Monday, May 23, 2022

ಬೆಳ್ತಂಗಡಿ: ಹಾಡಹಗಲೇ ಮನೆಯಿಂದ ಚಿನ್ನಾಭರಣ ಕಳವು ಪ್ರಕರಣ- 3 ಆರೋಪಿಗಳ ಬಂಧನ

ಬೆಳ್ತಂಗಡಿ: ಹಾಡಹಗಲೇ ಮನೆಯೊಂದರಿಂದ ನಗದು ಸಹಿತ ಚಿನ್ನಾಭರಣವನ್ನು ಕಳವುಗೈದ 3 ಆರೋಪಿಗಳನ್ನು ಬಂಧಿಸುವಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ.


ಆರೋಪಿಗಳಾದ ಮಹಮ್ಮದ್ ಸ್ವಾಲಿ (26) ಯಾಹ್ಯಾ (32) ಬಿ.ಹೆಚ್ ನೌಫಲ್ (27 ) ಬಂಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಸಮೀಪದ ದೇರಾಜೆ ಎಂಬಲ್ಲಿಯ ನಿವಾಸಿ ಮಹಮ್ಮದ್ ಎಂಬವರ ಮನೆಯಿಂದ ಭಾರಿ ಮೊತ್ತದ ಚಿನ್ನಾಭರಣಗಳನ್ನು ಆರೋಪಿಗಳು ಕಳವುಗೈದಿದ್ದರು.


ಮಹಮ್ಮದ್ ಅವರು ಕೃಷಿ ಜೊತೆಗೆ ಅಡಿಕೆ ವ್ಯಾಪಾರ ಮಾಡುತಿದ್ದು,

ಅ. 31 ರಂದು ಬೆಳಗ್ಗೆ ಅವರ ಪತ್ನಿ ಇಬ್ಬರು ಮಕ್ಕಳೊಂದಿಗೆ, ತಮ್ಮನ ಮದುವೆ ನಿಶ್ಚಿತಾರ್ಥಕ್ಕಾಗಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮಕ್ಕೆ ತೆರಳಿದ್ದರು.

ಮನೆಯಲ್ಲಿ ಮಹಮ್ಮದ್ ಒಬ್ಬರೇ ಇದ್ದು, ಅಲ್ಲೆ ಹತ್ತಿರದ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯುವ ಕೆಲಸಕ್ಕೆ ಹೋಗಿದ್ದರು.

ಸಂಜೆ ಬಂಟ್ವಾಳ ನಿಶ್ಚಿತಾರ್ಥಕ್ಕೆ ಹೋಗಿದ್ದ ಪತ್ನಿ ವಾಪಾಸ್ಸು ಮನೆಗೆ ಬಂದಾಗ, ಕಪಾಟಿನಲ್ಲಿ ಇಟ್ಟಿದ್ದ ಮೊಬೈಲ್ ಅಲ್ಲೇ

ಪಕ್ಕದಲ್ಲಿ ಚೇರ್ ಮೇಲೆ ಇರುವುದನ್ನು ಕಂಡು ಗಾಬರಿಯಿಂದ ಕಳವು ಆಗಿರಬಹುದೆಂದು ಗಂಡನನ್ನು ಕರೆದು ನೋಡಿದಾಗ ಕಪಾಟಿನ ಬಾಗಿಲು ಸ್ವಲ್ಪ ತೆರೆದಿದ್ದು,

ಅನುಮಾನಗೊಂಡು ನೋಡಿದಾಗ ಅದರ ಲಾಕರ್‌ನಲ್ಲಿ ಇರಿಸಿದ್ದ ನಗದು ಸಹಿತ ಚಿನ್ನಾಭರಣ ಕಳವು ಆಗಿರುವುದು ಬೆಳಕಿಗೆ ಬಂದಿತ್ತು.

