ಕೊರೋನಾ ಶುಭ ಸುದ್ದಿ : ಅವಿಭಾಜ್ಯ ದಕ್ಷಿಣ ಕನ್ನಡದಲ್ಲಿಂದು ಒಂದೇ ಸಾವು..!
ದ.ಕ/ಉಡುಪಿ: ಕರಾವಳಿಯಲ್ಲಿ ಕೊರೊನಾ ನಾಗಲೋಟ ಭಾನುವಾರ ದಿನವಾದ ಇಂದು ಕೂಡ ಮುಂದುವರೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 326 ಮಂದಿಗೆ ಕೊರೋನಾ ಪಾಸಿಟಿವ್ ಸೋಂಕು ಧೃಡಪಟ್ಟಿದೆ. ಓರ್ವ ಮಾತ್ರ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 401ಕ್ಕೆ ಏರಿಕೆಯಾಗಿದೆ.
ಇಂದು ಮಂಗಳೂರು 187, ಬಂಟ್ವಾಳ 39, ಬೆಳ್ತಂಗಡಿ 33 ಪುತ್ತೂರು 28,ಸುಳ್ಯ 27 ಮತ್ತು ಹೊರ ಜಿಲ್ಲೆಯ 12 ಮಂದಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ.
(ಐಎಲ್ಐ) ಪ್ರಕರಣದಿಂದ 168 ಮಂದಿಗೆ ಪಾಸಿಟಿವ್ ಸೋಂಕು ಧೃಡಪಟ್ಟಿದೆ. ಸಂಪರ್ಕವೇ ಪತ್ತೆಯಾಗದ 109 ಮಂದಿ ಪ್ರಾಥಮಿಕ ಸಂಪರ್ಕದಿಂದ 34 ಮಂದಿ (ಸರಿ) ಪ್ರಕರಣದಿಂದ 15 ಮಂದಿಗೆ ಕೊರೋನಾ ಪಾಸಿಟಿವ್ ಧೃಡಟ್ಟಿದೆ.
ಜಿಲ್ಲೆಯಲ್ಲಿಂದು 202 ಮಂದಿ ಕೊರೊನಾದಿಂದ ಗುಣಮುಖರಾಗಿದ್ದರೆ ಜಿಲ್ಲೆಯಲ್ಲಿ ಒಟ್ಟು 14,926 ಪಾಸಿಟಿವ್ ಕೇಸ್ ಗಳು ಇದುವೆರೆಗೆ ದಾಖಲಾಗಿವೆ.ಒಟ್ಟು 3,084ಆಕ್ವೀವ್ ಕೇಸ್ ಗಳು ಇನ್ನೂ ಇವೆ.
ಉಡುಪಿ ಕೊರೊನಾ ವರದಿ:
ಉಡುಪಿಯಲ್ಲಿ ಇಂದು 216 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 12,727 ಕ್ಕೆ ಏರಿಕೆಯಾಗಿದೆ.ಅದೇ ರೀತಿ ಇಂದು ಜಿಲ್ಲೆಯಲ್ಲಿ 270 ಮಂದಿ ಡಿಸ್ಜಾರ್ಜ್ ಮಾಡಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ 10763 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 1852 ಸಕ್ರೀಯ ಪ್ರಕರಣಗಳಿವೆ ಮತ್ತು ಇನ್ನೂ ಜಿಲ್ಲೆಯಲ್ಲಿ 350 ವರದಿ ಬರಲು ಬಾಕಿ ಇದೆ.