಹ ಅಧಿಕ. ಹೀಗಾಗಿ ಇದು ಎಲ್ಲರ ಗಮನ ಸೆಳೆಯುತ್ತದೆ. ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲು ಸಂಸತ್ತಿಗೆ ತೆರಳುತ್ತಿದ್ದಾಗ,  ತಮ್ಮ ತಂಡದೊಂದಿಗೆ ಫೋಟೋಗೆ ಫೋಸ್ ನೀಡಿದರು. ಅವರು ಚೌಕಾಕಾರದ ಚೆಕ್ ಮತ್ತು ಚಿನ್ನದ ಕಸೂತಿಯೊಂದಿಗೆ ಅಗಲವಾದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಬೇಸ್ ಕೈಮಗ್ಗ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

  Continue Reading

  DAKSHINA KANNADA

  ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ಕೊಡಿ; ರಾಜ್ಯ ಸರಕಾರಕ್ಕೆ ದ.ಕ. ಹಾಲು ಒಕ್ಕೂಟ ಪ್ರಸ್ತಾವನೆ

  Published

  on

  ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕುಂಠಿತವಾಗುತ್ತಿರುವ ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡಲು ಒಪ್ಪಿಗೆ ಸೂಚಿಸುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

  ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪ್ರಸಕ್ತ ಹೈನುಗಾರರಿಗೆ ಲೀಟರ್‌ಗೆ ಕನಿಷ್ಠ 35 ರೂ. ಹಾಗೂ ರಾಜ್ಯ ಸರಕಾರದ ಸಬ್ಸಿಡಿ ಮೊತ್ತ 5 ರೂ. ಸೇರಿ ಒಟ್ಟು 40 ರೂ. ನೀಡಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ 3,91,367 ಲೀ. ಹಾಲು ಉತ್ಪಾದನೆಯಾಗುತ್ತಿದ್ದು ಕೊರತೆ ಸರಿದೂಗಿಸಲು ಹೊರ ಜಿಲ್ಲೆಗಳಿಂದ 1 ಲಕ್ಷ ಲೀಟರ್‌ ಹಾಲು ಖರೀದಿಸಲಾಗುತ್ತಿದೆ. ಇತರ ಜಿಲ್ಲೆಗೆ ಹೋಲಿಸಿ ದರೆ ನಮ್ಮಲ್ಲಿ ಉತ್ಪಾದನ ವೆಚ್ಚವೂ ಅಧಿಕ. ಅದಕ್ಕಾಗಿ ಮತ್ತೆ 5 ರೂ. ಮೊತ್ತವನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಿದರೆ ಮಾತ್ರ ಹಾಲು ಉತ್ಪಾದನೆ ಹೆಚ್ಚಳ ನಿರೀಕ್ಷಿಸಬಹುದು ಎಂದರು.

  ನಂದಿನಿ ಪಶು ಆಹಾರ ಚೀಲಕ್ಕೆ 1,350 ರೂ. ದರವಿದ್ದು, ಆಗಸ್ಟ್‌ 1ರಿಂದ ಹೈನುಗಾರರಿಗೆ ಪ್ರತಿ ಚೀಲಕ್ಕೆ 25 ರೂ. ಸಬ್ಸಿಡಿ ನೀಡಲಾಗುವುದು. ಇದರಿಂದ ಒಕ್ಕೂಟಕ್ಕೆ 30 ಲಕ್ಷ ರೂ. ಹೊರೆಯಾಗಲಿದೆ. ಇದಲ್ಲದೆ ಪಶು ಸಾಕಣೆ, ಮೇವು ಮುಂತಾದವುಗಳಿಗೆ ಸಬ್ಸಿಡಿ ಯೋಜನೆ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಶೂನ್ಯಬಡ್ಡಿ ಸಾಲ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

  ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್‌.ಬಿ.ಜಯರಾಮ ರೈ ಬಳಜ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನಾರಾಯಣ ಪ್ರಕಾಶ್‌, ಪದ್ಮನಾಭ ಶೆಟ್ಟಿ, ಸುಧಾಕರ ರೈ, ಬೋಳ ಸದಾಶಿವ ಶೆಟ್ಟಿ, ನರಸಿಂಹ ಕಾಮತ್‌, ಕಮಲಾಕ್ಷ ಹೆಬ್ಟಾರ್‌, ಸವಿತಾ ಎನ್‌.ಶೆಟ್ಟಿ, ಸ್ಮಿತಾ ಆರ್‌.ಶೆಟ್ಟಿ, ಸುಭದ್ರಾ ರಾವ್‌, ವ್ಯವಸ್ಥಾಪಕ ನಿರ್ದೇಶಕ ವಿವೇಕ್‌, ಮಾರುಕಟ್ಟೆ ಮುಖ್ಯಸ್ಥ ರವಿರಾಜ್‌ ಉಡುಪ ಉಪಸ್ಥಿತರಿದ್ದರು.

  Continue Reading

  LATEST NEWS

  Trending