ಮನೆಗೆ ನುಗ್ಗಿ ಮನೆಯ ಗೋದ್ರೇಜ್ ನಲ್ಲಿಟ್ಟಿದ್ದ 13 ಪವನಿನ ಚಿನ್ನದ ನೆಕ್ಲೇಸ್ 01, ಒಂದು ಪವನಿನ ಚಿನ್ನದ ಚೈನ್ 01,

ಒಂದು ಪವನಿನ ಚಿನ್ನದ ಸಣ್ಣ ಚೈನ್ 01, ಒಂದೂವರೆ ವವನಿನ ಚಿನ್ನದ ಮಕ್ಕಳ ಚೈನ್ 02, ತಲಾ ಒಂದು ಒಂದು ಪವನಿನ ಚಿನ್ನದ ಕಾಯಿನ್ಸ್ 04,

ತಲಾ ನಾಲ್ಕು ಪವನಿನ ಚಿನ್ನದ ಬಿಸ್ಕೆಟ್ 04 ಎರಡು ಪವನಿನ ಚಿನ್ನದ ಗಟ್ಟಿ 01 ಅರ್ಧ ಪವನಿನ ಚಿನ್ನದ ಬ್ರಾಸ್ ಲೈಟ್ -01,

ಅರ್ಧ ಪವನಿನ ಚಿನ್ನದ ತುಂಡಾದ ಬಳೆ ಹಾಗೂ ಪೆಂಡೆಂಟ್ 01, ಅರ್ಧ ಪವನಿನ ಚಿನ್ನದ ಮಗುವಿನ ಕಿವಿ ಓಲೆ 01 ಜೊತೆ ಮುಂತಾದ ಸುಮಾರು 12,05,200

ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿ ಕಳವಾಗಿರುವುದಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಕಾರು, ಮೋಟಾರು ಸೈಕಲ್, ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ ಇವುಗಳ ಒಟ್ಟು ಮೌಲ್ಯ 1,69,500 ರೂ.ಗಳು

ಹಾಗೂ ಕಳವಾದ 12,05,200 ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣಗಳು,

ನಗದು 1230 ರೂ ಗಳನ್ನು ಸ್ವಾಧೀನಪಡಿಸಿಕೊಂಡು ಸ್ವತ್ತುಗಳ ಒಟ್ಟು ಮೌಲ್ಯ 13,75,930 ರೂಪಾಯಿ ಆಗಿದ್ದು, ಆರೋಪಿಗಳನ್ನು ದಸ್ತಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನವಣೆ ಋಷಿಕೇಶ್ ಭಗವಾನ್ ಐ.ಪಿ.ಎಸ್, ಶಿವಕುಮಾರ್ ಗುಣಾರೆ,

ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರುಗಳ ನಿರ್ದೇಶನದಂತೆ ಶಿವಾಂಶು ರಜಪೂತ್ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರು ರವರ ಸೂಚನೆಯಂತೆ

ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ, ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ನಂದ ಕುಮಾರ್,

ಪ್ರೊ.ಪಿಎಸ್‌ಐ ಮೂರ್ತಿ, ಎಎಸೈ ದೇವಪ್ಪ ಎಂಕೆ, ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್, ವೃಷಭ, ಪ್ರಮೋದ್ ನಾಯ್ಕ,

ಇಬ್ರಾಹಿಂ ಗರ್ಡಾಡಿ, ಲತೀಫ್ ಲ, ವಿಜಯ ಕುಮಾರ್ ರೈ,

ವೆಂಕಟೇಶ್, ಬಸವರಾಜ್, ಚರಣ್, ಅವಿನಾಶ್,

ವಾಹನ ಚಾಲಕರಾದ ಮಹಮ್ಮದ್ ಆಸೀಫ್, ಸತೀಶ್, ತಾಂತ್ರಿಕ ಸಿಬ್ಬಂದಿ ದಿವಾಕರ,

ಸಂಪತ್ ಕುಮಾರ್ ಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕು ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.ಲೆಬನಾನ್, ಸಿರಿಯಾ, ಟರ್ಕಿ,...