ಮಂಗಳೂರು: ‘ಬಿಗ್ ಬಾಸ್ ಸೀಸನ್ 11’ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಉಳಿದ 11 ಮಂದಿ ಸದಸ್ಯರಲ್ಲಿ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಾರೆ. ಈ ವಾರದ ಎಲಿಮಿನೇಷನ್ ಕೂಡ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡಿದೆ.
ಈ ವಾರ ದೊಡ್ಮನೆಯಲ್ಲಿ 8 ಮಂದಿ ನಾಮಿನೇಟ್ ಆಗಿದ್ದಾರೆ. ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್ ಆಚಾರ್ಯ, ಹನುಮಂತ, ಚೈತ್ರಾ ಕುಂದಾಪುರ, ಕ್ಯಾಪ್ಟನ್ ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ.
ನಾಮಿನೇಟ್ ಆದ 8 ಜನರಲ್ಲಿ ನಿನ್ನೆಯ ಎಪಿಸೋಡ್ ನಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತ ಮೊದಲಿಗೆ ಸೇಫ್ ಆಗಿದ್ದಾರೆ. ಇನ್ನುಳಿದ 6 ಮಂದಿಯಲ್ಲಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ. ಆದರೆ ಇದರ ನಡುವೆ ಗೊಲ್ಡ್ ಸುರೇಶ್ ಅವರ ಒಂದು ನಿರ್ಧಾರ ಮನೆಯ ಇತರ ಸದಸ್ಯರಿಗೆ ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ: ಜಗಳ ಮಾಡಿಕೊಂಡ ಧನರಾಜ್-ರಜತ್ ಗೆ ಶಿಕ್ಷೆ ನೀಡಿದ ಕಿಚ್ಚ; 11ನೇ ವಾರಕ್ಕೆ ಆಟ ಮುಗಿಸುವ ಸ್ಪರ್ಧಿ ಯಾರು?
ದಿಢೀರ್ ನಿರ್ಧಾರ ಕೈಗೊಂಡ ಗೋಲ್ಡ್ ಸುರೇಶ್
ಈ ವಾರ ಬಿಗ್ ಬಾಸ್ ಮನೆಯ ಎಲಿಮಿನೇಷನ್ ಢಿಫರೆಂಟ್ ಆಗಿ ನಡೆಯಲಿದೆ. ಎಲಿಮಿನೇಷನ್ ಜೊತೆಗೆ ಕ್ಯಾಪ್ಟನ್ ಆಗಿದ್ದ ಗೋಲ್ಡ್ ಸುರೇಶ್ ಅವರು ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ ಗೋಲ್ಡ್ ಸುರೇಶ್ ವೈಯಕ್ತಿಕ ಕಾರಣಗಳಿಂದ ಮನೆಯಿಂದ ಆಚೆ ಬಂದಿದ್ದಾರೆ.
ಫ್ಯಾಮಿಲಿ ಪ್ರಾಬ್ಲಂ ಇರುವುದರಿಂದ ಬಿಗ್ ಬಾಸ್ ಮನೆಯಿಂದ ಹೋಗಲೇಬೇಕಾದ ಪರಿಸ್ಥಿತಿ ಇದೆ ಎಂದು ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಶೋ ಅನ್ನೇ ಕ್ವಿಟ್ ಮಾಡಿದ್ದಾರೆ. ಸದ್ಯ ಗೋಲ್ಡ್ ಸುರೇಶ್ ಅವರು ವೈಯಕ್ತಿಕ ಕಾರಣ ನೀಡಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ನಿಜವಾದ ಕಾರಣ ಏನು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಇನ್ನೊಂದು ಕಡೆ ಡಬಲ್ ಎಲಿಮಿನೇಷನ್ ಕೂಡ ಸದ್ದು ಮಾಡುತ್ತಿದೆ. ಆದರೆ ಇಂದಿನ ಎಪಿಸೋಡ್ ನಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಎಂದು ಗೊತ್ತಾಗಲಿದೆ.